4208 ರೈಲ್ವೆ ಕಾನ್ಸ್‌ಟೇಬಲ್‌ ಹುದ್ದೆಗೆ ಅರ್ಜಿ ಸ್ವೀಕಾರ ಆರಂಭ.! SSLC ಪಾಸಾಗಿದ್ರೆ ತಡ ಮಾಡದೇ ಅಪ್ಲೇ ಮಾಡಿ

ಹಲೋ ಸ್ನೇಹಿತರೇ, SSLC ಪಾಸಾದವರಿಗೆ ಭರ್ಜರಿ ಉದ್ಯೋಗಾವಕಾಶ ಅದು ಸಹ ಕೇಂದ್ರ ಸರ್ಕಾರಿ ಉದ್ಯೋಗ. ನೇರ ನೇಮಕಾತಿ ಮುಖಾಂತರ ಭರ್ತಿ ಮಾಡಲಿರುವ ರೈಲ್ವೆ ಪೊಲೀಸ್‌ ಹುದ್ದೆಗೆ ಇದೀಗ ಆನ್‌ಲೈನ್‌ ಅರ್ಜಿ ಸ್ವೀಕಾರ ಆರಂಭವಾಗಿದೆ. ಅರ್ಜಿ ಸಲ್ಲಿಸುವುದು ಹೇಗೆ ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.

RRB RPF Constable Registration

ಭಾರತೀಯ ರೈಲ್ವೆ ಇಲಾಖೆಯ ರೈಲ್ವೆ ಪ್ರೊಟೆಕ್ಷನ್‌ ಫೋರ್ಸ್‌ ಬರೋಬ್ಬರಿ 4208 ಕಾನ್ಸ್‌ಟೇಬಲ್ ಹುದ್ದೆಗಳ ನೇರ ನೇಮಕಾತಿಗಾಗಿ ಇತ್ತೀಚೆಗೆ ನೋಟಿಫಿಕೇಶನ್‌ ಬಿಡುಗಡೆ ಮಾಡಲಾಗಿದೆ. ಇದೀಗ ಸದರಿ ಹುದ್ದೆಗಳಿಗೆ ಆನ್‌ಲೈನ್‌ ಮುಖಾಂತರ ರಿಜಿಸ್ಟ್ರೇಷನ್‌ ಸಲ್ಲಿಸಲು ಲಿಂಕ್ ಬಿಡುಗಡೆ ಮಾಡಿದ್ದಾರೆ. ಕರ್ನಾಟಕದ SSLC ಪಾಸಾದ ನಿರುದ್ಯೋಗಿ ಅಭ್ಯರ್ಥಿಗಳು ಕೇಂದ್ರ ಸರ್ಕಾರಿ ಉದ್ಯೋಗ ಪಡಿಬೇಕೆಂದರೆ ಕೂಡಲೇ ಅರ್ಜಿ ಸಲ್ಲಿಸಲು ಪ್ರಾರಂಭಿಸಿ. ಸುಲಭವಾಗಿ ಅಪ್ಲೇ ಮಾಡುವ ವಿಧಾನವನ್ನು ಇಲ್ಲಿ ತಿಳಿಸಲಾಗಿದೆ. ಏಪ್ರಿಲ್ 15 ರಿಂದ ಮೇ 14, 2024 ರವರೆಗೂ ನೀವು ಅರ್ಜಿ ಸಲ್ಲಿಸಬಹುದಾಗಿದೆ.

ನೇಮಕಾತಿ ಪ್ರಾಧಿಕಾರ : ಭಾರತೀಯ ರೈಲ್ವೆ ಇಲಾಖೆ
ಹುದ್ದೆಯ ಹೆಸರು : ಕಾನ್ಸ್‌ಟೇಬಲ್‌ (ಎಕ್ಸಿಕ್ಯೂಟಿವ್)
ಒಟ್ಟು ಹುದ್ದೆಗಳ ಸಂಖ್ಯೆ : 4208

