Aadhhaar Photo: ನಿಮ್ಮ ಆಧಾರ್ ಕಾರ್ಡ್ ಫೋಟೋ ಚೆನ್ನಾಗಿಲ್ಲವೆಂದರೆ, ಮೊಬೈಲ್ ನಲ್ಲಿ ಈ ರೀತಿಯಾಗಿ ಚೇಂಜ್ ಮಾಡಿಕೊಳ್ಳಿ.

ಭಾರತೀಯರ ಬಳಿ ಇರಲೇಬೇಕಾದ ಪ್ರಮುಖ ದಾಖಲೆ ಎಂದರೆ, ಅದು ಆಧಾರ್ ಕಾರ್ಡ್(Aadhaar Card). ಈಗ ಎಲ್ಲಾ ದಾಖಲೆಗಳ ಜೊತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಬೇಕು ಎಂದು ಸರ್ಕಾರವು ಕಡ್ಡಾಯಗೊಳಿಸಿದೆ. ಸರ್ಕಾರದ ಯಾವುದೇ ಯೋಜನೆಗಳ ಬಗ್ಗೆ ಮಾಹಿತಿ ಪಡೆಯಲು ನಮ್ಮ ಅಧಿಕೃತ ಟೆಲಿಗ್ರಾಂ ಗ್ರೂಪ್ ಸೇರಿಕೊಳ್ಳಿ, ಸೇರಲು ಇಲ್ಲಿ ಕ್ಲಿಕ್ ಮಾಡಿ.



ಸರ್ಕಾರದಿಂದ ಎಲ್ಲಾ ರೀತಿಯ ಸೌಲಭ್ಯಗಳನ್ನು ಪಡೆಯಬೇಕು ಎಂದರೆ ಆಧಾರ್ ಕಾರ್ಡ್ ಕಡ್ಡಾಯವಾಗಿ ಇರಲೇಬೇಕು, ಹಾಗಾಗಿ ಹುಟ್ಟುವ ಮಗುವಿನಿಂದ ಹಿಡಿದು ದೊಡ್ಡವರವರೆಗೂ ಎಲ್ಲರೂ ಆಧಾರ್ ಕಾರ್ಡನ್ನು ಕಡ್ಡಾಯವಾಗಿ ಮಾಡಿಸಿಕೊಂಡಿರಬೇಕು, ಆಧಾರ್ ಕಾರ್ಡ್ ನಲ್ಲಿ ನಮ್ಮ ಐಡೆಂಟಿಟಿ ಗಾಗಿ ನಮ್ಮ ಫೋಟೋ(Aadhaar Photo) ಇರುತ್ತದೆ.

ನಮ್ಮ ಆಧಾರ್ ಕಾರ್ಡ್ ನಲ್ಲಿ ನಮ್ಮ ಫೋಟೋ ನಮಗೆ ಇಷ್ಟವಿಲ್ಲದೆ ಇರಬಹುದು ಅಥವಾ ಇದರಲ್ಲಿ ಫೋಟೋ ಬ್ಲರ್ ಆಗಿರಬಹುದು ಅಥವಾ ಬಹಳ ವರ್ಷಗಳ ಹಿಂದೆ ತೆಗೆಸಿರುವ ಫೋಟೋ ಆಗಿರುವ ಕಾರಣ ಅದು ಹಳೆಯದಾಗಿರುತ್ತದೆ. ಆಗ ನೀವು ಆಧಾರ್ ಕಾರ್ಡ್(Aadhaar Card) ನಲ್ಲಿರುವ ಫೋಟೋವನ್ನು ಬದಲಾವಣೆ ಮಾಡಿಕೊಳ್ಳಬೇಕು ಎನ್ನುವುದು ಸಹಜ, ಇದಕ್ಕಾಗಿ ನೀವು ಆಧಾರ್ ಕೇಂದ್ರಕ್ಕೆ(Aadhaar Center) ತೆರಳಿ ಬದಲಾಯಿಸುವ ಅಗತ್ಯವಿಲ್ಲ, ಮನೆಯಲ್ಲಿ ಕುಳಿತುಕೊಂಡು ಸುಲಭವಾಗಿ ಫೋಟೋ ಅಪ್ಡೇಟ್ (Photo Update) ಮಾಡಬಹುದು ಹೇಗೆ ಎಂಬ ಮಾಹಿತಿಯು ಕೆಳಗಿನ ವಿವರಣೆಯಲ್ಲಿದೆ.

