Gruha Lakshmi Scheme Eligibility
ಸ್ನೇಹಿತರೆ ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರ ಚುನಾವಣಾ ಪೂರ್ವದಲ್ಲಿ ಹೇಳಿದ ಪ್ರಕಾರ 5 ಗ್ಯಾರಂಟಿ ಯೋಜನೆಯಲ್ಲಿ ಮೂರು ಯೋಜನೆಯನ್ನು ಯಶಸ್ವಿಯಾಗಿ ಪ್ರಾರಂಭಿಸಿ ಇದೀಗ 4ನೇ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಯ ಬಿಡುಗಡೆಗೆ ಮುಂದಾಗಿದೆ. ಈಗಾಗಲೇ ಗೃಹ ಜ್ಯೋತಿ, ಅನ್ನ ಭಾಗ್ಯ ಯೋಜನೆ , ಶಕ್ತಿ ಯೋಜನೆಗೆ ರಾಜ್ಯಾದ್ಯಂತ ಒಳ್ಳೆಯ ಪ್ರತಿಕ್ರಿಯೆ ಮತ್ತು ಜನರ ಪ್ರೀತಿ ಸಿಕ್ಕಿದೆ.
ಆದರೆ ರಾಜ್ಯದ ಮಹಿಳೆಯರು ಇಷ್ಟು ದಿನ ಕಾದು ಕುಳಿತಿದ್ದ ಗೃಹಲಕ್ಷ್ಮಿ ಯೋಜನೆಗೆ ಇದೇ ಜುಲೈ 19 ರಿಂದ ನೀವು ಆನ್ಲೈನ್ ನಲ್ಲಿ ಅಪ್ಲಿಕೇಶನ್ ಸಲ್ಲಿಸಬಹುದು. ಸೇವಾ ಸಿಂಧು ಅಧಿಕೃತ ವೆಬ್ಸೈಟ್ ಮತ್ತು ಪ್ರತ್ಯೇಕ ಅಪ್ಲಿಕೇಶನ್ ಗಳಲ್ಲಿ ನೀವು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಯಾವಾಗ ಅರ್ಜಿ ಸಲ್ಲಿಸಬಹುದು?
ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಜುಲೈ 19 ರಿಂದ ಅವಕಾಶ ನೀಡಲಾಗುವುದು ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಿಳಿಸಿದ್ದಾರೆ. ಹೌದು ಜುಲೈ 19 ರಿಂದ ಗೃಹಲಕ್ಷ್ಮಿಯರು ಯೋಜನೆಗೆ ಅರ್ಜಿಯನ್ನ ಸಲ್ಲಿಸಿ ಆಗಸ್ಟ್ ತಿಂಗಳಲ್ಲಿ ಮೊದಲ ೨೦೦೦ ರೂಪಾಯಿಯನ್ನ ನೇರವಾಗಿ ಅವರ ಬ್ಯಾಂಕ್ ಅಕೌಂಟ್ ನಲ್ಲಿ ಪಡೆದುಕೊಳ್ಳಬಹುದು.
ಗೃಹಲಕ್ಷ್ಮಿ ಯೋಜನೆಗೆ ಯಾರು ಅರ್ಹರಲ್ಲ! Gruha Lakshmi Scheme Eligibility
ಯೋಜನೆಯಲ್ಲಿ ಹಲವರು ಗೊಂದಲಗಳಿದ್ದು, ಗೃಹಲಕ್ಷ್ಮಿ ಯೋಜನೆಗೆ ಯಾರು ಅರ್ಹರು? ಯಾರು ಅರ್ಹರಲ್ಲ ಎನ್ನುವ ನಾನಾ ಪ್ರಶ್ನೆಗಳು ಇದೀಗ ರಾಜ್ಯದ ಜನರಲ್ಲಿ ಕಾಡುತ್ತಿದೆ.
ಮೊದಲನೆದಾಗಿ ರಾಜ್ಯದ ಎಲ್ಲಾ ಮಹಿಳೆಯರಿಗೆ ಅಂದರೆ ಮನೆಯ ಯಜಮಾನಿ ಮಹಿಳೆಗೆ 2000 ರೂ ಸಿಗುತ್ತೆ ಎಂದು ಹೇಳಿದ ರಾಜ್ಯ ಸರ್ಕಾರ ಇದೀಗ ನಾನಾ ಶರತ್ತುಗಳನ್ನು ವಿಧಿಸಿದೆ. ಈ ಷರತ್ತುಗಳನ್ನು ಫಾಲೋ ಮಾಡಿದರೆ ತುಂಬಾ ಮಹಿಳೆಯರು ಈ ಯೋಜನೆಯ ಲಾಭಗಳಿಂದ ವಂಚಿತರಾಗಲಿದ್ದಾರೆ.
