“ವಿದ್ಯುತ್ ಡಕ್ ವರ್ಥ್ ಲೂಯಿಸ್ ನಿಯಮ”

 ಈ ಹಿಂದಿನ 12 ತಿಂಗಳ ವಿದ್ಯುತ್ ಬಳಕೆಯ ಯೂನಿಟ್ ಗಳನ್ನು ಒಟ್ಟಾಗಿ ಕೂಡಿಸಿ, ಅದನ್ನು 12 ರಿಂದ ಬಾಗಿಸಿ ಮತ್ತೆ 1.1 ರಿಂದ ಗುಣಿಸಿದಾಗ ಬರುವ ಮೊತ್ತದ ಒಳಗೆ ಈಗಿನ ನಿಮ್ಮ ಉಚಿತ ವಿದ್ಯುತ್ ಬಳಕೆಯ ಯೂನಿಟ್ ಇರತಕ್ಕದ್ದು. ಮತ್ತೆ ಅದು 200 ಯೂನಿಟ್ಗಳನ್ನು ಮೀರಿರಬಾರದು.

ಅರ್ಥ ಆಗಿಲ್ಲದವರಿಗೆ ಕೆಳಗೆ ಎರಡು ಉದಾಹರಣೆಯನ್ನು ನಮೂದಿಸಲಾಗಿದೆ.


 ಸಾಮಾನ್ಯ ಮಧ್ಯಮ ಕುಟುಂಬದ ಉದಾಹರಣೆ 


ತಿಂಗಳು 1 - 180 ಯೂನಿಟ್ 

ತಿಂಗಳು 2 - 185 ಯೂನಿಟ್

ತಿಂಗಳು 3 - 185 ಯೂನಿಟ್

ತಿಂಗಳು 4 - 180 ಯೂನಿಟ್

ತಿಂಗಳು 5 - 185 ಯೂನಿಟ್

ತಿಂಗಳು 6 - 175 ಯೂನಿಟ್

ತಿಂಗಳು 7 - 180 ಯೂನಿಟ್ 

ತಿಂಗಳು 8 - 185 ಯೂನಿಟ್

ತಿಂಗಳು 9 - 185 ಯೂನಿಟ್

ತಿಂಗಳು 10 - 178 ಯೂನಿಟ್

ತಿಂಗಳು 11 - 180 ಯೂನಿಟ್

ತಿಂಗಳು 12 - 175 ಯೂನಿಟ್


ಒಟ್ಟು 2173 ಯೂನಿಟ್ಗಳು.


ಸರಾಸರಿ ಅಂದರೆ 2173/12= 181 ಯೂನಿಟ್ಗಳು. 10% ಹೆಚ್ಚವರಿ ಅಂದರೆ 181*1.1= 191 ಯೂನಿಟ್ಗಳು.

ಹೀಗಿದ್ದಲ್ಲಿ ನೀವು 200 ಯೂನಿಟ್ ಉಚಿತ ವಿದ್ಯುತ್ ಬಳಸಲು ಅರ್ಹರು..

 ಬಡ ಕುಟುಂಬದ ಉದಾಹರಣೆ


ತಿಂಗಳು 1 - 70 ಯೂನಿಟ್ 

ತಿಂಗಳು 2 - 80 ಯೂನಿಟ್

ತಿಂಗಳು 3 - 60 ಯೂನಿಟ್

ತಿಂಗಳು 4 - 55 ಯೂನಿಟ್

ತಿಂಗಳು 5 - 65 ಯೂನಿಟ್

ತಿಂಗಳು 6 - 70 ಯೂನಿಟ್

ತಿಂಗಳು 7 - 85 ಯೂನಿಟ್ 

ತಿಂಗಳು 8 - 55 ಯೂನಿಟ್

ತಿಂಗಳು 9 - 70 ಯೂನಿಟ್

ತಿಂಗಳು 10 - 75 ಯೂನಿಟ್

ತಿಂಗಳು 11 - 80 ಯೂನಿಟ್

ತಿಂಗಳು 12 - 55 ಯೂನಿಟ್


ಒಟ್ಟು 820 ಯೂನಿಟ್ಗಳು.


ಸರಾಸರಿ ಅಂದರೆ 820/12= 68.3 ಯೂನಿಟ್ಗಳು. 10% ಹೆಚ್ಚವರಿ ಅಂದರೆ 68.3*1.1= 75 ಯೂನಿಟ್ಗಳು.


ಹೀಗಿದ್ದಲ್ಲಿ ನೀವು 75 ಯೂನಿಟ್ ಉಚಿತ ವಿದ್ಯುತ್ ಬಳಸಲು ಮಾತ್ರ ಅರ್ಹರು. ನೀವು 200 ಯೂನಿಟ್ ಬಳಸುವಂತಿಲ್ಲ. 75 ಯೂನಿಟ್ ಗಿಂತ ಜಾಸ್ತಿ ಬಳಸಿದ್ದಲ್ಲಿ ಬಿಲ್ ಕಟ್ಟತಕ್ಕದ್ದು.....

Previous Post Next Post

Ads

Ads

نموذج الاتصال

×