Borwell Subsidy Scheme: ಬೋರ್ವೇಲ್ ಕೊರೆಸಲು ಸಹಾಯಧನ!ಅರ್ಜಿ ಸಲ್ಲಿಕೆ ಆರಂಭ..!

Borwell Subsidy Scheme: ನಮಸ್ಕಾರ ಬಂಧುಗಳೇ, ಇಂದಿನ ವರದಿಗೆ ಸ್ವಾಗತ, ಇಂದಿನ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವುದೇನೆಂದರೆ, ಕರ್ನಾಟಕ ಆರ್ಯ ಸಮುದಾಯದ ಅಭಿವೃದ್ಧಿ ನಿಗಮದಿಂದ ರಾಜ್ಯದಲ್ಲಿ ಬೋರ್ವೇಲ್ ಮತ್ತು ಕೊಳವೆ ಬಾವಿ ಕೊರೆಸಲು ಸಹಾಯಧನ ನೀಡಲಾಗುತ್ತಿದೆ.



ಬೋರ್ವೇಲ್ ಕೊಳವೆ ಬಾವಿ ಕೊರೆಸುವ ಸಲುವಾಗಿ ಕರ್ನಾಟಕ ಆರ್ಯ ವೈಷ್ಯ ಸಮುದಾಯ ಅಭಿವೃದ್ಧಿ ನಿಗಮದಿಂದ ಸಹಾಯಧನ ನೀಡಲು ಅಧಿಕೃತ ಸ್ಪಷ್ಟನೆ ನೀಡಲಾಗಿದೆ.ಈ ಯೋಜನೆಯಲ್ಲಿ ಯಾರು ಸೌಲಭ್ಯ ಪಡೆಯಬಹುದು? ಮತ್ತು ಅರ್ಜಿ ಎಲ್ಲಿ ಸಲ್ಲಿಸಬೇಕು? ಹೇಗೆ ಸಲ್ಲಿಸಬೇಕು? ಸಂಪೂರ್ಣ ಮಾಹಿತಿ ತಿಳಿದುಕೊಳ್ಳೋಣ ಬನ್ನಿ.

ಕರ್ನಾಟಕ ಆರ್ಯ ವೈಷ್ಯ ಸಮುದಾಯದ ಅಭಿವೃದ್ಧಿ ಯೋಜನೆಯ ಅಡಿಯಲ್ಲಿ 3 ಯೋಜನೆಗಳಿಗೆ ಅನುಮೋಧನೆ ನೀಡಲಾಗಿದೆ.

1. ಸ್ವಯಂ ಉದ್ಯೋಗ ಮಾಡಲು ನೇರ ಸಾಲ

2. ಆರ್ಯ ವೈಷ್ಯ ಆಹಾರ ವಾಹಿನಿ ಯೋಜನೆ

3. ವಾಸವಿ ಜಲಾಶಕ್ತಿ

ಈ ಯೋಜನೆಗಳಿಗೆ ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು.

Borwell Subsidy Scheme ಈ ಯೋಜನೆಯ ಉದ್ದೇಶ :

ಕೃಷಿ ಭೂಮಿಗೆ ನೀರಾವರಿ ಇಲ್ಲದಿರುವ ರೈತರು ಈ ಯೋಜನೆಯಲ್ಲಿ ಕೊಳವೆ ಬಾವಿ ಕೊರೆಸಬಹುದು. ಪಂಪ್ ಸೆಟ್ ಅಳವಡಿಕೆ, ವಿದ್ಯುದ್ದಿಕರಣ ಮಾಡಿಸಲು ಕಡಿಮೆ ಬಡ್ಡಿ ದರದಲ್ಲಿ ಗರಿಷ್ಠ 2 ಲಕ್ಷದ ವರೆಗೆ ಸಾಲ ಸೌಲಭ್ಯ ಸಿಗುತ್ತದೆ. ವಿದ್ಯುದ್ದಿಕರಣಕ್ಕೆ 50,000 ಸಹಾಯಧನವನ್ನು ನೀಡಲಾಗುತ್ತದೆ.

ಅರ್ಜಿ ಸಲ್ಲಿಸಲು ದಿನಾಂಕ ಆರಂಭ ಯಾವಾಗ?

ಒಂದು ಯೋಜನೆಗೆ ಜುಲೈ 12 ರಿಂದ ಆಗಸ್ಟ್ 31ರವರೆಗೆ ಅರ್ಜಿ ಸಲ್ಲಿಕೆ ಮಾಡಲು ಅವಕಾಶವನ್ನು ನೀಡಲಾಗುತ್ತದೆ. ಅರ್ಹ ರೈತರು ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಿ ಇದರ ಸದುಪಯೋಗವನ್ನು ಪಡೆದುಕೊಳ್ಳಿ ಎಂಬ ನನ್ನ ಆಶಯ.

Borwell Subsidy Scheme ಅರ್ಜಿ ಸಲ್ಲಿಸುವ ವಿಧಾನ:

ಅರ್ಹ ರೈತರು ಅಗತ್ಯ ದಾಖಲೆಗಳೊಂದಿಗೆ ಈ ಕೆಳಗೆ ನೀಡಿರುವ ಲಿಂಕ್ ನ ಮೂಲಕ ಜುಲೈ 12ರ ನಂತರ ಅರ್ಜಿಯನ್ನು ಸಲ್ಲಿಸಬಹುದು.

https://aryavysya.karnataka.gov.in/KACDC_Data/Main/VJ

Borwell Subsidy Scheme ಅರ್ಹತಾ ಶರತ್ತುಗಳು:

• ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಸಾಮಾನ್ಯ ವರ್ಗದ ಆರ್ಯವೈಶ್ಯ ಸಮುದಾಯಕ್ಕೆ ಸೇರಿರುವ ದಾರ ಆಗಿರಬೇಕು. ಮತ್ತು ನಮೂನೆ ಜಿ ನಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಹೊಂದಿರಬೇಕು.

• ಮತ್ತು ಅವರ ಕುಟುಂಬದ ವಾರ್ಷಿಕ ಆದಾಯವು ವರಮಾನ ಗ್ರಾಮಾಂತರ ಹಾಗೂ ನಗರ ಪ್ರದೇಶದವರಿಗೆ6,00,000/- ಮಿತಿಯ ಒಳಗೆ ಇರಬೇಕು.

• ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳ ವಯಸ್ಸು 21 ವರ್ಷದಿಂದ ಇವತ್ತು ವರ್ಷದ ಒಳಗೆ ಇರಬೇಕು.

• ಅರ್ಜಿದಾರರು ಸಣ್ಣ ರೈತರ ಕುಟುಂಬಕ್ಕೆ ಸೇರಿದವರಾಗಿರಬೇಕು ಮತ್ತು ಕನಿಷ್ಠ 2 ರಿಂದ 5 ಎಕರೆ ಜಮೀನು ಹೊಂದಿರಬೇಕು.

• ಅರ್ಜಿದಾರರ ಕಾಯಂ ವಿಳಾಸವು ಕರ್ನಾಟಕ ರಾಜ್ಯದವರಾಗಿರಬೇಕು.

• ಅರ್ಜಿದಾರರು ಈ ಹಿಂದೆ ನೀರಾವರಿ ಸೌಲಭ್ಯವನ್ನು ಯಾವುದೇ ರೀತಿಯಾಗಿ ಹೊಂದಿರಬಾರದು.

Previous Post Next Post

Ads

نموذج الاتصال

×