Student Scholarships: ಕರ್ನಾಟಕದಲ್ಲಿ 100% ಹಣ ಸಿಗುವ 6 ಸ್ಕಾಲರ್ಷಿಪ್ ಗಳು ಇಲ್ಲಿವೆ! ಈಗಲೇ ಅರ್ಜಿ ಹಾಕಿ

Student Scholarships: ಕರ್ನಾಟಕದಲ್ಲಿ 100% ಹಣ ಸಿಗುವ 6 ಸ್ಕಾಲರ್ಷಿಪ್ ಗಳು ಇಲ್ಲಿವೆ! ಈಗಲೇ ಅರ್ಜಿ ಹಾಕಿ

ಈಗ ಶೈಕ್ಷಣಿಕ ವರ್ಷ ಮತ್ತೆ ಪುನಃ ಆರಂಭ ಆಗಿದೆ. ಹಾಗಾಗಿ ಈ ವರ್ಷದಲ್ಲಿ ಅಂತಿಮ ಪಿಯು, ಡಿಪ್ಲೊಮಾ ಹಾಗೂ ಎಸೆಸೆಲ್ಸಿ ಓದುವವರಿಗೆ ಮುಂದಿನ ಆಯ್ಕೆ ಬಗ್ಗೆ ಸಾಮಾನ್ಯ ಚಿಂತೆ ಇರುವುದನ್ನು ನಾವು ಕಾಣಬಹುದು. ಇಂತಹ ಚಿಂತೆಗೆ ಕೂಡ ನಿಖರ ಕಾರಣ ಇದೆ. ಮುಂದೆ ತಾವು ವಿದ್ಯಾರ್ಥಿ ಬದುಕಲ್ಲಿ ಆಯ್ಕೆ ಮಾಡಿದ್ದ ವಿಚಾರ ಬದುಕಿಗೂ ದಾರಿ ಆಗಲಿದ್ದು ಅದಕ್ಕಾಗಿ BCA,BBM, BSC, BA, B.com ಎಂಬ ಅನೇಕ ಆಯ್ಕೆಯಲ್ಲಿ ಯಾವುದು ಬೆಸ್ಟ್ ಎಂದು ಆಯ್ಕೆ ಮಾಡಿಕೊಳ್ಳಬೇಕು ಆದರೆ ಫೀಸ್ ಜಾಸ್ತಿ ಎಂದು ಅನೇಕ ವಿದ್ಯಾರ್ಥಿಗಳು ತಮ್ಮ ಕೋರ್ಸ್ ಬದಲಾಯಿಸಿದ್ದನ್ನು ಕೂಡ ನಾವು ಕಾಣಬಹುದು ಈ ನಿಟ್ಟಿನಲ್ಲಿ ವಿದ್ಯಾರ್ಥಿ ವೇತನ (Student Scholarships) ಪಡೆದು ನೀವು ಕೋರ್ಸ್ ಗೆ ಸೇರಬಹುದು ಈ ಬಗ್ಗೆ ಉಪಯುಕ್ತ ಮಾಹಿತಿ ಇಲ್ಲಿದೆ.



ವಿದ್ಯಾರ್ಥಿ ವೇತನದ ಹೆಸರು ಏನು?

ರಾಜ್ಯ ಸರಕಾರದಿಂದಲೇ ವಿದ್ಯಾರ್ಥಿ ವೇತನಕ್ಕೆ (Student Scholarship) ಅರ್ಜಿ ಆಹ್ವಾನಿಸಲಾಗುತ್ತಿದ್ದು ಅದನ್ನು SSP ವಿದ್ಯಾರ್ಥಿ ವೇತನ ಎಂದು ಕರೆಯುತ್ತಾರೆ. ಇದರಲ್ಲಿ ST, SC , OBC ಅವರಿಗೆ ಪ್ರತ್ಯೇಕ ಸ್ಕಾಲರ್ ಶಿಪ್ ಸಿಗಲಿದೆ.

