ಹಲೋ ಸ್ನೇಹಿತರೇ, ಗೃಹಲಕ್ಷ್ಮಿ ಯೋಜನೆಯ ಹಣವನ್ನು ವರ್ಗಾವಣೆ ದಿನದಿಂದ ದಿನಕ್ಕೆ ರಾಜ್ಯ ಸರ್ಕಾರಕ್ಕೆ ಬಿಡಿಸಲಾಗದ ಕಗ್ಗಂಟಾಗಿದೆ. ಯಾಕೆ ಅಂದ್ರೆ ಮಹಿಳೆಯರು ತಮ್ಮ ಖಾತೆಯಲ್ಲಿ ಯಾವುದೇ ಸಮಸ್ಯೆ ಇಲ್ಲ, ಎಲ್ಲಾ ಅಪ್ಡೇಟ್ ಗಳನ್ನು ಮಾಡಿಸಿ ಆಗಿದೆ ಎಂದು ಹೇಳಿದರು ಅವರ ಖಾತೆಗೆ ಹಣ ಇನ್ನು ಸಹ ಜಮಾ ಆಗುತ್ತಿಲ್ಲ.
ಆರಂಭದಲ್ಲಿ ಒಂದೆರಡು ಕಂತುಗಳ ಹಣ ಬಂದಿತ್ತು ಆದ್ರೆ ನಂತರದ ದಿನಗಳಲ್ಲಿ ಹಣ ಬಿಡುಗಡೆ ಆಗಿಲ್ಲ ಎಂದು ಸಾಕಷ್ಟು ಮಹಿಳೆಯರು ದೂರುತ್ತಿದ್ದಾರೆ, ಈ ಹಿನ್ನೆಲೆಯಲ್ಲಿ ರಾಜ್ಯದ ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಮಹಿಳೆಯರು ತಕ್ಷಣವೇ ಈ ಕೆಲಸ ಮಾಡಿ, ಇದರಿಂದ ನಿಮ್ಮ ಖಾತೆಗೂ ಸಹ ಹಣ ಬರುತ್ತೆ ಎಂದು ಸೂಚನೆಯನ್ನು ನೀಡಿದ್ದಾರೆ.
ಗೃಹಲಕ್ಷ್ಮಿಯರು ಆಶಾ ಕಾರ್ಯಕರ್ತೆಯರ ಸಹಾಯ ಪಡೆದುಕೊಳ್ಳಿ!
ನಿಮ್ಮ ಬಳಿಯಲ್ಲಿ ಆಧಾರ್ ಕಾರ್ಡ್ ಇದ್ದು ಬ್ಯಾಂಕ್ ಖಾತೆ ಆರಂಭಿಸಿ ಸಾಕಷ್ಟು ವರ್ಷಗಳೇ ಕಳೆದಿದ್ದರೆ, ನಿಮ್ಮ ಖಾತೆಗೆ ಹಣ ಇನ್ನು ಬರಬೇಕು ಅಂದ್ರೆ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ಲಿಂಕ್ ಆಗಿರಬೇಕು.
ಅದರ ಜೊತೆಗೆ ನಿಮ್ಮ ಆಧಾರ್ ಕಾರ್ಡ್ ಅಪ್ಡೇಟ್ ಕೂಡ ಅಷ್ಟೇ ಮುಖ್ಯ. ಬ್ಯಾಂಕ್ ಖಾತೆ ಆಕ್ಟಿವ್ ಆಗಿರದೆ ಇದ್ದರೆ ಸರ್ಕಾರದಿಂದ ಹಣ ಬಿಡುಗಡೆ ಆಗಿದ್ದರು ಬ್ಯಾಂಕ್ನಿಂದ ನಿಮ್ಮ ಖಾತೆಗೆ ಹಣ ಬರುವುದಿಲ್ಲ ಹಾಗಾಗಿ ನೀವು ಬ್ಯಾಂಕಿಗೆ ಹೋಗಿ ಸಿಬ್ಬಂದಿಗಳನ್ನು ಭೇಟಿ ಮಾಡಿ ನಿಮ್ಮ ಖಾತೆಯಲ್ಲಿ ಇರುವ ಸಮಸ್ಯೆಯನ್ನು ಗುರುತಿಸಿ ಅದಕ್ಕೆ ಪರಿಹಾರ ಕಂಡುಕೊಳ್ಳಬೇಕು. ಅಗತ್ಯ ಇರುವ ಎಲ್ಲಾ ಅಪ್ಡೇಟ್ ಮಾಡಿಸಿಕೊಳ್ಳಬೇಕು.
