Advertisement

header ads

12 ತಿಂಗಳ ಉಚಿತ ವಿದ್ಯುತ್ ಮತ್ತು ಸರಾಸರಿ ಚೆಕ್ ಮಾಡೋದು ಹೇಗೆ? ವಿದ್ಯುತ್ ಇಲಾಖೆಯಿಂದ ಡೈರೆಕ್ಟ್ ಲಿಂಕ್..! ಇಲ್ಲಿ ನಿಮ್ಮ ಐಡಿ ಎಂಟ್ರಿ ಮಾಡಿ ಸಾಕು

 

Method of checking 12 months electricity and average



ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ ಗ್ರಾಹಕರು ತಾವು ಬಳಸಿದಂತಹ ಕಳೆದ 12 ತಿಂಗಳ ವಿದ್ಯುತ್ ಬಿಲ್ ಅನ್ನು ಚೆಕ್ ಮಾಡಿ ಕೊಳ್ಳುವ ವಿಧಾನದ ಬಗ್ಗೆ. ರಾಜ್ಯ ಸರ್ಕಾರವು 5 ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದ್ದು ಅದರಲ್ಲಿ ಗೃಹಜೋತಿ ಯೋಜನೆಯ ಸಹ ಒಂದಾಗಿದೆ. ಜೊತೆ ಯೋಜನೆಯ ಅಡಿಯಲ್ಲಿ ಕರ್ನಾಟಕ ಸರ್ಕಾರವು 200 ಯೂನಿಟ್ ವಿದ್ಯುತ್ತನ್ನು ಪ್ರತಿ ಮನೆಗೆ ನೀಡಲು ನಿರ್ಧರಿಸಿದೆ. ಅದರಂತೆ ಗ್ರಾಹಕರು ತಾವು ಕಳೆದ 12 ತಿಂಗಳಲ್ಲಿ ಎಷ್ಟು ವಿದ್ಯುತ್ತನ್ನು ಕಳಿಸಿದ್ದೇವೆ ಎಂಬುದರ ಮಾಹಿತಿಯನ್ನು ಹೇಗೆ ಚೆಕ್ ಮಾಡಬೇಕು ಎಂದು ಈ ಲೇಖನದಲ್ಲಿ ನಿಮಗೆ ತಿಳಿಸಲಾಗುತ್ತದೆ.

ಗೃಹ ಜ್ಯೋತಿ ಯೋಜನೆ :

