Bengaluru Metro Rail Recruitment 2024 : ಬಿಎಂಆರ್‌ಸಿಎಲ್ / ಬೆಂಗಳೂರು ಮೆಟ್ರೋ ರೈಲ್ವೆಯ ಸ್ವತ್ತು ಅಭಿವೃದ್ಧಿ ಡಿಪಾರ್ಟ್‌ಮೆಂಟ್‌ನಲ್ಲಿ ಅಗತ್ಯ ಇರುವ ವಿವಿಧ ಹುದ್ದೆಗಳ ಭರ್ತಿಗೆ ಇದೀಗ ನೇಮಕ ಅಧಿಸೂಚನೆ ಬಿಡುಗಡೆ ಮಾಡಿದೆ. ಬೆಂಗಳೂರಿನಲ್ಲಿ ಉದ್ಯೋಗ ಪಡೆಯಬೇಕು ಎಂದು ಆಸಕ್ತಿ ಹೊಂದಿರುವ ಡಿಪ್ಲೊಮ, ಬಿಇ / ಇತರೆ ಪದವೀಧರರು ಈಗಲೇ ಅರ್ಜಿ ಸಲ್ಲಿಸಿ.
ಬಿಇ, ಬಿ.ಟೆಕ್, ಎಂಬಿಎ ಪಾಸಾದವರು ಬೆಂಗಳೂರಿನಲ್ಲಿ ಉದ್ಯೋಗ ಹರಸುತ್ತಿದ್ದರೆ.. ನಿಮಗಿದೋ ಇಲ್ಲಿದೆ ಭರ್ಜರಿ ಗುಡ್ ನ್ಯೂಸ್. ಪ್ರತಿ ತಿಂಗಳು Rs.62,500 ರಿಂದ 1,06,250 ವರೆಗೆ ಸಂಚಿತ ವೇತನ ನೀಡುವ ಕೆಲವು ಹುದ್ದೆಗಳಿಗೆ ಅರ್ಜಿ ಹಾಕುವ ಅವಕಾಶ ನಿಮಗಿದೆ.
ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ಸಂಸ್ಥೆಯು ಸ್ವತ್ತು ಅಭಿವೃದ್ಧಿ ವಿಭಾಗದಲ್ಲಿ ಈ ಕೆಳಕಂಡ ಹುದ್ದೆಗೆ ನೇಮಕಾತಿಗಾಗಿ ಅರ್ಹತೆ ಹೊಂದಿದ ಮತ್ತು ಅನುಭವ ಉಳ್ಳ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ನೇಮಕಾತಿಯನ್ನು ಗುತ್ತಿಗೆ ಆಧಾರದ ಮೇಲೆ ಮಾತ್ರ ಮಾಡಿಕೊಳ್ಳಲಾಗುತ್ತದೆ.
ಹುದ್ದೆಗಳ ಹೆಸರು ಹುದ್ದೆಗಳ ಸಂಖ್ಯೆ
- ಎಕ್ಸಿಕ್ಯೂಟಿವ್ ಇಂಜಿನಿಯರ್ (ಸಿವಿಲ್) 1
- ಅಸಿಸ್ಟೆಂಟ್ ಇಂಜಿನಿಯರ್ (ಸಿವಿಲ್) 4
- ಅಸಿಸ್ಟೆಂಟ್ ಇಂಜಿನಿಯರ್ (ಇ ಅಂಡ್ ಎಂ) 1
- ಅಸಿಸ್ಟೆಂಟ್ ಮ್ಯಾನೇಜರ್ (ಮಾರ್ಕೆಟಿಂಗ್) 1
- ಒಟ್ಟು ಹುದ್ದೆಗಳು 7
ಹುದ್ದೆವಾರು ವೇತನ ಶ್ರೇಣಿ ವಿವರ
- ಎಕ್ಸಿಕ್ಯೂಟಿವ್ ಇಂಜಿನಿಯರ್ : ಸಂಚಿತ ವೇತನ ಮಾಸಿಕ ರೂ.1,06,250.
- ಅಸಿಸ್ಟಂಟ್ ಇಂಜಿನಿಯರ್ : ಸಂಚಿತ ವೇತನ ಮಾಸಿಕ ರೂ.62,500.
