Anna Bhagya DBT Status Check 2024: ಅನ್ನ ಭಾಗ್ಯ ಯೋಜನೆಯ ಹಣವು ನಿಮ್ಮ ಖಾತೆಗೆ ಜಮಾ ಆಗಿದೆಯಾ? ಎಷ್ಟು ಹಣ ಜಮಾ ಆಗಿದೆ ಯಾವ ದಿನಾಂಕದಂದು ಜಮಾ ಆಗಿದೆ ಎಂಬ ವಿಧಾನವನ್ನು ಈ ವರದಿಯ ಮೂಲಕ ತಿಳಿದುಕೊಳ್ಳೋಣ.
ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ (Congress) ಪಕ್ಷವು ಅಧಿಕಾರಕ್ಕೆ ಬಂದ ನಂತರ ಅನ್ನ ಭಾಗ್ಯ ಯೋಜನೆ ಅಡಿಯಲ್ಲಿ 10 ಕೆಜಿ ಅಕ್ಕಿಯನ್ನು ನೀಡುವುದಾಗಿ ಹೇಳಿದ್ದರು, ಅದರಂತೆ ಅನ್ನ ಭಾಗ್ಯ ಯೋಜನೆ ಜಾರಿಗೆ ತಂದು 5 ಕೆಜಿ ಅಕ್ಕಿ ಹೆಚ್ಚುವರಿ 5 ಕೆಜಿ ಅಕ್ಕಿಯ ಬದಲಿಗೆ ಪ್ರತಿ ಕೆಜಿಗೆ 34 ರೂಪಾಯಿಯಂತೆ ಪ್ರತಿ ಸದಸ್ಯರಿಗೆ 170 ರೂಪಾಯಿಯನ್ನು ನೀಡುತ್ತಿದ್ದಾರೆ.
BPL ಕಾರ್ಡ್ ಹಾಗೂ ಅಂತ್ಯೋದಯ ಪಡಿತರ ಚೀಟಿಯನ್ನು ಹೊಂದಿರುವ ಬ್ಯಾಂಕ್ ಖಾತೆಗೆ Anna Bhagya DBT ಯ ಮೂಲಕ ಹಣವನ್ನು ಜಮಾ ಮಾಡುತ್ತಿದ್ದಾರೆ. ಮತ್ತು ಪ್ರತಿ ತಿಂಗಳು ಅರ್ಹತೆ ಹೊಂದಿರುವ ಫಲನುಭಾವಿಗಳ ಬ್ಯಾಂಕ್ ಖಾತೆಗೆ ಕರ್ನಾಟಕ ಸರ್ಕಾರವು ಹಣ ವರ್ಗಾವಣೆ ಮಾಡುತ್ತಿದೆ. ನೀವು ಕೂಡ ಈ ಯೋಜನೆಗೆ ಅರ್ಹ ಇದ್ದರೆ ನಿಮ್ಮ ಖಾತೆಗೆ ಎಷ್ಟು ಹಣ ಜಮಾ ಆಗಿದೆ ಎಂಬುದನ್ನು ಚೆಕ್ ಮಾಡಿಕೊಳ್ಳಿ.
ರೇಷನ್ ಕಾರ್ಡ್ ಅಮೌಂಟ್ ಕರ್ನಾಟಕ:
ವಿಧಾನಸಭಾ ಚುನಾವಣೆಯ ಸಮಯದಲ್ಲಿ ಕಾಂಗ್ರೆಸ್ ಪಕ್ಷವು ಅನ್ನ ಭಾಗ್ಯ ಯೋಜನೆ ಅಡಿಯಲ್ಲಿ ಕುಟುಂಬದ ಪ್ರತಿಯೊಬ್ಬರಿಗೂ ಹತ್ತು ಕೆಜಿ ಅಕ್ಕಿಯನ್ನು ಉತ್ತರಿಸುವ ಭರವಸೆಯನ್ನು ನೀಡಿತ್ತು. ಆದರೆ ನಮಗೆ ಬೇಕಾಗುವಷ್ಟು ಅಕ್ಕಿ ಲಭ್ಯವಾಗದ ಕಾರಣದಿಂದಾಗಿ ಹೆಚ್ಚುವರಿ ೫ ಕೆಜಿ ಅಕ್ಕಿಯ ಬದಲಿಗೆ ಅನ್ನ ಭಾಗ್ಯ ಹಣ ನೀಡುವ ಯೋಜನೆಯನ್ನು ರೂಪಿಸಿತು.. ಅದರಂತೆ ಬಿಪಿಎಲ್ ಕಾರ್ಡ್ ಮತ್ತು ಅಂತ್ಯೋದಯ ಕಾರ್ಡ್ ಹೊಂದಿರುವ ಕುಟುಂಬದ ಪ್ರತಿ ಸದಸ್ಯರಿಗೆ 170 ರೂಪಾಯಿ ಯಂತೆ ಪ್ರತಿ ತಿಂಗಳು ಹಣವನ್ನು ನೇರ ನಗದು ವರ್ಗಾವಣೆಯ ಮೂಲಕ ಪ್ರತಿಯೊಬ್ಬರ ಖಾತೆಗೆ ಸರ್ಕಾರವು ಜಮಾ ಮಾಡುತ್ತಿದೆ.
