ವಿದ್ಯಾರ್ಥಿಗಳಿಗೆ ಕೊಳೆತ ಮೊಟ್ಟೆ ನೀಡಿದ ಆರೋಪದ ಅಡಿಯಲ್ಲಿ ಕಾರ್ಯಕರ್ತೆಯನ್ನು ವರ್ಗಾವಣೆ ಮಾಡಿ ಒಂದು ತಿಂಗಳ ಸಂಬಳವನ್ನು ಕಡಿತಗೊಳಿಸಲಾಗಿದೆ.
ಕೋಲಾರ: ಇದು ಕರ್ನಾಟಕದಲ್ಲಿ ಮೊದಲ ಬಾರಿಯಲ್ಲ ಹಿಂದೂ ಈ ರೀತಿಯಾಗಿದೆ. ಆದರೆಚ ಒಂದೇ ತಪ್ಪು ಮತ್ತೆ ಮತ್ತೆ ಯಾಕೆ ಮರುಕಳಿಸುತ್ತದೆ ಎಂದು ತಿಳಿಯುವುದಿಲ್ಲ. ಅಷ್ಟಕ್ಕೂ ಆಗಿದ್ದೇನು ಅಂತಿರಾ? ಇಲ್ಲಿದೆ ವಿವರ
ಮೊಟ್ಟೆ ವಿತರಣೆ ಮಾಡುವುದು ಅಂಗನವಾಡಿ ಕಾರ್ಯಕರ್ತೆಯರ ಜವಾಬ್ಧಾರಿಯಾಗಿರುತ್ತದೆ. ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡುವುದು ಅವರ ಜವಾಬ್ಧಾರಿಯಾಗಿರುತ್ತದೆ.
ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಬತ್ತಲಾಯೂರು ಗ್ರಾಮದಲ್ಲಿ ಅಂಗನವಾಡಿ ಕಾರ್ಯಕರ್ತೆ ವಿದ್ಯಾರ್ಥಿಗಳಿಗೆ ಕೊಳೆತ ಮೊಟ್ಟೆ ವಿತರಣೆ ಮಾಡಿದ್ದಾರೆ
ಕೊಳೆತ ಮೊಟ್ಟೆ ವಿತರಣೆ ಮಾಡಿದ ಕಾರಣ ಅಂಗನವಾಡಿ ಕಾರ್ಯಕರ್ತೆಯ ಒಂದು ತಿಂಗಳ ಸಂಬಳ ಕಡಿತ ಮಾಡಬೇಕು ಎಂಬ ಆದೇಶ ಹೊರಡಿಸಲಾಗಿದೆ
ಬತ್ತಲಾಯೂರು ಗ್ರಾಮದ ಅಂಗನವಾಡಿ ಕೇಂದ್ರದ ಮಕ್ಕಳಿಗೆ, ಕಾರ್ಯಕರ್ತೆ ಕಣ್ಣಮ್ಮ ರಿಂದ ಕೊಳೆತ ಮೊಟ್ಟೆ ವಿತರಿಸಿದ ಆರೋಪ ಕೇಳಿಬಂದಿದೆ.
ಈ ಹಿಂದೆಯೂ ಕಳಪೆ ಗುಣಮಟ್ಟದ ಮೊಟ್ಟೆ ವಿತರಿಸಿದ್ದ ಕಣ್ಣಮ್ಮ ಅದೇ ರೀತಿ ಸ್ವಭಾವವನ್ನು ಮುಂದುವರೆಸಿದ್ದಾರೆ
ಗ್ರಾಮಸ್ತರು ಹಾಗು ಪೋಷಕರ ದೂರಿನ ಮೇರೆಗೆ, ಕಣ್ಣಮ್ಮ ರನ್ನ ಬೇರೆಡೆ ವರ್ಗಾವಣೆ ಗೊಳಿಸಿ, ತಿಂಗಳ ಸಂಬಳ ಕಡಿತ ಮಾಡಲಾಗಿದೆ.