PM Kisan Yojana: ಒಂದು ಕುಟುಂಬದಲ್ಲಿ PM ಕಿಸಾನ್ ಯೋಜನೆಯ ಲಾಭವನ್ನು ಎಷ್ಟು ಜನ ರೈತರು ಪಡೆದುಕೊಳ್ಳಬಹುದು? ಹೊಸ ರೂಲ್ಸ್

PM Kisan Yojana: ಒಂದು ಕುಟುಂಬದಲ್ಲಿ PM ಕಿಸಾನ್ ಯೋಜನೆಯ ಲಾಭವನ್ನು ಎಷ್ಟು ಜನ ರೈತರು ಪಡೆದುಕೊಳ್ಳಬಹುದು? ಹೊಸ ರೂಲ್ಸ್

ದೇಶದ ರೈತರಿಗಾಗಿ ಪ್ರತಿಯೊಂದು ಸರ್ಕಾರಗಳು ಕೂಡ ನಿಮಗೆಲ್ಲರಿಗೂ ತಿಳಿದಿರಬಹುದು ಒಂದಲ್ಲ ಒಂದು ಪೂರಕವಾಗಿರುವಂತಹ ಯೋಜನೆಗಳನ್ನ ಹಾಗೂ ಬೇರೆ ಬೇರೆ ಸ್ಕೀಮ್ ಗಳನ್ನು ಜಾರಿಗೆ ತರುವಂತಹ ಕೆಲಸವನ್ನು ಮಾಡಿಕೊಂಡು ಬಂದಿದ್ದಾರೆ.



PM Kisan Yojana

ಅದು ರಾಜ್ಯ ಸರ್ಕಾರ ಇರಲಿ ಅಥವಾ ಕೇಂದ್ರ ಸರ್ಕಾರದ ಇರಲಿ ಅವರ ಪ್ರಮುಖ ಪ್ರಾಶಸ್ತ್ಯ ರೈತರ ಕ್ಷೇಮ ಹಾಗೂ ಅವರ ಅನುಕೂಲಕ್ಕೆ ತಕ್ಕಂತೆ ಯೋಜನೆಗಳನ್ನು ಜಾರಿಗೆ ತರುವುದು ಆಗಿರುತ್ತದೆ. ಇನ್ನು ಇವತ್ತಿನ ಈ ಲೇಖನದ ಮೂಲಕ ನಾವು ನಿಮಗೆ ಮಾತನಾಡೋಕೆ ಹೊರಟಿರೋದು. ಪಿಎಂ ಕಿಸಾನ್ ಸನ್ಮಾನ ನಿಧಿ ಯೋಜನೆ (PM Kisan Samman Nidhi Scheme) ಅಡಿಯಲ್ಲಿ ರೈತರಿಗೆ ವರ್ಷಕ್ಕೆ ಆರು ಸಾವಿರ ರೂಪಾಯಿ ಹಣವನ್ನು ಸಹಾಯಧನದ ರೂಪದಲ್ಲಿ ನೀಡುತ್ತಾ ಬಂದಿರುವುದನ್ನ ನೀವೆಲ್ಲರೂ ಈಗಾಗಲೇ ನೋಡಿದ್ದೀರಿ.

ಪ್ರಧಾನಿ ಶ್ರೀ ನರೇಂದ್ರ ಮೋದಿ (PM Narendra Modi) ರವರು ಪ್ರಾರಂಭ ಮಾಡಿರುವಂತಹ ಯೋಜನೆಯ ಕಾರಣದಿಂದ ರೈತರು ಸ್ವಲ್ಪಮಟ್ಟಿಗೆ ಹಾರ್ದಿಕ ಸಹಾಯವನ್ನು ಈ ಯೋಜನೆಯ ಮೂಲಕ ರಿಜಿಸ್ಟರ್ ಮಾಡಿಕೊಂಡು ಪಡೆದುಕೊಳ್ಳುತ್ತಿದ್ದಾರೆ.

PM Kisan Samman Nidhi Scheme

ದೊಡ್ಡ ಪ್ರಮಾಣದಲ್ಲಿ ಅಲ್ದೆ ಹೋದ್ರು ಕೂಡ ಕನಿಷ್ಠಪಕ್ಷ ಅಗತ್ಯ ಇರುವಂತಹ ಆರ್ಥಿಕ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಖಂಡಿತವಾಗಿ ಈ ಹಣ ರೈತರಿಗೆ ಸಹಾಯಕವಾಗಿದೆ ಎಂದು ಹೇಳಬಹುದಾಗಿದೆ. ಬಡ ರೈತರಿಗೆ ವಾರ್ಷಿಕವಾಗಿ ಒಟ್ಟಾರೆಯಾಗಿ 6,000 ಹಣವನ್ನು ಮೂರು ಕಂತುಗಳಲ್ಲಿ ನಾಲ್ಕು ತಿಂಗಳಿಗೊಮ್ಮೆ ನೀಡುವಂತಹ ಯೋಜನೆ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ (PM Kisan Samman Nidhi Scheme) ಆಗಿದೆ.