- ಅಸಿಸ್ಟಂಟ್ ಮ್ಯಾನೇಜರ್ : ಸಂಚಿತ ವೇತನ ಮಾಸಿಕ ರೂ.62,500.
ಪ್ರಮುಖ ದಿನಾಂಕಗಳು
- ಆನ್‌ಲೈನ್ ಅರ್ಜಿ ಸ್ವೀಕರಿಸಲು ಕೊನೆಯ ದಿನಾಂಕ : 02-07-2024
- ಅರ್ಜಿಯ ಸಹಿ ಮಾಡಿದ ಪ್ರಿಂಟ್ ಔಟ್ ಸ್ವೀಕರಿಸುವ ಕೊನೆಯ ದಿನಾಂಕ : 05-07-2024 ರಂದು ಸಂಜೆ 04 ಗಂಟೆವರೆಗೆ.
- ಹುದ್ದೆ ಅವಧಿ : 3 ವರ್ಷ.
- ಅರ್ಜಿಯ ಹಾರ್ಡ್‌ಕಾಪಿ ಸಲ್ಲಿಸಲು ವಿಳಾಸ : ಜೆನೆರಲ್ ಮ್ಯಾನೇಜರ್ (ಹೆಚ್‌ಆರ್), ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿಮಿಟೆಡ್, 3ನೇ ಮಹಡಿ, ಬಿಎಂಟಿಸಿ ಕಾಂಪ್ಲೆಕ್ಸ್, ಕೆ.ಹೆಚ್ ರಸ್ತೆ, ಶಾಂತಿನಗರ, ಬೆಂಗಳೂರು- 560027.
- ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್‌ಗಾಗಿ ಕ್ಲಿಕ್ ಮಾಡಿ : Apply Online
ಹುದ್ದೆವಾರು ವಿದ್ಯಾರ್ಹತೆ / ಇತರೆ ಅರ್ಹತೆಗಳು
- ಎಕ್ಸಿಕ್ಯೂಟಿವ್ ಇಂಜಿನಿಯರ್ (ಸಿವಿಲ್) : 45 ವರ್ಷ ಮೀರಿರಬಾರದು. ಬಿಇ, ಬಿ.ಟೆಕ್ ಸಿವಿಲ್ ಇಂಜಿನಿಯರಿಂಗ್ ಪಾಸ್. ಕನಿಷ್ಠ 12 ವರ್ಷ ಕಾರ್ಯಾನುಭವ.
- ಅಸಿಸ್ಟೆಂಟ್ ಇಂಜಿನಿಯರ್ (ಸಿವಿಲ್) : 40 ವರ್ಷ ಮೀರಿರಬಾರದು. ಬಿಇ, ಬಿ.ಟೆಕ್ ಸಿವಿಲ್ ಇಂಜಿನಿಯರಿಂಗ್ ಪಾಸ್. ಕನಿಷ್ಠ 05 ವರ್ಷ ಕಾರ್ಯಾನುಭವ.
- ಅಸಿಸ್ಟೆಂಟ್ ಇಂಜಿನಿಯರ್ (ಇ ಅಂಡ್ ಎಂ) : 40 ವರ್ಷ ಮೀರಿರಬಾರದು. ಬಿಇ, ಬಿ.ಟೆಕ್ ಇಲೆಕ್ಟ್ರಿಕಲ್ ಇಂಜಿನಿಯರಿಂಗ್ ಪಾಸ್. ಕನಿಷ್ಠ 05 ವರ್ಷ ಕಾರ್ಯಾನುಭವ.
- ಅಸಿಸ್ಟೆಂಟ್ ಮ್ಯಾನೇಜರ್ (ಮಾರ್ಕೆಟಿಂಗ್) : 40 ವರ್ಷ ಮೀರಿರಬಾರದು. ಬಿಇ, ಬಿ.ಟೆಕ್ ಸಿವಿಲ್ ಇಂಜಿನಿಯರಿಂಗ್, ಬಿ.ಆರ್ಚ್ / ಎಂಬಿಎ (ಮಾರ್ಕೆಟಿಂಗ್ ಪಾಸ್. ಕನಿಷ್ಠ 05 ವರ್ಷ ಕಾರ್ಯಾನುಭವ.
