BSF Jobs for 10th, 12th, Degree Pass: ನೀವು ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ, ಐಟಿಐ, ಡಿಪ್ಲೊಮ, ಇತರೆ ಪದವಿಗಳನ್ನು ಮುಗಿಸಿ, ಉದ್ಯೋಗಕ್ಕಾಗಿ ಸರ್ಚ್ ಮಾಡುತ್ತಿದ್ದೀರಾ.. ಹಾಗಿದ್ರೆ ಈ ಎಲ್ಲ ವಿದ್ಯಾರ್ಹತೆಯುಳ್ಳವರಿಗೆ ಇಲ್ಲಿದೆ ನೋಡಿ ಜಾಬ್ ಆಫರ್.
ಕೇಂದ್ರ ಗೃಹ ಸಚಿವಾಲಯದಡಿ ಕಾರ್ಯನಿರ್ವಹಿಸುವ ಡೈರೆಕ್ಟೊರೇಟ್ ಜೆನೆರಲ್ ಬಾರ್ಡರ್ ಸೆಕ್ಯೂರಿಟಿ ಫೋರ್ಸ್ ನಲ್ಲಿ ಅಗತ್ಯ ಇರುವ ಗ್ರೂಪ್ ಬಿ ಹಾಗೂ ಗ್ರೂಪ್ ಸಿ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ
ಗಡಿ ಭದ್ರತಾ ಪಡೆಯ ಪ್ಯಾರಾ ಮೆಡಿಕಲ್ ಸ್ಟಾಫ್, ಎಸ್‌ಎಂಟಿ (ವರ್ಕ್‌ಶಾಪ್), ವೆಟರಿನರಿ ಸ್ಟಾಫ್ ಮತ್ತು ಇನ್ಸ್‌ಪೆಕ್ಟರ್ (ಲೈಬ್ರರಿಯನ್) ಹುದ್ದೆಗಳನ್ನು ಭರ್ತಿ ಮಾಡಲು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳ ವಿವರ ಕೆಳಗಿನಂತಿದೆ
ಹುದ್ದೆಗಳ ವಿವರ
- ಗ್ರೂಪ್ ಬಿ ಎಸ್‌ಐ (ಸ್ಟಾಫ್ ನರ್ಸ್) ಹುದ್ದೆಗಳು: 13
- ಗ್ರೂಪ್ ಸಿ ಎಎಸ್‌ಐ-ಸಹಾಯಕ ಸಬ್‌ಇನ್ಸ್‌ಪೆಕ್ಟರ್ ಹುದ್ದೆಗಳು : 85
- ಎಸ್‌ಎಂಟಿ ವರ್ಕ್‌ಶಾಪ್ ಗ್ರೂಪ್ ಬಿ ಹುದ್ದೆಗಳು: 03
- ಗ್ರೂಪ್ ಸಿ ಕಾನ್ಸ್‌ಟೇಬಲ್ ಹುದ್ದೆಗಳು: 34
- ವೆಟರಿನರಿ ಸ್ಟಾಫ್ ಗ್ರೂಪ್ ಸಿ ಹೆಡ್‌ಕಾನ್ಸ್‌ಟೇಬಲ್ ಹುದ್ದೆಗಳು : 01
- ವೆಟರಿನರಿ ಸ್ಟಾಫ್ ಗ್ರೂಪ್ ಸಿ ಕಾನ್ಸ್‌ಟೇಬಲ್ ಹುದ್ದೆಗಳು : 02
- ಗ್ರೂಪ್ ಬಿ ಇನ್ಸ್‌ಪೆಕ್ಟರ್ (ಲೈಬ್ರರಿಯನ್) ಹುದ್ದೆಗಳು: 02
ಹುದ್ದೆವಾರು ವೇತನ ಶ್ರೇಣಿ ವಿವರ
- ಗ್ರೂಪ್ ಬಿ ಎಸ್‌ಐ (ಸ್ಟಾಫ್ ನರ್ಸ್) ಹುದ್ದೆಗಳು: Rs.35,400-1,12,400.
- ಗ್ರೂಪ್ ಸಿ ಎಎಸ್‌ಐ-ಸಹಾಯಕ ಸಬ್‌ಇನ್ಸ್‌ಪೆಕ್ಟರ್ : Rs.35,400-1,12,400.
- ಎಸ್‌ಎಂಟಿ ವರ್ಕ್‌ಶಾಪ್ ಗ್ರೂಪ್ ಬಿ ಹುದ್ದೆಗಳು: Rs.35400-1,12,400.
