ಸ್ಮಾರ್ಟ್‌ಫೋನ್ ಇಲ್ಲದೆ ಕೆಲಸ ಕಾರ್ಯ ಯಾವುದು ನಡಿಯಲ್ಲ. ಮಕ್ಕಳಿಂದ ಹಿಡಿದು ಹಿರಿಯರ ವರೆಗೂ ಸ್ಮಾರ್ಟ್‌ಫೋನ್ ಉಪಯೋಗಿಸದವರು ಯಾರು ಇಲ್ಲ. ಹೊಸ ಹೊಸ ಆಯ್ಕೆಗಳೊಂದಿಗೆ ಮಾರುಕಟ್ಟೆಗೆ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸುತ್ತಿದೆ. ಹಾಗಿದ್ದರೆ ನಾವು ಈ ಸ್ಮಾರ್ಟ್‌ಫೋನ್ ಯಾವುದು ಬೆಸ್ಟ್ ಅನ್ನೋದು ಕೂಡ ನಮಗೆ ಗೊತ್ತಿದ್ದರೆ ಉತ್ತಮ. ಇದು ಆಧುನಿಕ ಜಗತ್ತು. ಇಲ್ಲಿ ದಿನದಿಂದ ದಿನಕ್ಕೆ ಹೊಸ ಹೊಸ ತಂತ್ರಜ್ಞಾನಗಳು ಅಪ್ಡೇಟ್ ಆಗುತ್ತಲೇ ಇರುತ್ತದೆ. ಅದ್ರಲ್ಲೂ ಮೊಬೈಲ್ ಮಾರುಕಟ್ಟೆಯಲ್ಲಿ ಹೊಸ ಸೀರಿಸ್ ನಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುತ್ತಲೇ ಇರುತ್ತಾರೆ. ಈಗ ಒಪ್ಪೊ ತಮ್ಮ ಗ್ರಾಹಕರಿಗಾಗಿ ಹೊಸ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಇದು ಬಹಳಷ್ಟು ಫೀಚರ್ಸ್ ಅನ್ನು ಹೊಂದಿದೆ.
ಹೌದು ಒಪ್ಪೊ ಕಂಪನಿ ಸ್ಮಾರ್ಟ್‌ಫೋನ್‌ಗಳ ಮಾರಾಟದಲ್ಲಿ ಬಹಳಷ್ಟು ಮಹತ್ತರ ಸ್ಥಾನದಲ್ಲಿದೆ. ಒಪ್ಪೊ ಎ ಸೀರಿಸ್‌ನಲ್ಲಿ ತಮ್ಮ ಎ98 (Oppo A98) ಎಂಬ ಸ್ಮಾರ್ಟ್‌ಫೋನ್ ಅನ್ನು ಪರಿಚಯಿಸುವ ಯೋಜನೆಯಲ್ಲಿದೆ.
ಒಪ್ಪೋ ತನ್ನ A ಸರಣಿಯಲ್ಲಿ ಒಪ್ಪೋ ಎ98 ಎಂಬ ಹೊಸ ಸ್ಮಾರ್ಟ್‌ಫೋನ್ ಅನ್ನು ಅನಾವರಣ ಮಾಡಲು ಸಿದ್ಧತೆ ನಡೆಸುತ್ತಿದೆ. ಇದರಲ್ಲಿ ಆಕರ್ಷಕವಾದ 108 ಮೆಗಾಫಿಕ್ಸೆಲ್ ಕ್ಯಾಮೆರಾ ಇರಲಿದೆ ಎಂಬ ಮಾಹಿತಿ ಹೊರಬಿದ್ದಿದೆ.
ಈ ಸ್ಮಾರ್ಟ್‌ಫೋನಿನ ಫೀಚರ್ಸ್ ಅನ್ನು ವರದಿ ಮಾಡಿರುವ ಜೊತೆಗೆ ಇದರ ಮುಖ್ಯ ಬೆಲೆಯನ್ನು ಕೂಡ ಬಹಿರಂಗ ಪಡಿಸಿದ್ದಾರೆ. ಈ ಪ್ರಕಾರ ಇಈ ಹೊಸ ಎ98 ಒಪ್ಪೊ ಮೊಬೈಲ್‌ನ ಆರಂಭಿಕ ಬೆಲೆಯು 22,869 ರೂಪಾಯಿಗೆ ಲಭ್ಯವಾಗಲಿದೆ ಎಂದು ವರದಿಯಲ್ಲಿ ತಿಳಿಸಿದ್ದಾರೆ.
