ಗೃಹಲಕ್ಷ್ಮಿ ಯೋಜನೆ ಪ್ರಾರಂಭ ಅರ್ಜಿ ಸಲ್ಲಿಸುವುದು ಹೇಗೆ - Karnataka Schemes (ಕರ್ನಾಟಕ ಯೋಜನೆಗಳು)

 

ನಮಸ್ಕಾರ ಸ್ನೇಹಿತರೆ ಐದು ಗ್ಯಾರೆಂಟಿಗಳಲ್ಲಿ ಮುಖ್ಯ ಯೋಜನೆಯಾದ ಗೃಹಲಕ್ಷ್ಮಿ ಯೋಜನೆ ಪ್ರಾರಂಭವಾಗಲಿದ್ದು. ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಅರ್ಜಿ ಸಲ್ಲಿಸಲು ಷರತುಗಳೇನು ಅರ್ಜಿಯು ಯಾರ ಹೆಸರಲ್ಲಿ ಸಲ್ಲಿಸಬೇಕು ಇದರ ಒಂದು ಸಂಪೂರ್ಣ ಮಾಹಿತಿ ಈ ಒಂದು ಲೇಖನದಲ್ಲಿ ನೋಡಬಹುದು.

ಸ್ನೇಹಿತರೆ ಮೇಲೆ ತಿಳಿಸಿರುವ ಹಾಗೆ ಐದು ಗ್ಯಾರಂಟಿಗಳಲ್ಲಿ ಮುಖ್ಯ ಗ್ಯಾರಂಟಿ ಯೋಜನೆಯಾದ ಗ್ರಹಲಕ್ಷ್ಮಿ ಯೋಜನೆ, ಈ ಯೋಜನೆಯನ್ನು ಅರ್ಜಿ ಸಲ್ಲಿಸಲು ರಾಜ್ಯದ ಎಲ್ಲಾ ಮಹಿಳೆಯರು ಕಾತೂರದಿಂದ ಕಾಯುತ್ತಿದ್ದಾರೆ, ಅವರಿಗೆಲ್ಲರಿಗೂ ಸಂತೋಷ ಸುದ್ದಿ ಅಂತ ಹೇಳಬಹುದು. ಈ ಒಂದು ಯೋಜನೆ ಇಂದಿನಿಂದ ಪ್ರಾರಂಭವಾಗಲಿದ್ದು ಅರ್ಜಿ ಸಲ್ಲಿಸಲು ಬಯಸುವಂತಹ ಎಲ್ಲ ಮಹಿಳೆಯರು ತಮಗೆ ಬೇಕಾಗುವಂತಹ ದಾಖಲಾತಿಗಳನ್ನ ಸಿದ್ದುಪಡಿಸಿಕೊಳ್ಳಬೇಕಾಗುತ್ತೆ. ಅರ್ಜಿ ಸಲ್ಲಿಸುವುದು ಹೇಗೆ ಎಂದು ಕೆಳಗಡೆ ವಿವರವಾಗಿ ಮಾಹಿತಿ ನೋಡಬಹುದು.

ಅರ್ಜಿ ಸಲ್ಲಿಸುವುದು ಹೇಗೆ

  • ರಾಜ್ಯ ಸರ್ಕಾರ ಚಾಲನೆ ಮಾಡಿದ ಗ್ರಹಲಕ್ಷ್ಮಿ ಯೋಜನೆ ಇಂದಿನಿಂದ ಪ್ರಾರಂಭವಾಗಲಿದೆ.
  • ಈ ಒಂದು ಯೋಜನೆಯನ್ನು ಅರ್ಜಿ ಸಲ್ಲಿ ಸಲ್ಲಿಸಲು ನಿಮ್ಮ ಮೊಬೈಲ್ ನಂಬರಿಗೆ ಎಸ್.ಎಂ.ಎಸ್ ಬರುತ್ತೆ
  • ಅರ್ಜಿ ಸಲ್ಲಿಸಲು ಹೋಗಬೇಕಾಗಿರುವ ಸ್ಥಳ ದಿನಾಂಕ ಮತ್ತು ಸಮಯ ಎಲ್ಲ ಮಾಹಿತಿ ಎಸ್.ಎಂ.ಎಸ್ ನಲ್ಲಿ ಇರುತ್ತೆ.
  •  ಆ ಸ್ಥಳಕ್ಕೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದು.
  • ಅಂದರೆ ಸ್ಥಳ ಗ್ರಾಮ ಒನ್ ಆಗಿರಬಹುದು, ಕರ್ನಾಟಕ‌ ಒನ್ ಆಗಿರಬಹುದು ಬೆಂಗಳೂರು ಒನ್ ಆಗಿರಬಹುದು ಅಥವಾ ಬಾಪೂಜಿ ಕೇಂದ್ರ ಆಗಿರಬಹುದು.
  • ಈ ಎಲ್ಲ ಕೇಂದ್ರಗಳಲ್ಲಿ ಯಾವುದಾದರು ಒಂದು ಕೇಂದ್ರದ ವಿವರಗಳು ನಿಮ್ಮ ಮೊಬೈಲಿಗೆ ಎಸ್.ಎಂ.ಎಸ್ ಬರುತ್ತೆ. 
  • ಒಂದು ವೇಳೆ ನಿಮಗೆ ಎಸ್.ಎಂ.ಎಸ್ ನಲ್ಲಿ ಬಂದಿರುವ ಸಮಯಕ್ಕೆ ನೀವು ಅರ್ಜಿ ಸಲ್ಲಿಸಲು ಸಾಧ್ಯವಾಗದಿದ್ದಲ್ಲಿ ಅದೇ ಕೇಂದ್ರಕ್ಕೆ ಅದೇ ಸ್ಥಳಕ್ಕೆ ಪ್ರತಿ ದಿನ ಸಂಜೆ 5 ಗಂಟೆಯಿಂದ 7:00 ವರೆಗೂ ಅರ್ಜಿ ಸಲ್ಲಿಸಲು ಅವಕಾಶ ಇರುತ್ತೆ.

