ಪೇಟಿಎಂ ಮಾಹಿತಿ :
ಅನೇಕ ಜನರು ಆನ್ಲೈನ್ ಟ್ರಾನ್ಸಾಕ್ಷನ್ ಅನ್ನು ಮಾಡುತ್ತಿರುತ್ತಾರೆ ಅಂತಹವರಲ್ಲಿ ಹೆಚ್ಚು ವ್ಯವಹಾರ ಮಾಡುವ ಒಂದು ಅಪ್ಲಿಕೇಶನ್ ಎಂದರೆ ಅದು ಪೇಟಿಎಂ ತನ್ನ ವ್ಯವಹಾರಗಳಿಗಾಗಿಭಾರತದಲ್ಲಿ ಅನೇಕ ಜನರಿಗೆ ಸೇವೆಯನ್ನು ಸಲ್ಲಿಸುತ್ತಾ ಬಂದಿದೆ .ಆದರೆ ಈ ಪೇಟಿಎಂ ಯುಪಿಐಯನ್ನು ಬಳಸಲು ಆರ್‌ಬಿಐ ನಿರ್ಬಂಧ ಅನ್ವಯವಾಗಲಿದ್ದು .ಇದೇ ತಿಂಗಳು 29 ರಿಂದ ಈ ನಿರ್ಬಂಧ ಅನ್ವಯವಾಗಲಿದೆ. ಹಾಗಾಗಿ ಪೇಟಿಎಂ ಬಳಸುವುದು ಹೇಗೆ ಎಂಬ ಪ್ರಶ್ನೆ ಅನೇಕ ಗ್ರಾಹಕರಲ್ಲಿ ಕಾಡುತ್ತಿರುವ ಪ್ರಶ್ನೆ ಈ ಮಾಹಿತಿಯನ್ನು ತಿಳಿದುಕೊಳ್ಳಿ.
ಹಣ ಜಮಾ ಮಾಡಲು ಸಾಧ್ಯವಿಲ್ಲ :
ಭಾರತೀಯ ರಿಸರ್ವ್ ಬ್ಯಾಂಕ್ ಅನೇಕ ವಹಿವಾಟುಗಳ ಮೇಲೆ ನಿರ್ಬಂಧವನ್ನು ಏರಲಿದ್ದು ಇನ್ನು ಮುಂದೆ ಗ್ರಾಹಕರು ಯಾವುದೇ ರೀತಿ ಪೇಟಿಎಂ ಮೂಲಕ ಹಣವನ್ನು ಜಮಾ ಮಾಡಲು ಸಾಧ್ಯವಾಗುವುದಿಲ್ಲ ಹಾಗೂ ಖಾತೆಯಲ್ಲಿ ಇರುವಂತಹ ಹಣವನ್ನು ಜನರು ಪಡೆದುಕೊಳ್ಳಬಹುದು.
ಪೇಟಿಎಂ ಗೆ ನಿರ್ಬಂಧ ಏಕೆ :
ಅನೇಕ ಜನರು ಉಪಯೋಗಿಸುವಂತಹ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಹಲವು ಹಿವಾಟಿನಲ್ಲಿ RBI ನಿಯಮವನ್ನು ಪಾಲಿಸದೇ ಇರುವುದು ಇದಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.ಆ ಕಾರಣದಿಂದ ಮಾರ್ಚ್ 22 ರ ಬ್ಯಾಂಕ್ ಗ್ರಾಹಕರನ್ನು ಸೆಳೆಯದಂತೆ ತಿಳಿಸಲಾಗಿತ್ತು. ಅಲ್ಲಿಂದ ಈ ಸಮಸ್ಯೆಗಳು ಹೆಚ್ಚಾಗ ತೊಡಗಿದವು.
ನಿಯಮ ಉಲ್ಲಂಘನೆ ವರದಿ :
ಭಾರತದಲ್ಲಿ ಇರುವಂತಹ ಪೇಟಿಎಂ ಬ್ಯಾಂಕ್ ಹಲವು ನಿಯಮಗಳನ್ನು ಉಲ್ಲಂಘನೆ ಮಾಡಿದ ಕಾರಣ ಆಡಿಟಿಂಗ್ ಮಾಡುವ ವೇಳೆಯಲ್ಲಿ ಹಾಗೂ ಆಡಿಟಿಂಗ್ ಮಾಡಿದ ನಂತರದ ವರದಿಯಲ್ಲಿ ಬಹಿರಂಗವಾಗಿ ತಿಳಿಸಲಾಗಿದೆ .ಈ ಕಾರಣದಿಂದ 1949ರ ಸೆಕ್ಷನ್ 35a ಅಡಿಯಲ್ಲಿ ಪೇಮೆಂಟ್ಸ್ ಬ್ಯಾಂಕ್ ವಿರುದ್ಧ ರ್‌ಬಿಐ ಕ್ರಮವನ್ನು ಜರುಗಿಸಲಾಗಿದೆ.
