Mobile: ಕೈ ಗೆಟಕುವ ದರದಲ್ಲಿ ಲಾಂಚ್‌ ಆಗಿದೆ ವಿವೋ ಫೋನ್: ಇದರ ಫೀಚರ್ಸ್ ನೋಡಿದರೆ ತೊಗೊಳುದು ಗ್ಯಾರಂಟಿ

ಮಾರುಕಟ್ಟೆಯಲ್ಲಿ ಹಲವು ಬಗೆಯ ಫೋನ್‌ಗಳು ಬರುತ್ತವೆ. ಒಂದಕ್ಕಿಂತ ಒಂದು ಆಕರ್ಷಕ ರೂಪದಲ್ಲಿ ಗ್ರಾಹಕರನ್ನು ಆಕರ್ಷಿಸುತ್ತವೆ. ಈ ಫೋನ್‌ಗಳು ದಿನವೂ ಹೊಸ ತಂತ್ರಜ್ಞಾನದೊಂದಿಗೆ ಗ್ರಾಹಕರನ್ನು ಸೆಳೆಯುತ್ತಿವೆ. ಈ ಪಟ್ಟಿಯಲ್ಲಿ ಚೀನಾ ಕಂಪನಿಗಳಿಗೆ ಅಗ್ರ ಸ್ಥಾನ. ದಿನೇ ದಿನೇ ಚೀನಾ ಕಂಪನಿಗಳು ಹೊಸ ಹೊಸ ತಂತ್ರಜ್ಞಾನವನ್ನು ಮೈಗೂಡಿಸಿಕೊಂಡು ಬರಲಿದೆ.



Vivo Y200 Pro 5G ಭಾರತೀಯ ಮಾರುಕಟ್ಟೆಯಲ್ಲಿ ಸದ್ದು ಮಾಡಲಿದೆ. ಈ ವಿವೋ ಫೋನ್‌ ಲುಕ್‌ ಸಖತ್‌ ಆಗಿದೆ. ವಿವೋ ಸ್ಮಾರ್ಟ್‌ಫೋನ್‌ ಅಮ್ಲೋಡ್‌ ಡಿಸ್‌ಪ್ಲೇ ಹೊಂದಿದೆ. ಈ ಫೋನ್‌ ಅಸಲಿಗೆ Vivo Y200, Vivo Y200e ಗೆ ಹೋಲಿಸಿದರೆ ಈ ಫೋನ್‌ ಹಲವು ಪ್ರೀಮಿಯಂ ಆಗಿದೆ. Vivo ತನ್ನ ಸಾಮಾಜಿಕ ಮಾಧ್ಯಮ ಹ್ಯಾಂಡಲ್ ಮೂಲಕ ಈ ಫೋನ್‌ನ ಬೆಲೆಯನ್ನು ಬಿಡುಗಡೆ ಮಾಡಿದೆ. ಇದು ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲೂ ಲಭ್ಯವಿದೆ.

ಸ್ಟೋರೇಜ್‌ ಕ್ಯಾಪಿಸಿಟಿ ಎಷ್ಟು?

