ಮತದಾರರ ಗುರುತಿನ ಚೀಟಿ ಮಾಹಿತಿ :
ಭಾರತ ದೇಶದಲ್ಲಿ ಅನೇಕ ಗುರುತಿನ ಚೀಟಿಗಳನ್ನು ಹೊಂದಿರುತ್ತಾರೆ, ಅದರಲ್ಲೂ ಪ್ರಮುಖವಾಗಿ ಹೆಚ್ಚು ಪ್ರಾಮುಖ್ಯತೆ ಹೊಂದಿರುವ ವೋಟರ್ ಐಡಿ ಕಾರ್ಡ್ ಪಡೆಯುವ ಹಾಗೂ ತಿದ್ದುಪಡಿ ಮಾಡುವ ಮೂಲಕ ನಿಮ್ಮ ಮೊಬೈಲ್ ನಲ್ಲಿ ಈ ಕೆಲಸವನ್ನು ಮಾಡಿಕೊಳ್ಳಬಹುದು.
ಆನ್ಲೈನ್ ಮುಖಾಂತರ ತಿದ್ದುಪಡಿ :
ಭಾರತದಲ್ಲಿ ವೋಟರ್ ಐಡಿ ಈಗ ಆನ್ಲೈನ್ ನಲ್ಲಿ ಸುಲಭವಾಗಿ ತಿದ್ದುಪಡಿ ಮಾಡಬಹುದು ಗುರುತಿನ ಮತದಾರರ ಚೀಟಿಯನ್ನು ಪಡೆದುಕೊಳ್ಳುವ ಮೂಲಕ ಚುನಾವಣಾ ಪ್ರಕ್ರಿಯೆ ಈಗಲೇ ಆರಂಭಗೊಂಡಿದೆ. ಲೋಕಸಭೆ ಚುನಾವಣೆ ಹಾಗಾಗಿ ನಿಮ್ಮ ಹತ್ತಿರ ಸ್ಮಾರ್ಟ್ ಗುರುತಿನ ಚೀಟಿ ಹೊಂದಿರಿ.
ಸ್ಮಾರ್ಟ್ ವೋಟರ್ ಐಡಿ :
ಅನೇಕ ಜನರು ಅನೇಕ ವರ್ಷಗಳಿಂದ ಹಳೆಯ ವೋಟರ್ ಐಡಿಯನ್ನು ಪಡೆದುಕೊಂಡು ಈಗಲೂ ಸಹ ಅದನ್ನು ಉಪಯೋಗಿಸುತ್ತಿದ್ದಾರೆ. ಆದರೆ ನಿಮಗೆಲ್ಲರಿಗೂ ಸಹ ಸ್ಮಾರ್ಟ್ ವೋಟರ್ ಐಡಿ ಪಡೆಯುವ ಬಗ್ಗೆ ತಿಳಿದುಕೊಳ್ಳಿ ಮತದಾರರಿಗೆ ಈ ಕಾರ್ಡ್ ಹೆಚ್ಚು ಉಪಯೋಗಕರವಾಗಲಿದೆ.
ರಾಷ್ಟ್ರೀಯ ಮತದಾರರ ದಿನ :
ಮತದಾರರ ಗುರುತಿನ ಚೀಟಿ ಭಾರತ ಪ್ರಜಾಪ್ರಭುತ್ವದಲ್ಲಿ ಹೆಚ್ಚು ಪ್ರಾಮುಖ್ಯತೆ ಹೊಂದಿದೆ ಈ ದಿನವನ್ನು ಮತದಾರರ ದಿನ ಎಂದು ಆಚರಣೆ ಮಾಡಲಾಗುತ್ತದೆ. ಜನವರಿ 25ರಂದು ನಮ್ಮ ದೇಶದಲ್ಲಿ ಈಗಾಗಲೇ 14ನೇ ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಗುತ್ತಿದ್ದು ಚುನಾವಣಾ ಆಯೋಗವು ಮತದಾರರಿಗೆ ವಿವಿಧ ಹಕ್ಕುಗಳ ಜೊತೆಗೆ ಕರ್ತವ್ಯವನ್ನು ಸಹ ನೀಡಿದೆ.