Anna Bhagya DBT Status Check 2024:
ಹಂತ 1: ಮೊದಲಿಗೆ ಕೆಳಗೆ ನೀಡಿರುವ ಕರ್ನಾಟಕ ಆಹಾರ ಇಲಾಖೆಯ(ahara.kar.nic.in/lpg) ವೆಬ್ ಸೈಟಿಗೆ ಭೇಟಿ ನೀಡಿ.
ಹಂತ 2: ಮುಖ್ಯಪುಟದಲ್ಲಿ ಮೂರು ಲಿಂಕುಗಳಿರುವ ಪೇಜ್ ಓಪನ್ ಆಗುತ್ತದೆ, ನಿಮ್ಮ ಜಿಲ್ಲೆಯ ಹೆಸರು ಇರುವ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು ಉದಾಹರಣೆಗೆ. Only for Bengaluru district click here ಎಂದು ಇರುತ್ತದೆ.
ಹಂತ 3: ಮುಂದಿನ ಪೇಜ್ ನಲ್ಲಿ ಕೊನೆಯ ಆಯ್ಕೆಯ(Status Of DBT)ನೇರ ನಗದು ವರ್ಗಾವಣೆ ಅದರ ಮೇಲೆ ಕ್ಲಿಕ್ ಮಾಡಬೇಕು.
ಹಂತ 4: Status Of DBT ಎಂಬ ಪುಟ್ಟ ಓಪನ್ ಆಗುತ್ತದೆ ಅದರಲ್ಲಿ select year, select month ಅಂತ ಕಾಣುತ್ತದೆ ನೀವು ಯಾವ ತಿಂಗಳ Anna Bhagya DBT Status Check ಮಾಡಬೇಕು ಎಂದುಕೊಂಡಿದ್ದೀರಾ ಆ ತಿಂಗಳನ್ನು ಆಯ್ಕೆ ಮಾಡಬೇಕು. ನಂತರ Enter RC Number ಎಂಬಲ್ಲಿ ನಿಮ್ಮ ರೇಷನ್ ಕಾರ್ಡ್ ನಂಬರನ್ನು ಎಂಟರ್ ಮಾಡಬೇಕು. ನಂತರ Go ಬಟನ್ ಮೇಲೆ ಕ್ಲಿಕ್ ಮಾಡಬೇಕು.
ಹಂತ 5: ನಿಮಗೆ ಇಲ್ಲಿ ನಿಮ್ಮ ರೇಷನ್ ಕಾರ್ಡ್ ನಲ್ಲಿ ಇರುವಂತಹ ಕುಟುಂಬದ ಸದಸ್ಯರ ಹೆಸರು ಕಾಣುತ್ತದೆ ಅವರ ಆಧಾರ್ ಕಾರ್ಡ್ ನ ನಂಬರ್ ನ ಕೊನೆಯ ನಾಲ್ಕು ಸಂಖ್ಯೆಯು ನಿಮ್ಮ ಕುಟುಂಬದ ಸದಸ್ಯರ ಸಂಖ್ಯೆ ಆಗಿರುತ್ತದೆ. ಅಕ್ಕಿ ಸಿಗುವ ಪ್ರಮಾಣ ಹಾಗೂ ನಿಮ್ಮ ಖಾತೆಗೆ ಜಮಾ ಆಗುವ ಹಣದ ವಿವರಗಳನ್ನು ಅಲ್ಲಿ ನೀಡಿರುತ್ತಾರೆ. ನೀವು Anna Bhagya DBT Status Check 2024 ಮಾಡಿಕೊಂಡು ನಿಮ್ಮ ಖಾತೆಗೆ ಎಷ್ಟು ಹಣ ಜಮಾ ಆಗಿದೆ ಎಂಬುದನ್ನು ನೋಡಬಹುದು.
