ಕೆನೆರಾ ಬ್ಯಾಂಕ್ ದೇಶಪಾಂಡೆ ತರಬೇತಿ ಕೇಂದ್ರ ಮತ್ತು ಜೆಸಿಬಿ ಇಂಡಿಯಾ :
ಗ್ರಾಮೀಣ ಯುವಕರು ಅದರಲ್ಲೂ ಮಹಿಳೆಯರು ಸ್ವಯಂ ಉದ್ಯೋಗ ಮಾಡುವ ಕನಸು ಹೊಂದಿದ್ದಾರೆ. ಈ ಕನಸನ್ನು ನನಸು ಮಾಡುವ ದೃಷ್ಟಿಯಿಂದ ಶ್ರೀ ವಿ.ಆರ್. ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ದೇಶಪಾಂಡೆ ಗ್ರಾಮೀಣಾಭಿವೃದ್ಧಿ ಮತ್ತು ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯನ್ನು ಸ್ಥಾಪಿಸಿದೆ – ಕೆನರಾ ಬ್ಯಾಂಕ್ ಜಂಟಿಯಾಗಿ ಪ್ರಾಯೋಜಿಸಿದ್ದು, ಇದು ಗ್ರಾಮೀಣ ಅಭಿವೃದ್ಧಿಯಲ್ಲಿ ಸಾಕಷ್ಟು ಪರಿಣತಿಯನ್ನು ಹೊಂದಿರುವ ಪ್ರಧಾನ ರಾಷ್ಟ್ರೀಕೃತ ಬ್ಯಾಂಕ್ ಆಗಿದೆ. ಈ ಸಂಸ್ಥೆಯು ಮಹಿಳಾ ಅಭಿವೃದ್ಧಿಗೆ ಒತ್ತು ನೀಡುವ ಮೂಲಕ ಗ್ರಾಮೀಣ ಜನತೆಗೆ ಸ್ವಯಂ ಉದ್ಯೋಗಕ್ಕಾಗಿ ವೃತ್ತಿಪರ ತರಬೇತಿಯನ್ನು ನೀಡುವ ಮೂಲಕ ನಿರುದ್ಯೋಗ, ಮೂಲಭೂತ ಶಿಕ್ಷಣ ಮತ್ತು ವಾಣಿಜ್ಯೋದ್ಯಮ ಅಭಿವೃದ್ಧಿಯ ಸಮಸ್ಯೆಗಳನ್ನು ಪರಿಹರಿಸಲು ಸಂಸ್ಥೆಯು ತರಬೇತಿಗಳನ್ನು ಕೊಡುತ್ತಿದೆ
ಜೆಸಿಬಿ ಇಂಡಿಯಾ ಇವರ ಸಂಯುಕ್ತಾಶ್ರಯದಲ್ಲಿ 30 ದಿನಗಳ ಉಚಿತ ಜೆಸಿಬಿ ಆಪರೇಟರ್ ಟ್ರೈನಿಂಗ್ ತರಬೇತಿಗೆ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಅರ್ಹತೆ:
- ಸ್ವಯಂ ಉದ್ಯೋಗದಲ್ಲಿ ಆಸಕ್ತಿ ಇರಬೇಕು
- ವಯಸ್ಸು 18-45 ವರ್ಷಗಳ ನಡುವೆ ಇರಬೇಕು
- ಕನ್ನಡ ಓದಲು ಮತ್ತು ಬರೆಯಲು ತಿಳಿದಿರಬೇಕು ಮತ್ತು ಕಲಿಕೆಯಲ್ಲಿ ಸಮರ್ಪಣೆ ಇರಬೇಕು
- ತರಬೇತಿಯಲ್ಲಿ ಪ್ರಾಥಮಿಕ ಜ್ಞಾನವನ್ನು ಆದ್ಯತೆ ನೀಡಲಾಗುತ್ತದೆ
- ಕರ್ನಾಟಕದಾದ್ಯಂತ ಇರುವ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು
- ತರಬೇತಿ ಅವಧಿಯಲ್ಲಿ ರಜೆ ಸೌಲಭ್ಯವಿಲ್ಲ
ತರಬೇತಿ ವಿಶೇಷತೆ ಮತ್ತು ಸೌಲಭ್ಯಗಳು
- ಆಯ್ಕೆಯಾದ ಅಭ್ಯರ್ಥಿಗಳು ಸಂಸ್ಥೆಯಲ್ಲಿ ಉಳಿಯಬೇಕು
- ತರಬೇತಿಯು ಉಚಿತ ಮತ್ತು ತರಬೇತಿ ಅವಧಿಯಲ್ಲಿ ಉಚಿತ ಆಹಾರ ಮತ್ತು ವಸತಿ ಸೌಲಭ್ಯ ಉಚಿತವಾಗಿರುತ್ತದೆ.