ಅರ್ಜಿ ಸಲ್ಲಿಸುವ ಸಲ್ಲಿಸುವ ವಿಧಾನ

  • ಕರ್ನಾಟಕದ ಅಭ್ಯರ್ಥಿಗಳು RRB ವೆಬ್‌ಸೈಟ್‌ ಭೇಟಿ ನೀಡಿ https://www.rrbbnc.gov.in/
  • ಈ ವೆಬ್‌ ಪೇಜ್‌ಗೆ ಭೇಟಿ ನೀಡಿದ ನಂತರ ಸ್ಕ್ರಾಲ್‌ಡೌನ್‌ ಮಾಡಿ.
  • Constable (Executive) in Railway Protection Force & Railway Protection Special Force’ ಇರುತ್ತದೆ.
  • ಇದು ‘Detailed CEN RPF 2/2024’ ನಂಬರ್ ಅಧಿಸೂಚನೆಯಾಗಿದೆ.
  • ಇದರ ಕೆಳಗೆ ಮತ್ತೊಂದು ಲಿಂಕ್‌ ಇರುತ್ತದೆ
  • Click to submit Online Application – ಆರಂಭಿಕ ದಿನಾಂಕ 15/04/2024 ಕೊನೆ ದಿನಾಂಕ್ 14/05/2024′ ಈ ಲಿಂಕ್ ಕ್ಲಿಕ್ ಮಾಡಿ.
  • ನಂತರ ತೆರೆದ ವೆಬ್‌ಪೇಜ್‌ನಲ್ಲಿ ಮೊದಲಿಗೆ ರಿಜಿಸ್ಟ್ರೇಷನ್ ಪಡೆಯಿರಿ.
  • User name, Password ಕ್ರಿಯೇಟ್‌ ಮಾಡಿಕೊಳ್ಳಿ.
  • ನಂತರ ಮತ್ತೆ ಲಾಗಿನ್‌ ಆಗುವ ಮುಖಾಂತರ ಕೇಳಲಾದ ವಿವರಗಳನ್ನು (ಶಿಕ್ಷಣ, ವೈಯಕ್ತಿಕ ಮಾಹಿತಿಗಳು, ದಾಖಲೆಗಳು) ನೀಡಿ ಅಪ್ಲೇ ಮಾಡಿ
  • ಕೇಳಲಾದ ಸ್ಕ್ಯಾನ್ಡ್‌ ಕಾಪಿಗಳನ್ನು ಅಪ್‌ಲೋಡ್‌ ಮಾಡಿ. RD ನಂಬರ್ ಕೇಳಿದಲ್ಲಿ ನಮೂದಿಸಿ.
  • ಆನ್‌ಲೈನ್‌ ಮೂಲಕ ನಿಗದಿತ ಆನ್‌ಲೈನ್‌ ಅರ್ಜಿ ಶುಲ್ಕವನ್ನು ಪಾವತಿ ಮಾಡಿ
  • ಮುಂದಿನ ರೆಫರೆನ್ಸ್‌ಗಾಗಿ ಅರ್ಜಿ print ತೆಗೆದುಕೊಳ್ಳಿ.

ಅಪ್ಲಿಕೇಶನ್‌ ಶುಲ್ಕ ವಿವರ

ಸಾಮಾನ್ಯ ಅರ್ಹತೆ ಮತ್ತು OBC ಅಭ್ಯರ್ಥಿಗಳಿಗೆ ಶುಲ್ಕ ರೂ.500.
SE/ST, ಮಾಜಿ ಸೈನಿಕ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ರೂ.250.

ರೈಲ್ವೆ RPF ಕಾನ್ಸ್‌ಟೇಬಲ್‌ (ಎಕ್ಸಿಕ್ಯೂಟಿವ್) ಹುದ್ದೆಗಳಿಗೆ ಆರಂಭದ ವೇತನ ರೂ.21,700.

ಅರ್ಹತೆಗಳು

ಅಂಗೀಕೃತ ಶಿಕ್ಷಣ ಸಂಸ್ಥೆಗಳಿಂದ 10ನೇ ತರಗತಿ /ತತ್ಸಮಾನ ಪರೀಕ್ಷೆ ಪಾಸ್‌ .
ದಿನಾಂಕ 01-07-2024 ಕ್ಕೆ 18-28 ವಯಸ್ಸು ಮೀರಿರಬಾರದು.
ಅಪ್ಲೇ ಮಾಡಲು ಸರ್ಕಾರಿ ನಿಯಮಗಳ ಪ್ರಕಾರ ವಯಸ್ಸಿನ ಸಡಿಲಿಕೆಯು ವರ್ಗಾವಾರು ಅನ್ವಯಿಸಲಿದೆ.

ರೈಲ್ವೆ RPF ಕಾನ್ಸ್‌ಟೇಬಲ್‌ ಹುದ್ದೆಗೆ 7ನೇ ವೇತನ ಆಯೋಗದ Pay level 3 ರ ಪ್ರಕಾರ ವೇತನ ಶ್ರೇಣಿ ಇದೆ. ಪ್ರಾರಂಭಿಕ ವೇತನದ ಜೊತೆಗೆ, ಇತರೆ ಭತ್ಯೆಗಳು ಮತ್ತು ಸೌಲಭ್ಯಗಳನ್ನು ನೀಡಲಾಗುತ್ತದೆ.

ಅರ್ಜಿ ಪ್ರಕ್ರಿಯೆಯ ದಿನಾಂಕಗಳು

ಆನ್‌ಲೈನ್‌ ಅಪ್ಲೇ ಆರಂಭಿಕ ದಿನಾಂಕ: 15-04-2024
ಆನ್‌ಲೈನ್‌ ಅಪ್ಲೇ ಕೊನೆ ದಿನಾಂಕ : 14-05-2024 (23:59 Hours)
ಅರ್ಜಿ ತಿದ್ದುಪಡಿ ಮಾಡಲು ವಿಂಡೋ ಓಪನ್ : 15-05-2024 ರಿಂದ 24-05-2024

2 Comments

Previous Post Next Post

Ads

Ads

نموذج الاتصال

×