ಅನ್ನದಾತರಿಗೆ ಶೂನ್ಯ ಬಡ್ಡಿದರದಲ್ಲಿ 5 ಲಕ್ಷ ಸಾಲ! ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್ ಇಲ್ಲಿದೆ

ಹಲೋ ಸ್ನೇಹಿತರೇ, ರಾಜ್ಯ ಸರ್ಕಾರ ರೈತರಿಗೆ ಬೇರೆ ಬೇರೆ ಅವಧಿಯ ಕೃಷಿ ಸಾಲವನ್ನು ಬಡ್ಡಿ ರಹಿತವಾಗಿ ಅಥವಾ ಅತಿ ಕಡಿಮೆ ಬಡ್ಡಿ ದರದಲ್ಲಿ ಒದಗಿಸುತ್ತಿದೆ. ಮೊದಲಿಗಿಂತ ಹೆಚ್ಚಿನ ಮೊತ್ತದ ಸಾಲ ಸೌಲಭ್ಯ ನೀಡಲಾಗುತ್ತಿದ್ದು, 10 ರಿಂದ 15 ಲಕ್ಷ ರೂಪಾಯಿಗಳವರೆಗಿನ ಕೃಷಿ ಸಾಲ ಪಡೆಯಬಹುದು. ರೈತರ ಕೃಷಿ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಸುಲಭ ಸಾಲ ಯೋಜನೆಯನ್ನು ಸರ್ಕಾರ ಪರಿಚಯಿಸಿದೆ.



ಪಡೆಯಬಹುದು ದೀರ್ಘಾವಧಿಯ ಸಾಲ:

ರೈತರಿಗೆ 10 ರಿಂದ 15 ಲಕ್ಷ ರೂಪಾಯಿಗಳವರೆಗೂ ಸಾಲ ಸೌಲಭ್ಯ ಪಡೆಯಲು ಅವಕಾಶವಿದ್ದು ಇದಕ್ಕೆ ಕೇವಲ 4% ಬಡ್ಡಿ ದರ ವಿಧಿಸಲಾಗುವುದು. ಇನ್ನು 5 ಲಕ್ಷಗಳ ವರೆಗೆ ಬಡ್ಡಿ ರಹಿತ ಸಾಲ ನೀಡಲು ಸರ್ಕಾರ ನಿರ್ಧರಿಸಿದೆ. 2024 ಹಣಕಾಸಿನ ವರ್ಷದ ಆರಂಭದಿಂದ ಈ ಸೌಲಭ್ಯ ರೈತರಿಗೆ ಲಭ್ಯವಾಗಲಿದೆ.

ಯಂತ್ರ ಖರೀದಿಗೆ ಸಾಲ:

ರೈತರು ತಮ್ಮ ಕೃಷಿ ಚಟುವಟಿಕೆಗಳಿಗಾಗಿ ಕೆಲವು ಪ್ರಮುಖ ಯಂತ್ರಗಳನ್ನು ಖರೀದಿಸಬೇಕಾಗುತ್ತದೆ, ಉದಾಹರಣೆಗೆ ಟ್ರ್ಯಾಕ್ಟರ್ ಗಳು, ಹೊಳೆತ್ತುವ ಯಂತ್ರ ಮೊದಲಾದ ಯಂತ್ರ ಖರೀದಿ ಮಾಡಬೇಕಾಗುತ್ತದೆ. ಇದೀಗ ಸರ್ಕಾರ ರೈತರು ತಮ್ಮ ಜಮೀನಿನಲ್ಲಿ ಬೆಳೆದ ಫಸಲು ಮಾರಾಟ ಮಾಡಲು ಬಳಸುವ ವಾಹನ ಖರೀದಿಗೆ 7 ಲಕ್ಷಗಳವರೆಗೆ ಸಾಲ ನೀಡುತ್ತದೆ. ಮತ್ತು ಇದಕ್ಕೆ ಕೇವಲ 4% ಬಡ್ಡಿ ದರ ವಿಧಿಸಲಾಗುತ್ತದೆ.

ರಾಜ್ಯದಲ್ಲಿ ಸರ್ಕಾರ 50 ಕೋಲ್ಡ್ ಸ್ಟೋರೇಜ್ ಸ್ಥಾಪಿಸಲು ಮುಂದಾಗಿದ್ದು ಇದರಿಂದ ರೈತರು ಪ್ರಯೋಜನ ಪಡೆದುಕೊಳ್ಳಬಹುದು ಇದರ ಜೊತೆಗೆ ರೇಷ್ಮೆ ಬೆಳೆಗಾರರಿಗೆ 5 ಲಕ್ಷದವರೆಗೆ ಬಡ್ಡಿ ರಹಿತ ಸಾಲ ನೀಡಲಾಗುವುದು.

ರಾಜ್ಯ ಸರ್ಕಾರ ವಿಶೇಷವಾಗಿ ಅನುಗ್ರಹ ಯೋಜನೆಯನ್ನು ಜಾರಿಗೆ ತಂದಿದ್ದು, ಯೋಜನೆಯ ಅಡಿಯಲ್ಲಿ ಜಾನುವಾರುಗಳು ಆಕಸ್ಮಿಕ ಮರಣ ಹೊಂದಿದರೆ ಸರ್ಕಾರದಿಂದ ಸಹಾಯಧನ ನೀಡಲಾಗುವುದು. ಇದಕ್ಕೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ಪಶು ಸಂಗೋಪನ ವೈದ್ಯಕೀಯ ಕೇಂದ್ರದಲ್ಲಿ ಮಾಹಿತಿ ಪಡೆಯಬಹುದು.

Previous Post Next Post

Ads

Ads

نموذج الاتصال

×