ಒಪ್ಪೋ ಎ98 ಸ್ಮಾರ್ಟ್‌ಫೋನ್ ವಿಶೇಷತೆಗಳು :
•ಈ ಫೋನಿನ ಬ್ಯಾಟರಿ ಸಾಮರ್ಥ್ಯ 5000mah ಆಗಿದ್ದು ಇದು 64 ವ್ಯಾಟ್ಸ್‌ನಷ್ಟು ವೇಗದ ಚಾರ್ಜಿಂಗ್ ಸಾಮರ್ಥ್ಯವನ್ನು ಹೊಂದಿದೆ.
• ಇದರಲ್ಲಿ ಆಕರ್ಷಕವಾದ 108 ಮೆಗಾಫಿಕ್ಸೆಲ್ ಕ್ಯಾಮೆರಾ ಇರಲಿದೆ ಎಂಬ ಮಾಹಿತಿ ಹೊರಬಿದ್ದಿದೆ.
• ಆಕ್ಟಾ ಕೋರ್ ಕ್ವಾಲ್ಕಾಮ್ ಸ್ನ್ಯಾಪ್ಡ್ರ್ಯಾಗನ್ 778G ಪ್ರೊಸೆಸರ್ ನಲ್ಲಿ ಕಾರ್ಯನಿರ್ವಹಿಲಿದೆ,
•ಅಡ್ರಿನೊ 642L ಗ್ರಾಫಿಕ್ ಪ್ರೊಸೆಸರ್ ಯೂನಿಟ್ ಒಳಗೊಂಡಿದೆ.
•ಜೊತೆಗೆ ಈ ಫೋನ್ ಆಂಡ್ರಾಯ್ಡ್ v12 ಆಪರೇಟಿಂಗ್ ಸಿಸ್ಟಮ್ ನಲ್ಲಿ ರನ್ ಆಗಲಿದೆ ಎಂಬ ವರದಿ ಕೂಡ ಪ್ರಚಾರದಲ್ಲಿದೆ.
• ಇನ್ನು ಮುಂಭಾಗದ ಸೆಲ್ಫಿ ಕ್ಯಾಮೆರಾ 16 ಮೆಗಾಫಿಕ್ಸೆಲ್ ಸನ್ನು ಹೊಂದಿದೆ.
ಇದರ ಜೊತೆಗೆ ಎ ಸಿರೀಸ್ನೊಂದಿಗೆ Oppo A17K ಸ್ಮಾರ್ಟ್‌ಫೋನ್ ನ್ನು ಸಹ ಪರಿಚಯಿಸಲಾಗಿದೆ. ಇದು ರಿಯರ್ ಕ್ಯಾಮರಾ ಸೆಟಪ್ ಹೊಂದಿದ್ದು ಇದರಲ್ಲಿ ಮುಖ್ಯ ಕ್ಯಾಮರಾ 8 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯವನ್ನು ಹೊಂದಿದೆ.
5 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯವನ್ನು ವಿಡಿಯೋ ಕರೆ ಮತ್ತು ಸೆಲ್ಫಿ ಕ್ಯಾಮರಾವನ್ನು ಹೊಂದಿದೆ. ಅದೇ ರೀತಿ ಕ್ಯಾಮರಾ ಫೀಚರ್ಸ್ ನೈಟ್ ಮೋಡ್, ಟೈಮ್‌ಲಾಪ್ಸ್, ಎಕ್ಸ್‌ಪರ್ಟ್, ಪನೋರಮ ಮತ್ತು ಗೂಗಲ್ ಲೆನ್ಸ್ ಇದೆ.
ಹೆಚ್ಚು ಬಾಳಿಕೆ ಬರುವ 5000mah ಬ್ಯಾಟರಿಯನ್ನು ಹೊಂದಿದೆ. ಜೊತೆಗೆ ಸೂಪರ್ ಪವರ್ ಮೋಡ್ ಮತ್ತು ಸೂಪರ್ ನೈಟ್‌ಟೈಮ್ ಸ್ಟ್ಯಾಂಡ್‌ಬೈ ಅನ್ನು ಒಳಕೊಂಡಿದೆ. ಡ್ಯುಯೆಲ್ ಸಿಮ್, Wifi 5, ಬ್ಲೂಟೂತ್ v5.3 ಹಾಗೂ ಮೈಕ್ರೊ ಯುಎಸ್‌ಬಿ ಪೋರ್ಟ್ ಸಿ ಯಿಂದ ಕೂಡಿದೆ.
ಉತ್ತಮ ಫೀಚರ್ ಒಳಗೊಂಡ ಈ ಸ್ಮಾರ್ಟ್ ಫೋನನ್ನು ನಿಮ್ಮದಾಗಿಸಿಕೊಳ್ಳಬಹುದಾಗಿದೆ.