ಜುಲೈ 06 ರಿಂದ ನೀಟ್‌ ಕೌನ್ಸಿಲಿಂಗ್

ಜುಲೈ 06 ರಿಂದ ನೀಟ್‌ ಕೌನ್ಸಿಲಿಂಗ್

ಯುಜಿ ನೀಟ್‌ ಸುತ್ತ ಈಗ ಅಕ್ರಮದ ಹುತ್ತವೇ ಬೆಳೆದು ನಿಂತಿದೆ. ಕೆಲವರು ನೆಟ್‌ ರದ್ದು ಮಾಡಿದಂತೆ ನೀಟ್‌ ಸಹ ರದ್ದು ಮಾಡಿ ಎಂದು ಕೇಳಿದ್ದಾರೆ, ಇನ್ನು ಕೆಲವರು ಕೌನ್ಸಿಲಿಂಗ್ ಮುಂದೂಡುವಂತೆ ಕೇಳಿದ್ದಾರೆ. ಆದ್ರೆ ಕೌನ್ಸಿಲಿಂಗ್ ರದ್ದಿಗೆ ನೋ ಎಂದಿದೆ ಸುಪ್ರೀಂ ಕೋರ್ಟ್‌.



ನೀಟ್ ಪರೀಕ್ಷೆಯಲ್ಲಿ ಅಕ್ರಮದ ಆರೋಪ ಮೂಡಿದ್ದು, ಈಗ ದೇಶದಾದ್ಯಂತ ಸಂಚಲ ಮೂಡಿಸಿದೆ ಈ ವಿಷಯ. ಇನ್ನು ನೀಟ್‌ ನಲ್ಲಿ ಗ್ರೇಸ್‌ ಮಾರ್ಕ್ಸ್‌ ಪಡೆದಿದ್ದ 1563 ಅಭ್ಯರ್ಥಿಗಳು ಜೂನ್ 23 ರಂದು ನೀಟ್‌ ಮರು ಪರೀಕ್ಷೆಗೆ ಹಾಜರಾಗಬೇಕಿದೆ. ಈ ಮಧ್ಯೆಯೇ ಜುಲೈ 6 ರಿಂದ ನಡೆಯಬೇಕಿರುವ ಕೌನ್ಸಿಲಿಂಗ್ ಪ್ರಕ್ರಿಯೆ ನಡೆಸುವುದಾಗಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದೆ. ಇದೇ ವೇಳೆ ಕೌನ್ಸಿಲಿಂಗ್ ಗೆ ತಡೆ ನೀಡಲು ಸುಪ್ರೀಂಕೋರ್ಟ್‌ ನಿರಾಕರಿಸಿದೆ. ಈ ಹಿನ್ನೆಲೆಯಲ್ಲಿ ಜುಲೈ 2ನೇ ವಾರದಿಂದ ಸಿಇಟಿ ಕೌನ್ಸಿಲಿಂಗ್ ಆರಂಭವಾಗುವ ಸಾಧ್ಯತೆಗಳಿವೆ.

ಸುಪ್ರೀಕೋರ್ಟ್‌ ನಿಂದ ಕೇಂದ್ರ ಸರ್ಕಾರ ಮತ್ತು ಎನ್‌ಟಿಎ'ಗೆ ನೋಟಿಸ್.

ನೀಟ್‌-ಯುಜಿ ಪರೀಕ್ಷೆ ಅಕ್ರಮ ಸಂಬಂಧ ಸುಪ್ರೀಂಕೋರ್ಟ್‌ ಕೇಂದ್ರ ಸರ್ಕಾರ ಮತ್ತು ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರಕ್ಕೆ ಗುರುವಾರ ನೋಟಿಸ್ ಜಾರಿಗೊಳಿಸಿದೆ. ಇನ್ನು ನೀಟ್ ವಿವಾದ ಸಂಬಂಧ ಬಿಹಾರ ಸರ್ಕಾರವು ಮೂವರು ಅಧಿಕಾರಿಗಳನ್ನು ಅಮಾನತುಗೊಳಿಸಿದೆ.

