ಕೇವಲ 20 ರೂಪಾಯಿ ವಿದ್ಯುತ್ ಗೆ ಬರೋಬ್ಬರಿ 135 km ಮೈಲೇಜ್ ಕೊಡುವ ಬೈಕ್ - ನೀಡ್ಸ್ ಆಫ್ ಪಬ್ಲಿಕ್


ಎಲ್ಲರಿಗೂ ನಮಸ್ಕಾರ. ಇವತ್ತಿನ ಲೇಖನದಲ್ಲಿ ಹೊಸ ಮೋಟರ್ ಸೈಕಲ್ ಆದ ಇಕೋಡ್ರೈಫ್ಟ್, ಎಲೆಕ್ಟ್ರಿಕ್ ಮೋಟಾರ್ ಸೈಕಲ್ ಬಗ್ಗೆ ನಿಮಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡಲಾಗುತ್ತದೆ. ಈ ಬೈಕ್ ಎಷ್ಟು ಮೈಲೇಜ್ ಅನ್ನು ಕೊಡುತ್ತದೆ?, ಯಾವ ಬಣ್ಣಗಳಲ್ಲಿ ಲಭ್ಯವಿದೆ?, ಇದರ ದರ ಎಷ್ಟು?, ಎಷ್ಟು ಬ್ಯಾಟರಿಯನ್ನು ಹೊಂದಿದೆ?, ಇದರಲ್ಲಿ ಎಷ್ಟು ಮಾದರಿಯ ಬೈಕ್ ಗಳು ಹೊರಹೊಮ್ಮಿದೆ?, ಈ ಮೋಟಾರ್ ಬೈಕ್ ಬಗ್ಗೆ ನಿಮಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಸಿಕೊಡಲಾಗುತ್ತದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ



ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ. 

 ಪೆಟ್ರೋಲ್ ಮತ್ತು ಡೀಸೆಲ್‌ನಿಂದ ಚಾಲಿತವಾದ ಆಂತರಿಕ ದಹನಕಾರಿ ಎಂಜಿನ್ (ICE) ವಾಹನಗಳನ್ನು ರಸ್ತೆಗಳಿಂದ ತೆಗೆದುಹಾಕಲು ವಾಗ್ದಾನ ಮಾಡಿದ ಅನೇಕ ದೇಶಗಳಲ್ಲಿ ಭಾರತವೂ ಸೇರಿದೆ. ಈ ವಾಹನಗಳನ್ನು ಎಲೆಕ್ಟ್ರಿಕ್ ವಾಹನಗಳಿಂದ (EV) ಬದಲಾಯಿಸಲಾಗುತ್ತದೆ, ಇದು ICE ಆಯ್ಕೆಗಳಿಗಿಂತ ಹೆಚ್ಚಿನ ದಕ್ಷತೆ, ಶೂನ್ಯ-ಹೊರಸೂಸುವಿಕೆ ಮತ್ತು ಕಡಿಮೆ ನಿರ್ವಹಣೆಯನ್ನು ಹೊಂದಿರುತ್ತದೆ. ಈಗಾಗಲೇ ಹಲವಾರು ಎಲೆಕ್ಟ್ರಿಕ್ ವಾಹನಗಳು ಇವೆ, ಮತ್ತು ಭಾರತದಲ್ಲಿ ಪೆಟ್ರೋಲ್ ಬೆಲೆಗಳು ಗಗನಕ್ಕೇರಿರುವ ಕಾರಣ, ಅನೇಕರು ಸಂಪೂರ್ಣ ಎಲೆಕ್ಟ್ರಿಕ್‌ಗೆ ಹೋಗಲು ಬಯಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಮೋಟರ್ ಸೈಕಲ್ ಗಳ ಅಬ್ಬರ ಶುರುವಾಗಿದ್ದು, ದ್ವಿಚಕ್ರ ವಾಹನ ತಯಾರಕರು ಬೈಕ್ ತಯಾರಿಕೆಗೆ ಮುಂದಾಗಿದ್ದಾರೆ. ಅಂತಹ ಒಂದು ಎಲೆಕ್ಟ್ರಿಕ್ ಬೈಕ್ ಎಂದರೆ ಪ್ಯೂರ್ ಇವಿ ಇಕೋಡ್ರೈಫ್ಟ್ ಮೋಟರ್ ಸೈಕಲ್.