ಫೆಬ್ರವರಿ 29ರಿಂದ ಏನು ಬಂದಾಗಲಿದೆ :
ಇದೇ ತಿಂಗಳು 29ನೇ ತಾರೀಖಿನಿಂದ ಪೇಟಿಎಂನ ಎಲ್ಲಾ ಪೇಮೆಂಟ್ಸ್ ಬ್ಯಾಂಕುಗಳ ಸೇವೆಗಳು ಸ್ಥಗಿತಗೊಳ್ಳಲಿವೆ. ಕಾರಣ ಕಂಪನಿ ಅನೇಕ ನಿಯಮಗಳನ್ನು ಉಲ್ಲಂಘನೆ ಮಾಡಿರುವುದು ಹಾಗೂ ಅನೇಕ ರೀತಿಯ ತೊಂದರೆಗಳಿಂದ ಪೇಮೆಂಟ್ ಮಾಡಲು ಸಾಧ್ಯವಾಗುವುದಿಲ್ಲ.
ಇವುಗಳಿಗೆ RBI ನಿರ್ಬಂಧ ಏರಿದೆ :
ಗ್ರಾಹಕರ ಖಾತೆಗಳು ಹಾಗೂ ಪ್ರಿಪೇಟ್ ಸೇವೆಗಳು ಫಾಸ್ಟ್ ಟ್ರ್ಯಾಗುಗಳು ಹಾಗೂ ಠೇವಣಿ ಸ್ವೀಕರಿಸುವುದನ್ನು ಇದರೊಂದಿಗೆ ಕ್ರೆಡಿಟ್ ಕಾರ್ಡ್ ವಹಿವಾಟು ಟಾಪ್ ಅಪ್ ತೆಗೆದುಕೊಳ್ಳುವುದು. ಈ ಎಲ್ಲಾ ವಿಷಯಗಳಿಗೆ ನಿರ್ಬಂಧ ಏರಿದೆ.
ವರದಿಯ ಪ್ರಮುಖ ಅಂಶಗಳು :
- ಪೇಟಿಎಂ ಫೆಬ್ರವರಿ 29ರಿಂದ ಸ್ಥಗಿತ.
- ಆರ್‌ಬಿಐ ನಿಯಮಗಳ ಉಲ್ಲಂಘನೆ ಮಾಡಿದ ಪೇಟಿಎಂ.
- ಅನೇಕ ಸೇವೆಗಳು ಫೆಬ್ರವರಿ 29ರಿಂದ ಇಲ್ಲ.
- ಹಣವನ್ನು ಜಮೆ ಮಾಡಲು ಸಾಧ್ಯವಾಗುವುದಿಲ್ಲ.
- ಹಣವನ್ನು ಹಿಂಪಡೆಯಲು ಯಾವುದೇ ನಿರ್ಬಂಧ ಇಲ್ಲ.
ವರದಿಯ ಪಟ್ಟಿ ವಿವರ :
ವರದಿಯ ಮಾಹಿತಿ | ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ |
ಪೇಮೆಂಟ್ ಬ್ಯಾಂಕ್ ಸ್ಥಗಿತವಾಗುವ ದಿನಾಂಕ | ಫೆಬ್ರವರಿ -29 -2024 |
ಅಧಿಕೃತ ಜಾಲತಾಣ | https://www.paytmmoney.com/ |
ಕಾರಣ | RBI ನಿಯಮ ಪಾಲಿಸದೆ ಇರುವುದು |
ಪೇಟಿಎಂ ಬಳಸೋಕೆ ಆಗಲ್ವಾ :
ಅನೇಕ ಜನರು ಪೇಟಿಎಂ ಪೇಮೆಂಟ್ಸ್ ಬ್ಯಾಂಕನ್ನು ಉಪಯೋಗಿಸುತ್ತಿದ್ದು ಯುಪಿಐ ಅಪ್ಲಿಕೇಶನ್ ನಲ್ಲಿ ಹೆಚ್ಚು ಜನಪ್ರಿಯವಾದ ಈ ಪೇಟಿಎಂ ಸಣ್ಣ ಪುಟ್ಟ ವ್ಯಾಪಾರಸ್ಥರು ಹಾಗೂ ಅನೇಕ ದೊಡ್ಡ ಮಟ್ಟದ ಗ್ರಾಹಕರಿಗೆ ಹೆಚ್ಚು ಬಳಕೆಯಾಗುತ್ತಿದ್ದ .ಅಪ್ಲಿಕೇಶನ್ ಆದರೆ ಇದೀಗ ಮೊಬೈಲ್ ನಲ್ಲಿ ಬಳಸುತ್ತಿರುವವರು ಇನ್ನು ಮುಂದೆ ಬಳಸಲು ಸಾಧ್ಯವಿಲ್ಲ ಎಂಬ ಪ್ರಶ್ನೆ ಹುಟ್ಟು ಹಾಕಿದೆ.
ಈ ಮೇಲ್ಕಂಡ ಮಾಹಿತಿಯು ಪೇಟಿಎಂ ಬಳಸುವ ಅನೇಕ ಜನರಿಗೆ ಫೆಬ್ರವರಿ 29ನೇ ತಾರೀಖಿನಿಂದ ಸೇವೆಗಳು ಸ್ಥಗಿತಗೊಳ್ಳುವ ಕಾರಣ ಈಗಲೇ ತಾವು ಅನೇಕ ರೀತಿಯ ಕ್ರಮಗಳನ್ನು ಕೈಗೊಂಡಿರಿ. ಮುಂದಿನ ದಿನಗಳಲ್ಲಿ ನಿಮಗೆ ಯಾವುದೇ ರೀತಿಯ ತೊಂದರೆ ಆಗದ ಕಾರಣ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ತಲುಪಿಸಿ ಧನ್ಯವಾದಗಳು.