ಮೊದಲನೆಯದಾಗಿ ಯಜಮಾನಿ ಮಹಿಳೆಯ ಪತಿ ಆದಾಯ ತೆರಿಗೆ ಪಾವತಿ ಮಾಡುತ್ತಿದ್ದರೆ ಅಥವಾ ಜಿಎಸ್‌ಟಿ ಪಾವತಿ ಮಾಡುತ್ತಿದ್ದರೆ ಗೃಹಲಕ್ಷ್ಮಿ ಯೋಜನೆಯ ಲಾಭ ಸಿಗುವುದಿಲ್ಲ.
ಇದರ ಜೊತೆಗೆ ಮುಖ್ಯವಾಗಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವಿತರಣೆ ಮಾಡುವ ಬಿಪಿಎಲ್ ಅಂತ್ಯೋದಯ ಮತ್ತು ಎಪಿಎಲ್ ರೇಷನ್ ಕಾರ್ಡ್ ನಲ್ಲಿ ಕುಟುಂಬದ ಯಜಮಾನಿ ಎಂದು ನಮೂದಿಸಿರುವ ಮಹಿಳೆಯರು ಮಾತ್ರ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಾಗಿರುತ್ತಾರೆ.
ಮಹಿಳಾ ಸರ್ಕಾರಿ ನೌಕರರು ಗೃಹಲಕ್ಷ್ಮಿ ಯೋಜನೆ ಪ್ರಯೋಜನವನ್ನು ಪಡೆಯುವಂತಿಲ್ಲ.
ಮಹಿಳಾ ತೆರಿಗೆದಾರರು ಈ ಯೋಜನೆಗೆ ಅರ್ಹರಾಗಿರುವುದಿಲ್ಲ. ಎಪಿಎಲ್ ಬಿಪಿಎಲ್ ಅಥವಾ ಅಂತ್ಯೋದಯ ಕಾರ್ಡ್ ನಲ್ಲಿ ಮಹಿಳೆಯ ಹೆಸರಿರಬೇಕು.
ಒಂದು ಕುಟುಂಬದಲ್ಲಿ ಒಬ್ಬ ಮಹಿಳೆ ಮಾತ್ರ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು.
ಯಾವ ದಾಖಲೆ ಬೇಕಾಗುತ್ತದೆ?
- ಮನೆಯ ಯಜಮಾನಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬೇಕಾದರೆ,
- ಮೊದಲನೆಯದಾಗಿ ಪಡಿತರ ಚೀಟಿಯ ಸಂಖ್ಯೆ ಬೇಕಾಗುತ್ತದೆ
- ಆಧಾರ್ ಕಾರ್ಡ್ ಸಂಖ್ಯೆ ಬೇಕಾಗುತ್ತದೆ
- ಬ್ಯಾಂಕ್ ಖಾತೆಯ ಪಾಸ್ ಬುಕ್ ಪ್ರತಿ ಬೇಕಾಗುತ್ತದೆ,
- ಪತಿಯ ಆಧಾರ್ ಕಾರ್ಡ್ ಕಡ್ಡಾಯವಾಗಿ ಬೇಕಾಗುತ್ತದೆ.
Gruha Lakshmi Scheme Registration ಅರ್ಜಿ ಸಲ್ಲಿಕೆ ಹೇಗೆ?
ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ನೀವು ಬಾಪೂಜಿ ಸೇವಾಕೇಂದ್ರ, ಸ್ಥಳೀಯ ಗ್ರಾಮವನ್ ಅಥವಾ ಬೆಂಗಳೂರು ಒನ್ ಮತ್ತು ಸೇವಾ ಸಿಂಧು ಪೋರ್ಟಲ್ ನಲ್ಲಿ ಕೂಡ ಅರ್ಜಿ ಸಲ್ಲಿಸಬಹುದು. ಇದರ ಜೊತೆಗೆ ಈಗಾಗಲೇ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿರುವ ಪ್ರಕಾರ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಪ್ರತ್ಯೇಕವಾದ ಅಪ್ಲಿಕೇಶನ್ ಬಿಡುಗಡೆ ಮಾಡಲಿದೆ ರಾಜ್ಯ ಸರ್ಕಾರ.
ಆ ಅಪ್ಲಿಕೇಶನ್ ಮೂಲಕ ಕೂಡ ನೀವು ಅರ್ಜಿಯನ್ನ ಸಲ್ಲಿಸಬಹುದಾಗಿದೆ. ಆ್ಯಪ್ ಬಗ್ಗೆ ಅಪ್ಡೇಟ್ ನಿಮಗೆ ತಕ್ಷಣ ಮಾಡುತ್ತೇವೆ. ಅಪ್ಡೇಟ್ ಪಡೆಯಲು ನಮ್ಮ ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಂ ಗ್ರೂಪ್ ಜಾಯಿನ್ ಆಗಿ. ಯಾವುದೇ ಪ್ರಶ್ನೆಗಳಿದ್ದರೆ ಕೆಳಗೆ ಕಮೆಂಟ್ ಮಾಡಿ. ಇಲ್ಲಿಯವರೆಗೆ ಓದಿದ್ದಕ್ಕೆ ಧನ್ಯವಾದಗಳು ಶುಭದಿನ.