Ration card – ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ, ಈ ದಿನ ಸಿಗಲಿದೆ ಹೊಸ ಬಿಪಿಎಲ್ ಕಾರ್ಡ್, ತಪ್ಪದೇ ಓದಿ

ಹಲವು ದಿನಗಳ ಹಿಂದೆ ಅಷ್ಟೇ ರಾಜ್ಯದ ಜನತೆಗೆ ಎಪಿಎಲ್ (APL card) ಹಾಗೂ ಬಿಪಿಎಲ್ (BPL card) ಕಾರ್ಡ್ ಹೊಂದಿದವರಿಗೆ ಹೊಸ ಕಾರ್ಡ್ ವಿತರಣೆ ಮಾಡುವುದಾಗಿ ನಿರ್ಧರಿಸಿತ್ತು. ಆ ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳಲು ಜನರು ಕಾತುರದಿಂದ ಕಾಯುತ್ತಿದ್ದಾರೆ. ಆದರೆ ಸರ್ಕಾರ ಹೊಸ ಕಾರ್ಡ್ ವಿತರಣೆಯನ್ನು ಮುಂದೂಡುತ್ತಲೇ ಬಂದಿದೆ. ಇದರ ಬಗ್ಗೆ ಮಾತನಾಡಿದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆಎಚ್ ಮುನಿಯಪ್ಪ ( KH Muniyappa ) ರಾಜ್ಯದ ಜನತೆಗೆ ಸಿಹಿ ಸುದ್ದಿಯೊಂದನ್ನು ಕೊಟ್ಟಿದ್ದಾರೆ, ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ. 



ಹೊಸ ರೇಷನ್ ಕಾರ್ಡ್‌ (New Ration Card Application)

ರೇಷನ್ ಕಾರ್ಡ್ ಕಾಯುವಿಕೆ ಎರಡೂವರೆ ವರ್ಷಕ್ಕೆ ಮುಟ್ಟಿದೆ. 2020ರಲ್ಲಿ ಅರ್ಜಿ ಸಲ್ಲಿಸಿದರೂ ಈವರೆಗೆ ಯಾವುದೇ ಸುಳಿವು ಸಿಕ್ಕಿಲ್ಲದೆ ಕಾಯುತ್ತಿದ್ದ ಜನರಿಗೆ ಈಗ ಭರವಸೆ ಮೂಡಿದೆ . ಆಹಾರ ಇಲಾಖೆ ಸಚಿವ ಕೆಎಚ್ ಮುನಿಯಪ್ಪ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಮಾರ್ಚ್ 31ರೊಳಗೆ ಎಲ್ಲಾ ಅರ್ಜಿಗಳನ್ನು ಪರಿಶೀಲಿಸಿ ಹೊಸ ಪಡಿತರ ಚೀಟಿ ವಿತರಣೆ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ.

ಕೆಲವು ತುರ್ತು ಅಗತ್ಯಗಳನ್ನು ಪೂರೈಸಲು, ಸರ್ಕಾರವು ಹೊಸ ರೇಷನ್ ಕಾರ್ಡ್‌ಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಿದೆ. ಈ ಯೋಜನೆಯಡಿ ಈ ಕೆಳಗಿನವರು ಅರ್ಜಿ ಸಲ್ಲಿಸಬಹುದು:

– ಹೊಸದಾಗಿ ಮದುವೆಯಾಗಿ ಸಂಸಾರ ಆರಂಭಿಸುವ ದಂಪತಿಗಳು

– ಮದುವೆಯ ನಂತರ ಪ್ರತ್ಯೇಕವಾಗಿ ವಾಸಿಸುವ ದಂಪತಿಗಳು ಹೊಸ ರೇಷನ್ ಕಾರ್ಡ್‌ಗೆ ಅರ್ಹರಾಗುತ್ತಾರೆ.