ರಾಜ್ಯ ಸರ್ಕಾರವು ಗೃಹ ಜ್ಯೋತಿ ಯೋಜನೆಯಡಿಯಲ್ಲಿ 200 ಯೂನಿಟ್ ಗಿಂತ ಕಡಿಮೆ ವಿದ್ಯುತ್ ಅನ್ನು ಬಳಸುವಂತಹ ಕುಟುಂಬಗಳಿಗೆ ಈ ಯೋಜನೆಯನ್ನು ಜಾರಿಗೊಳಿಸಲು ನಿರ್ಧರಿಸಿದೆ. ಅದರಂತೆ ಈ ಯೋಜನೆಯ ಅಡಿಯಲ್ಲಿ 200 ಯೂನಿಟ್ ಕಿಂತ ಕಡಿಮೆ ವಿದ್ಯುತ್ತನ್ನು ಬಳಸುವಂತಹ ಕುಟುಂಬಗಳು, ಜುಲೈ ತಿಂಗಳಲ್ಲಿನಿಂದ ಆಗಸ್ಟ್ ತಿಂಗಳಿನಲ್ಲಿ ಬಂದಂತಹ ವಿದ್ಯುತ್ ಬಿಲ್ಗೆ ಯಾವುದೇ ವಿದ್ಯುತ್ ಶುಲ್ಕವನ್ನು ಪಾವತಿಸುವ ಅಗತ್ಯವಿಲ್ಲ. ಗೃಹ ಜ್ಯೋತಿ ಯೋಜನೆಯ ಪ್ರಯೋಜನವನ್ನು ಕರ್ನಾಟಕದ ಖಾಯಂ ನಿವಾಸಿಗಳು ಪಡೆಯಲು ಅರ್ಹರಾಗಿರುತ್ತಾರೆ. ಈಗಾಗಲೇ ಗೃಹ ಜ್ಯೋತಿ ಯೋಜನೆಗೆ ಹಲವಾರು ಜನರು ಅರ್ಜಿಯನ್ನು ಸಲ್ಲಿಸಿದ್ದು ಹಿಂದಿನಿಂದ ಅಂದರೆ ಆದಷ್ಟು ಒಂದನೇ ತಾರೀಖಿನಿಂದ ಜುಲೈ 25ರ ಒಳಗಾಗಿ ಅರ್ಜಿಯನ್ನು ಸಲ್ಲಿಸಿದಂತಹ ಅರ್ಹ ಫಲಾನುಭವಿಗಳು ಶೂನ್ಯ ವಿದ್ಯುತ್ ಬಿಲ್ಲನ್ನು ಪಡೆಯುತ್ತಾರೆ. 25ರ ನಂತರ ಅರ್ಜಿಯನ್ನು ಸಲ್ಲಿಸಿದಂತಹ ಅಭ್ಯರ್ಥಿಗಳು ಸೆಪ್ಟೆಂಬರ್ ತಿಂಗಳಿನಲ್ಲಿ ಶೂನ್ಯ ವಿದ್ಯುತ್ ಬಿಲ್ಲನ್ನು ಪಡೆಯುತ್ತಾರೆ. ಹೀಗೆ ರಾಜ್ಯ ಸರ್ಕಾರವು ಪ್ರತಿ ಮನೆಗೂ ಸಹ 200 ಯೂನಿಟ್ ಉಚಿತ ವಿದ್ಯುತ್ ಅನ್ನು ನೀಡಲು ನಿರ್ಧರಿಸಿದ್ದು ಗ್ರಾಹಕರು ಕಳೆದ 12 ತಿಂಗಳಲ್ಲಿ ಎಷ್ಟು ವಿದ್ಯುತ್ ಅನ್ನು ಬಳಸಿದ್ದಾರೆ ಎಂಬುದರ ಮಾಹಿತಿಯನ್ನು ಈ ಕೆಳಗಿನಂತೆ ತಿಳಿದುಕೊಳ್ಳಬಹುದಾಗಿದೆ.


ಕಳೆದ 12 ತಿಂಗಳು ಬಳಸಿದ ವಿದ್ಯುತ್ ಚೆಕ್ ಮಾಡುವ ವಿಧಾನ :

ರಾಜ್ಯ ಸರ್ಕಾರವು ಆಯಾ ವಿದ್ಯುತ್ ಇಲಖಾವ್ಯಪ್ತಿಗೆ ಡೈರೆಕ್ಟರ್ ಲಿಂಕ್ ಅನ್ನು ಪ್ರತಿಯೊಂದು ಲಿಂಕನ್ನು ನೀಡಿದ್ದು ಮೂಲಕ ಅಭ್ಯರ್ಥಿಗಳು ತಾವು ಕಳೆದ 12 ತಿಂಗಳಿನಲ್ಲಿ ಎಷ್ಟು ವಿದ್ಯುತ್ತನ್ನು ಬಳಸಿದ್ದೇವೆ ಎಂಬುದರ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ. HESCOM ಹೆಸ್ಕಾಂ ವ್ಯಾಪ್ತಿಯಲ್ಲಿ ಬರುವಂತಹ ಅಭ್ಯರ್ಥಿಗಳು ಇಸ್ಕಾನ್ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡುವುದರ ಮೂಲಕ ತಮ್ಮ ಕಳೆದ 12 ತಿಂಗಳ ವಿದ್ಯುತ್ ಬಿಲ್ ಅನ್ನು ಚೆಕ್ ಮಾಡಿಕೊಳ್ಳಬಹುದಾಗಿದೆ. ಹೆಸ್ಕಾಂ ನ ಅಧಿಕೃತ ವೆಬ್ಸೈಟ್ ಎಂದರೆ https://hescom.karnataka.gov.in/