  • ಅದೇ ರೀತಿ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಕೂಡ ಪ್ರತ್ಯೇಕ ವಿದ್ಯಾನಿಧಿ ಯೋಜನೆಇದೆ ಅದರ ಹೆಸರು SHP. ಇದು ಹಾಸ್ಟೆಲ್ ನಲ್ಲಿ ಉಳಿಯುವ ಮಕ್ಕಳಿಗೆ ನೀಡಲಾಗುವುದು. SHP ಎಂದರೆ State hostel portal ಎಂಬ ಅರ್ಥ ಕೊಡಲಿದೆ. ಇದನ್ನು ಕೊಡುವ ಮುಖ್ಯ ಉದ್ದೇಶ ಹಾಸ್ಟೆಲ್ ವಾಸ್ತವ್ಯಕ್ಕೆ ಅನುಕೂಲ ಆಗಲೆಂದು ಹಾಗೂ ಇತರ ಖರ್ಚಿಗೂ ಅನುಕೂಲ ಆಗಲಿ ಎಂಬ ಉದ್ದೇಶ ಇರುವುದನ್ನು ಕಾಣಬಹುದು. ಹಾಸ್ಟೆಲ್ ಅಪ್ಲಿಕೇಶನ್ ಹಾಕಿ ಹಾಸ್ಟೆಲ್ ಸೌಲಭ್ಯ ಸಿಗದಿದ್ದರೆ ಮಾತ್ರವೇ ಈ ಸ್ಕಾಲರ್ ಶಿಪ್ ಸಿಗುತ್ತದೆ.
  • ಕಟ್ಟಡ ಕಾರ್ಮಿಕರ ಮಕ್ಕಳಿಗೆ ಅನುಕೂಲ ಆಗಲಿ ಎಂದು ಕೂಡ ವಿದ್ಯಾರ್ಥಿ ವೇತನ (Student Scholarship) ನೀಡಲಾಗುವುದು. Karnataka Building and Other Construction Workers Welfare Board ನ ಅಡಿಯಲ್ಲಿನಿಮ್ಮ ನಿಮ್ಮ ಕೋರ್ಸ್ ಮೇಲೆ ವಿದ್ಯಾರ್ಥಿ ನಿಧಿ ಇಲ್ಲಿ ಬದಲಾಗಲಿರುವುದು ಕಾಣಬಹುದು.
  • ಲೇಬರ್ ಕಾರ್ಡ್ ಸ್ಕಾಲರ್ ಶಿಪ್ ಎನ್ನುವುದು ಸಹ ಇದೆ. ಇದು ಲೇಬರ್ ಕಾರ್ಡ್ (Labour Card) ವೆಲ್ ಫೇರ್ ಬೋರ್ಡ್ ನಿಂದ ವಿದ್ಯಾರ್ಥಿ ವೇತನ ವಿತರಣೆ ಎನ್ನಬಹುದು. ಯಾರು ಕಾರ್ಮಿಕರು ಲೇಬರ್ ಕಾರ್ಡ್ ಹೊಂದಿದ್ದರೆ ಅವರ ಮಕ್ಕಳಿಗೆ ವ್ಯಾಸಾಂಗದ ಕೋರ್ಸ್ ಮೇಲೆ ಹಣ ಮಂಜೂರು ಆಗಲಿದೆ.ಪ್ರೌಡ ಶಾಲೆಯಿಂದ ಸ್ನಾತಕೋತ್ತರ ಪದವಿ ವರೆಗೆ ಹಾಗೂ ವೈದ್ಯಕೀಯ ಶಿಕ್ಷಣಕ್ಕೆ ಕೂಡ ಸ್ಕಾಲರ್ ಶಿಪ್ ಅನ್ನು ನೀಡಲಾಗುವುದು. 35,000 ಕ್ಕಿಂತ ಹೆಚ್ಚು ಮಾಸಿಕ ವೇತನ ಇರಬಾರದು ಎಂಬ ನಿಯಮ ಇದೆ.
  • NSP ಅಂದರೆ National Scholarship Portal ಎನ್ನುವರು ಇದು ಕೇಂದ್ರದ ಒಂದು ವಿದ್ಯಾರ್ಥಿ ನಿಧಿಯಾಗಿದೆ. ಪಿಯುಸಿ ಆದ ಮೇಲೆ NSP ಪೋರ್ಟಲ್‌ಮೂಲಕ ಅಪ್ಲೇ ಮಾಡಬಹುದು.
  • ಸುಜ್ಞಾನ ನಿಧಿ ಸ್ಕಾಲರ್ ಶಿಪ್ ಕೂಡ ಇದೆ. ಇದನ್ನು ಧರ್ಮಸ್ಥಳ ಸಂಘದಲ್ಲಿ ಇರುವವರ ಮಕ್ಕಳಿಗೆ ಈ ವಿದ್ಯಾರ್ಥಿ ವೇತನ ಸಿಗುತ್ತದೆ.

