Gruha Lakshmi: ಗೃಹಲಕ್ಷ್ಮಿ ಯೋಜನೆ… ಉಡುಪಿ, ದ.ಕ.ದಲ್ಲಿ 5,32,679 ಫ‌ಲಾನುಭವಿಗಳು

 ಉಡುಪಿ/ಮಂಗಳೂರು: ರಾಜ್ಯ ಸರಕಾರದ ಶಕ್ತಿ ಯೋಜನೆಗೆ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಒಟ್ಟು 5,32, 679 ಫ‌ಲಾನುಭವಿಗಳು ನೋಂದಾಯಿಸಿದ್ದಾರೆ.



ಉಡುಪಿ ಜಿಲ್ಲೆಯಲ್ಲಿ “ಕುಟುಂಬದ ಯಜಮಾನಿ’ ಎಂದು ನಮೂದಾಗಿರುವ 2,56,850 ಪಡಿತರ ಚೀಟಿಗಳಿದ್ದು, ಆ. 28ರ ವರೆಗೆ 2,08,695 ಫ‌ಲಾನುಭವಿಗಳು ನೋಂದಾಯಿಸುವ ಮೂಲಕ ಶೇ. 81.25 ಸಾಧನೆಯಾಗಿದೆ.


ದಕ್ಷಿಣ ಕನ್ನಡ ಜಿಲ್ಲೆಯಲ್ಲಿ “ಕುಟುಂಬದ ಯಜಮಾನಿ’ ಎಂದು ನಮೂದಾಗಿರುವ 4,03,333 ಪಡಿತರ ಚೀಟಿಗಳಿದ್ದು ಆ. 28ರ ವರೆಗೆ 3,23,984 ಫಲಾನುಭವಿಗಳು ನೋಂದಾಯಿಸುವ ಮೂಲಕ ಶೇ. 80.33 ಸಾಧನೆಯಾಗಿದೆ.

ಆ. 30ರಿಂದ ನಗದು ಸೌಲಭ್ಯವನ್ನು ಎಲ್ಲ ಫ‌ಲಾನುಭವಿಗಳ ಖಾತೆಗೆ ವರ್ಗಾವಣೆ ಮಾಡಲು ಉದ್ದೇಶಿಸಲಾಗಿದ್ದು, ಮೈಸೂರಿನಲ್ಲಿ ರಾಜ್ಯಮಟ್ಟದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ರಾಜ್ಯದ ಎಲ್ಲ ಫ‌ಲಾನುಭವಿಗಳು ಮೈಸೂರಿನ ಈ ನೇರ ಪ್ರಸಾರ ಕಾರ್ಯಕ್ರಮ ವೀಕ್ಷಿಸಲು ಅನುವಾಗುವಂತೆ ಏಕಕಾಲದಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಪ್ರತೀ ವಾರ್ಡ್‌ ಹಾಗೂ ಪ್ರತೀ ಗ್ರಾ.ಪಂ.ನಲ್ಲಿ ಸ್ಥಳೀಯವಾಗಿ ಕಾರ್ಯಕ್ರಮ ಆಯೋಜಿಸಲಾಗಿದೆ.


Mangaluru: ತುಂಬೆ ಡ್ಯಾಂ ಗೇಟುಗಳು ಈಗಲೇ ಬಂದ್‌!

ದ.ಕ. ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಹಾಗೂ ಮಂಗಳೂರು ಪಾಲಿಕೆ ವ್ಯಾಪ್ತಿಯ 33 ಸ್ಥಳಗಳಲ್ಲಿ ಟಿ.ವಿ./ ಎಲ್‌ಇಡಿ ಪರದೆ ಮೂಲಕ ಆ. 30ರಂದು ಮಧ್ಯಾಹ್ನ 12ರಿಂದ ನೇರಪ್ರಸಾರದಲ್ಲಿ ಕಾರ್ಯಕ್ರಮ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ.


