ಹಲೋ ಸ್ನೇಹಿತರೇ, ಕಷ್ಟದಲ್ಲಿರುವವರಿಗೆ ಸ್ವಂತ ಮನೆ ಮಾಡಿಕೊಳ್ಳಬೇಕು ಎಂದು ಕನಸು ಇರುತ್ತದೆ. ಆದರೆ ಅವರು ಆರ್ಥಿಕವಾಗಿ ಸಬಲರಾಗಿರುವುದಿಲ್ಲ. ಬ್ಯಾಂಕ್ ಇಂದ ಲೋನ್ ಪಡೆದು, ಬಡ್ಡಿ ಕಟ್ಟುವಷ್ಟು ಸೌಕರ್ಯ ಕೂಡ ಇರುವುದಿಲ್ಲ. ಅಂತವರಿಗೆ ಸ್ವಂತ ಮನೆ ಮಾಡಿಕೊಳ್ಳುವುದಕ್ಕೆ ಸರ್ಕಾರವೇ ಸಹಾಯ ಮಾಡುತ್ತದೆ. ಇದೀಗ ರಾಜ್ಯ ಸರ್ಕಾರವು ಜನರಿಗೆ ಸ್ವಂತ ಮನೆ ಮಾಡಿಕೊಳ್ಳುವುದಕ್ಕೆ ಒಂದು ಹೊಸ ಯೋಜನೆಯನ್ನು ಜಾರಿಗೆ ತಂದಿದೆ. ಆ ಯೋಜನೆಯ ಬಗ್ಗೆ ಇಂದು ತಿಳಿಯೋಣ.
ಕಾಂಗ್ರೆಸ್ ಸರ್ಕಾರವು ನಮ್ಮ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಇದೀಗ ಬಡತನದಲ್ಲಿ ಇರುವವರಿಗೆ ಸ್ವಂತ ಮನೆ ಮಾಡಿಕೊಳ್ಳುವುದಕ್ಕೆ ರಾಜೀವ್ ಗಾಂಧಿ ವಸತಿ ಯೋಜನೆಯನ್ನು ಜಾರಿಗೆ ತಂದಿದೆ.
ಈ ಯೋಜನೆಯ ಮೂಲಕ ಜನರಿಗೆ ಉಚಿತವಾಗಿ ಮನೆ ಮಾಡಿಕೊಳ್ಳಲು ಸಹಾಯ ಮಾಡಲಾಗುತ್ತದೆ. ಈ ಯೋಜನೆಯ ಸೌಲಭ್ಯವನ್ನು ರಾಜ್ಯದಲ್ಲಿ ಬಹಳಷ್ಟು ಜನರು ಪಡೆದುಕೊಳ್ಳಬಹುದು. ಹಾಗಿದ್ದಲ್ಲಿ ಈ ಯೋಜನೆಗೆ ಅಪ್ಲೈ ಮಾಡುವ ಬಗ್ಗೆ ಪೂರ್ತಿ ಡೀಟೇಲ್ಸ್ ತಿಳಿಯೋಣ ಬನ್ನಿ.
ರಾಜೀವ್ ಗಾಂಧಿ ವಸತಿ ಯೋಜನೆ:
- ಈ ಯೋಜನೆಯ ಮೂಲಕ 7.5 ಲಕ್ಷ ರೂಪಾಯಿಗಳು ಮನೆ ಕಟ್ಟುವುದಕ್ಕೆ ಬೇಕಾಗುವ ಮೊತ್ತ ಆಗಿದೆ.
- ಇದರ ಪೈಕಿ 3.5 ಲಕ್ಷ ರೂಪಾಯಿಗಳನ್ನು ಮನೆಯ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರ ನೀಡುತ್ತದೆ.
- ಇನ್ನು 3 ಲಕ್ಷ ರೂಪಾಯಿಗಳನ್ನು ಮನೆಯ ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರ ನೀಡಲಿದೆ.
- ಇನ್ನು 1 ಲಕ್ಷ ರೂಪಾಯಿಗಳನ್ನು ಫಲಾನುಭವಿಗಳು ಖರ್ಚು ಮಾಡಬೇಕಾಗುತ್ತದೆ..
- ಈ ಯೋಜನೆಯ ಅಡಿಯಲ್ಲಿ 52,189 ಮನೆಗಳ ನಿರ್ಮಾಣ ಆಗಲಿದೆ.
ಅರ್ಜಿ ಸಲ್ಲಿಕೆಗೆ ಬೇಕಿರುವ ದಾಖಲೆಗಳು:
ರಾಜೀವ್ ಗಾಂಧಿ ಯೋಜನೆಗೆ ಅರ್ಜಿ ಸಲ್ಲಿಸುವವರ ಬಳಿ ಈ ಎಲ್ಲಾ ದಾಖಲೆಗಳು ಇರಬೇಕು:
- ಆಧಾರ್ ಕಾರ್ಡ್
- ರೇಷನ್ ಕಾರ್ಡ್
- ಬರ್ತ್ ಸರ್ಟಿಫಿಕೇಟ್
- ಬ್ಯಾಂಕ್ ಪಾಸ್ ಬುಕ್
- ಇನ್ನಿತರ ದಾಖಲೆಗಳು
ಅರ್ಜಿ ಸಲ್ಲಿಸುವ ಪ್ರಕ್ರಿಯೆ:
- ರಾಜೀವ್ ಗಾಂಧಿ ವಸತಿ ಯೋಜನೆಯ ಮೂಲಕ ಮನೆ ಪಡೆಯಲು ಅರ್ಜಿ ಸಲ್ಲಿಸುವವರು ಮೊದಲಿಗೆ https://ashraya.karnataka.gov.in/nannamane/index.aspx ಈ ಲಿಂಕ್ ಗೆ ಭೇಟಿ ನೀಡಬೇಕು.
- ಇಲ್ಲಿ ನಿಮ್ಮ ಹೋಬಳಿ, ತಾಲ್ಲೂಕು ಈ ಎಲ್ಲಾ ಮಾಹಿತಿಗಳು, RD ನಂಬರ್ ಹಾಗೂ ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ನೀಡಿ, ಸರಿಯಾಗಿ ಎಲ್ಲವನ್ನು ಫಿಲ್ ಮಾಡಿ ಅಪ್ಲೈ ಮಾಡಿ.