Gruha Lakshmi: ಈ ಜಿಲ್ಲೆಗಳಿಗೆ ಗೃಹಲಕ್ಷ್ಮಿ 11ನೇ ಹಾಗು 12ನೇ ಕಂತಿನ ಹಣ ಬಿಡುಗಡೆ

Gruha Lakshmi: ಈ ಜಿಲ್ಲೆಗಳಿಗೆ ಗೃಹಲಕ್ಷ್ಮಿ 11ನೇ ಹಾಗು 12ನೇ ಕಂತಿನ ಹಣ ಬಿಡುಗಡೆ

ಈ ಭಾರೀ ರಾಜ್ಯ ಸರಕಾರವು ಮಹಿಳೆಯರ ಅಭಿವೃದ್ಧಿ ಗಾಗಿ ಮಹಿಳಾ ಪರ ಯೋಜನೆಯನ್ನು ಜಾರಿಗೆ ತಂದಿದೆ‌. ಹೌದು ಗೃಹಲಕ್ಷ್ಮಿ (Gruha Lakshmi) ಮತ್ತು ಶಕ್ತಿ ಯೋಜನೆಯನ್ನು ಈಗಾಗಲೇ ಜಾರಿಗೆ ತಂದಿದೆ. ಬಸ್ ನಲ್ಲಿ ಉಚಿತ ಪ್ರಯಾಣ ಮಾಡುವ ಜೊತೆಗೆ ತಿಂಗಳಿಗೆ ಎರಡು ಸಾವಿರ ರೂ ಕೂಡ ಖಾತೆಗೆ ಜಮೆ ಯಾಗುತ್ತಿದೆ. ಬಿಪಿಎಲ್ ಕಾರ್ಡ್ (BPL Card) ಇದ್ದಂತಹ ಮನೆಯಲ್ಲಿ ಹಿರಿಯ ಸದಸ್ಯೆ ಎಂದು ಸಾಬೀತು ಆದ ಮಹಿಳೆಗೆ ತಿಂಗಳಿಗೆ ಎರಡು ಸಾವಿರ ರೂ ಖಾತೆಗೆ ಜಮೆ ಯಾಗುತ್ತಿದೆ.



ಹನ್ನೊಂದನೆಯ ಕಂತಿನ ಹಣ ಬಿಡುಗಡೆ:

ಈಗಾಗಲೇ ಹತ್ತು ಕಂತಿನ ವರೆಗೆ ಈ ಗೃಹಲಕ್ಷ್ಮಿ ಹಣ (Gruha Lakshmi Money) ಕೆಲವು ಮಹಿಳೆಯರಿಗೆ ಬಿಡುಗಡೆ ಯಾಗಿದ್ದು ಹನ್ನೊಂದನೇ ಕಂತಿನ ಹಣ ಇನ್ನಷ್ಟೆ ಬಿಡುಗಡೆ ಯಾಗಬೇಕಿದೆ. ಈಗಾಗಲೇ ಲೋಕಸಭೆ ಚುನಾವಣೆ ಫಲಿತಾಂಶ ಮೊನ್ನೆ 4 ನೇ ತಾರೀಖಿ ನಂದು ಬಂದಿದ್ದು ಜೂನ್ 4ರ ನಂತರದಲ್ಲಿ 11ನೇ ಕಂತಿನ ಹಣ ಸರ್ಕಾರ ಬಿಡುಗಡೆ ಮಾಡಿದೆ ಎನ್ನುವ ಮಾಹಿತಿ ವಿವಿಧ ಮೂಲಗಳಿಂದ ತಿಳಿದುಬಂದಿದೆ.ಹಾಗಾಗಿ ಈ ತಿಂಗಳಿನ ಗೃಹಲಕ್ಷ್ಮಿ ಹಣ (Gruha Lakshmi Money) ಇದೇ ತಿಂಗಳು ಹದಿನೈದರ ನಂತರ ಖಾತೆಗೆ ಜಮೆ ಯಾಗಬಹುದು ಎನ್ನಲಾಗಿದೆ.

