ಎಲ್ಲರಿಗೂ ನಮಸ್ತೆ, ನಿಮಗೆಲ್ಲರಿಗೂ ಈ ಲೇಖನಕ್ಕೆ ಸ್ವಾಗತ. ನಾವಿಂದು ಈ ಲೇಖನದಲ್ಲಿ ʼಲಕ್ಷ್ಮಿʼಯರಿಗೆ ಗ್ಯಾರಂಟಿಯ ಇತ್ತೀಚಿನ ಅಪ್ಡೇಟ್ ಬಗ್ಗೆ ವಿವರಿಸಿದ್ದೇವೆ, ರಾಜ್ಯದಲ್ಲಿ ನಾಳೆ ಗೃಹಲಕ್ಷ್ಮಿ ಯೋಜನೆಯು ಜಾರಿಯಾಗಲಿದೆ. ಇದರ ಅರ್ಜಿ ಸಲ್ಲಿಸುವುದು ಹೇಗೆ? ಇದಕ್ಕೆ ಇರುವ ಟೋಲ್ ಫ್ರೀ ನಂಬರ್ ಏನು? ಎನ್ನುವ ಸಂಪೂರ್ಣ ವಿವರವನ್ನು ಈ ಸಂಚಿಕೆಯಲ್ಲಿ ನೀಡಲಾಗಿದೆ, ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿ.
ರಾಜ್ಯದಲ್ಲಿ ಇದೀಗ ಗೃಹಜ್ಯೋತಿ ಯೋಜನೆ ಜಾರಿ ಈ ಅವರಿಗೆ ಒಂದು ಪೋನ್ ನಂಬರ್ ಅನ್ನು ನೀಡಲಾಗಿದೆ. ಉಚಿತವಾಗಿ ಗೃಹಲಕ್ಷ್ಮಿ ಯೋಜನೆಯ ಲಾಭ, ಯಾವುದೇ ಮಧ್ಯವರ್ತಿಯ ಮುಂದಾಳತ್ವ ಇಲ್ಲದೆ ಮಹಿಳೆ ತಾನೆ ಒಬ್ಬಂಟಿಯಾಗಿ ಈ ಯೋಜನೆಗೆ ಅರ್ಜಿ ಸಲ್ಲಿಸ ಬಹುದಾಗಿದೆ. ರಾಜ್ಯ ಸರ್ಕಾರದಿಂದ ಪೋನ್ ನಂಬರ್ ಅನ್ನು ನೀಡಲಾಗಿದೆ ಈ ನಂಬರ್ ಮೂಲಕ ನೀವು ನಿಮಗೆ ಬರುವ 2000 ರೂಪಾಯಿಯನ್ನು ಪಡೆದುಕೊಳ್ಳಬಹುದಾಗಿದೆ.
8147500500 ಈ ನಂಬರ್ನ ಮೂಲಕ ನೀವು ಉಚಿತವಾಗಿ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದಾಗಿದೆ. ಇದಕ್ಕಾಗಿ ನೀವು ಮಾಡಬೇಕಿರುವುದು ಇಷ್ಟೇ, ಈ ನಂಬರ್ಗೆ ತಮ್ಮ ಪಡಿತರ ಚೀಟಿ ಸಂಖ್ಯೆಯನ್ನು SMS ರೂಪದಲ್ಲಿ ಕಳುಹಿಸ ಬೇಕಾಗುತ್ತದೆ. SMS ಮಾಡಿದ ಫಲನುಭವಿಯು ಈ ಯೋಜನೆಯ ಲಾಭ ಪಡೆದುಕೊಳ್ಳಲು ಸಹಕಾರಿಯಾಗುತ್ತದೆ. ಮೆಸೇಜ್ ಮಾಡಿದ ತಕ್ಷಣ ಮಹಿಳೆಗೆ ಮತ್ತೆ ಮೆಸೇಜ್ ಬರುತ್ತದೆ. ಈ ಮೂಲಕ ಅವರು ಈ ಯೋಜನೆಯ ಸಂಪೂರ್ಣ 2000 ರೂಪಾಯಿಯನ್ನು ಪಡೆದು ಕೊಳ್ಳಬಹುದಾಗಿದೆ. ʼಲಕ್ಷ್ಮಿʼಯರಿಗೆ ಗ್ಯಾರಂಟಿ ಇಂದ ಉಚಿತ 2000 ರೂಪಾಯಿ ನೀಡಲಾಗುತ್ತದೆ.
ಹೆಚ್ಚಿನ ಗೊಂದಲಗಳಿಗೆ ಸರ್ಕಾರದಿಂದ ಮತ್ತೊಂದು ಹೆಲ್ಪಲೈನ್ ಅನ್ನು ಸಹ ಬಿಡುಗಡೆ ಮಾಡಲಾಗಿದೆ ಅದುವೆ 1902ಕ್ಕೆ ಕರೆಮಾಡಿದ್ರೆ ಅವರ ಗೊಂದಲಗಳಿಗೆ ಉತ್ತರವನ್ನು ಸೂಚಿಸಲಾಗುತ್ತದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ರವರು ತಿಳಿಸಿದ್ದಾರೆ. ಈ ಯೋಜನೆಯ ಲಾಭವನ್ನು ರಾಜ್ಯದ ಎಲ್ಲ ಯಜಮಾನಿಯರು ಪಡೆದುಕೊಳ್ಳಲಿ ಎನ್ನುವುದೇ ಇದರ ಉದ್ದೇಶವಾಗಿದೆ.