ಸೌರಶಕ್ತಿಯನ್ನು (Solar Energy) ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸಿ ಅದನ್ನು ಅಗತ್ಯ ಇರುವಂತಹ ವಿದ್ಯುತ್ ರೂಪದಲ್ಲಿ ಬಳಸಿಕೊಳ್ಳುವಂತಹ ಪರಿಸರ ಸ್ನೇಹಿ ಪ್ರಕ್ರಿಯೆ ನಿಜಕ್ಕೂ ಕೂಡ ಅತ್ಯಂತ ಲಾಭದಾಯಕ ಹಾಗೂ ಕಾರ್ಬನ್ ಫ್ರೀ ಕೂಡ ಆಗಿದೆ.
ನಿಮ್ಮ ಮನೆಯಲ್ಲಿ ಸೋಲಾರ್ ಪ್ಯಾನೆಲ್ (Solar Panel) ಅನ್ನು ಅಳವಡಿಸುವುದು ನಿಮ್ಮ ಕರೆಂಟ್ ಬಿಲ್ ಕಡಿಮೆಯಾಗುವುದಕ್ಕೆ ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರುತ್ತದೆ. ಕೇವಲ ನಿಮಗೆ ಬೇಕಾಗಿರುವಂತಹ ಕರೆಂಟ್ ಅನ್ನು ಉತ್ಪಾದನೆ ಮಾಡಿ ಬಳಸಿಕೊಳ್ಳುವುದು ಮಾತ್ರವಲ್ಲದೆ ಅದನ್ನ ಮಾರಾಟ ಮಾಡುವುದರ ಮೂಲಕ ಹಣವನ್ನು ಕೂಡ ಸಂಪಾದನೆ ಮಾಡಬಹುದಾಗಿದೆ.
ಈ ಸೋಲಾರ್ ಪ್ಯಾನೆಲ್ (Solar Panel) ಮೂಲಕ ನೀವು 25 ವರ್ಷಗಳ ಕಾಲ ಯಾವುದೇ ಖರ್ಚಿಲ್ಲದೆ ಸಿಗುವಂತಹ ವಾರಂಟಿಯ ಮೂಲಕ ಉಚಿತ ವಿದ್ಯುತ್ (Free Electricity) ಅನ್ನು ಪಡೆದುಕೊಳ್ಳಬಹುದಾಗಿದೆ. ಸೋಲಾರ್ ಬ್ಯಾಟರಿ ಇನ್ವರ್ಟರ್ಸ್ ಸೇರಿದಂತೆ ಸಂಪೂರ್ಣವಾಗಿ ಸೋಲಾರ್ ಸಿಸ್ಟಮ್ ಅನ್ನು ನೀವು ಅಳವಡಿಸಿಕೊಳ್ಳುವ ಮೂಲಕ ಕೆಲವು ಪಡೆದುಕೊಳ್ಳಬಹುದಾಗಿದೆ.
ಸೋಲಾರ್ ಪ್ಯಾನೆಲ್ ಕೆಪಾಸಿಟಿ:
ಸಾಮಾನ್ಯವಾಗಿ ಸೋಲಾರ್ ಬೆಲೆ ಎನ್ನುವುದು ಸೋಲಾರ್ ಪ್ಯಾನೆಲ್ ನಾ ಟ್ ಕೆಪಾಸಿಟಿ ಮೇಲೆ ನಿರ್ಧಾರಿತವಾಗಿರುತ್ತದೆ. ಸೋಲಾರ್ ಪ್ಯಾನೆಲ್ (Solar Panel) ನ ಕೆಪಾಸಿಟಿ ಎಷ್ಟು ದೊಡ್ಡದಾಗಿರುತ್ತದೆಯೋ ಅಷ್ಟು ಹೆಚ್ಚು ಹಾಗೂ ವೇಗವಾಗಿ ಇದು ಕಾರ್ಯನಿರ್ವಹಿಸುತ್ತದೆ. ಇನ್ನು ಇದರಲ್ಲಿ ಕೂಡ ಬೇರೆ ಬೇರೆ ವರ್ಗದ ಆಧಾರದ ಮೇಲೆ ಖರೀದಿ ಮಾಡಲಾಗುತ್ತದೆ. ವಿಧಗಳು ಕೂಡ ವಿಭಿನ್ನವಾಗಿರುತ್ತವೆ. ಇವುಗಳಲ್ಲಿ ಪಾಲಿಕ್ರಿಸ್ಟಲಿನ್, ಮೋನೋ ಫ್ರಿಸ್ಟಲೈನ್, ಬೈ ಫೇಶಿಯಲ್ ಸೋಲಾರ್ ಪ್ಯಾನೆಲ್ ಗಳ ಆಪ್ಷನ್ ಅನ್ನು ನೀವು ಕಾಣಬಹುದಾಗಿದೆ.
