ಸಿವಿಲ್ ಪೊಲೀಸ್ ಹಾಗೂ ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿಯ ಸಂಬಂಧ ಪಿಇಟಿ ಹಾಗೂ ಪಿಎಸ್‌ಟಿ ಪರೀಕ್ಷೆಗಳ ಕುರಿತು ಲೇಟೆಸ್ಟ್ ಮಾಹಿತಿಯನ್ನು ಪೊಲೀಸ್ ಇಲಾಖೆ ಪ್ರಕಟಣೆ ಮೂಲಕ ತಿಳಿಸಿದೆ.
ಕರ್ನಾಟಕ ಪೊಲೀಸ್ ಇಲಾಖೆಯು 1137 ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿ ಹಾಗೂ 3064 ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ಭರ್ತಿಗೆ ಸಂಬಂಧ ಇದೀಗ ಲೇಟೆಸ್ಟ್ ಮಾಹಿತಿಯೊಂದನ್ನು ಬಿಡುಗಡೆ ಮಾಡಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಲಿಖಿತ ಪರೀಕ್ಷೆ ಬರೆದ ಅಭ್ಯರ್ಥಿಗಳು ತಪ್ಪದೇ ಈ ಕೆಳಗಿನ ಮಾಹಿತಿಗಳನ್ನು ಓದಿಕೊಳ್ಳಿ.
1137 ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ (ಎನ್‌ಕೆಕೆ) ಹುದ್ದೆಗಳ ನೇಮಕಾತಿಗೆ ದಿನಾಂಕ 25-01-2024 ರಂದು ಲಿಖಿತ ಪರೀಕ್ಷೆ ನಡೆಸಲಾಗಿತ್ತು. 3064 ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ (ಸಿಎಆರ್ / ಡಿಎಆರ್) (ಎನ್‌ಕೆಕೆ) ಹುದ್ದೆಗಳ ಭರ್ತಿಗೆ ದಿನಾಂಕ 28-01-2024 ರಂದು ಲಿಖಿತ ಪರೀಕ್ಷೆ ನಡೆಸಲಾಗಿತ್ತು. ಈ ಪರೀಕ್ಷೆಗಳಲ್ಲಿ ಹಾಜರಾದ ಎಲ್ಲಾ ಅಭ್ಯರ್ಥಿಗಳ ಅಂಕಪಟ್ಟಿಯನ್ನು ಮತ್ತು ಅನರ್ಹಗೊಂಡ ಅಭ್ಯರ್ಥಿಗಳ ಪಟ್ಟಿಯನ್ನು ದಿನಾಂಕ 10-06-2024 ರಂದು ಪೊಲೀಸ್ ಇಲಾಖೆ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿತ್ತು. ಸದರಿ ಅಂಕಪಟ್ಟಿಗೆ ಹಾಗೂ ಅನರ್ಹಗೊಂಡ ಅಭ್ಯರ್ಥಿಗಳ ಪಟ್ಟಿಗೆ ಆಕ್ಷೇಪಣೆಗಳನ್ನು 15-06-2024 ರ ವರೆಗೆ ಸ್ವೀಕರಿಸಿ ಪರಿಶೀಲಿಸಲಾಗಿದೆ.
ಇದೀಗ ಪರಿಷ್ಕೃತ ಅಂಕಪಟ್ಟಿ ಮತ್ತು ಪರಿಷ್ಕೃತ 1:5 ಅನುಪಾತದ ಆಯ್ಕೆಪಟ್ಟಿಯನ್ನು ಪೊಲೀಸ್ ಇಲಾಖೆಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಹಾಗೂ ಶೀಘ್ರದಲ್ಲಿಯೇ ಸದರಿ (ಎಪಿಸಿ-ಎನ್‌ಕೆಕೆ-3064 ) ಹುದ್ದೆಗಳ ನೇಮಕಾತಿಗಾಗಿ ಅಧಿಸೂಚಿಸಲ್ಪಟ್ಟ ಘಟಕಗಳಿಂದ ದೈಹಿಕ ಪರೀಕ್ಷೆಗಳನ್ನು ನಡೆಸಲಾಗುವುದು ಎಂದು ಪೊಲೀಸ್ ಇಲಾಖೆ ಪ್ರಕಟಣೆ ಮೂಲಕ ತಿಳಿಸಿದಿದೆ.
ಪೊಲೀಸ್ ಇಲಾಖೆ ಮುಂದೆ ನಡೆಸುವ ದೈಹಿಕ ಸಹಿಷ್ಣುತಾ ಪರೀಕ್ಷೆ ಹಾಗೂ ದೈಹಿಕ ಸಾಮರ್ಥ್ಯ ಪರೀಕ್ಷೆಗಳಿಗೆ ಹಾಜರಾಗಲು ಅಭ್ಯರ್ಥಿಗಳು ತಮ್ಮ ಲಿಖಿತ ಪರೀಕ್ಷೆ ಬರೆದ ಪ್ರವೇಶ ಪತ್ರ, ಅರ್ಜಿಯ ಹಾರ್ಡ್‌ಕಾಪಿಯನ್ನು ತೆಗೆದುಕೊಂಡು ಹಾಜರಾಗುವುದು ಕಡ್ಡಾಯ. ಜತೆಗೆ ಪಿಇಟಿ, ಪಿಎಸ್‌ಟಿಗೆ ನೀಡುವ ಅಡ್ಮಿಟ್ ಕಾರ್ಡ್ ಅನ್ನು ಸಹ ತೆಗೆದುಕೊಂಡು ಹೋಗುವುದು ಕಡ್ಡಾಯ.
ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ಈ ಕೆಳಗಿನಂತೆ ದೈಹಿಕ ಅರ್ಹತಾ ಪರೀಕ್ಷೆಗಳನ್ನು ನಡೆಸಲಾಗುವುದು.
ದೇಹದಾರ್ಢ್ಯತೆ ಪರೀಕ್ಷೆ ಹೇಗಿರುತ್ತದೆ?
- ಎಲ್ಲಾ ಸಾಮಾನ್ಯ ಪುರುಷ ಮತ್ತು ತೃತೀಯ ಲಿಂಗ ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಕನಿಷ್ಠ ಎತ್ತರ - 168 ಸೆಂ.ಮೀ. ಕನಿಷ್ಠ ಎದೆ ಸುತ್ತಳತೆ 86 ಸೆಂ.ಮೀ (ಪೂರ್ತಿ ವಿಸ್ತರಿಸಿದಾಗ ಕನಿಷ್ಠ ವಿಸ್ತರಣೆ 5 ಸೆಂ.ಮೀ)
- ಮಹಿಳಾ ಮತ್ತು ತೃತೀಯ ಲಿಂಗ ಮಹಿಳಾ ಅಭ್ಯರ್ಥಿಗಳಿಗೆ ಕನಿಷ್ಠ 157 ಸೆಂ.ಮೀ ಎತ್ತರ, ಕನಿಷ್ಠ ತೂಕ 45 ಕೆ.ಜಿ ನಿಗದಿಪಡಿಸಲಾಗಿತ್ತದೆ.
-ಕರ್ನಾಟಕ ಅರಣ್ಯ ಪ್ರದೇಶಗಳಲ್ಲಿ ವಾಸಿಸುತ್ತಿರುವ ಬುಡಕಟ್ಟು ಪುರುಷ ಅಭ್ಯರ್ಥಿಗಳಿಗೆ ಕನಿಷ್ಠ ಎತ್ತರ - 155 ಸೆಂ.ಮೀ. ಎದೆ ಸುತ್ತಳತೆ 5 ಸೆಂ.ಮೀ.ಗಳ ಕನಿಷ್ಠ ವಿಸ್ತರಿಸುವುದರೊಂದಿಗೆ ಸಂಪೂರ್ಣವಾಗಿ ಹಿಗ್ಗಿಸಿದಾಗ 75 ಸೆಂ.ಮೀ.ಗಳಿಗಿಂತ ಕಡಿಮೆ ಇಲ್ಲದಂತೆ.
- ಅರಣ್ಯ ಪ್ರದೇಶಗಳ ಬುಡಕಟ್ಟು ಮಹಿಳಾ ಅಭ್ಯರ್ಥಿಗಳಿಗೆ ಕನಿಷ್ಠ ಎತ್ತರ 150 ಸೆಂ.ಮೀಟರರ್ ನಿಗದಿಯಾಗಿದೆ.
ದೇಹದಾರ್ಢ್ಯತೆ ಪರೀಕ್ಷೆಯಲ್ಲಿ ಅರ್ಹತೆ ಪಡೆದವರು ಕೆಳಗಿನ ಸಹಿಷ್ಣುತಾ ಪರೀಕ್ಷೆಗೆ ಹಾಜರಾಗಬೇಕಿರುತ್ತದೆ.
ಸಹಿಷ್ಣುತೆ ಪರೀಕ್ಷೆ ಹೇಗಿರುತ್ತದೆ?
ಎಲ್ಲಾ ಸಾಮಾನ್ಯ ಪುರುಷ ಮತ್ತು ತೃತೀಯ ಲಿಂಗ ಅಭ್ಯರ್ಥಿಗಳಿಗೆ ಸಹಿಷ್ಣುತೆ ಪರೀಕ್ಷೆ ಈ ಕೆಳಗಿನಂತೆ ಇರುತ್ತದೆ.
1600 ಮೀಟರ್ ಓಟ : 6 ನಿಮಿಷ 30 ಸೆಕೆಂಡ್.
ಎತ್ತರ ಜಿಗಿತ : 1.20 ಮೀಟರ್‌ಗಿಂತ ಕಡಿಮೆ ಇಲ್ಲದಂತೆ.
ಉದ್ದ ಜಿಗಿತ : 3.80 ಮೀಟರ್‌ಗಿಂತ ಕಡಿಮೆ ಇಲ್ಲದಂತೆ.
ಗುಂಡು ಎಸೆತ (7.26 KG) : 5.60 ಮೀಟರ್‌ಗಿಂತ ಕಡಿಮೆ ಇಲ್ಲದಂತೆ.
ಮಹಿಳಾ ಮತ್ತು ತೃತೀಯ ಲಿಂಗ್ ಮಹಿಳಾ, ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಸಹಿಷ್ಣುತೆ ಪರೀಕ್ಷೆ ಮಾದರಿ
400 ಮೀಟರ್ ಓಟ : 2 ನಿಮಿಷಕ್ಕಿಂತ ಮೀರದಂತೆ.
ಎತ್ತರ ಜಿಗಿತ : 0.90 ಮೀಟರ್‌ಗಿಂತ ಕಡಿಮೆ ಇಲ್ಲದಂತೆ.
ಉದ್ದ ಜಿಗಿತ : 2.50 ಮೀಟರ್‌ಗಿಂತ ಕಡಿಮೆ ಇಲ್ಲದಂತೆ.
ಗುಂಡು ಎಸೆತ (4 KG) : 3.75 ಮೀಟರ್‌ಗಿಂತ ಕಡಿಮೆ ಇಲ್ಲದಂತೆ.
ಈ ಮೇಲಿನ ಎಲ್ಲ ಪರೀಕ್ಷೆಗೆ 3 ಅವಕಾಶಗಳು ಇರುತ್ತವೆ.