ಇಂದು ಮಹಿಳೆಯರಿಗಾಗಿ ರಾಜ್ಯ ಸರಕಾರ ಎರಡು ಸಾವಿರ ರೂ ನೀಡ್ತಾ ಇದೆ. ಹೌದು ಇದರ ಜೊತೆಗೆ 1,200 ರೂ ಕೂಡ ಖಾತೆಗೆ ಜಮೆ ಯಾಗಲಿದೆ. ಇಂದು ಸರಕಾರ ಕೃಷಿಕರಿಗೆ, ಮಹಿಳೆಯರಿಗೆ, ಅದರಲ್ಲೂ ಬಡವರ್ಗದ ಜನತೆಗೆ ಹೀಗೆ ಎಲ್ಲ ವರ್ಗದ ಜನತೆಗೆ ಆರ್ಥಿಕ ಸಹಾಯ ಸರಕಾರ ನೀಡುತ್ತಲೇ ಬಂದಿದೆ. ಅದರಲ್ಲೂ ಹಿರಿಯ ನಾಗರಿಕರಿಗೆ ನೇರವಾಗಲು ಸರಕಾರ ಮಾಸಿಕ ಪಿಂಚಣಿ ಯೋಜನೆ (Monthly Pension Scheme) ಯನ್ನು ರೂಪಿಸಿದೆ. ಈ ಯೋಜನೆ ಯಡಿ ಹಿರಿಯ ವೃದ್ಧ ಪುರುಷ ಮತ್ತು ಮಹಿಳೆಯರಿಗೂ ತಿಂಗಳಿಗೆ ಆರ್ಥಿಕ ನೆರವು ನೀಡುತ್ತಿದೆ. ಹಾಗಿದ್ದಲ್ಲಿ ಈ ಯೋಜನೆ ಯಾವುದು? ಯಾರೆಲ್ಲ ಈ ಸೌಲಭ್ಯ ಪಡೆಯಬಹುದು ಎಂಬ ಮಾಹಿತಿ ತಿಳಿಯಲು ಈ ಲೇಖನ ಪೂರ್ತಿಯಾಗಿ ಓದಿ.
ಸಂಧ್ಯಾ ಸುರಕ್ಷಾ ಯೋಜನೆ:
ಹೌದು ಹಿರಿಯನಾಗರಿಕರಿಗೆ ಸಂಧ್ಯಾ ಸುರಕ್ಷ ಯೋಜನೆ (Sandhya Suraksha Yojana) ಯನ್ನು ಜಾರಿಗೆ ತಂದಿದ್ದು ಮಾಸಿಕ ಪಿಂಚಣಿ (Monthly Pension) ರೂಪದಲ್ಲಿ ಆರ್ಥಿಕ ನೆರವು ನೀಡಲಾಗುತ್ತದೆ. ಆರ್ಥಿಕ ಸಂಕಷ್ಟದಲ್ಲಿರುವ ಹಿರಿಯ ಜೀವಿಗಳಿಗೆ ಭದ್ರತೆ ಒದಗಿಸುವ ಉದ್ದೇಶದಿಂದ ಈ ಯೋಜನೆ ಜಾರಿಗೆ ತರಲಾಗಿದೆ. ಆರ್ಥಿಕ ಸಂಕಷ್ಟದಿಂದ ಪಾರು ಮಾಡಲು ಸಂಧ್ಯಾ ಸುರಕ್ಷಾ ಯೋಜನೆಯನ್ನು 2007ರ ಸಂದರ್ಭದಲ್ಲಿ ಆರಂಭಿಸಲಾಯಿತು.ಹಲವು ಬಡ ವರ್ಗದ ಜನತೆ ಈ ಸೌಲಭ್ಯ ವನ್ನು ಪಡೆಯುತ್ತಿದ್ದಾರೆ.
ಎಷ್ಟು ಹಣ ಸಿಗಲಿದೆ?
