Electric Car: ಏನ್​ ಗುರೂ ಹಿಂಗೈತೆ! ಈ ಎಲೆಕ್ಟ್ರಿಕ್​ ಕಾರಿನ ಬೆಲೆ ನೋಡಿದ್ರೆ ತಲೆ ತಿರುಗೋದು ಪಕ್ಕಾ!



ಚೀನಾದ ಎಲೆಕ್ಟ್ರಿಕ್ ವಾಹನ ತಯಾರಿಕಾ ಕಂಪನಿ Zeekr ಇತ್ತೀಚೆಗೆ ಅತ್ಯಂತ ಐಷಾರಾಮಿ MPV ಕಾರನ್ನು ಬಿಡುಗಡೆ ಮಾಡಿದೆ. ಇದು ಕಂಪನಿಯ ಎರಡನೇ ಇತ್ತೀಚಿನ ಐಷಾರಾಮಿ ಎಲೆಕ್ಟ್ರಿಕ್ ವಾಹನವಾಗಿದೆ.


ದಿನದಿಂದ ದಿನಕ್ಕೆ ಎಲೆಕ್ಟ್ರಿಕ್​ ವಾಹನಗಳ (Electric Vehicles) ಬೇಡಿಕೆ ಹೆಚ್ಚುತ್ತಲೇ ಇದೆ. ದ್ವಿಚಕ್ರ ವಾಹನ (Two Wheeler) ವಾದರೂ ಸರಿ, ಕಾರ್​ ಕೂಡ ಹೆಚ್ಚಾಗಿ ಸೇಲ್​ ಆಗುತ್ತಿದೆ. ಹೀಗಾಗಿ ಎಲ್ಲ ದೊಡ್ಡ ದೊಡ್ಡ ಕಂಪನಿಗಳು ಎಲೆಕ್ಟ್ರಿಕ್​ ವಾಹನಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಈ ವಿಭಾಗದಲ್ಲಿ ಹೊಸ ಮಾದರಿಗಳನ್ನು ತರಲು ಹಲವು ಕಂಪನಿಗಳು ತಯಾರಾಗುತ್ತಿವೆ. ನಮ್ಮ ದೇಶದಲ್ಲಿ ಟಾಟಾ ಮೋಟಾರ್ಸ್​ (TATA Motors) ನಿಂದ ಹೆಚ್ಚು ಎಲೆಕ್ಟ್ರಿಕ್​ ವಾಹನಗಳು ಹೆಚ್ಚಾಗಿ ಸೇಲ್​ ಆಗುತ್ತಿದೆ. ಈ ಕಂಪನಿ ಈಗಾಗಲೇ 50 ಸಾವಿರ ಎಲೆಕ್ಟ್ರಿಕ್​ ಕಾರುಗಳನ್ನು ತಯಾರಿಸಿದೆ. ಇದೀಗ ಮತ್ತೊಂದು ಅತ್ಯಾಕರ್ಷಕ ಎಲೆಕ್ಟ್ರಿಕ್​ ಐಷಾರಾಮಿ ಕಾರಿನ ಬಗ್ಗೆ ತಿಳಿದುಕೊಳ್ಳೋಣ.



ಮಾರುಕಟ್ಟೆಗೆ ಬಂದಿದೆ ಐಷಾರಾಮಿ ಕಾರು ಬಿಡುಗಡೆ!


ಚೀನಾದ ಎಲೆಕ್ಟ್ರಿಕ್ ವಾಹನ ತಯಾರಿಕಾ ಕಂಪನಿ Zeekr ಇತ್ತೀಚೆಗೆ ಅತ್ಯಂತ ಐಷಾರಾಮಿ MPV ಕಾರನ್ನು ಬಿಡುಗಡೆ ಮಾಡಿದೆ. ಇದು ಕಂಪನಿಯ ಎರಡನೇ ಇತ್ತೀಚಿನ ಐಷಾರಾಮಿ ಎಲೆಕ್ಟ್ರಿಕ್ ವಾಹನವಾಗಿದೆ. ಇದರ ಹೆಸರು ZKR 009. ಈ ದೊಡ್ಡ ಐಷಾರಾಮಿ MPV 009 ಮಿನಿ ವ್ಯಾನ್ 5209 mm ಉದ್ದ ಮತ್ತು 2024 mm ಅಗಲವಿದೆ. ವೀಲ್ ಬೇಸ್ 3205 ಮಿಮೀ. ಈ ಕಾರು ನೋಡುವುದಕ್ಕೆ ಸಖತ್​ ರಗಡ್​ ಆಗಿ ಕಾಣಿಸುತ್ತೆ.

