ಆತ್ಮೀಯ ರೈತ ಬಾಂಧವರೇ ತಮಗೆಲ್ಲ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ, ನೀವು ಕೇಂದ್ರ ಸರ್ಕಾರ ಅಥವಾ ರಾಜ್ಯ ಸರಕಾರದ ಯಾವುದೇ ಯೋಜನೆಯ ಲಾಭ ಪಡೆಯಬೇಕೆಂದರೆ ನಿಮ್ಮ ಹೆಸರಿಗೆ FID ನಂಬರ್ ಅಂದರೆ ಫಾರ್ಮರ್ಸ್ ಐಡಿ ಇರುವುದು ಕಡ್ಡಾಯವಾಗಿದೆ. ಒಂದು ವೇಳೆ ನಿಮ್ಮ ಹೆಸರಿಗೆ FID ನಂಬರ್ ಇರದಿದ್ದರೆ ನೀವು ಸರಕಾರದ ಹಲವು ಯೋಜನೆಗಳಿಂದ ವಂಚಿತರಾಗಬೇಕಾಗುತ್ತದೆ.
ಹೌದು ರೈತ ಬಾಂಧವರೇ,ಕೇಂದ್ರ ಸರ್ಕಾರದ ಪಿಎಂ ಕಿಸಾನ್ ಯೋಜನೆಯಿಂದ ಹಿಡಿದು ರಾಜ್ಯ ಸರ್ಕಾರದ ಬೆಳೆ ವಿಮೆ, ಬೆಳೆ ಪರಿಹಾರ ಹಣ ಹೀಗೆ ಸರ್ಕಾರದ ಯಾವುದೇ ಯೋಜನೆಯ ಲಾಭ ಪಡೆಯಲು ನಿಮ್ಮ ಬಳಿ FID ನಂಬರ್ ಅವಶ್ಯಕವಾಗಿ ಇರಬೇಕು. ಅಲ್ಲದೆ ಬಿತ್ತನೆ ಬೀಜದಿಂದ ಹಿಡಿದು, ಇನ್ನಿತರ ಕೃಷಿ ಚಟುವಟಿಕೆಗಳಿಗೆ ಬೇಕಾಗುವ ಯಾವುದೇ ಉಪಕರಣಗಳ ಮೇಲೆ ಸಬ್ಸಿಡಿ ಪಡೆಯಲು ಕೂಡ ನಿಮ್ಮದೇ ಆದ ಒಂದು FID ನಂಬರ್ ಇರಲೇಬೇಕು.
ಹಾಗಾದರೆ ನಿಮ್ಮ ಮೊಬೈಲ್ ನಲ್ಲಿ ಮನೆಯಲ್ಲಿಯೇ ಕುಳಿತು ನಿಮ್ಮ ಹೆಸರಿಗೆ FID ನಂಬರ್ ಇದೆಯಾ ಇಲ್ಲವಾ ಎಂಬುದನ್ನು ಇವತ್ತಿನ ಈ ಅಂಕಣದಲ್ಲಿ ತಿಳಿಯೋಣ. ಒಂದು ವೇಳೆ ನಿಮ್ಮ ಹೆಸರಿಗೆ FID ನಂಬರ್ ಇರದಿದ್ದರೆ ಹೇಗೆ ಮಾಡಿಸಬೇಕು ಮತ್ತು ಯಾವ ಯಾವ ದಾಖಲೆಗಳು ಬೇಕಾಗುತ್ತವೆ ಎಂಬುದನ್ನು ತಿಳಿಸುತ್ತೇವೆ. ಈ ಅಂಕಣವನ್ನು ತಪ್ಪದೇ ಕೊನೆಯವರೆಗೂ ಓದಿರಿ.
ಮೊಬೈಲ್ ನಲ್ಲೇ FID ನಂಬರ್ ಚೆಕ್ ಮಾಡುವುದು ಹೇಗೆ?
