ಕಾನ್ಸ್ಟೆಬಲ್ ಹುದ್ದೆಗಳಿಗೆ ಕಾಲ್ಫಾರ್ಮ್.. PUC ಪಾಸ್ ಆದವರಿಗೆ ಗುಡ್ನ್ಯೂಸ್

ಇಲಾಖೆಯಲ್ಲಿ ಹೇಗೆ ಆಯ್ಕೆ ಮಾಡಲಾಗುತ್ತದೆ, ಇಲ್ಲಿದೆ ಮಾಹಿತಿ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಅರ್ಜಿಗಳನ್ನ ಅಪ್ಲೇ ಮಾಡಿ ಈ ವಯಸ್ಸಿನ ಒಳಗೆ ಇರುವವರು ಇದಕ್ಕೆ ಅರ್ಜಿ ಸಲ್ಲಿಸಬಹುದು



ದೀ ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯೂರಿಟಿ ಫೋರ್ಸ್ (ಸಿಐಎಸ್ಎಫ್)ನಲ್ಲಿ ಖಾಲಿ ಇರುವಂತ ಕಾನ್ಸ್ಟೆಬಲ್ ಹುದ್ದೆಗಳಿಗಾಗಿ ಅರ್ಜಿಗಳನ್ನು ಆಹ್ವಾನ ಮಾಡಲಾಗಿದೆ. ಅರ್ಹ ಹಾಗೂ ಆಸಕ್ತಿ ಇರುವ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಅಂತಿಮ ದಿನಾಂಕದೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.

ಸಿಐಎಸ್ಎಫ್ನಲ್ಲಿ ಖಾಲಿ ಇರುವಂತ ಕಾನ್ಸ್ಟೆಬಲ್ ಹುದ್ದೆಗಳಿಗೆ ಮಾನದಂಡಗಳು ಏನೇನು ಇವೆ ಎಂದು ನೋಡುವುದಾದರೆ, ಅಭ್ಯರ್ಥಿಗಳು ಸೆಕೆಂಡ್ ಪಿಯುಸಿ (12th) ಯನ್ನು ಪಾಸಾಗಿರಬೇಕು. ಅಥವಾ ಇದಕ್ಕೆ ಸಮವಾದ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾನಿಲಯದಿಂದ ವಿಜ್ಞಾನ ವಿಷಯದಲ್ಲಿ ಪಡೆದಿರಬೇಕು.

ಆಯ್ಕೆ ಹೇಗೆ ಮಾಡಲಾಗುತ್ತದೆ..?

  • ದೈಹಿಕ ಸಹಿಷ್ಣುತೆ ಪರೀಕ್ಷೆ (PET)
  • ದೈಹಿಕ ಪ್ರಮಾಣಿತ ಪರೀಕ್ಷೆ (PST)
  • ದಾಖಲೆ ಪರಿಶೀಲನೆ (DV)

ಈ ಮೂರು ಪರೀಕ್ಷೆಗಳನ್ನು ಪಾಸ್ ಮಾಡಿದಂತ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಇರುತ್ತದೆ. ಇದು 100 ಅಂಕಗಳಿಗೆ (ಬಹು ಆಯ್ಕೆ ಪ್ರಶ್ನೆಗಳು) ಕಂಪ್ಯೂಟರ್ ಬೇಸಡ್ ಟೆಸ್ಟ್ ಅಥವಾ ಓಎಮ್ಆರ್ ಮಾದರಿಯಲ್ಲಿ ಇರುತ್ತದೆ. ಪರೀಕ್ಷೆ ಇಂಗ್ಲಿಷ್ ಮತ್ತು ಹಿಂದಿಯಲ್ಲಿರುತ್ತದೆ. ನೆಗೆಟಿವ್ ಇರುವುದಿಲ್ಲ ಎಂದು ತಿಳಿಸಲಾಗಿದೆ.

ವಯಸ್ಸಿನ ಮಿತಿ: 

18ರಿಂದ 23 ವರ್ಷದೊಳಗಿನ ಅಭ್ಯರ್ಥಿಗಳು ಆಗಿರಬೇಕು. ಜನ್ಮ ದಿನಾಂಕ 01-10-2001 ರಿಂದ 30-09-2006 ಒಳಗೆ ಇರಬೇಕಾಗಿರುತ್ತದೆ.

ಅರ್ಜಿ ಶುಲ್ಕ ಎಷ್ಟು ಇರುತ್ತದೆ..?

ಅರ್ಜಿ ಶುಲ್ಕ 100 ರೂಪಾಯಿ ಇರುತ್ತದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಮಾಜಿ ಸೈನಿಕರು ಶುಲ್ಕದಿಂದ ವಿನಾಯಿತಿ ಪಡೆದಿರುತ್ತಾರೆ. ಅಭ್ಯರ್ಥಿಗಳಿಗೆ ಇನ್ನಷ್ಟು ಮಾಹಿತಿ ಬೇಕಾದರೆ ಇಲಾಖೆಯ ವೆಬ್ಸೈಟ್ಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು.

ಅಪ್ಲೇ ಮಾಡಲು ದಿನಾಂಕ ಯಾವುದು..?

ಸಿಐಎಸ್ಎಫ್ನಲ್ಲಿ ಒಟ್ಟು 1,130 ಹುದ್ದೆಗಳು ಇದ್ದು ಅರ್ಜಿಗಳು ಇದೇ ಆಗಸ್ಟ್ 31ರಿಂದ ಪ್ರಾರಂಭವಾಗುತ್ತವೆ. ಅಪ್ಲೇ ಮಾಡಲು ಕೊನೆ ದಿನಾಂಕ ಸೆಪ್ಟೆಂಬರ್ 30 ಆಗಿದೆ.

ಸಿಐಎಸ್ಎಫ್ ವೆಬ್ಸೈಟ್ ಲಿಂಕ್-

 https://cisfrectt.cisf.gov.in/


Previous Post Next Post

Ads

Ads

نموذج الاتصال

×