ಉಡುಪಿ ಜಿಲ್ಲೆಯ 155 ಗ್ರಾ.ಪಂ.ಯ ಕೇಂದ್ರ ಸ್ಥಾನ, ಪ್ರತೀ ನಗರ ಸ್ಥಳೀಯ ಸಂಸ್ಥೆಯ 52 ವಾರ್ಡ್‌ಗಳು, 6 ತಾಲೂಕು ಕೇಂದ್ರಗಳು ಮತ್ತು ಜಿಲ್ಲಾ ಕೇಂದ್ರ ಸೇರಿದಂತೆ ಒಟ್ಟು 214 ಸ್ಥಳಗಳಲ್ಲಿ ಏಕಕಾಲದಲ್ಲಿ ಉದ್ಘಾಟನೆ ಹಮ್ಮಿಕೊಳ್ಳಲಾಗಿದೆ. ಈ ಸಂದರ್ಭ ಎಲ್ಲ ಫ‌ಲಾನುಭವಿಗಳ ಖಾತೆಗೆ ನಗದು ವರ್ಗಾವಣೆಯಾಗಿರುವ ಬಗ್ಗೆ ಏಕಕಾಲದಲ್ಲಿ ಅವರ ಮೊಬೈಲ್‌ ಸಂಖ್ಯೆಗೆ ಸಂದೇಶ ರವಾನಿಸಿ, ಮಂಜೂರಾತಿ ಪತ್ರ ಗೃಹಲಕ್ಷ್ಮಿ ಗುರುತಿನ ಚೀಟಿ ವಿತರಿಸಲಾಗುವುದು.


ಮೈಸೂರು ಕಾರ್ಯಕ್ರಮದ ಸ್ಥಳದಿಂದ ವಂಡ್ಸೆ ಗ್ರಾ.ಪಂ., ಉಡುಪಿ ನಗರಸಭೆ ವ್ಯಾಪ್ತಿಯ ಯುಬಿಎಂಸಿ ಸಭಾಂಗಣದಲ್ಲಿ ಫ‌ಲಾನುಭವಿಗಳೊಂದಿಗೆ ಪರಸ್ಪರ ಸಂವಾದ ನಡೆಸಲು ವ್ಯವಸ್ಥೆ ಕಲ್ಪಿಸಲಾಗಿದೆ. ಉಡುಪಿ ತಾಲೂಕು ಮತ್ತು ಜಿಲ್ಲಾ ಮಟ್ಟದ ಕಾರ್ಯಕ್ರಮಕ್ಕೆ ಕಿನ್ನಿಮೂಲ್ಕಿ ಮಿಷನ್‌ ಕಾಂಪೌಂಡ್‌ನ‌ ಬಾಸೆಲ್‌ ಮಿಷನರಿಸ್‌ ಮೆಮೋರಿಯಲ್‌ ಆಡಿಟೋರಿಯಂನಲ್ಲಿ ಆ. 30ರ ಮಧ್ಯಾಹ್ನ 12ಕ್ಕೆ ಚಾಲನೆ ನೀಡಲಾಗುವುದು.

ಫ‌ಲಾನುಭವಿಗಳು ತಮ್ಮ ಮನೆಗಳ ಮುಂದೆ, ಗೃಹಲಕ್ಷ್ಮಿ ನಡೆಯುವ ಸ್ಥಳಗಳಲ್ಲಿ ಗೃಹಲಕ್ಷಿ ¾ ಯೋಜನೆಯ ಬಗ್ಗೆ ರಂಗೋಲಿ ರಚಿಸಬಹುದು. ವೇದಿಕೆಯಲ್ಲಿ ಭಾಗವಹಿಸಿದ ಫ‌ಲಾನುಭವಿಗಳು ಹಾಗೂ ರಂಗೋಲಿ ಬಗ್ಗೆ ಮೂರು ನಿಮಿಷಗಳ ವೀಡಿಯೋ ಸಿದ್ಧಪಡಿಸಿ, ಗೃಹಲಕ್ಷ್ಮಿ ಯೂಟ್ಯೂಬ್‌ ಚಾನೆಲ್‌ಗೆ ಅಪ್‌ಲೋಡ್‌ ಮಾಡಬಹುದು ಎಂದು ಉಡುಪಿ ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Previous Post Next Post

Ads

Ads

نموذج الاتصال

×