ಆತ್ಮೀಯರೇ, ನಮ್ಮ ಹೊಸ ಲೇಖನಕ್ಕೆ ಸ್ವಾಗತ. ನಾವಿಂದು ಈ ಲೇಖನದಲ್ಲಿ ತಂದೆ ನಂತರ ಆಸ್ತಿಯ ಹಕ್ಕಿನ ಬಗ್ಗೆ ವಿವರಿಸಿದ್ದೇವೆ. ದೇಶದ್ಯಂತ ಇರುವ ಹೆಣ್ಣು ಮಕ್ಕಳಿಗಾಗಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯ ಉದೇಶ ಏನು? ನೀವು ಈ ಯೋಜನೆಯ ಲಾಭ ಪಡೆಯುವುದು ಹೇಗೆ? ಎನ್ನುವ ಸಂಪೂರ್ಣ ವಿವರವನ್ನು ಈ ಸಂಚಿಕೆಯಲ್ಲಿ ನೀಡಲಾಗಿದೆ, ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿ.
ಆಸ್ತಿ ಹಂಚಿಕೆ ಬಗ್ಗೆ ಭಾರತದಲ್ಲಿ ಅನೇಕ ಕಾನೂನುಗಳಿವೆ. ಪಿತ್ರರ್ಜಿತ ಆಸ್ತಿ ಹಾಗೂ ಸ್ವಯಾರ್ಜಿತ ಆಸ್ತಿ ಬಗ್ಗೆ ವಿವಿಧ ಕಾನೂನುಗಳಿವೆ ಪಿತ್ರಾರ್ಜಿತ ಆಸ್ತಿಯಲ್ಲಿ ಯಾವಾಗಲು ಗಂಡುಮಕ್ಕಳಿಗೆ ಅಧಿಕಾರ ಹೆಚ್ಚಾಗಿರುತ್ತದೆ. ಆದರೆ ತಂದೆಗೆ ಒಬ್ಬಳೇ ಮಗಳಿದ್ದು ಅವರ ತಂದೆ ಯಾವುದೇ ವಿಲ್ ಬರೆಯದೆ ಮರಣ ಹೊಂದಿದರೆ ಆ ಆಸ್ತಿ ಪೂರ್ಣ ಪ್ರಮಾಣದಲ್ಲಿ ಮಗಳ ಪಾಲಿಗೆ ಹೋಗುತ್ತದೆ.
ಯಾವುದೇ ಹಕ್ಕು ಪತ್ರವನ್ನು ತಂದೆ ಮರಣಕ್ಕೆ ಮುಂಚೆ ಬರೆಯದೆ ಹೊದಲ್ಲಿ ಅದು ಅವರ ಗಂಡು ಹಾಗೂ ಹೆಣ್ಣು ಮಕ್ಕಳಲ್ಲಿ ಸಮಾನವಾಗಿ ಹಂಚಿಕೆಯಾಗುತ್ತದೆ. ಒಂದು ವೇಳೆ ಆ ವ್ಯಕ್ತಿಗೆ ಯಾವುದೇ ಗಂಡು ಮಕ್ಕಳಿಲ್ಲದೆ ಹೊದಲ್ಲಿ ಅವರ ಅಣ್ಣ ಅಥವಾ ತಮ್ಮನ ಮಕ್ಕಳಿಗೆ ಹೊಲಿಸಿದ್ರೆ ಅವರ ಹೆಣ್ಣು ಮಕ್ಕಳಿಗೆ ಆಸ್ತಿಯ ಹಕ್ಕು ಇರುತ್ತದೆ. ಒಂದು ವೇಳೆ ಆಸ್ತಿಯನ್ನು ಆ ಹೆಣ್ಣು ಮಗಳು ನಿರಾಕರಿಸಿದರೆ ಮಾತ್ರ ಕುಟುಂಬದ ಇತರೆ ಪುರುಷರಿಗೆ ಸಿಗುತ್ತದೆ. ಇದನ್ನು ಯಾರು ಬದಲಿಸಲು ಸಾಧ್ಯವಾಗುವುದಿಲ್ಲ.
ಅವಿಭಕ್ತ ಹಿಂದೂ ಕುಟುಂಬದ ಆಸ್ತಿ ಉತ್ತರಾಧಿಕಾರತ್ವದ ನಿಯಮದ ಪ್ರಕಾರ ಕುಟುಂಬದ ಆಸ್ತಿಯ ಪಾಲು ಎನ್ನುವುದು ತನ್ನ ಗಂಡು ಮಕ್ಕಳಿಗೆ ಇಲ್ಲವೇ ಕುಟುಂಬದ ಪುರುಷರಲ್ಲಿ ಪಾಲಾಗುತ್ತದೆ ಎಂಬುದಾಗಿದೆ. 2005 ರಲ್ಲಿ ಹೆಣ್ಣು ಮಕ್ಕಳಿಗೂ ಸಂಪೂರ್ಣವಾದ ಹಕ್ಕು ಸಿಗಬೇಕು ಎಂದು ಈ ಕಾನೂನು ಜಾರಿಗೆ ಬಂತು. ಇದೀಗ ಸುಪ್ರೀಂ ಕೋಟ್ ಹೊಸ ಆದೇಶವನ್ನು ಹೊರಡಿಸಿದೆ. ತಂದೆಗೆ ಪುತ್ರಿ ಮಾತ್ರ ಇದ್ದರೆ ಆ ಮಗಳು ಮಾತ್ರ ತಂದೆ ನಂತರ ಆಸ್ತಿಯನ್ನು ಅನುಭವಿಸಬಹುದು ಎಂದು ತಿಳಿಸಿದ್ದಾರೆ.