ನಮ್ಮಲ್ಲಿರುವ ಅಗತ್ಯ ದಾಖಲೆಗಳ ಪೈಕಿ ರೇಷನ್ ಕಾರ್ಡ್ ಕೂಡಾ ಒಂದಾಗಿದೆ. ಅದರಲ್ಲೂ ಕರ್ನಾಟಕದಲ್ಲಿ ಮುಖ್ಯವಾಗಿ ಇತ್ತೀಚೆಗೆ ಹಲವಾರು ಯೋಜನೆಗಳ ಪ್ರಯೋಜನವನ್ನು ಪಡೆಯಲು ರೇಷನ್ ಕಾರ್ಡ್ ಅತೀ ಮುಖ್ಯವಾಗಿದೆ. ರಾಜ್ಯದಲ್ಲಿ ಪ್ರಸ್ತುತ ಪ್ರಮುಖವಾಗಿ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲಾಗಿದೆ. ಅದರಲ್ಲಿ ಕೆಲವು ಯೋಜನೆಗಳಿಗೆ ರೇಷನ್ ಕಾರ್ಡ್ ಅತೀ ಮುಖ್ಯವಾಗಿದೆ.
ಅನ್ನಭಾಗ್ಯ ಯೋಜನೆಯಡಿಯಲ್ಲಿ ಹತ್ತು ಕೆಜಿ ಅಕ್ಕಿ ಒದಗಿಸುವ ಭರವಸೆಯನ್ನು ನೀಡಲಾಗಿತ್ತು, ಆದರೆ ಈಗ ಪ್ರತಿ ವ್ಯಕ್ತಿಗೆ 5 ಕೆಜಿ ಅಕ್ಕಿ ಹಾಗೂ ಪ್ರತಿ ಕೆಜಿ ಅಕ್ಕಿಗೆ 34 ರೂಪಾಯಿಗಳಂತೆ ಐದು ಕೆಜಿ ಅಕ್ಕಿದೆ ಒಟ್ಟು 170 ರೂಪಾಯಿಗಳನ್ನು ಖಾತೆಗೆ ವರ್ಗಾಯಿಸುತ್ತದೆ. ಇದನ್ನು ಹೊರತುಪಡಿಸಿ ಗೃಹಲಕ್ಷ್ಮೀ ಯೋಜನೆಗೂ ಕೂಡಾ ರೇಷನ್ ಕಾರ್ಡ್ ಮುಖ್ಯವಾಗುತ್ತದೆ.
ನಿಮ್ಮ ಮೊಬೈಲ್ ಫೋನ್‌ನಲ್ಲಿ ರೇಷನ್ ಕಾರ್ಡ್ ಸ್ಟೇಟಸ್ ಅನ್ನು ನೀವು ಸುಲಭವಾಗಿ ಪರಿಶೀಲಿಸಬಹುದು. ಕರ್ನಾಟಕ ಸರ್ಕಾರವು ಅನ್ನ ಭಾಗ್ಯ ಯೋಜನೆಗಾಗಿ ನೇರ ಲಾಭ ವರ್ಗಾವಣೆ (ಡಿಬಿಟಿ) ಯೋಜನೆಯನ್ನು ಪ್ರಾರಂಭಿಸಿದೆ. ಇದು ಬಿಪಿಎಲ್ ಕಾರ್ಡುದಾರರಿಗೆ ಹೆಚ್ಚುವರಿ 5 ಕೆಜಿ ಅಕ್ಕಿಯನ್ನು ಒದಗಿಸುತ್ತದೆ. ಹಣವನ್ನು ಆಧಾರ್ ಸಂಖ್ಯೆಗಳಿಗೆ ಲಿಂಕ್ ಮಾಡಿದ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ವರ್ಗಾಯಿಸಲಾಗುತ್ತದೆ. ನಿಮ್ಮ ರೇಷನ್ ಕಾರ್ಡ್ ಸ್ಟೇಟಸ್ ಹೇಗೆ ಪರಿಶೀಲಿಸುವುದು ನೋಡಿ
ರೇಷನ್ ಕಾರ್ಡ್ ಸ್ಟೇಟಸ್ ಚೆಕ್ ಮಾಡಿ
ಹಂತ 1: ಕರ್ನಾಟಕ ಸರ್ಕಾರದ ವೆಬ್‌ಸೈಟ್ https://www.karnataka.gov.in/ ಗೆ ಭೇಟಿ ನೀಡಿ
ಹಂತ 2: E-services ಟ್ಯಾಬ್ ಮೇಲೆ ಕ್ಲಿಕ್ ಮಾಡಿ
ಹಂತ 3: DBT status ಲಿಂಕ್ ಅನ್ನು ಕ್ಲಿಕ್ ಮಾಡಿಕೊಳ್ಳಿ
ಹಂತ 4: ನಿಮ್ಮ ರೇಷನ್ ಕಾರ್ಡ್‌ನಲ್ಲಿ ಯಾವ ಸಮಯದ ಸ್ಟೇಟಸ್ ಚೆಕ್ ಮಾಡಲು ಬಯಸುತ್ತೀರಿ ಎಂದು ಆಯ್ಕೆಮಾಡಿಕೊಳ್ಳಿ
ಹಂತ 5: ನಿಮ್ಮ ರೇಷನ್ ಕಾರ್ಡ್ ಸಂಖ್ಯೆಯನ್ನು ಆಯ್ಕೆ ಮಾಡಿಕೊಳ್ಳಿ. Continue ಮೇಲೆ ಕ್ಲಿಕ್ ಮಾಡಿ.
ಹಂತ 6: ಅನ್ನಭಾಗ್ಯ ಯೋಜನೆಯಡಿಯಲ್ಲಿ ನಿಮ್ಮ ಸ್ಟೇಟಸ್ ಹೇಗಿದೆ ಎಂದು ಸ್ಕ್ರೀನ್‌ನಲ್ಲಿ ತೋರಿಸಲಾಗುತ್ತದೆ.
ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ನೀವು ಕರ್ನಾಟಕ ಸರ್ಕಾರದ ಸಹಾಯವಾಣಿ 1800-425-5889 ಅನ್ನು ಸಂಪರ್ಕಿಸಬಹುದು.
2 Comments
Blco2128568
ReplyDelete1000
ReplyDelete