ಪ್ಯೂರ್ ಇವಿ ಇಕೋಡ್ರೈಫ್ಟ್ PURE EV EcoDryft :



ಎಲೆಕ್ಟ್ರಿಕ್ ಬೈಕ್ ವಿಭಾಗದಲ್ಲಿ ಮತ್ತೊಂದು ಹೊಸ ಆಕರ್ಷಕ ಬೈಕ್ ಎಂದರೆ ಅದು ಪ್ಯೂರ್ ಇವಿ ಇಕೋಡ್ರೈಫ್ಟ್,. ಇದು ಹೈದರಾಬಾದ್ ಮೂಲದ ಎಲೆಕ್ಟ್ರಿಕ್ ದ್ವಿಚಕ್ರ ವಾಹನವಾಗಿದೆ . ಕಂಪನಿಯು PURE EV EcoDryft ಅನ್ನು ಪರಿಚಯಿಸುವುದರ ಜೊತೆಗೆ, ಗ್ರಾಹಕರಿಗೆ ಬೈಕಿನ ಟೆಸ್ಟ್ ರೈಡಿನ ಅವಕಾಶವನ್ನು ಕೂಡ ನೀಡುತ್ತಿದೆ. ಕಂಪನಿಯು 2023 ರ ಜನವರಿಯಲ್ಲಿ ನಡೆಯಲಿರುವ ಆಟೋ ಎಕ್ಸ್‌ಪೋ ಸಮಯದಲ್ಲಿ ಈ ಬೈಕ್ ಅನ್ನು ಬಿಡುಗಡೆ ಮಾಡಬಹುದು ಎಂದು ಹೇಳಲಾಗುತ್ತಿದೆ. ಸದ್ಯ ಮಾರುಕಟ್ಟೆಯಲ್ಲಿರುವ ಪ್ಯೂರ್ ಎಟ್ರಿಸ್ಟ್ 350 ಎಲೆಕ್ಟ್ರಿಕ್ ಬೈಕ್ 1,54,999 (ಎಕ್ಸ್ ಶೋ ರೂಂ) ಬೆಲೆಯನ್ನು ಹೊಂದಿದೆ.



ಮೋಟಾರ್ ಮತ್ತು ಬ್ಯಾಟರಿಯ ವಿವರ:


PURE EV EcoDryft ಎಲೆಕ್ಟ್ರಿಕ್ ಮೋಟಾರ್‌ಸೈಕಲ್ 3.0 kWh ಸಾಮರ್ಥ್ಯದ ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕನ್ನು ಹೊಂದಿದೆ . ಈ ಬೈಕಿನ ಬ್ಯಾಟರಿ ಪ್ಯಾಕ್ AIS 156 ಪ್ರಮಾಣೀಕೃತವಾಗಿದೆ ಎಂದು ಕಂಪನಿಯು ಹೇಳಿಕೊಂಡಿದೆ. ಇದು 75 kmph ನ ಗರಿಷ್ಠ ವೇಗದಲ್ಲಿ ಚಲಿಸುತ್ತದೆ . ಬ್ಯಾಟರಿಯ ಸಂಪೂರ್ಣ ಮಾಹಿತಿಯನ್ನು ಇನ್ನೂ ಕೂಡ ಕಂಪನಿಯು ಬಹಿರಂಗಪಡಿಸಿಲ್ಲ.


ಪ್ಯೂರ್ ಇವಿ ಇಕೋಡ್ರೈಫ್ಟ್ ಬೈಕ್ ನ ಮೈಲೇಜ್ :


ಈ ಬೈಕಿನ ಬ್ಯಾಟರಿಯನ್ನು ಸಂಪೂರ್ಣವಾಗಿ ಒಂದು ಬಾರಿ ಚಾರ್ಜ್ ಮಾಡಿದರೆ 135 ಕಿಮೀ/ಚಾರ್ಜ್ ವರೆಗೆ ಹೋಗಬಹುದು.