- ಗ್ರೂಪ್ ಸಿ ಕಾನ್ಸ್‌ಟೇಬಲ್ ಹುದ್ದೆಗಳು: Rs.21,700-69,100.
- ವೆಟರಿನರಿ ಸ್ಟಾಫ್ ಗ್ರೂಪ್ ಸಿ ಹೆಡ್‌ಕಾನ್ಸ್‌ಟೇಬಲ್ ಹುದ್ದೆಗಳು : Rs.25,500-81,100.
- ವೆಟರಿನರಿ ಸ್ಟಾಫ್ ಗ್ರೂಪ್ ಸಿ ಕಾನ್ಸ್‌ಟೇಬಲ್ ಹುದ್ದೆಗಳು : Rs.21,700-69,100.
- ಗ್ರೂಪ್ ಬಿ ಇನ್ಸ್‌ಪೆಕ್ಟರ್ (ಲೈಬ್ರರಿಯನ್) ಹುದ್ದೆಗಳು: Rs.44,900-1,42,400.
ವಯಸ್ಸಿನ ಅರ್ಹತೆಗಳು
- ಎಸ್‌ಐ ಹುದ್ದೆಗಳಿಗೆ 21-30 ವರ್ಷ.
- ಎಎಸ್‌ಐ ಹುದ್ದೆಗಳಿಗೆ 18-25 ವರ್ಷ.
- ಕಾನ್ಸ್‌ಟೇಬಲ್ ಹುದ್ದೆಗಳಿಗೆ 18-25 ವರ್ಷ.
- ಇನ್ಸ್‌ಪೆಕ್ಟರ್ (ಲೈಬ್ರರಿಯನ್) - ಗರಿಷ್ಠ 30 ವರ್ಷ ಮೀರಿರಬಾರದು.
ವಿದ್ಯಾರ್ಹತೆ :
ಹುದ್ದೆಗಳಿಗೆ ಅನುಗುಣವಾಗಿ ಎಸ್‌ಎಸ್‌ಎಲ್‌ಸಿ ಪಾಸ್, ದ್ವಿತೀಯ ಪಿಯುಸಿ, ಪದವಿ ಅನ್ನು ಹುದ್ದೆಗೆ ಸಂಬಂಧಿತ ವಿಷಯಗಳಲ್ಲಿ ಪಾಸ್ ಮಾಡಿರಬೇಕು.
ಗಡಿ ಭದ್ರತಾ ಪಡೆಯು ಪ್ರಸ್ತುತ ಶಾರ್ಟ್ ನೋಟಿಫಿಕೇಶನ್ ಅನ್ನು ಬಿಡುಗಡೆ ಮಾಡಿದೆ. ಸದ್ಯದಲ್ಲೇ ವಿವರವಾದ ಅಧಿಸೂಚನೆ ಬಿಡುಗಡೆ ಮಾಡಲಿದ್ದು, ಅದರಲ್ಲಿ ಹುದ್ದೆವಾರು ಶೈಕ್ಷಣಿಕ ಅರ್ಹತೆಗಳ ಕುರಿತು ಮಾಹಿತಿ ನೀಡಲಾಗುತ್ತದೆ. ಅಲ್ಲದೇ ಆಯ್ಕೆ ಪ್ರಕ್ರಿಯೆಗಳ ಕುರಿತು ತಿಳಿಸಲಾಗುತ್ತದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವವರು ಆಗಾಗ ಮೇಲಿನ ಲಿಂಕ್ ಕ್ಲಿಕ್ ಮಾಡಿ ಬಿಎಸ್‌ಎಫ್ ವೆಬ್‌ಸೈಟ್‌ಗೆ ಭೇಟಿ ನೀಡಿ ಲೇಟೆಸ್ಟ್ ಅಪ್‌ಡೇಟ್ಸ್ ತಿಳಿಯಬಹುದು.
ಅರ್ಜಿ ಪ್ರಕ್ರಿಯೆ ವೇಳಾಪಟ್ಟಿ :
ಶೀಘ್ರದಲ್ಲಿ ಬಿಡುಗಡೆ ಮಾಡಲಾಗುತ್ತದೆ.
ಅರ್ಜಿ ಶುಲ್ಕ ಮಾಹಿತಿ :
ಡೀಟೇಲ್ಡ್ ನೋಟಿಫಿಕೇಶನ್‌ನಲ್ಲಿ ತಿಳಿಸಲಾಗುತ್ತದೆ.