ಈ ಯೋಜನೆಯ ಮೂಲಕ 65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಪ್ರತಿ ತಿಂಗಳು 1,200 ರೂಪಾಯಿ ಮಾಸಾಶನ ಸಿಗಲಿದೆ. ಈ ಯೋಜನೆಯ ಮೂಲಕ ಮಾಸಿಕ ಪಿಂಚಣಿ ಜೊತೆಗೆ ವೈದ್ಯಕೀಯ ನೆರವು, ಬಸ್ ಪಾಸ್ ರಿಯಾಯಿತಿ ಇತ್ಯಾದಿ ಸೌಲಭ್ಯಗಳನ್ನು ಕೂಡ ಒದಗಿಸಲಿದೆ. ಈ ಯೋಜನೆಯ ಸೌಲಭ್ಯ ಪಡೆಯಲು ಸಣ್ಣ ರೈತರು, ಕೃಷಿ ಕಾರ್ಮಿಕರು, ನೇಕಾರರು ಹೀಗೆ ಇತರ ಫಲಾನುಭವಿಗಳು ಅರ್ಜಿ ಹಾಕಬಹುದು.
ಈ ದಾಖಲೆ ಬೇಕು:
- ವಾಸಸ್ಥಳ ದೃಢೀಕರಣ ಪತ್ರ
- ರೇಷನ್ ಕಾರ್ಡ್
- ಆದಾಯ ಪ್ರಮಾಣಪತ್ರ
- ವಯಸ್ಸಿನ ಮಾಹಿತಿ
- ಚುನಾವಣಾ ಗುರುತಿನ ಚೀಟಿ)
- ಬ್ಯಾಂಕ್ ಪಾಸ್ ಬುಕ್ ಇತ್ಯಾದಿ
ಅರ್ಹತೆ ಏನು?
ಅರ್ಜಿದಾರನು ಕರ್ನಾಟಕದ ಖಾಯಂ ನಿವಾಸಿಯಾಗಿ ಕರ್ನಾಟಕದಲ್ಲಿ ವಾಸ ಮಾಡುತ್ತಿರಬೇಕು. ಅರ್ಜಿದಾರರ ವಯಸ್ಸು 65 ವರ್ಷ ಮತ್ತು ಮೇಲ್ಪಟ್ಟ ವರಾಗಿರಬೇಕು. ಅರ್ಜಿದಾರ ಮತ್ತು ದಂಪತಿಯ ಒಟ್ಟು ವಾರ್ಷಿಕ ಆದಾಯ 20 ಸಾವಿರ ರೂ ಮೀರಿದ್ದರೆ ಅರ್ಜಿ ಹಾಕಬಾರದು. ಸಾರ್ವಜನಿಕ ಅಥವಾ ಖಾಸಗಿ ಮೂಲದಿಂದ ಇತರ ಪಿಂಚಣಿ, ಪಡೆಯುವ ಜನರು ಈ ಯೋಜನೆಗೆ ಅರ್ಹರಾಗಿರುವುದಿಲ್ಲ.
ಅರ್ಜಿ ಹಾಕಲು ಮನೆಯ ಹತ್ತಿರದ ಬೆಂಗಳೂರು ಒನ್ ಅಥವಾ ಗ್ರಾಮ ಓನ್ ಅಥವಾ ಪಂಚಾಯಿತಿ ಕಚೇರಿಗಳಲ್ಲಿ ವೃದ್ಧಾಪ್ಯ ಪಿಂಚಣಿಗೆ ಅರ್ಜಿ ಸಲ್ಲಿಸಲು ಅವಕಾಶ ಇರಲಿದೆ.ಈ ಯೋಜನೆಯ ಸೌಲಭ್ಯ ಪಡೆಯಲು ಇಂದು ವಿವಿಧ ಸ್ಥಳಗಳಲ್ಲಿ ಸಹಾಯವಾಣಿಗಳನ್ನು ಸಹ ಸ್ಥಾಪಿಸಲಾಗಿದ್ದು ಇದರ ನೆರವನ್ನು ಸಹ ಪಡೆಯ ಬಹುದಾಗಿದೆ. ಅರ್ಜಿದಾರರು ಆಫ್‌ಲೈನ್ ವಿಧಾನದಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿರಲಿದ್ದು ,ನಿಮ್ಮ ಪ್ರದೇಶದ ಗ್ರಾಮ ಪಂಚಾಯಿತಿ ಕಚೇರಿ ಅಥವಾ ಬ್ಲಾಕ್, ಪುರಸಭೆ ಕಚೇರಿಯಲ್ಲಿ ಅರ್ಜಿ ಹಾಕಬಹುದು