ವಿವೋ ಕಂಪನಿಯ ನೂತನ ಮೊಬೈಲ್‌ 8ಜಿಬಿ ರ್ಯಾಮ್‌ + 128 ಜಿಬಿ ಇಂಟರ್ನಲ್‌ ಸ್ಟೋರೇಜ್ ಹೊಂದಿದೆ. ಫೋನ್‌ನ ಬೆಲೆ ರೂ 24,999 ಮತ್ತು ಇ-ಕಾಮರ್ಸ್ ವೆಬ್‌ಸೈಟ್ ಫ್ಲಿಪ್‌ಕಾರ್ಟ್ ಮತ್ತು ವಿವೋದ ಅಧಿಕೃತ ಇ-ಸ್ಟೋರ್‌ಗಳಲ್ಲಿ ಲಭ್ಯ. ಆಫ್‌ಲೈನ್ ಸ್ಟೋರ್‌ಗಳ ಮೂಲಕ ಮಾರಾಟಕ್ಕೆ ಲಭ್ಯವಾಗಲಿದೆ. ಆನ್‌ಲೈನ್‌ ಖರೀದಿ ಮಾಡಿದಾಗ ಈ ಪೋನ್‌ ಮೇಲೆ ಆಕರ್ಷಕ ಡಿಸ್ಕಂಟ್ ಲಭ್ಯವಿದೆ. ಎಸ್‌ಬಿಐ, ಐಡಿಎಫ್‌ಸಿ ಫಸ್ಟ್ ಬ್ಯಾಂಕ್, ಫೆಡರಲ್ ಬ್ಯಾಂಕ್ ಕಾರ್ಡ್‌ಗಳಿಂದ ಖರೀದಿಸಿದಾಗ 2,500 ರೂಪಾಯಿಗಳ ತ್ವರಿತ ಕ್ಯಾಶ್‌ಬ್ಯಾಕ್ ನೀಡಲಾಗುತ್ತದೆ.

Vivo Y200 Pro ನ ವೈಶಿಷ್ಟ್ಯಗಳು

ಈ ಬಜೆಟ್‌ ಫ್ರೆಂಡ್ಲಿ ಕ್ವಾಲ್ಕೊಮ್ ಸ್ನ್ಯಾಪ್‌ ಡ್ರ್ಯಾಗನ್‌ 695 ಪ್ರೊಸೆಸರ್‌ ಹೊಂದಿದೆ. ಈ Vivo ಸ್ಮಾರ್ಟ್ಫೋನ್ 6.78 ಇಂಚಿನ 3D ಕರ್ವ್ಡ್ ಅಮ್ಲೋಡ್‌ ಡಿಸ್‌ಪ್ಲೇಯೊಂದಿಗೆ ಬರುತ್ತದೆ. ಫೋನ್‌ನಲ್ಲಿ ಫುಲ್‌ ಎಚ್‌ಡಿ ರೆಸಲ್ಯೂಶನ್ ಅನ್ನು ಬೆಂಬಲಿಸಲಾಗುತ್ತದೆ. ಆಂಡ್ರಾಯಡ್‌ 14 ಆಧಾರಿತ ಫಂಟೆಕ್‌ OS 14 ನಲ್ಲಿ ಫೋನ್ ಕಾರ್ಯನಿರ್ವಹಿಸುತ್ತದೆ.

ಕ್ಯಾಮೆರಾ ಹೇಗಿದೆ?

ಈ ಸ್ಮಾರ್ಟ್‌ಫೋನ್‌ನ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಲಭ್ಯವಿದೆ. ಫೋನ್ 64MP ಮುಖ್ಯ OIS ಕ್ಯಾಮೆರಾವನ್ನು ಹೊಂದಿರುತ್ತದೆ. ಇದಲ್ಲದೇ 2ಎಂಪಿ ಡೆಪ್ತ್ ಸೆನ್ಸಾರ್ ಅನ್ನು ನೀಡಲಾಗಿದೆ. ಇದು ಸೆಲ್ಫಿ ಮತ್ತು ವೀಡಿಯೊ ಕರೆಗಾಗಿ 16MP ಕ್ಯಾಮೆರಾವನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್‌ 5000mAh ಬ್ಯಾಟರಿ ಹೊಂದಿದ್ದು, 44 ವ್ಯಾಟ್‌ ವೈಯರ್ಡ್‌ ಫಾಸ್ಟ್‌ ಚಾರ್ಜಿಂಗ್‌ ಬೆಂಬಲವನ್ನು ಹೊಂದಿದೆ. ಈ ಮೊಬೈಲ್‌ ಯುಎಸ್‌ಬಿ ಟೈಪ್‌ ಸಿ ಚಾರ್ಜಿಂಗ್‌ ಬೆಂಬಲವನ್ನು ಹೊಂದಿದೆ.


Previous Post Next Post

Ads

Ads

نموذج الاتصال

×