ಅರ್ಜಿ ಸಲ್ಲಿಸಲು ಬೇಕಾಗುವ ಅಂತಹ ದಾಖಲಾತಿಗಳು ಯಾವುವು

ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಐದು ಗ್ಯಾರಂಟಿಗಳಲ್ಲಿ ಮುಖ್ಯ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಯನ್ನು ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು ಯಾವವು.

  • ಆಧಾರ್ ಕಾರ್ಡ್
  • ಆಧಾರ್ ಕಾರ್ಡಿಗೆ ಮೊಬೈಲ್ ನಂಬರ ಲಿಂಕ ಇರಬೇಕಾಗುತ್ತದೆ
  • ರೇಷನ್ ಕಾರ್ಡ್
  • ರೇಷನ್ ಕಾರ್ಡ್ ಅಲ್ಲಿ ಮನೆಯ ಮುಖ್ಯಸ್ಥರಾಗಿರಬೇಕಾಗುತ್ತದೆ.
  • ನಿಮ್ಮ ಆಧಾರ್ ಕಾರ್ಡ್ ಬ್ಯಾಂಕ್ ಅಕೌಂಟ್ ಗೆ ಲಿಂಕ್ ಇರಬೇಕು.
  • ಒಂದು ವೇಳೆ ನಿಮ್ಮ ಬ್ಯಾಂಕ್ ಅಕೌಂಟ್ ಗೆ ಆಧಾರ್ ಕಾರ್ಡ್ ಲಿಂಕ್ ಇರುವಂತ ಅಕೌಂಟ್ ಬದಲಿಗೆ ಬೇರೆ ಖಾತೆ ಕೊಡಲು ಬಯಸಿದರೆ ಅದರ ಒಂದು ಜೆರಾಕ್ಸ್ ಪ್ರತಿಯನ್ನು ತೆಗೆದುಕೊಂಡು ಹೋಗಬೇಕಾಗುತ್ತೆ.
  • ನಿಮ್ಮ ಭಾವಚಿತ್ರ
  • ಗಂಡನ ಆಧಾರ್ ಕಾರ್ಡ್
  • ಈ ಎಲ್ಲ ದಾಖಲಾತಿಗಳನ್ನು ನಿಮ್ಮ ಎಸ್.ಎಂ.ಎಸ್ ನಲ್ಲಿ ಬಂದಿರತಕ್ಕಂತಹ ಸ್ಥಳಕ್ಕೆ ಅರ್ಜಿ ಸಲ್ಲಿಸಲು ಹೋಗುವಂತ ಸಂದರ್ಭದಲ್ಲಿ ಈ ಎಲ್ಲ ದಾಖಲಾತಿಗಳನ್ನು ತಪ್ಪದೇ ತೆಗೆದುಕೊಂಡು ಹೋಗಬೇಕಾಗುತ್ತೆ.

ಒಂದು ಮುಖ್ಯವಾದ ವಿಷಯ ಅರ್ಜಿ ಸಲ್ಲಿಸಲು ಹೋಗಬೇಕಾದ ಸಂದರ್ಭದಲ್ಲಿ ಆಧಾರ್ ಕಾರ್ಡಿಗೆ ಲಿಂಕ್ ಇರುವಂತಹ ಮೊಬೈಲ್ ನಂಬರ್ ಜೊತೆಗೆ ಮೊಬೈಲ್ ಅನ್ನು ತೆಗೆದುಕೊಂಡು ಹೋಗಬೇಕಾಗುತ್ತೆ.

Previous Post Next Post

Ads

Ads

نموذج الاتصال

×