BESCOM :


ಬೆಸ್ಕಾಂ ವ್ಯಾಪ್ತಿಯಲ್ಲಿ ಬರುವಂತಹ ಗ್ರಾಹಕರು ಬೆಸ್ಕಾಂನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವುದರ ಮೂಲಕ ತಮ್ಮ ಕಳೆದ 12 ತಿಂಗಳ ಮಾಡಿಕೊಳ್ಳಬಹುದಾಗಿದೆ. ಬೆಸ್ಕಾಂನ ಅಧಿಕೃತ ವೆಬ್ಸೈಟ್ ಎಂದರೆ https://bescom.karnataka.gov.in/


GESCOM :

GESCOM ಇದರ ವ್ಯಾಪ್ತಿಯಲ್ಲಿ ಬರುವಂತಹ ಗ್ರಾಹಕರು ತಮ್ಮ ಕಳೆದ 12 ತಿಂಗಳ ವಿದ್ಯುತ್ ಅನ್ನು ಚೆಕ್ ಮಾಡಿಕೊಳ್ಳಬಹುದಾಗಿದೆ. GESCOM ಅಧಿಕೃತ ವೆಬ್ಸೈಟ್ ಎಂದರೆ,https://gescom.karnataka.gov.in/


MESCOM :


ಮೆಸ್ಕಾಂನ ವ್ಯಾಪ್ತಿಯಲ್ಲಿ ಬರುವಂತಹ ಗ್ರಾಹಕರು ತಮ್ಮ ಕಳೆದ 12 ತಿಂಗಳ ವಿದ್ಯುತ್ ಬಿಲ್ಲನ್ನು ಚೆಕ್ ಮಾಡಿಕೊಳ್ಳಬಹುದಾಗಿದೆ. ಮೆಸ್ಕಾಂನ ಅಧಿಕೃತ ವೆಬ್ಸೈಟ್ ಎಂದರೆ ,https://mescom.karnataka.gov.in/


CESCOM :


CESCOM ಇದರ ವ್ಯಾಪ್ತಿಯಲ್ಲಿ ಬರುವಂತಹ ಗ್ರಾಹಕರು ಇದರ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡುವುದರ ಮೂಲಕ ತಮ್ಮ ಕಳೆದ 12 ತಿಂಗಳ ವಿದ್ಯುತ್ ಬಿಲ್ಲನ್ನು ಚೆಕ್ ಮಾಡಿಕೊಳ್ಳಬಹುದಾಗಿದೆ. CESCOM ಅಧಿಕೃತ ವೆಬ್ಸೈಟ್ ಎಂದರೆ,https://cescmysore.karnataka.gov.in/ ಹೀಗೆ ಈ ವೆಬ್ಸೈಟ್ಗಳಿಗೆ ಆಯಾ ವ್ಯಾಪ್ತಿಯ ಗ್ರಾಹಕರು ಭೇಟಿ ನೀಡುವುದರ ಮೂಲಕ ತಮ್ಮ ಹನ್ನೆರಡು ತಿಂಗಳ ವಿದ್ಯುತ್ ಬಿಲ್ಲನ್ನು ಚೆಕ್ ಮಾಡಿಕೊಳ್ಳಬಹುದಾಗಿದೆ.


