Annabhagya rice-2024: ಅನ್ನಭಾಗ್ಯದ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿಯಂತಹ ಕಾಳುಗಳು ಇವೆಯೇ? ಅದೇನು ಎಂದು ತಿಳಿಯಬೇಕೇ? ಇಲ್ಲಿದೆ ಸಂಪೂರ್ಣ ವಿವರ.

Annabhagya yojane latest news-ನಿಮ್ಮ ಮನೆಗೆ ನೀವು ತರುತ್ತಿರುವ ಅನ್ನಭಾಗ್ಯ ಯೋಜನೆಯಡಿಯ(Annabhagya yojane latest news) ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿಯಂತಹ ಕಾಳುಗಳು ಇವೆಯೇ? ಅದೇನು ಎಂದು ತಿಳಿಯಬೇಕೇ? ಇಲ್ಲಿದೆ ಸಂಪೂರ್ಣ ವಿವರ.



  • ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿರುವ ಅನ್ನಭಾಗ್ಯ ಯೋಜನೆಯಡಿ ಪ್ಲಾಸ್ಟಿಕ್ ಅಕ್ಕಿ ವದಂತಿಗೆ ರಾಜ್ಯ ಸರಕಾರದಿಂದ ಸ್ಪಷ್ಟನೆ ನೀಡಿದ್ದು ಇದರ ವಿವರವನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.
  • ಆಹಾರ ಇಲಾಖೆಯಿಂದ ಪಡಿತರ ಚೀಟಿ ಹೊಂದಿರುವ ಗ್ರಾಹಕರಿಗೆ ಪ್ರತಿ ತಿಂಗಳು ಅನ್ನಭಾಗ್ಯ ಯೋಜನೆಯಡಿ ಅಕ್ಕಿಯನ್ನು ವಿತರಣೆ ಮಾಡಲಾಗುತ್ತದೆ.
  • ಇತ್ತೀಚೆಗೆ ಅನ್ನಭಾಗ್ಯ ಯೋಜನೆಯಡಿ ನೀಡುವ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ಕಲಬೆರಿಕೆಯಾಗಿ ಬರುತ್ತಿವೆ ಎಂದು ಗ್ರಾಹಕರು ದೂರುತ್ತಿರುವ ಹಿನ್ನಲೆಯಲ್ಲಿ ವಾರ್ತಾ ಇಲಾಖೆಯಿಂದ ಅಧಿಕೃತವಾಗಿ ಈ ಕುರಿತು ಪ್ರಕಟಣೆ ಹೊರಡಿಸಲಾಗಿದೆ.

annabhagya plastic rice news- ಅನ್ನಭಾಗ್ಯ ಯೋಜನೆ ಭಯಪಡದಿರಿ ಅದು ಪ್ಲಾಸ್ಟಿಕ್ ಅಕ್ಕಿಯಲ್ಲ ಸಾರವರ್ಧಿತ ಅಕ್ಕಿ:

  • ಗ್ರಾಹಕರು ನ್ಯಾಯಬೆಲೆ ಅಂಗಡಿಯನ್ನು ಭೇಟಿ ಮಾಡಿ ಪ್ರತಿ ಮಾಸಿಕದ ಅಂದರೆ ಪ್ರತಿ ತಿಂಗಳು ನೀಡುವ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಮನೆಗೆ ತಂದು ಮನೆಯಲ್ಲಿ ಅನ್ನ ಮಾಡಲು ನೀರಿಗೆ ಹಾಕಿದಾಗ ಸಲ್ಪ ಪ್ರಮಾಣದ ಅಕ್ಕಿಗಳು ನೀರಿನಲ್ಲಿ ಮುಳುಗದೆ ನೀರಿನ ಮೇಲೆ ತೇಲುತ್ತಿರುವುದನ್ನು ಕಂಡು ಅದು ಪ್ಲಾಸ್ಟಿಕ್ ಅಕ್ಕಿ ಎಂದು ಜನ ಗೊಂದಲಕ್ಕೆ ಈಡಾಗದೆ ಅಥವಾ ಭಯಪಡುವ ಅಗತ್ಯವಿಲ್ಲ ಏಕೆಂದರೆ.
  • ಕೇಂದ್ರ ಸರ್ಕಾರದ ಸಚಿವಾಲಯದ ಮಾರ್ಗಸೂಚಿಯಂತೆ ಪ್ರತಿ 1 ಕೆ.ಜಿ. ಅಕ್ಕಿಗೆ 10 ಗ್ರಾಂ. ನಷ್ಟು ಸಾರವರ್ಧಿತ ಅಕ್ಕಿಯನ್ನು ಬೆರೆಸಲಾಗುತ್ತದೆ. ಇದು ವ್ಯಕ್ತಿಯ ಆರೋಗ್ಯಕ್ಕೆ ಅಗತ್ಯವಾದ ಜೀವಸತ್ವಗಳು, ಸೂಕ್ಷ್ಮ ಪೋಷಕಾಂಶಗಳಾದ ಕಬ್ಬಿಣಾಂಶ, ಫೋಲಿಕ್‌ ಆಮ್ಲ ಮತ್ತು ವಿಟಮಿನ್‌ ಬಿ ಯನ್ನು ಒದಗಿಸುತ್ತದೆ.
  • ಈ ಸಾರವರ್ಧಿತ ಅಕ್ಕಿಯು ನಿಮ್ಮ ಆರೋಗ್ಯವನ್ನು ಉತ್ತಮಗೊಳಿಸುತ್ತದೆ ಮತ್ತು ರಕ್ತಹೀನತೆ, ಅಪೌಷ್ಟಿಕತೆಯನ್ನು ಹೋಗಲಾಡಿಸುತ್ತದೆ. ಪ್ರಯೋಗಾಲಯದಿಂದ ಪರೀಕ್ಷೆಗೆ ಒಳಪಟ್ಟ ಸಾರವರ್ಧಿತ ಅಕ್ಕಿಯನ್ನು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದಿಂದ ಬಳಕೆಗೆ ಯೋಗ್ಯವಾದ ಪೌಷ್ಠಿಕಾಂಶಭರಿತವಾದ ಅಕ್ಕಿ ಎಂದು ಪರಿಗಣಿಸಲಾಗಿರುತ್ತದೆ ಈ ಕಾರಣದಿಂದ ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ.

plastic rice- ಪ್ರಯೋಗಾಲಯದಿಂದ ಪರೀಕ್ಷೆಗೆ ಒಳಪಟ್ಟಿದೆ:

  • ಸಾರವರ್ಧಿತ ಅಕ್ಕಿಯು ಅಧಿಕೃತ ಪ್ರಯೋಗಾಲಯದಿಂದ ಈ ಅಕ್ಕಿಯನ್ನು ಬಳಕೆ ಮಾಡುವುದರಿಂದ ಮಾನವನ ದೇಹಕ್ಕೆ ಯಾವುದೇ ಬಗ್ಗೆಯ ಅಡ್ಡಪರಿಣಾಮಗಳಿಲ್ಲ ಎಂದು ಪರೀಕ್ಷೆಗೆ ಒಳಪಟ್ಟಿದ್ದು,
  • ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದಿಂದ ಈ ಅಕ್ಕಿ ಬಳಕೆಗೆ ಯೋಗ್ಯವಾದ ಪೌಷ್ಥಿಕಾಂಶಭರಿತವಾದ ಅಕ್ಕಿ ಎಂದು ಪರಿಗಣಿಸಲಾಗಿರುತ್ತದೆ.
  • karnataka food department website-ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ ಲಿಂಕ್: Click here

Previous Post Next Post

Ads

Ads

نموذج الاتصال

×