ಯಾವ ಜಿಲ್ಲೆಗೆ ಮೊದಲು ಬಿಡುಗಡೆ?

ಹನ್ನೊಂದನೆ ಕಂತಿನ ಗೃಹಲಕ್ಷ್ಮಿ ಹಣ (Gruha Lakshmi Money) ಮೊದಲಿಗೆ ಬೆಳಗಾವಿ, ಕಲಬುರ್ಗಿ, ಬೀದರ್, ವಿಜಯಪುರ, ಬಳ್ಳಾರಿ, ರಾಯಚೂರು, ಗದಗ, ಬಾಗಲಕೋಟೆ, ಹಾವೇರಿ, ಕೊಪ್ಪಳ, ಯಾದಗಿರಿ ಇಷ್ಟು ಜಿಲ್ಲೆಗಳಿಗೆ ಮೊದಲು ಬಿಡುಗಡೆ ಯಾಗಲಿದೆ.

ಈ ಕೆಲಸ ಕಡ್ಡಾಯ:

ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಿದ ಫಲಾನುಭವಿಗಳು ರೇಷನ್ ಅಪ್ಡೇಟ್ ಮಾಡುವುದು ಕಡ್ಡಾಯ ವಾಗಿದ್ದು ಬ್ಯಾಂಕ್ ಖಾತೆಯಲ್ಲಿರುವ ಹೆಸರು ಮತ್ತು ಆಧಾರ್ ಕಾರ್ಡ್ (Aadhaar Card) ನಲ್ಲಿರುವಂತಹ ಹೆಸರು ಮ್ಯಾಚ್ ಆಗುತ್ತಾ ಏನಾದರೂ ತಪ್ಪಿದ್ದಲ್ಲಿ ಅದನ್ನು ಸರಿಪಡಿಸಿಕೊಳ್ಳಿ. ಒಂದು ವೇಳೆ ನೀವು ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಿಲ್ಲವೆಂದರೆ ನಿಮಗೆ ಮುಂದೆ ಬರುವಂತ ಗೃಹಲಕ್ಷ್ಮಿ ಯೋಜನೆಯ ಹಣ ಬರುವುದಿಲ್ಲ‌. ಒಂದು ವೇಳೆ ನಿಮ್ಮ ಖಾತೆಗೆ ಈ ಯೋಜನೆ ಹಣ ಬಂದಿಲ್ಲದಿದ್ದರೆ ನೀವು ನಿಮ್ಮ ಬ್ಯಾಂಕ್ ಖಾತೆಯನ್ನು ಅಪ್ಡೇಟ್ ಮಾಡಿ.

ತಪ್ಪು ಮಾಹಿತಿ ನೀಡಬೇಡಿ:

ಗೃಹಲಕ್ಷ್ಮಿ ಯೋಜನೆ (Gruha Lakshmi Yojana)ಯ ಲಾಭ ಪಡೆಯಲು ತಪ್ಪು ಮಾಹಿತಿ ಸುಳ್ಳು ದಾಖಲೆ ನೀಡಿದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಈ ಯೋಜನೆಗೆ ತೆರಿಗೆ ಪಾವತಿಸುತ್ತಿದ್ದರೆ ಅವರು ಯೋಜನೆಗೆ ಅರ್ಹ ರಾಗುವುದಿಲ್ಲ.


ಈ ಯೋಜನೆಗೆ ಇನ್ನೂ ಕೂಡ ಅರ್ಜಿ ಸಲ್ಲಿಸಲು ಅವಕಾಶ ಇರಲಿದ್ದು ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸುವ ಆಯ್ಕೆಯನ್ನು ಸರ್ಕಾರ ನೀಡಿದೆ.


Post a Comment

Previous Post Next Post

Advertisement

Advertisement

×