12 ತಿಂಗಳ ವಿದ್ಯುತ್ ಸರಾಸರಿ ಲೆಕ್ಕ ಮಾಡುವುದು :

ಗ್ರಾಹಕರು ತಾವು ಬಳಸಿದಂತಹ 12 ತಿಂಗಳ ವಿದ್ಯುತ್ ಅನ್ನು ಸರಾಸರಿ ಲೆಕ್ಕ ಹೇಗೆ ಮಾಡುವುದೆಂದರೆ, ಉದಾಹರಣೆಗೆ ಗ್ರಾಹಕರು ಕಳೆದು ಒಂದು ವರ್ಷದಲ್ಲಿ ಪ್ರತಿ ತಿಂಗಳು 100+110+90+95+100+110+95+90+110+85+100+95 ಹೀಗೆ ಕಳೆದ 12 ತಿಂಗಳಲ್ಲಿ ಈ ರೀತಿ ಇಷ್ಟು ಯೂನಿಟ್ ವಿದ್ಯುತ್ ಅನ್ನು ಬಳಸುತ್ತೀರಿ ಎಂದು ತಿಳಿದುಕೊಂಡರೆ ಒಟ್ಟಾರೆ 12 ತಿಂಗಳಲ್ಲಿ 1180 ಯೂನಿಟ್ ವಿದ್ಯುತ್ ಅನ್ನು ನೀವು ಒಂದು ವರ್ಷದಲ್ಲಿ ಬಳಸಿದ್ದೀರಿ ಎಂದು ಅರ್ಥ. ಅಂದರೆ ನಿಮಗೆ ಸರಾಸರಿ 98.33 ಯೂನಿಟ್ ವಿದ್ಯುತ್ ಅನ್ನು ಬಳಸಿದ್ದೀರಿ ಎಂದು. ಅದರಲ್ಲಿ ಹತ್ತರಷ್ಟು ಉಚಿತ ವಿದ್ಯುತ್ ಎಂದರೆ ಒಟ್ಟು ಗರಿಷ್ಠ 10 ಪರ್ಸೆಂಟ್ ರಷ್ಟು ಎಂದು ಉಚಿತ ಎಂದು ಹೇಳಿದರೆ ಆಗ ಒಟ್ಟು ಗರಿಷ್ಠ 98.33+9.83 = 108.16 ಯೂನಿಟ್ ವರೆಗೆ ನೀವು ಸರ್ಕಾರದಿಂದ ಉಚಿತ ವಿದ್ಯುತ್ತನ್ನು ನಿಮ್ಮ ಮನೆಗೆ ಪಡೆಯುತ್ತೀರಿ ಎಂದರ್ಥ.

ಹೀಗೆ ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವಂತಹ ಗೃಹಜೋತಿ ಯೋಜನೆಗೆ ಸಂಬಂಧಿಸಿ ದಂತೆ ಕಳೆದ 12 ತಿಂಗಳಲ್ಲಿ ನಾವು ಎಷ್ಟು ಯೂನಿಟ್ ಗಳಷ್ಟು ವಿದ್ಯುತ್ತನ್ನು ಬಳಸಿದ್ದೇವೆ ಎಂಬುದರ ಮಾಹಿತಿಯನ್ನು ಆಯಾ ವ್ಯಾಪ್ತಿಯ ಗ್ರಾಹಕರು ತಮ್ಮ ವಿದ್ಯುತ್ತನ್ನು ತಿಳಿದುಕೊಳ್ಳಬಹುದಾಗಿದೆ. ಹೀಗೆ ನಿಮ್ಮ ಸ್ನೇಹಿತರು ಹಾಗೂ ಸಂಬಂಧಿಕರಿಗೂ ಸಹ ಈ ಮಾಹಿತಿಯನ್ನು ಶೇರ್ ಮಾಡುವುದರ ಮೂಲಕ ಅವರು ಸಹ ಎಷ್ಟು ಯೂನಿಟ್ ಗಳಷ್ಟು ವಿದ್ಯುತ್ ಅನ್ನು ಬಳಕೆ ಮಾಡಿದ್ದಾರೆ ಎಂಬ ಮಾಹಿತಿಯನ್ನು ಅವರು ಸಹ ತಿಳಿದುಕೊಳ್ಳಲಿ ಧನ್ಯವಾದಗಳು.

Post a Comment

0 Comments