Mono Crystalline ಹೋಲಿಸಿದ್ರೆ ಪಾಲಿಕ್ರಿಸ್ಟಲಿನ್ ಪ್ಯಾನಲ್ (Polycrystalline Panel) ಅತ್ಯಂತ ಹೆಚ್ಚಾಗಿ ಮಾರಾಟ ಆಗುತ್ತಿದೆ ಯಾಕೆಂದರೆ ಇದು ಕಡಿಮೆ ಬೆಲೆಯಲ್ಲಿ ಸಿಗುವಂತಹ ಸೋಲಾರ್ ಪ್ಯಾನಲ್ ಆಗಿದೆ. ಇನ್ನು ಉಳಿದ ಎರಡು ಸೋಲಾರ್ ಫೈನಲ್ ಗಳು ಸಾಮಾನ್ಯವಾಗಿ ಇದಕ್ಕೆ ಹೋಲಿಸಿದರೆ ಬೆಲೆಯಲ್ಲಿ ಏರಿಕೆ ಇರುತ್ತದೆ. ಬೈ ಫೇಷಿಯಲ್ ಸೋಲಾರ್ ಫೈನಲ್ ಎರಡು ಕಡೆಗಳಲ್ಲಿ ವಿದ್ಯುತ್ತನ್ನು ಉತ್ಪಾದನೆ ಮಾಡುವಂತಹ ವಿಶೇಷ ಸಾಮರ್ಥ್ಯವನ್ನು ಹೊಂದಿದೆ.
ಸಿಸ್ಟಮ್ ಇನ್ಸ್ಟಾಲ್ ಹಾಗೂ ಬೆಲೆ:
ಇದನ್ನು ನೀವು ಟೆಕ್ನಿಷಿಯನ್ಗಳನ್ನು ಕರೆಸಿ ಹಾಕಿಸಬಹುದಾಗಿದೆ ಆದರೆ ಒಂದು ಮಾತನ್ನು ನೆನಪಿಟ್ಟುಕೊಳ್ಳಿ ಎತ್ತರದ ಸ್ಥಳದಲ್ಲಿ ಹಾಗೂ ಹೆಚ್ಚಿನ ಸೂರ್ಯನ ಬಿಸಿಲು ಬರುವಂತಹ ಸ್ಥಳದಲ್ಲಿ ಈ ಸೋಲಾರ್ ಪ್ಯಾನಲ್ (Solar Panel) ಗಳನ್ನು ಅಳವಡಿಸಬೇಕು.
ನಿಮ್ಮ ಲೋಡ್ ಕೆಪ್ಯಾಸಿಟಿ ಅನುಸಾರವಾಗಿ ಇದನ್ನು ಇನ್ಸ್ಟಾಲ್ ಮಾಡಬೇಕು. ಇನ್ನು ಈ ಸಂದರ್ಭದಲ್ಲಿ ನಿಮ್ಮ ಸೋಲಾರ್ ಉತ್ಪಾದನೆ ಮಾಡುವಂತಹ ವಿದ್ಯುತ್ತನ್ನು ಹಿಡಿದಿಟ್ಟುಕೊಳ್ಳಲು ಕೂಡ ಮೋಟಾರ್ ಬೇಕಾಗಿರುತ್ತದೆ. ಇದರ ಬೆಲೆ ಬಗ್ಗೆ ಮಾತನಾಡುವುದಾದರೆ ಐದು ಕಿಲೋ ವ್ಯಾಟ್ ಕೆಪಾಸಿಟಿಯ ಸಿಸ್ಟಮ್ ಅನ್ನು ಇನ್ಸ್ಟಾಲ್ ಮಾಡೋದಕ್ಕೆ ನಾಲ್ಕರಿಂದ ಆರು ಲಕ್ಷಗಳವರೆಗೆ ಖರ್ಚು ಮಾಡಬೇಕಾಗುತ್ತದೆ.