ಬೆಂಗಳೂರು ಮೆಟ್ರೋದಲ್ಲಿನ ಇತರೆ ವಿವಿಧ ಹುದ್ದೆಗಳು ಹಾಗೂ ಹುದ್ದೆವಾರು ವೇತನ ಶ್ರೇಣಿ
- ಸ್ಟೇಷನ್ ಕಂಟ್ರೋಲರ್ / ಟ್ರೈನ್ ಆಪರೇಟರ್ Rs.35,000-82660.
- ಸೆಕ್ಷನ್ ಇಂಜಿನಿಯರ್ Rs.40,000-94500.
- ಮೇಂಟೇನರ್ಸ್ Rs.25,000-59060.
- ಜೆನೆರಲ್ ಮ್ಯಾನೇಜರ್ Rs.1,65,000.
- ಹೆಚ್ಚುವರಿ ಜೆನೆರಲ್ ಮ್ಯಾನೇಜರ್ Rs.1,50,000.
- ಡೆಪ್ಯೂಟಿ ಜೆನೆರಲ್ ಮ್ಯಾನೇಜರ್ Rs.1,40,000.
- ಅಸಿಸ್ಟಂಟ್ ಜೆನೆರಲ್ ಮ್ಯಾನೇಜರ್ Rs.85,000.
- ಮ್ಯಾನೇಜರ್ Rs.75,000.
- ಅಸಿಸ್ಟಂಟ್ ಮ್ಯಾನೇಜರ್ Rs.50,000.
- ಅರ್ಹತಾ ಅಗತ್ಯತೆ, ಸಂಬಳ, ಅರ್ಜಿ ಪ್ರಕ್ರಿಯೆಯ ವಿವರಗಳಿಗಾಗಿ ಮತ್ತು ಇತರೆ ಮಾಹಿತಿಗಾಗಿ ಬಿಎಂಆರ್‌ಸಿಎಲ್ ವೆಬ್‌ಸೈಟ್ www.bmrc.co.in/Career Section ಗೆ ಭೇಟಿ ನೀಡಿ.
ಉದ್ಯೋಗ ವಿವರ
- INR 62500 to 106250 /Month
- ಹುದ್ದೆಯ ಹೆಸರು ಎಕ್ಸಿಕ್ಯೂಟಿವ್ ಇಂಜಿನಿಯರ್, ಅಸಿಸ್ಟೆಂಟ್ ಇಂಜಿನಿಯರ್, ಅಸಿಸ್ಟಂಟ್ ಮ್ಯಾನೇಜರ್ ಹುದ್ದೆಗಳು.
- ವಿವರ ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್ ಲಿಮಿಟೆಡ್ ನೋಟಿಫಿಕೇಶನ್
ಪ್ರಕಟಣೆ ದಿನಾಂಕ
2024-06-07
ಕೊನೆ ದಿನಾಂಕ
2024-07-02
ಉದ್ಯೋಗ ವಿಧ
ಪೂರ್ಣಾವಧಿ
ಉದ್ಯೋಗ ಕ್ಷೇತ್ರ
ಪಬ್ಲಿಕ್ ಸೆಕ್ಟಾರ್ ಅಂಡರ್‌ಟೇಕನ್ ಸಂಸ್ಥೆ
ಕೌಶಲ ಮತ್ತು ಶೈಕ್ಷಣಿಕ ಅರ್ಹತೆ
- ಕೌಶಲ --ವಿದ್ಯಾರ್ಹತೆ ಇಂಜಿನಿಯರಿಂಗ್, ಬಿ.ಟೆಕ್, ಎಂಬಿಎ
- ಕಾರ್ಯಾನುಭವ- 5-12 Years
ನೇಮಕಾತಿ ಸಂಸ್ಥೆ
ಸಂಸ್ಥೆಯ ಹೆಸರು ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್ ಲಿಮಿಟೆಡ್
ವೆಬ್‌ಸೈಟ್ ವಿಳಾಸ
ಉದ್ಯೋಗ ಸ್ಥಳ
- ವಿಳಾಸ ಬೆಂಗಳೂರು
- ಸ್ಥಳ ಶಾಂತಿನಗರ
- ಪ್ರದೇಶ ಕರ್ನಾಟಕ
- ಅಂಚೆ ಸಂಖ್ಯೆ 560027
- ದೇಶ IND