ಹಂತ -1) ರೈತರೇ ಮೊದಲಿಗೆ ನೀವು ಕೆಳಗೆ ನೀಡಲಾಗಿರುವ ಸರ್ಕಾರದ ಅಧಿಕೃತ ಜಾಲತಾಣದ ಲಿಂಕ್ ಮೇಲೆ ಕ್ಲಿಕ್ ಮಾಡಿ.
https://fruitspmk.karnataka.gov.in/MISReport/GetDetailsByAadhaar.aspx
ಹಂತ -2) ನಂತರ ನಿಮಗೆ ಕೆಳಗೆ ತೋರಿಸಿದಂತೆ ಕಾಣುತ್ತದೆ. ಅಲ್ಲಿ ನೀವು ನಿಮ್ಮ 12 ಸಂಖ್ಯೆಯ ಆಧಾರ್ ನಂಬರ್ ಹಾಕಿ ಸರ್ಚ್ ಮೇಲೆ ಕ್ಲಿಕ್ ಮಾಡಿ.
ಹಂತ -3) ನಂತರ ನಿಮಗೆ ಒಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ. ಅದರಲ್ಲಿ ನಿಮ್ಮ ಹೆಸರಿಗೆ FID ನಂಬರ್ ಇದ್ದರೆ ಅಲ್ಲಿ ಕಾಣಿಸುತ್ತದೆ. ಅದರ ಜೊತೆಗೆ ನಿಮ್ಮ ಪಿಎಂ ಕಿಸಾನ್ ಐಡಿ ನಂಬರ್ ಕೂಡ ಕಾಣುತ್ತದೆ ಮತ್ತು ಯಾವ ಸರ್ವೆ ನಂಬರಿಗೆ ನಿಮ್ಮ FID ನಂಬರ್ ಲಿಂಕ್ ಆಗಿದೆ ಎಂಬ ಮಾಹಿತಿ ಸಿಗುತ್ತದೆ.
FID ನಂಬರ್ ಇಲ್ಲದಿದ್ದರೆ ಏನು ಮಾಡಬೇಕು?
ರೈತ ಮಿತ್ರರೇ ಈಗಾಗಲೇ ನಿಮಗೆ ಮೇಲೆ ತಿಳಿಸಿದಂತೆ ಸರ್ಕಾರದ ಯಾವುದೇ ಕಾರ್ಯಕ್ರಮವಾಗಲಿ ಅಥವಾ ಯೋಜನೆಯಾಗಲಿ ಅಥವಾ ಸಬ್ಸಿಡಿಯಾಗಲಿ , ಅದರ ಪ್ರಯೋಜನ ಪಡೆಯಲು ನಿಮ್ಮ ಬಳಿ ನಿಮ್ಮ ಸ್ವಂತ FID ನಂಬರ್ ಇರುವುದು ಅವಶ್ಯಕ. ಹಾಗಾಗಿ ಒಂದು ವೇಳೆ ನಿಮ್ಮ ಹೆಸರಿಗೆ FID ನಂಬರ್ ರಚನೆಯಾಗದೆ ಇದ್ದರೆ, ನೀವು ಈ ಕೂಡಲೇ ನಿಮ್ಮ ಸಮೀಪದ ಗ್ರಾಮ್ ಒನ್ ಅಥವಾ ಸಾಮಾನ್ಯ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಕೆಳಗೆ ನೀಡಲಾಗಿರುವ ದಾಖಲೆಗಳನ್ನು ಕೊಟ್ಟು ಅರ್ಜಿ ಸಲ್ಲಿಸಿ.
ಅರ್ಜಿ ಸಲ್ಲಿಸಲು ಯಾವ ಯಾವ ದಾಖಲೆಗಳು ಬೇಕಾಗುತ್ತವೆ?
- ಆಧಾರ್ ಕಾರ್ಡ್
- ಪಹಣಿ ಪತ್ರ (ಉತಾರಿ)
- ಜಾತಿ ಆದಾಯ ಪ್ರಮಾಣಪತ್ರ (ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ)
- ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ
- ನಿಮ್ಮ ಇತ್ತೀಚಿನ ಫೋಟೋ
ಈ ಮೇಲಿನ ದಾಖಲೆಗಳನ್ನು ನೀಡಿ ನೀವು ನಿಮ್ಮ ಹತ್ತಿರದ ಗ್ರಾಮ ಒನ್ ಕೇಂದ್ರದಲ್ಲಿ ನಿಮ್ಮ ಸ್ವಂತ FID ನಂಬರ್ ರಚನೆ ಮಾಡಿಕೊಳ್ಳಿ.