ಇನ್ನು ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ಸಾಕಷ್ಟು ಜನರಿಗೆ ಒಂದು ಗೊಂದಲ ಇದೆ ಅದೇನೆಂದರೆ ಪಿಎಂ ಕಿಸಾನ್ ಯೋಜನೆ (PM Kisan Yojana) ಅಡಿಯಲ್ಲಿ ಒಂದು ಕುಟುಂಬದಿಂದ ಎಷ್ಟು ರೈತರು ಮ್ಯಾಕ್ಸಿಮಮ್ ಹಣವನ್ನು ಪಡೆದುಕೊಳ್ಳಬಹುದು ಎನ್ನುವುದರ ಬಗ್ಗೆ. ಹಾಗಿದ್ರೆ ಬನ್ನಿ ಇವತ್ತಿನ ಈ ಲೇಖನದ ಮೂಲಕ ಆ ಪ್ರಶ್ನೆಗೆ ಉತ್ತರವನ್ನು ಪಡೆದುಕೊಳ್ಳುವ ಪ್ರಯತ್ನವನ್ನು ಮಾಡೋಣ.

ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ ಎಷ್ಟು ರೈತರ ಒಂದು ಕುಟುಂಬದಿಂದ ಹಣವನ್ನು ಪಡೆದುಕೊಳ್ಳಬಹುದು?

ಪ್ರಧಾನಿ ನರೇಂದ್ರ ಮೋದಿ (PM Narendra Modi) ರವರ ನೇತೃತ್ವದ ಕೇಂದ್ರ ಸರ್ಕಾರ ಪ್ರಾರಂಭ ಮಾಡಿರುವಂತಹ ಈ ಯೋಜನೆ ಅಡಿಯಲ್ಲಿ ಒಂದು ಕುಟುಂಬದಿಂದ ಕೇವಲ ಒಬ್ಬ ರೈತ ಮಾತ್ರ ಸಹಾಯಧನವನ್ನು ಪಡೆದುಕೊಳ್ಳಬಹುದಾಗಿದೆ ಎಂಬುದಾಗಿ ನಿಯಮಗಳಲ್ಲಿ ಉಲ್ಲೇಖಿಸಲಾಗಿದೆ.

ಇನ್ನು ಈ ಯೋಜನೆ ಅಡಿಯಲ್ಲಿ ಹಣವನ್ನು ಪಡೆದುಕೊಳ್ಳುವುದಕ್ಕೆ ಯಾರು ಅರ್ಹರಾಗಿರುತ್ತಾರೆ ಎಂಬುದನ್ನು ನೋಡುವುದಾದರೆ ಯಾರ ಹೆಸರಿನಲ್ಲಿ ಜಮೀನು ರಿಜಿಸ್ಟರ್ ಆಗಿರುತ್ತದೆಯೋ ಅವರಿಗೆ ಮಾತ್ರ ಪಿಎಂ ಕಿಸಾನ್ ಯೋಜನೆ (PM Kisan Yojana) ಅಡಿಯಲ್ಲಿ ನಾಲ್ಕು ತಿಂಗಳಿಗೊಮ್ಮೆ 2 ಸಾವಿರ ರೂಪಾಯಿ ಹಣವನ್ನು ಪಡೆದುಕೊಳ್ಳುವುದಕ್ಕೆ ಅವಕಾಶ ಇರುತ್ತದೆ. ಹೀಗಾಗಿ ಈ ಯೋಜನೆ ಅಡಿಯಲ್ಲಿ ರೈತರು ರಿಜಿಸ್ಟರ್ ಮಾಡಿಕೊಂಡಿಲ್ಲ ಅಂತ ಅಂದ್ರೆ ನೀವು ಬಡವರ್ಗದ ರೈತ ಕುಟುಂಬಕ್ಕೆ ಸೇರಿರುವಂತಹ ರೈತರಾಗಿದ್ದರೆ ಕೂಡಲೇ ರಿಜಿಸ್ಟರ್ ಮಾಡಿಕೊಂಡು ವರ್ಷಕ್ಕೆ ಆರು ಸಾವಿರ ರೂಪಾಯಿ ಹಣವನ್ನು ಯೋಜನೆ ಅಡಿಯಲ್ಲಿ ಪಡೆದುಕೊಳ್ಳಬಹುದು.

Post a Comment

Previous Post Next Post

Advertisement

Advertisement

×