ಆಶಾಕಾರ್ಯಕರ್ತೆಯರು ಮತ್ತು ಅಂಗನವಾಡಿ ಸಹಾಯಕರು ಕಾಂಗ್ರೆಸ್ ಸರ್ಕಾರದ ಯೋಜನೆ ಪ್ರತಿಯೊಬ್ಬ ಮಹಿಳೆಯರಿಗೆ ತಲುಪುವಲ್ಲಿ ಸರ್ಕಾರದ ಜೊತೆಗೆ ಕೈಜೋಡಿಸಿದ್ದಾರೆ.
ಹಣ ಬಾರದೆ ಇರುವ ಮಹಿಳೆಯರು ಅವರ ಸಹಾಯವನ್ನು ಪಡೆದುಕೊಂಡು ಬ್ಯಾಂಕ್ ಖಾತೆಯಿಂದ ಹಿಡಿದು ಅರ್ಜಿ ಸಲ್ಲಿಸುವವರಿಗೆ ಎಲ್ಲಿ ಸಮಸ್ಯೆಯಾಗಿದೆ ಎಂಬುದನ್ನ ಕಂಡು ಹಿಡಿದುಕೊಳ್ಳಲು ಸಾಧ್ಯವಿದೆ.
ಸಮಸ್ಯೆ ಮೂಲ ಗೊತ್ತಾದ್ರೆ ಅದಕ್ಕೆ ಪರಿಹಾರ ಕಂಡುಹಿಡಿಯುವುದು ದೊಡ್ಡ ವಿಚಾರವಲ್ಲ, ಹಾಗಾಗಿ ನಿಮ್ಮ ಖಾತೆಯಲ್ಲಿ ಅಥವಾ ನಿಮ್ಮ ಅರ್ಜಿಯಲ್ಲಿ ಸಮಸ್ಯೆ ಇದೆ ಎಂಬುದನ್ನು ಗುರುತಿಸಿ ಒಂದು ವೇಳೆ ಅರ್ಜಿಯಲ್ಲಿಯೇ ಸಮಸ್ಯೆ ಇದ್ದರೆ ಮತ್ತೆ ಹೊಸದಾಗಿ ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಸುವುದಕ್ಕೂ ಅವಕಾಶ ಇದೆ.
ಈ ರೀತಿ ನೀವು ಹೊಸದಾಗಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದರೆ ಇಲ್ಲಿಯವರೆಗೆ ಬಿಡುಗಡೆಯಾದ ಹಣ ನಿಮ್ಮ ಖಾತೆಗೆ ಬರುವುದಿಲ್ಲ. ಆದರೆ ಮುಂದಿನ ತಿಂಗಳಿನಿಂದ ನಿಮ್ಮ ಖಾತೆಗೆ ತಪ್ಪದೆ ಹಣ ಜಮಾ ಆಗುತ್ತದೆ. ಈಗಾಗಲೇ ಏಳು ಕಂತಿನ ಹಣ ಬಿಡುಗಡೆ ಆಗಿದೆ. 8ನೇ ಕಂತಿನವು ಹಣ ಏಪ್ರಿಲ್ 20ರ ನಂತರ ಸರ್ಕಾರದಿಂದ ಫಲಾನುಭವಿಗಳ ಖಾತೆಗೆ ವರ್ಗಾವಣೆ ಆಗಲಿದೆ.