ಎಷ್ಟು ವಿದ್ಯಾರ್ಥಿ ವೇತನ ಸಿಗಲಿದೆ?

SSP ಯೋಜನೆ ಅಡಿಯಲ್ಲಿ ವಿದ್ಯಾರ್ಥಿ ವೇತನ ಬೇರೆ ಬೇರೆ ಮೊತ್ತ ಸಿಗಲಿದೆ ಎಂದು ಹೇಳಬಹುದು. ಇಂಜಿನಿಯರ್ ಸಾಮಾನ್ಯ ವರ್ಗದ ಮಕ್ಕಳಿಗೆ ವಾರ್ಷಿಕ 18,000 ರೂಪಾಯಿ, ST/SC ವಿದ್ಯಾರ್ಥಿಗಳಿಗೆ 50,000 ರೂಪಾಯಿ ತನಕವು ವಿದ್ಯಾರ್ಥಿ ವೇತನ (Student Scholarship) ಸಿಗುತ್ತದೆ.

ಹಾಸ್ಟೆಲ್ ಅಪ್ಲಿಕೇಶನ್ ಹಾಕಿ ಹಾಸ್ಟೆಲ್ ಸಿಗದೆ ಇದ್ದರೆ ಆಗ 15,000 ರೂಪಾಯಿ ಸಿಗಲಿದೆ. NSP ಅಡಿಯಲ್ಲಿ ವಾರ್ಷಿಕ ಕೇಂದ್ರದಿಂದ 10,000 ವಿದ್ಯಾರ್ಥಿ ಬರಲಿದೆ. ಸುಜ್ಞಾನ ನಿಧಿ ಅಡಿಯಲ್ಲಿ 10,000 ಸ್ಕಾಲರ್ ಶಿಪ್ ಸಿಗುತ್ತದೆ. ಲೇಬರ್ ಕಾರ್ಡ್ (Labour Card) ಹಾಗೂ ಕಟ್ಟಡ ಕಾರ್ಮಿಕರ ಮಕ್ಕಳ ಸ್ಕಾಲರ್ ಶಿಪ್ ಅನ್ನುವುದು ಕೋರ್ಸ್ ಮೇಲೆ ಮೊತ್ತ ಬದಲಾಗಲಿದೆ.

ಈ ವೆಬ್‌ಸೈಟ್‌ ಗೆ ಭೇಟಿ ನೀಡಿ:

SSP ಸ್ಕಾಲರ್ ಶಿಪ್ ಪಡೆಯಲು ನೀವು ಸರಕಾರದ ಅಧಿಕೃತ ವೆಬ್‌ಸೈಟ್‌ನಲ್ಲಿ ಭೇಟಿ ನೀಡಿ. ssp.postmetric.karnataka.gov.in ಗೆ ಭೇಟಿ ನೀಡಿ. Labour Card ವಿದ್ಯಾರ್ಥಿ ವೇತನಕ್ಕೆ www.kwhapps.Karnataka.gov.in ಗೆ ಭೇಟಿ ನೀಡಿದರೆ ಮಾಹಿತಿ ಕೂಡ ಸಿಗಲಿದೆ.


Post a Comment

Previous Post Next Post

Advertisement

Advertisement

×