ಹಂತ 6: ನಿಮ್ಮ ಪಡಿತರ ಚೀಟಿಯಲ್ಲಿರುವ ಮುಖ್ಯಸ್ಥರ ಆಧಾರ್ ಕಾರ್ಡ್ ಲಿಂಕ್ ಇರುವ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಿರುವ ಮಾಹಿತಿ ಎಲ್ಲಿ ಕಾಣುತ್ತದೆ.
ಪ್ರಮುಖ ಲಿಂಕ್ ಗಳು:
Anna Bhagya DBT Status 2024 Check Link :
ಅಧಿಕೃತ ವೆಬ್ಸೈಟ್:
ahara.kar.nic.in, https://ahara.kar.nic.in/lpg/
ಕರ್ನಾಟಕ ರಾಜ್ಯದಲ್ಲಿ ಎಷ್ಟು ಅಂತ್ಯೋದಯ ಹಾಗೂ ಆದ್ಯತ ಪಡಿತರ ಚೀಟಿಗಳಿವೆ:
ಕರ್ನಾಟಕ ರಾಜ್ಯವು ಅಂತ್ಯ ಯೋಜನೆ ಹಾಗೂ ಆದ್ಯತ ಕುಟುಂಬಗಳ 1.28 ಕೋಟಿ ಪಡಿತರ ಚೀಟಿಗಳು ಹೊಂದಿದೆ. ಯುಗಳಿಗೆ 99 ಪ್ರತಿಶತ ಕಾರ್ಡುಗಳು ಆಧಾರ ಸಂಖ್ಯೆಗೆ ಜೋಡಣೆ ಆಗಿವೆ. ಇದರ ಪೈಕಿ 1.06 ಕೋಟಿ ಕಾಡುಗಳನ್ನು ಒಳಗೊಂಡಿರುವ 82 ಪ್ರತಿಶತವು ಸಕ್ರಿಯವಾಗಿ ಬ್ಯಾಂಕ್ ಖಾತೆಗೆ ಲಿಂಕ್ ಆಗಿದೆ. ಆದ್ದರಿಂದಾಗಿ ಬ್ಯಾಂಕ್ ಖಾತೆಗೆ ಆ ಕಾರ್ಡ್ ಹೊಂದಿರುವವರಿಗೆ ಹಣವನ್ನು ವರ್ಗಾಯಿಸಲಾಗುತ್ತಿದೆ. ಉಳಿದ ಕಾರ್ಡು ಹೊಂದಿರುವವರ ಖಾತೆಗಳನ್ನು ತೆರೆಯಲು ತಿಳಿಸುವುದಾಗಿ ಸರ್ಕಾರ ಅಧಿಕೃತವಾಗಿ ತಿಳಿಸಿದೆ.
ಒಟ್ಟು 1.27 ಕೋಟಿ ಪಡಿತರ ಚೀಟಿಗಳು ಒಬ್ಬ ಸದಸ್ಯರನ್ನು ಕುಟುಂಬದ ಮುಖ್ಯಸ್ಥರಾಗಿ ನೇಮಿಸಲಾಗುತ್ತದೆ. ಈ ಕುಟುಂಬದ ಸದಸ್ಯರ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾಯಿಸಲಾಗುತ್ತದೆ. ಇದರಲ್ಲಿ ಶೇಕಡ 94 ರಷ್ಟು ಮಹಿಳೆಯರು ಹಾಗೂ ಐದು ಶೇಕಡದಷ್ಟು ಪುರುಷರು ಎಂದು ಸರ್ಕಾರ ಘೋಷಣೆ ನೀಡಿದೆ.
Anna Bhagya DBT Status Check 2024 10 kg ಭರವಸೆ ನೀಡಿದ ಸರ್ಕಾರ :
ವಿಧಾನಸಭೆಯ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ರಾಜ್ಯದ ಪ್ರತಿ ಬಿಪಿಎಲ್ ಕುಟುಂಬದ ಮುಖ್ಯ ಸದಸ್ಯರಿಗೆ ಅನ್ನಭಾಗ್ಯ ಯೋಜನೆ ಅಡಿಯಲ್ಲಿ 10 ಕೆಜಿ ಅಕ್ಕಿಯನ್ನು ನೀಡುವುದಾಗಿ ಕಾಂಗ್ರೆಸ್ ಸರ್ಕಾರ ಭರವಸೆ ನೀಡಿತ್ತು.