ಭಾರತದ ಭವಿಷ್ಯ ರೂಪಿಸುತ್ತದೆ :
ಮತದಾರರು ಭಾರತವನ್ನು ರೂಪಿಸುವಂತಹ ಶಕ್ತಿಯನ್ನು ಹೊಂದಿದ್ದಾರೆ ಪ್ರಜಾಪ್ರಭುತ್ವದ ಅಡಿಯಲ್ಲಿ ನಮ್ಮ ಭಾರತ ದೇಶ ಇದೆ ಮತದಾನ ಮಾಡುವ ಮೂಲಕ ತಮ್ಮ ಜವಾಬ್ದಾರಿಯನ್ನು ಪೂರೈಸಿಕೊಳ್ಳುವ ಮತದಾರರು ತಮಗೆ ಸಂಬಂಧಿಸಿದ ಮಾಹಿತಿಯನ್ನು ನೀಡಲು ಮತದಾರರ ಚೀಟಿಯನ್ನು ಬಳಸುತ್ತಾರೆ. ಹಾಗೂ ಆ ಮತದಾರರ ಚೀಟಿಯಲ್ಲಿ ಸರಳವಾದಂತಹ ವಿವರವನ್ನು ಒಳಗೊಂಡಂತೆ ಅತ್ಯಂತ ಮಹತ್ವವಾದ ಗುರುತಿನ ಚೀಟಿಯಾಗಿದ್ದು ಈ ಕಾರ್ಡಿನಲ್ಲಿ ಅನೇಕ ರೀತಿಯ ಅಪ್ಡೇಟ್ಗಳನ್ನು ಮಾಡಿಕೊಳ್ಳಬಹುದು.
ಮತದಾರರ ಗುರುತಿನ ಚೀಟಿ ತಿದ್ದುಪಡಿ
ಮತದಾರರ ಗುರುತಿನ ಚೀಟಿಯಲ್ಲಿ ನೀವು ಕೆಲವೊಂದು ತಿದ್ದುಪಡಿಗಳನ್ನು ಮಾಡಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ.
- ನಿಮ್ಮ ಹೆಸರನ್ನು ಅಪ್ಡೇಟ್ ಮಾಡಬಹುದು.
- ನಿಮ್ಮ ವಿಳಾಸವನ್ನು ಅಪ್ಡೇಟ್ ಮಾಡಬಹುದು.
- ನಿಮ್ಮ ಜನ್ಮ ದಿನಾಂಕವನ್ನು ಮಾಡಬಹುದು.
ಈ ಮೇಲ್ಕಂಡ ಅಪ್ಡೇಟ್ಗಳನ್ನು ನೀವು ನಿಮ್ಮ ಮೊಬೈಲ್ ಮುಖಾಂತರ ಅಥವಾ ಲ್ಯಾಪ್ಟಾಪ್ ಬಳಸಿಕೊಂಡು ಮಾಡಬಹುದು ಈ ಕೆಳಗಿನ ವಿವಿಧ ವಿಧಾನಗಳನ್ನು ಅನುಸರಿಸಿ ಅಪ್ಡೇಟ್ ಮಾಡಿಕೊಳ್ಳಿ.
ವಿವಿಧ ಹಂತಗಳು ಅನುಸರಿಸಿ :
- https://voterportal.eci.gov.in/ಈ ಅಧಿಕೃತ ವೆಬ್ ಸೈಟಿಗೆ ಮೊದಲು ಭೇಟಿ ನೀಡಿ.
- ಇದರಲ್ಲಿ ನೀವು ವಾಸಿಸುತ್ತಿರುವ ರಾಜ್ಯವನ್ನು ಹಾಗೂ ಫಾರಂ ನಂಬರ್ 8 ಎ ಆಯ್ಕೆ ಮಾಡಿಕೊಂಡರೆ ನಿಮ್ಮ ಅರ್ಜಿ ಫಾರಂ ಬಳಸಬಹುದು.
- ನಂತರ ನಿಮ್ಮ ವೈಯಕ್ತಿಕ ಮಾಹಿತಿ ಹಾಗೂ ನೀವು ವಾಸವಿರುವ ವಿಳಾಸದ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಸಿ ಬದಲಾವಣೆಯನ್ನು ಸೂಚಿಸಿಕೊಳ್ಳಿ.
- ಈ ಎಲ್ಲಾ ಅಗತ್ಯ ಮಾಹಿತಿಯನ್ನು ಒದಗಿಸಿದ ನಂತರ ಆಧಾರ್ ಕಾರ್ಡ್ ಅಥವಾ ಇನ್ನಿತರೆ ದಾಖಲೆಯನ್ನು ಅಪ್ಲೋಡ್ ಮಾಡಬೇಕು.
- ನೀವು ಅರ್ಜಿ ಫಾರಂ ಭರ್ತಿ ಮಾಡಿದ ನಂತರ ನಿಮ್ಮ ಅರ್ಜಿ ಸಮಯ ಹಾಗೂ ಸಲ್ಲಿಸಿದ ನಂತರ ನಿಮಗೆ ಒಂದು ನಂಬರನ್ನು ನೀಡಲಾಗುತ್ತದೆ ಅದನ್ನು ನಂತರ ತೆಗೆದುಕೊಂಡು ಅರ್ಜಿ ಸ್ಥಿತಿಯನ್ನು ತಿಳಿದುಕೊಳ್ಳಬಹುದು.