ಪ್ಯೂರ್ ಇವಿ ಇಕೋಡ್ರೈಫ್ಟ್ ಬೈಕನ್ನು ಚಾರ್ಜ್ ಮಾಡಲು ಬೇಕಾದ ಸಮಯ :


EcoDryft ಬ್ಯಾಟರಿ ಸಂಪೂರ್ಣವಾಗಿ ಚಾರ್ಜ್ ಆಗಲು 6 ಗಂಟೆಗಳು ಅಂದರೆ – 0% – 100%, ಹಾಗೂ 3 ಗಂಟೆಗಳನ್ನು – 20% – 80% ತೆಗೆದುಕೊಳ್ಳುತ್ತದೆ.


ecoDryft ಬೈಕ್ ನೋಡಲು ಮೂಲ ಮೋಟಾರ್ಸೈಕಲ್ನಂತೆ ಕಾಣುತ್ತದೆ. ಇದು ಕೋನೀಯ ಹೆಡ್‌ಲ್ಯಾಂಪ್, ಐದು-ಸ್ಪೋಕ್ ಅಲಾಯ್ ಚಕ್ರಗಳು, ಸಿಂಗಲ್-ಪೀಸ್ ಸೀಟ್ ಇತ್ಯಾದಿಗಳನ್ನು ಹೊಂದಿದೆ. ಈ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ನಾಲ್ಕು ಬಣ್ಣ ರೂಪಾಂತರಗಳಲ್ಲಿ ಲಭ್ಯವಿರುತ್ತದೆ. ಅವುಗಳೆಂದರೆ ಕಪ್ಪು, ಬೂದು, ನೀಲಿ ಮತ್ತು ಕೆಂಪು. ಈ ಎಲೆಕ್ಟ್ರಿಕ್ ಬೈಕ್‌ ಮೂರು ಮೋಡ್‌ಗಳಲ್ಲಿ ಗ್ರಾಹಕರಿಗೆ ಲಭ್ಯವಿರುತ್ತವೆ. ಅವುಗಳೆದರೇ ಡ್ರೈವ್, ಕ್ರಾಸ್‌ಒವರ್ ಹಾಗೂ ಥ್ರಿಲ್.


ಪ್ಯೂರ್ ಇವಿ ಕಂಪನಿ ದೇಶದ ವಿವಿಧ ನಗರಗಳಲ್ಲಿ ತನ್ನ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳಲು ಕೆಲಸ ಮಾಡುತ್ತಿದೆ ಎಂದು ಕಂಪನಿಯ ಸಹ-ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರೋಹಿತ್ ವಡೇರಾ ಹೇಳಿಕೊಂಡಿದ್ದಾರೆ. ಇದಲ್ಲದೆ, ತನ್ನ ಉತ್ಪನ್ನಗಳನ್ನು ದಕ್ಷಿಣ ಏಷ್ಯಾದ ದೇಶಗಳಿಗೆ ರಫ್ತು ಮಾಡುತ್ತಿದೆ. ಜೊತೆಗೆ ದಕ್ಷಿಣ ಅಮೆರಿಕ ಮತ್ತು ಆಫ್ರಿಕನ್ ದೇಶಗಳಲ್ಲಿಯು ತನ್ನ ಕಾರ್ಯಾಚರಣೆಯನ್ನು ವಿಸ್ತರಿಸಲು ಯೋಜಿಸುತ್ತಿದೆ ಎಂದು ವರದಿಯಾಗಿದೆ. ಪ್ರಸ್ತುತ, ಪ್ಯೂರ್ ಇವಿಯ ಮೂರು ಮಾದರಿಗಳು ತಯಾರಿಸಿತ್ತು. ಅವುಗಳೆಂದರೆ, ETRYST 350, EPLUTO 7G ಮತ್ತು ETRANCE NEO. ಆದರೆ, ETRYST 350 ಬೈಕ್ ಅನ್ನು ಮಾತ್ರ ಕಂಪನಿ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಮಾರುಕಟ್ಟೆಯಲ್ಲಿರುವ ಪ್ಯೂರ್ ಎಟ್ರಿಸ್ಟ್ 350 ಎಲೆಕ್ಟ್ರಿಕ್ ಬೈಕ್ 1,54,999 (ಎಕ್ಸ್ ಶೋ ರೂಂ) ಬೆಲೆಯನ್ನು ಹೊಂದಿದೆ.