- ತಜ್ಞರಿಂದ ಪ್ರಾಯೋಗಿಕ ಪ್ರದರ್ಶನ. ವ್ಯಾಪಾರ ಮತ್ತು ಮಾರುಕಟ್ಟೆ ನಿರ್ವಹಣೆ, ಬ್ಯಾಂಕಿಂಗ್, ಯೋಜನಾ ವರದಿಯಂತಹ
- ಉದ್ಯಮಶೀಲತೆಯ ವಿಷಯಗಳ ಮೇಲೆ ಬೋಧನೆ.
- ಮಹಿಳೆಯರಿಗೆ ಪ್ರತ್ಯೇಕ ವಸತಿ ಸೌಲಭ್ಯ
- ದೈನಂದಿನ ಯೋಗ ಬೋಧನೆ
ಅರ್ಜಿ ಸಲ್ಲಿಸುವ ವಿಧಾನ:
18 ರಿಂದ 45 ವರ್ಷ ವಯೋಮಿತಿಯ ಯುವಕರು, ತಮ್ಮ ಹೆಸರು, ಹುಟ್ಟಿದ ದಿನಾಂಕ, ಪೂರ್ಣ ಪೋಸ್ಟಲ್ ವಿಳಾಸ, ಮೊಬೈಲ್ ಸಂಖ್ಯೆ, ವಿದ್ಯಾರ್ಹತೆ, ತರಬೇತಿಯ ಅವಶ್ಯಕತೆ, ಈಗ ಮಾಡುತ್ತಿರುವ ಕೆಲಸ, ಇತ್ಯಾದಿ ವಿವರಗಳನ್ನು ಕೆನರಾ ಬ್ಯಾಂಕ್ ದೇಶಪಾಂಡೆ ಆರ್‍ಸೆಟಿ (ಆರ್), ವಿಸ್ತರಣಾ ಕೇಂದ್ರ ಹಸನಮಾಳ್, ದಾಂಡೇಲಿ – 581325 ಇಲ್ಲಿಗೆ ಜನವರಿ25 ರೊಳಗಾಗಿ ಈ ಮೇಲಿನ ಎಲ್ಲಾ ವಿವರ ಸಮೇತ ಒಂದು ಅರ್ಜಿ ಬರೆದು ತರಬೇತಿ ಕೇಂದ್ರದ ವಿಳಾಸಕ್ಕೆ ಪೋಸ್ಟ್ ಮೂಲಕ ಕಳುಹಿಸಿಕೊಡಬೇಕು.
ಹೆಚ್ಚಿನ ಮಾಹಿತಿಗಾಗಿ ದೂ.08284-298547, 9449782425,9731842849,9731842849, ಗೆ ಸಂಪರ್ಕಿಸಬಹುದಾಗಿದೆ ಎಂದು ತರಬೇತಿ ಕೇಂದ್ರದ ನಿರ್ದೇಶಕರು ಪ್ರಕಟಣೆ ಹೊರಡಿಸಿದ್ದಾರೆ.
ಇತರೆ ವಿಭಾಗದಲ್ಲಿ ಸ್ವ-ಉದ್ಯೋಗ ಮಾಡಲು ಆಸಕ್ತಿಯಿರುವವರು ಸಹ ಒಮ್ಮೆ ನಿಮ್ಮ ಜಿಲ್ಲೆಯ ತರಬೇತಿ ಕೇಂದ್ರಕ್ಕೆ ಭೇಟಿ ಮಾಡಿ ಹೆಚ್ಚಿನ ಮಾಹಿತಿ ತಿಳಿಯಬವುದು. ಜಿಲ್ಲಾವರು ತರಬೇತಿ ಕೇಂದ್ರದ ವಿಳಾಸ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ತಪ್ಪದೆ ಈ ತರಬೇತಿಗೆ ಪಾಲ್ಗೊಂಡು ಸ್ವಂತ ಉದ್ಯೋಗವನ್ನು ಮಾಡಬಹುದು. ಹಾಗೂ ತರಬೇತಿಯಲ್ಲಿ ಆಸಕ್ತಿ ಹೊಂದಿರುವ ನಿಮ್ಮ ಎಲ್ಲಾ ಸ್ನೇಹಿತ ಮಿತ್ರರಿಗೆ ಮತ್ತು ನಿರುದ್ಯೋಗಿ ಯುವಕ ಯುವತಿಯರಿಗೆ ತಪ್ಪದೇ ಈ ಲೇಖನವನ್ನು ಈಗಲೇ ಶೇರ್ ಮಾಡುವ ಮೂಲಕ ಅವರಿಗೂ ಸಹಿತ ನೀವು ಸಹಾಯ ಮಾಡಬಹುದು. ಧನ್ಯವಾದಗಳು
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ಲೇಖನ ಮುಕ್ತಾಯ ***********