ಈ ಮೇಲಿನ ಹಂತಗಳನ್ನು ಅನುಸರಿಸುವ ಮೂಲಕ ವೋಟರ್ ಐಡಿ ಸರಳವಾಗಿ ತಿದ್ದುಪಡಿ ಮಾಡಿಕೊಳ್ಳುವ ಮೂಲಕ ನೀವು ಸ್ಮಾರ್ಟ್ ವೋಟರ್ ಐಡಿಯನ್ನು ಪಡೆಯಬಹುದಾಗಿದೆ.
ಚುನಾವಣಾ ಆಯೋಗದ ಆಪ್ :
ಭಾರತ ದೇಶದಲ್ಲಿ ಚುನಾವಣೆ ನಡೆಸಲಿದೆ ಇರುವಂತಹ ಭಾರತೀಯ ಚುನಾವಣಾ ಆಯೋಗ ಹಾಗೂ ನಾಗರಿಕರಿಗೆ ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಮಾಹಿತಿ ಬೇಕಾದರೆ ಕೆಲವೊಂದು ಅಪ್ಲಿಕೇಶನ್ಗಳನ್ನು ಬಿಡುಗಡೆಗೊಳಿಸುವ ಮೂಲಕ ಅದರಿಂದ ಮಾಹಿತಿಯನ್ನು ಪಡೆಯಬಹುದು ಇದು ಜನರಿಗೆ ಹೆಚ್ಚು ಉಪಯೋಗವಾಗಲಿದೆ.
- ವೋಟರ್ ಹೆಲ್ಪ್ ಲೈನ್ ಯಾಪ್.
- ಸೆಕ್ಷಮ್ ಯಾಪ್.
- Cvigil app.
- Voter turnout app.
ಈ ಮೇಲ್ಕಂಡ ಅಪ್ಲಿಕೇಶನ್ ಅನ್ನು ಬಳಸಿಕೊಂಡು ನಾಗರಿಕರು ತಮ್ಮ ಚುನಾವಣಾ ಹಕ್ಕುಗಳನ್ನು ಹಾಗೂ ಇನ್ನಿತರ ಪ್ರಕ್ರಿಯೆ ಮಾಹಿತಿಯನ್ನು ಪಡೆಯಬಹುದಾಗಿದೆ.
ಚುನಾವಣೆ ಗುರುತಿನ ಚೀಟಿ ಯಾರಿಗೆ ನೀಡಲಾಗುತ್ತದೆ:
- ಹದಿನೆಂಟು ವರ್ಷ ತುಂಬಿದ ಪ್ರತಿಯೊಬ್ಬರಿಗೂ ನೀಡಲಾಗುತ್ತದೆ.
- ಭಾರತದ ಪ್ರಜೆಯಾಗಿರಬೇಕು.
- 18 ವರ್ಷ ತುಂಬಿದ ಬಗ್ಗೆ ದಾಖಲೆ ಪ್ರಮಾಣ ಪತ್ರ ನೀಡಬೇಕು.
ವರದಿಯ ಸಂಪೂರ್ಣ ಮಾಹಿತಿ :
ಆಯೋಗದ ಹೆಸರು | ಭಾರತೀಯ ಚುನಾವಣಾ ಆಯೋಗ |
ವೋಟರ್ ಐಡಿ ನೀಡಲು ಎಷ್ಟು ವಯಸ್ಸು ಆಗಿರಬೇಕು | 18 ವರ್ಷ ಆಗಿರಬೇಕು |
ಯಾರಿಗೆ ವೋಟರ್ ಐಡಿ ನೀಡಲಾಗುತ್ತದೆ | ಭಾರತೀಯ ಪ್ರಜೆಗೆ ಮಾತ್ರ ವೋಟರ್ ಐಡಿ ನೀಡಲಾಗುತ್ತದೆ |
ಅಧಿಕೃತ ಜಾಲತಾಣ | ಇಲ್ಲಿ ಕ್ಲಿಕ್ ಮಾಡಿ |
ತಿದ್ದುಪಡಿ ಜಾಲತಾಣ | ಇಲ್ಲಿದೆ ನೋಡಿ |
ಕೊನೆಯ ದಿನಾಂಕ ಯಾವುದು | ಇನ್ನು ನಿಗದಿ ಆಗಿಲ್ಲ |