ಅಕ್ಕಿ ಲಭ್ಯವಾಗದೇ ಇರುವುದರಿಂದ ಸಮರ್ಪಕವಾಗಿ ಅಕ್ಕಿ ಪೂರೈಕೆಯಾಗದ ಹಿನ್ನೆಲೆಯಿಂದ ಪ್ರತಿ ಫಲಾನುಭವಿಗಳಿಗೆ ಕೆಜಿಗೆ 34 ರೂಪಾಯಿಯಂತೆ 5 ಕೆಜಿಗೆ 170 ರಂತೆ ಕೊಡುವುದಾಗಿ ಕಾಂಗ್ರೆಸ್ ಸರ್ಕಾರವು ನಿರ್ಧರಿಸಿತು. ಅದರಂತೆ ಬಿಪಿಎಲ್ ಕಾರ್ಡ್ ಹೊಂದಿರುವ ಎಲ್ಲಾ ಸದಸ್ಯರಿಗೆ 5 ಕೆಜಿಯ ಹಣವನ್ನು ಅವರ ಖಾತೆಗೆ ಜಮಾ ಮಾಡಲಾಯಿತು. ಈ ಯೋಜನೆ ಅಡಿಯಲ್ಲಿ ರಾಜ್ಯದಲ್ಲಿ 4.41 ಕೋಟಿ ಫಲಾನುಭವಿಗಳಿದ್ದಾರೆ ಎಂದು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಸಚಿವಕ್ಕೆ ಮುನಿಯಪ್ಪನವರು ತಿಳಿಸಿದ್ದಾರೆ.
ಹಣ ಬಂದ ತಕ್ಷಣ ಈ ರೀತಿ ಮೆಸೇಜ್ ಬರುತ್ತದೆ :
ಅನ್ನಭಾಗ್ಯ ಯೋಜನೆಯ ಹಣ ನಿಮ್ಮ ಖಾತೆಗೆ ವರ್ಗಾವಣೆ ಆಗಿದ್ದ ತಕ್ಷಣವೇ ನಿಮ್ಮ ಖಾತೆಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಗೆ ಹಣ ಜಮಾ ಆಗಿರುವುದರ ಮೂಲಕದ ಬಗ್ಗೆ ಮೆಸೇಜ್ ಬರುತ್ತದೆ. ಕರ್ನಾಟಕ ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆಯ ಹಣವು ಮೊದಲಿಗೆ ಮೈಸೂರು ಜಿಲ್ಲೆಯ ಜನರಿಗೆ ದೊರೆತಿದೆ. ಇದೇ ಜಿಲ್ಲೆಯಲ್ಲಿ 50432 ಅಂತ್ಯೋದಯ ಯೋಜನೆಯ ಕಾರ್ಡ್ ದಾರರು 2,17,199 ಫಲಾನುಭವಿಗಳು ಇದ್ದಾರೆ.6,61,290 ಬಿಪಿಎಲ್ ಕಾರ್ಡ್ಗಳನ 20,83,627 ಅನ್ನ ಭಾಗ್ಯ ಯೋಜನೆ ಅಡಿಯಲ್ಲಿ 10 ಕೆಜಿ ಅಕ್ಕಿ ಸಿಗಬೇಕಾಗಿದೆ. ಹಾಗೆ ಎಂದಿನಂತೆ ತಲಾ 5 ಕೆಜಿ ಅಕ್ಕಿ ವಿತರಿಸಲಾಗಿದೆ. ಇನ್ನುಳಿದಂತಹ 5 ಕೆಜಿಯಕ್ಕೆ ಬದಲಿಗೆ 170ಗಳನ್ನು ನೇರವಾಗಿ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡುತ್ತಿದ್ದಾರೆ.
ಇಂತಹ ಮುಖ್ಯವಾದ ಮಾಹಿತಿಯನ್ನು ಹೊಂದಿರುವ ಈ ವರದಿಯನ್ನು ಕೂಡಲೇ ನಿಮ್ಮ ಸ್ನೇಹಿತ ಮಿತ್ರ ಹಾಗೂ ಬಂಧುಗಳಿಗೂ ಶೇರ್ ಮಾಡಿ