ಫುಲ್​ ಸ್ಪೇಷ್, ನೋಡೋಕು ಸ್ಟೈಲಿಶ್!

ಈ ಕಾರು ಎರಡನೇ ಮತ್ತು ಮೂರನೇ ಸಾಲಿನಲ್ಲಿ 2 + 2 ಕ್ಯಾಪ್ಟನ್ ಸೀಟ್‌ಗಳನ್ನು ಹೊಂದಿದೆ. ಈ ಕಾರಿನಲ್ಲಿ ಒಟ್ಟು ಆರು ಮಂದಿ ಪ್ರಯಾಣಿಸಬಹುದು. ಈ ಕಾರಿನ ತೂಕ 2830 ಕೆ.ಜಿ. ಆದರೆ, ಈ ಕಾರಿನ ವೇಗ ಕಡಿಮೆಯಾಗಲಿದೆ ಎನ್ನಲಾಗಿದೆ. ಈ ಕಾರು 0 ರಿಂದ 100 ಕಿಮೀ ವೇಗವನ್ನು 4.5 ಸೆಕೆಂಡುಗಳಲ್ಲಿ ಪಡೆಯುತ್ತದೆ. ಈ ಕಾರು ಡ್ಯುಯಲ್ ಮೋಟಾರ್ ಹೊಂದಿದೆ. ಇದರ ಟಾರ್ಕ್ 686 Nm ಆಗಿದೆ. ಪವರ್ 536 bhp ಆಗಿದೆ.

ಈ ಕಾರು ಎರಡು ಬ್ಯಾಟರಿಗಳನ್ನು ಹೊಂದಿದೆ. ಈ ಕಾರಿನ ವ್ಯಾಪ್ತಿಯು 702 ಕಿಲೋಮೀಟರ್. ಇದು 116kWh ಬ್ಯಾಟರಿ ಹೊಂದಿರುವ ಕಾರಿಗೆ ಅನ್ವಯಿಸುತ್ತದೆ. ಅದೇ 140 kWh ಬ್ಯಾಟರಿ ಹೊಂದಿರುವ ಕಾರು ಒಮ್ಮೆ ಚಾರ್ಜ್ ಮಾಡಿದರೆ 822 ಕಿ.ಮೀ.ವರೆಗೂ ಸಂಚರಿಸುತ್ತೆ.

ಈ ಕಾರಲ್ಲಿದೆ ಟಾಪ್​ ಟೆಕ್ನಾಲಜಿ!

ಕಾರಿನ ಒಳಭಾಗದಲ್ಲಿ 10.4 ಇಂಚಿನ ಇನ್ಫೋಟೈನ್‌ಮೆಂಟ್ ಸ್ಕ್ರೀನ್ ಇದೆ. ಇದು 15.6 ಇಂಚಿನ ಟಚ್ ಸ್ಕ್ರೀನ್ ಅನ್ನು ಸಹ ಹೊಂದಿದೆ. ಇದರ ಮೂಲಕ ಕಾನ್ಫರೆನ್ಸ್ ಕರೆಗಳನ್ನು ಮಾಡಬಹುದು. AI ಇಂಟೆಲಿಜೆಂಟ್ ಅಸಿಸ್ಟೆಂಟ್ ಕೂಡ ಇರುತ್ತಾರೆ. 20 ವ್ಯಾಟ್ ಯಮಹಾ ಆಡಿಯೊ ಸಿಸ್ಟಮ್ ಅನ್ನು ಸ್ಥಾಪಿಸಲಾಗಿದೆ. ಕಾರಿನಲ್ಲಿ ಏಳು 8 MP HD ಕ್ಯಾಮೆರಾಗಳು ಮತ್ತು ನಾಲ್ಕು 2 MP 360 ಡಿಗ್ರಿ ಕ್ಯಾಮೆರಾಗಳಿವೆ. ಅಂದರೆ ಈ ಕಾರಿನ ಶ್ರೇಣಿಯನ್ನು ನೀವು ಅರ್ಥಮಾಡಿಕೊಳ್ಳಬಹುದು. ಇದರ ಬೆಲೆ 68,340 ಡಾಲರ್, ಭಾರತೀಯ ಕರೆನ್ಸಿಯಲ್ಲಿ 55 ಕೋಟಿ 87 ಲಕ್ಷದ 91 ಸಾವಿರದ 271 ರೂಪಾಯಿ.

Previous Post Next Post

Ads

Ads

نموذج الاتصال

×