ನೀಟ್‌- ಯುಜಿ 2024 ರದ್ದು, ಅಕ್ರಮದ ಕುರಿತು ನ್ಯಾಯಾಲಯದ ನಿಗಾದಲ್ಲಿ ತನಿಖೆ ಸೇರಿದಂತೆ ಅದಕ್ಕೆ ಸಂಬಂಧಿಸಿ ಸಲ್ಲಿಕೆ ಆಗಿರುವ ಅರ್ಜಿಗಳನ್ನು ಪರಿಗಣಿಸಿರುವ ಸರ್ವೋಚ್ಚ ನ್ಯಾಯಾಲಯವು ಈ ಸಂಬಂಧ ಪ್ರತಿಕ್ರಿಯೆ ನೀಡುವಂತೆ ಎನ್‌ಟಿಎ ಮತ್ತು ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ. ಹಾಗೂ ವಿವಿಧ ಹೈಕೋರ್ಟ್‌ಗಳಲ್ಲಿ ಇದೇ ವಿಷಯವಾಗಿ ಸಲ್ಲಿಕೆ ಆಗಿರುವ ಅರ್ಜಿಗಳ ಮುಂದಿನ ಪ್ರಕ್ರಿಯೆಗಳಿಗೆ ಸುಪ್ರೀಂಕೋರ್ಟ್‌ ತಡೆ ನೀಡಿದೆ. ಆದರೆ ಕೌನ್ಸಿಲಿಂಗ್ ಪ್ರಕ್ರಿಯೆಗೆ ತಡೆ ನೀಡುವುದಿಲ್ಲ ಎಂಬುದನ್ನು ಸುಪ್ರೀಂ ಸ್ಪಷ್ಟಪಡಿಸಿದೆ. ಅಖಿಲ ಭಾರತ ವೈದ್ಯಕೀಯ ಪ್ರವೇಶ ಪರೀಕ್ಷೆ ನಡೆಸುವಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ದೇಶಾದ್ಯಂತ ಅಕ್ರೋಶ ವ್ಯಕ್ತವಾಗುತ್ತಿರುವ ನಡುವೆ ಗುರುವಾರ ಇಷ್ಟೆಲ್ಲ ಬೆಳವಣಿಗೆಗಳು ನಡೆದಿದ್ದು, ಪ್ರಕರಣ ಗಂಭೀರ ಸ್ವರೂಪವನ್ನು ಪಡೆದುಕೊಂಡಿದೆ. ಹಲವು ಕಡೆಗಳಲ್ಲಿ ಇನ್ನೂ ಪ್ರತಿಭಟನೆ, ನೀಟ್‌ ರದ್ದು ಕುರಿತು ವಿಚಾರ ಬುಗಿಲೇಳುತ್ತಿದೆ.

ಕೌನ್ಸಿಲಿಂಗ್‌ಗೆ ತಡೆ ಇಲ್ಲ

ನೀಟ್ ಕೌನ್ಸಿಲಿಂಗ್ ರದ್ದು ಕುರಿತು ಪ್ರತಿಕ್ರಿಯಿಸಿದ ನ್ಯಾಯಪೀಠ, 'ಇವೆಲ್ಲದರ ಬಗ್ಗೆ ಮೊದಲ ದಿನದಿಂದಲೇ ವಾದ ನಡೆಯುತ್ತಿದ್ದು, ಕೆಲವು ಅರ್ಜಿದಾರರು ಕೌನ್ಸಿಲಿಂಗ್‌ಗೆ ತಡೆ ನೀಡಲು ಕೋರಿದ್ದರು, ನಾವು ಅದನ್ನು ನಿರಾಕರಿಸಿದ್ದೇವೆ' ಎಂದಿತು. 'ಅಂತಿಮವಾಗಿ ನೀವೆಲ್ಲರೂ ಯಶಸ್ವಿಯಾದರೆ ಎಲ್ಲವೂ ಹೋಗುತ್ತದೆ, ಪರೀಕ್ಷೆಯೂ ಹೋಗುತ್ತದೆ, ಕೌನ್ಸಿಲಿಂಗ್ ಕೂಡ ಹೋಗುತ್ತದೆ' ಎಂದೂ ಪೀಠ ತಿಳಿಸಿತು. ಅರ್ಜಿದಾರರದಲ್ಲಿ ಒಬ್ಬರು ಜುಲೈ 8 ರ ವರೆಗೆ ಕೌನ್ಸಿಲಿಂಗ್ ಮುಂದೂಡುವಂತೆ ಕೋರಿದ್ದಕ್ಕೆ ಪೀಠವು ಎನ್‌ಟಿಎ ವಕೀಲರನ್ನು ಕೇಳಿತು. ಜುಲೈ 6ರಂದೇ ಕೌನ್ಸಿಲಿಂಗ್ ಆರಂಭವಾಗಿ ಕೆಲವು ದಿನಗಳ ಕಾಲ ನಡೆಯಲಿದೆ ಎಂದಿದ್ದಾರೆ.




Post a Comment

Previous Post Next Post

Advertisement

Advertisement

×