ಇ-ಶ್ರಮ್ ಕಾರ್ಡ್ ಪಡೆಯಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ.! ಪ್ರತಿ ತಿಂಗಳು ಫ್ರೀಯಾಗಿ 3,000 ಸಿಗುತ್ತೆ

 ಹಲೋ ಸ್ನೇಹಿತರೇ, ನೀವು ಇ-ಶ್ರಮ್ ಕಾರ್ಡ್‌ಗೆ ಅರ್ಜಿ ಸಲ್ಲಿಸಬೇಕೇ? ಅರ್ಜಿ ಸಲ್ಲಿಸಲು ಯಾರೆಲ್ಲಾ ಅರ್ಹರು & ಯಾವ ಕೆಲಸ ಮಾಡುತ್ತಿರುವವರು E Shram ಕಾರ್ಡ್ಗೆ ಅರ್ಜಿ ಸಲ್ಲಿಸಬಹುದು & ಯಾವೆಲ್ಲಾ ದಾಖಲೆಗಳು ಬೇಕಾಗುತ್ತದೆ ಎಂಬ ಎಲ್ಲಾ ಮಾಹಿತಿಯನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.



ಕಟ್ಟಡ & ಇತರೆ ನಿರ್ಮಾಣ ಕಾರ್ಮಿಕರು, ಕೃಷಿ ಕಾರ್ಮಿಕರು, ಆಶಾ ಕಾರ್ಯಕರ್ತೆಯರು, ಮನೆಗೆಲಸ ಕಾರ್ಮಿಕರು, ಮೀನುಗಾರರು, ಚಾಲಕರು, ಟೈಲರಳು, ಬೀದಿಬದಿ ವ್ಯಾಪಾರಿಗಳು ಸೇರಿದಂತೆ ಕೇಂದ್ರ ಸರ್ಕಾರವು ಗುರುತಿಸಿರುವ ಸುಮಾರು 379 ವರ್ಗದ ಕಾರ್ಮಿಕರು ಇ-ಶ್ರಮ್ ಕಾರ್ಡ್‌ಗೆ ನೋಂದಣಿ ಮಾಡಿಕೊಳ್ಳಬಹುದಾಗಿದೆ.

ಅರ್ಹತೆ:

  • ಕನಿಷ್ಠ 16 ವರ್ಷ ರಿಂದ 59 ವಯೋಮಿತಿ.
  • ಆದಾಯ ತೆರಿಗೆ ಪಾವತಿ ಮಾಡುತ್ತಿರಬಾರದು.
  • ಭವಿಷ್ಯನಿಧಿ ಮತ್ತು ESI ಫಲಾನುಭವಿಯಾಗಿರಬಾರದು.

ಅವಶ್ಯಕ ದಾಖಲೆಗಳು

  • ಆಧಾರ್ ಕಾರ್ಡ್ (aadhar card)
  • ಆಧಾ‌ರ್ ಸಂಖ್ಯೆಗೆ ಜೋಡಣೆಯಾದ ಮೊಬೈಲ್ ಸಂಖ್ಯೆ.(mobile number)
  • ಬ್ಯಾಂಕ್ ಖಾತೆ ವಿವರಗಳು.(bank details)
  1. ಮೊದಲು ಅಧಿಕೃತ ವೆಬ್‌ ಸೈಟ್’ಗೆ ಭೇಟಿ ನೀಡಿ “Register on e-SHRAM” ಮೇಲೆ ಕ್ಲಿಕ್ ಮಾಡಿಕೊಳ್ಳಿ.
  2. ನಂತರ ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಕ್ಯಾಪ್ಚ್ ನಮೂದಿಸಿ ನಂತರ ನೀವು EPFO & ESIC ಸದಸ್ಯರಿದ್ದೀರಾ ಎಂದು ಕೇಳಾಗಿದೆ No ಎಂದು ಆಯ್ಕೆ ಮಾಡಿಕೊಳ್ಳಿ ನಂತರ Send OTP button ಮೇಲೆ ಕ್ಲಿಕ್ ಮಾಡಿಕೊಳ್ಳಿ.
  3. ನಿಮ್ಮ mobile number ಗೆ ಬಂದ OTP ಸಂಖ್ಯೆಯನ್ನು ನಮೂದಿಸಿ Submit ಮಾಡಬೇಕು.
  4. ನಿಮ್ಮ ಆಧಾರ್ ಕಾರ್ಡ್ ನಂಬರನ್ನು ನಮೂದಿಸಿ Submit ಮಾಡಿಕೊಳ್ಳಿ.
  5. ಆಧಾರ್ ಕಾರ್ಡ್ ನಲ್ಲಿರುವ ಮಾಹಿತಿಯು ಕಂಪ್ಯೂಟರ್ ಪರದೆಯ ಮೇಲೆ ತೋರಿಸಲಾಗುತ್ತದೆ. ಮಾಹಿತಿಯನ್ನು ನಮೂದಿಸಿ ಮುಂದುವರೆಯಬೇಕು.
  6. ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ನಮೂದಿಸಬೇಕು.
  7. ನಿಮ್ಮ ವಿಳಾಸದ ವಿವರಗಳನ್ನು ನಮೂದಿಸಬೇಕು.
  8. ಶೈಕ್ಷಣಿಕ ವಿದ್ಯಾರ್ಹತೆ & ಆದಾಯದ ವಿವರಗಳನ್ನು ನಮೂದಿಸಿ.
  9. ವೃತ್ತಿ, ಉದ್ಯೋಗದ ವಿವರವನ್ನು ನಮೂದಿಸಿ.
  10. ಬ್ಯಾಂಕ್ ಖಾತೆಗೆ aadhar number ಲಿಂಕ್ ಆಗಿರದೆ ಇದ್ದಲ್ಲಿ ನಿಮ್ಮ ಬ್ಯಾಂಕ್ ಖಾತೆಯ ವಿವರಗಳನ್ನು ನಮೂದಿಸಿ.
  11. ನೀವು ಎಂಟರ್‌ ಮಾಡಿರುವ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿಕೊಳ್ಳಿ ನಂತರ Submit button ಮೇಲೆ ಕ್ಲಿಕ್ ಮಾಡಿ.
  12. ಸಕ್ರಿಯವಾಗಿ ಅರ್ಜಿ ಸಲ್ಲಿಸಿದ ನಂತರದಲ್ಲಿ ಗುರುತಿನ ಚೀಟಿಯನ್ನು ಪಡೆದುಕೊಳ್ಳಬಹುದಾಗಿದೆ.

ಅರ್ಜಿ ಸಲ್ಲಿಸಲು ಬೇಕಾದ ಪ್ರಮುಖ ಲಿಂಕ್:‌ Apply ಮಾಡಿ

Previous Post Next Post

Ads

Ads

نموذج الاتصال

×