– ಕುಟುಂಬದಿಂದ ಬೇರೆಯಾಗಿ ಜೀವನ ನಡೆಸುವ ದಂಪತಿಗಳು

– ಈಗಾಗಲೇ ರೇಷನ್ ಕಾರ್ಡ್ ಹೊಂದಿರುವ ಕುಟುಂಬದಿಂದ ಪ್ರತ್ಯೇಕವಾಗಿ ವಾಸಿಸಲು ಪ್ರಾರಂಭಿಸುವ ದಂಪತಿಗಳು ಹೊಸ ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಬಹುದು.

ರೇಷನ್ ಕಾರ್ಡ್: ತಿದ್ದುಪಡಿಗೆ ಅವಕಾಶ, (Ration card correction)

ಹೊಸ ಸದಸ್ಯರ ಸೇರ್ಪಡೆ, ತಪ್ಪುಗಳ ತಿದ್ದುಪಡಿ, ಮತ್ತು ವಿಳಾಸ ಬದಲಾವಣೆ ಸೇರಿದಂತೆ ರೇಷನ್ ಕಾರ್ಡ್‌ಗಳಲ್ಲಿ ತಿದ್ದುಪಡಿ ಮಾಡಲು ಸರ್ಕಾರ ಮತ್ತೊಮ್ಮೆ ಅವಕಾಶ ಕಲ್ಪಿಸಿದೆ. ಈ ಜೊತೆಗೆ, ಹೊಸ ರೇಷನ್ ಕಾರ್ಡ್‌ಗಳಿಗೆ ಅರ್ಜಿ ಸಲ್ಲಿಸಲು ಸಹ ಅವಕಾಶ ನೀಡಲಾಗಿದೆ.

ಅರ್ಜಿ ಸಲ್ಲಿಸುವುದು ಹೇಗೆ:

  • ಗ್ರಾಮ ಒನ್(Gram one), ಬೆಂಗಳೂರು ಒನ್(Bengaluru one) , ಮತ್ತು ಇತರ ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು.
  • ಆನ್ಲೈನ್ (Online) ಮೂಲಕ ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು.
  • ಆನ್ಲೈನ್ ಪೋರ್ಟಲ್ ನಿರ್ದಿಷ್ಟ ಸಮಯದಲ್ಲಿ ಮಾತ್ರ ತೆರೆದಿರುತ್ತದೆ. ಸೇವಾ ಕೇಂದ್ರದ ಸಿಬ್ಬಂದಿಯಿಂದ ಮಾಹಿತಿ ಪಡೆದುಕೊಂಡು ಅರ್ಜಿ ಸಲ್ಲಿಸಿ.

ಹೊಸ ರೇಷನ್ ಕಾರ್ಡ್ ಕಾಯುವಿಕೆ : ಕೊನೆಗೂ ಭರವಸೆ ಮೂಡಿತೆ?

ಹೌದು, ರೇಷನ್ ಕಾರ್ಡ್ ಕಾಯುವಿಕೆ ಎರಡೂವರೆ ವರ್ಷಕ್ಕೆ ಮುಟ್ಟಿದೆ. 2020ರಲ್ಲಿ ಅರ್ಜಿ ಸಲ್ಲಿಸಿದರೂ ಈವರೆಗೆ ಯಾವುದೇ ಸುಳಿವು ಸಿಕ್ಕಿಲ್ಲದೆ ಕಾಯುತ್ತಿದ್ದ ಜನರಿಗೆ ಈಗ ಭರವಸೆ ಮೂಡಿದೆ . ಆಹಾರ ಇಲಾಖೆ ಸಚಿವ ಕೆಎಚ್ ಮುನಿಯಪ್ಪ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಮಾರ್ಚ್ 31ರೊಳಗೆ ಎಲ್ಲಾ ಅರ್ಜಿಗಳನ್ನು ಪರಿಶೀಲಿಸಿ ಹೊಸ ಪಡಿತರ ಚೀಟಿ ವಿತರಣೆ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ.


3 Comments

Previous Post Next Post

Ads

Ads

نموذج الاتصال

×