ಆಧಾರ್ ಕಾರ್ಡ್ ಫೋಟೋ ಬದಲಾಯಿಸುವುದು ಹೇಗೆ?

https://uidai.gov.in/en/

  • ಮೊದಲನೆಯದಾಗಿ ಮೇಲೆ ಕಾಣಿಸಿದ ಅಧಿಕೃತ ಲಿಂಕ್ ಮೇಲೆ ಕ್ಲಿಕ್ ಮಾಡಿ,
  • ನಂತರ ಹೋಂ ಪೇಜ್ ಗೆ ಭೇಟಿ ನೀಡಿ, ಆಧಾರ್ ಎನ್ರೋಲ್ಮೆಂಟ್ ಫಾರ್ಮ್ (Enrollment form) ಡೌನ್ಲೋಡ್ ಮಾಡಿ ಪ್ರಿಂಟ್ಔಟ್ ತೆಗೆದುಕೊಳ್ಳಿ.
  • ಅಲ್ಲಿ ಕೇಳಿರುವ ಎಲ್ಲಾ ದಾಖಲೆಗಳನ್ನು ಅಪ್ಲೋಡ್ ಮಾಡಿ.
  • ನಂತರ, ಮನೆಯ ಹತ್ತಿರವಿರುವ ಆಧಾರ್ ಎನ್ರೋಲ್ಮೆಂಟ್ ಸೆಂಟರ್ ಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಿ.
  • ನಂತರ ಬಯೋಮೆಟ್ರಿಕ್ (Biometric) ಮಾಡಿಸಿಕೊಳ್ಳಿ.
  • ಆಧಾರ್ ಕೇಂದ್ರದಲ್ಲಿರುವ ಅಧಿಕಾರಿ ಆಗ ನೀವು ಹೇಗಿದ್ದೀರೋ ಹಾಗೆ ಫೋಟೋ ತೆಗೆದುಕೊಡುತ್ತಾರೆ.
  • ನಂತರ ನಿಮಗೆ ಆಧಾರ ಅಪ್ಡೇಟ್ ರಿಕ್ವೆಸ್ಟ್ (Aadhaar Update Request) ನಂಬರ್ ಮತ್ತು ಒಂದು ಸ್ಲಿಪ್ ಅನ್ನು ನೀಡಲಾಗುತ್ತದೆ.

ಗಮನದಲ್ಲಿಡಬೇಕಾದ ಅಂಶಗಳು

  • ಆಧಾರ್ ಕೇಂದ್ರದಲ್ಲಿಯೇ ಫೋಟೋ ಕ್ಲಿಕ್ ಮಾಡುತ್ತಾರೆ, ನೀವು ಬೇರೆ ಫೋಟೋ ತೆಗೆದುಕೊಂಡು ಹೋಗು ಅಗತ್ಯವಿಲ್ಲ.
  • ಆಧಾರ್ ಕಾರ್ಡ್ ನಲ್ಲಿ ನಿಮ್ಮ ಮಾಹಿತಿ ಅಪ್ಡೇಟ್ ಆಗುವುದಕ್ಕೆ 90 ದಿನಗಳ ಸಮಯವನ್ನು ತೆಗೆದುಕೊಳ್ಳುತ್ತದೆ.
  • ನಿಮಗೆ ಕೊಡುವ URN ನಂಬರ್ ಬಳಸಿ ಚೆಕ್ ಮಾಡಿಕೊಳ್ಳಬಹುದು.
  • ನೀವು ಸೆಲ್ಫ್ ಸರ್ವಿಸ್ ಪೋರ್ಟಲ್ (Self service Portal) ನಲ್ಲಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಲು ಸಾಧ್ಯವಾಗುವುದಿಲ್ಲ.
  • ಫೋಟೋ ಅಪ್ಡೇಟ್ ಆದ ಬಳಿಕ ನೀವು ಆಧಾರ್ ಕಾರ್ಡ್ ಡೌನ್ಲೋಡ್ ಮಾಡಿಕೊಳ್ಳಿ.

ಆಧಾರ್ ಕಾರ್ಡ್ ಡೌನ್ಲೋಡ್ ಮಾಡುವುದು ಹೇಗೆ?

  • ಮೊದಲು ಆಧಾರ್ ಕಾರ್ಡ್ ನ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ.
  • ನಂತರ ಮೈ ಆಧಾರ್(My Aadhaar) ಎನ್ನುವ ಆಪ್ಷನ್ ಮೇಲೆ ಕ್ಲಿಕ್ ಮಾಡಿ, ಅಲ್ಲಿ ಆಧಾರ್ ಡೌನ್ಲೋಡ್ (Aadhaar Download) ಎನ್ನುವ ಆಪ್ಷನ್ ಸೆಲೆಕ್ಟ್ ಮಾಡಿಕೊಳ್ಳಿ.
  • ನಂತರ ನಿಮ್ಮ ಆಧಾರ್ ನಂಬರ್ ಬಳಸಿ, ಫೋನ್ಗೆ ಬರುವ ಓಟಿಪಿ ಹಾಕಿ ಕ್ಯಾಪ್ಚಾ ಕೊಡಿ ಎಂಟರ್ ಮಾಡಿ.
  • ಕೊನೆಯಲ್ಲಿ ಆದರೆ ಏನು ಆಪ್ಷನ್ ಸೆಲೆಕ್ಟ್ ಮಾಡಿಕೊಂಡು ನಿಮ್ಮ ಅಪ್ಡೇಟ್ ಆಗಿರುವ ಆಧಾರ್ ಕಾರ್ಡ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.


Previous Post Next Post

Ads

Ads

نموذج الاتصال

×