ಈ ಬೈಕ್ ಒಟ್ಟು ಮೂರು ಡ್ರೈವ್ ಮೋಡ್ ಗಳನ್ನು ಹೊಂದಿದೆ ಅವುಗಳೆಂದರೆ ಒಂದು ಡ್ರೈ ಮೂಡ್, ಎರಡನೆಯದಾಗಿ ಕ್ರಾಸ್ ಓವರ್ ಹಾಗೂ ಮೂರನೆಯದು ಟ್ರಿಲ್ ಮೋಡ್. ಡ್ರೈ ಮೂಡ್ ಗರಿಷ್ಠವಾಗಿ 60 kmph ನಲ್ಲಿ ಚಲಿಸುತ್ತದೆ. ಕ್ರಾಸ್ ಓವರ್ ಮೂಡಿನಲ್ಲಿ ಗರಿಷ್ಠ ವೇಗವನ್ನು 75 kmph ಕ್ಕೆ ಸೀಮಿತಗೊಳಿಸಲಾಗಿದೆ. ಮೂರನೆಯದಾದ ಥ್ರಿಲ್ ಮೋಡ್ನಲ್ಲಿ 85 kmph ನ ಗರಿಷ್ಠ ವೇಗವನ್ನು ಅಳವಡಿಸಲಾಗಿದೆ.


ಪ್ಯೂರ್ ಇವಿ ಇಕೋಡ್ರೈಫ್ಟ್ ಬೈಕ್ ಬಯಸಿದರೆ, ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ


ದಿನಗಳು ಕಳೆದಂತೆ ಹೊಸ ವಾಹನಗಳನ್ನು ಖರೀದಿ ಮಾಡಲು ನಮಗೆ ಸಾಕಷ್ಟು ಆಯ್ಕೆಗಳಿವೆ. ಅಷ್ಟೇ ಅಲ್ಲದೆ ನಮ್ಮ ಬೇಡಿಕೆಗಳು ಕೂಡ ಜಾಸ್ತಿಯಾಗುತ್ತಿವೆ. ಇಂತಹ ಸಂದರ್ಭದಲ್ಲಿ ಪ್ಯೂರ್ ಇವಿ ಇಕೋಡ್ರೈಫ್ಟ್ ಬೈಕ್ ಒಂದು ಉತ್ತಮ ಆಯ್ಕೆ ಎಂದು ಹೇಳಬಹುದು. ಇದೀಗ ಪ್ಯೂರ್ ಇವಿ ಇಕೋಡ್ರೈಫ್ಟ್ ಬೈಕ್ ಖರೀದಿಗೆ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಅದರಿಂದ ಮುಂದಿನ ಹೊಸ ವರ್ಷದಲ್ಲಿ ನೀವೇನಾದರೂ ಎಲೆಕ್ಟ್ರಿಕ್ ಬೈಕನ್ನು ಖರೀದಿ ಮಾಡುವ ಯೋಜನೆಯಲ್ಲಿದ್ದರೆ ಇದು ಒಂದು ಉತ್ತಮ ಆಯ್ಕೆ ಎಂದು ಹೇಳಬಹುದಾಗಿದೆ. ಆದ್ದರಿಂದ ಈ ಲೇಖನವನ್ನು ಈ ಕೊಡಲೇ ನಿಮ್ಮ ಎಲ್ಲಾ ಸ್ನೇಹಿತ ಮಿತ್ರರಿಗೆ ಹಾಗೂ ಹೊಸ ದ್ವಿಚಕ್ರ ವಾಹನವನ್ನು ಖರೀದಿ ಮಾಡಬೇಕೆಂದಿರುವ ಎಲ್ಲಾ ಸ್ನೇಹಿತ ಬಂಧುಗಳಿಗೆ ಈ ಕೂಡಲೇ ಈ ಲೇಖನವನ್ನು ಶೇರ್ ಮಾಡಿ, ಧನ್ಯವಾದಗಳು.


ದಯವಿಟ್ಟು ಗಮನಿಸಿ: 4K Editing Guru ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.


*********** ಲೇಖನ ಮುಕ್ತಾಯ ***********


1 Comments

Previous Post Next Post

Ads

Ads

نموذج الاتصال

×