Yuva Nidhi Scheme: ಯುವ ನಿಧಿ ಯೋಜನೆಯಡಿ ಯುವಕರಿಗೆ ಮಾಸಿಕ 3000 ರೂ. ಲಭ್ಯ! ಅರ್ಜಿ ಸಲ್ಲಿಕೆ ಹೇಗೆ? ಅರ್ಹತೆ ಏನು?

How To Apply for Yuva Nidhi scheme:ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಯಾದ 'ಯುವನಿಧಿ ಯೋಜನೆ'ಗೆ ಡಿ.26ರಿಂದ ನೋಂದಣಿ ಪ್ರಕ್ರಿಯೆ ಶುರುವಾಗಿದೆ. ಈ ಯೋಜನೆಯಡಿ ನಿರುದ್ಯೋಗಿ ಪದವೀಧರರಿಗೆ ಮಾಸಿಕ 3,000 ರೂ ನಿರುದ್ಯೋಗ ಭತ್ಯೆ ನೀಡಲಾಗುತ್ತದೆ. ಅರ್ಜಿ ಸಲ್ಲಿಕೆ ಹೇಗೆ? ಯಾವೆಲ್ಲ ದಾಖಲೆಗಳು ಬೇಕು? ಮೊದಲಾದ ಮಾಹಿತಿ ಇಲ್ಲಿದೆ.



ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಯುವ ನಿಧಿ ಯೋಜನೆಯಡಿ ರಾಜ್ಯದ ಪದವೀಧರ ನಿರುದ್ಯೋಗಿ ಯುವಕರಿಗೆ ಮಾಸಿಕ 3,000 ರೂ ನಿರುದ್ಯೋಗ ಭತ್ಯೆ ನೀಡಲಾಗುತ್ತದೆ. ಈ ಯೋಜನೆಗೆ ಡಿ.26ರಂದು ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ಅರ್ಜಿ ಸಲ್ಲಿಕೆ ಹೇಗೆ? ಯಾವೆಲ್ಲ ದಾಖಲೆ ಬೇಕು ಇಲ್ಲಿದೆ ಮಾಹಿತಿ.

ರಾಜ್ಯಾದ್ಯಂತ 5,29,123 ಪದವೀಧರರು ಮತ್ತು ಡಿಪ್ಲೊಮಾ ಶಿಕ್ಷಣ ಪಡೆದಿರುವರು ಇದ್ದಾರೆ ಎಂದು ಉನ್ನತ ಶಿಕ್ಷಣ ಇಲಾಖೆಯ ಅಂಕಿ-ಅಂಶಗಳ ಆಧಾರದ ಮೇಲೆ ಕರ್ನಾಟಕ ಸರ್ಕಾರ ತಿಳಿಸಿದೆ. ಯುವ ನಿಧಿ ಯೋಜನೆಯಡಿ ಪದವೀಧರ ನಿರುದ್ಯೋಗಿ ಯುವಕರು ಪ್ರತಿ ತಿಂಗಳು 3000 ರೂ., ಡಿಪ್ಲೊಮಾ ಹೊಂದಿರುವವರು 1,500 ರೂ. ಪಡೆಯಲಿದ್ದಾರೆ. ಇದು ಕಾಂಗ್ರೆಸ್‌ ಸರ್ಕಾರದ 5ನೇ ಗ್ಯಾರಂಟಿ ಯೋಜನೆಯಾಗಿದ್ದು, ಪ್ರತಿ ತಿಂಗಳು ಈ ಮೊತ್ತವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರ ವರ್ಗಾವಣೆ ಮಾಡಲಾಗುವುದು ಎಂದು ಹೇಳಿದೆ.

ಅರ್ಹತೆಗಳೇನು?

  • ಯುವ ನಿಧಿ ಯೋಜನೆಯ ಹಣ ಪಡೆಯಲು ಅಭ್ಯರ್ಥಿಗಳು 2022-23ರ ಶೈಕ್ಷಣಿಕ ವರ್ಷದಲ್ಲಿ ಡಿಪ್ಲೊಮಾ ಅಥವಾ ಪದವಿ ಪಾಸಾಗಿರಬೇಕು.
  • ಕರ್ನಾಟಕದ ನಿವಾಸಿಯಾಗಿರಬೇಕು.
  • ಪದವಿ ಅಥವಾ ಡಿಪ್ಲೊಮಾ ಪಾಸಾದ ಬಳಿಕ ಆರು ತಿಂಗಳವರೆಗೆ ಕೆಲಸ ಹೊಂದಿರಬಾರದು.
  • ಅರ್ಜಿದಾರರು ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ಪಿಯುಸಿ ಅಂಕಪಟ್ಟಿ ಅಥವಾ ಪದವಿ ಅಂಕಪಟ್ಟಿಗಳನ್ನು ಹೊಂದಿರಬೇಕು.
  • 2018 ರ ಮೊದಲು ನೀಡಲಾದ ಸಿಇಟಿ ನೋಂದಣಿ ಸಂಖ್ಯೆ ಅಥವಾ ಪಡಿತರ ಚೀಟಿಯನ್ನು ವಾಸಸ್ಥಳ ಪರಿಶೀಲನೆ ದಾಖಲೆಯಾಗಿ ಸರ್ಕಾರ ಪರಿಗಣಿಸುತ್ತದೆ.
  • ಅರ್ಜಿದಾರರು ಯುವ ನಿಧಿಗೆ ಈಗಿನಿಂದಲೇ ಅರ್ಜಿ ಸಲ್ಲಿಸಬಹುದು ಮತ್ತು ಕೋರ್ಸ್ ಪೂರ್ಣಗೊಂಡ ನಂತರ 180-ದಿನಗಳ ಅವಧಿಯವರೆಗೆ ಕಾಯಬೇಕಾಗಿಲ್ಲ.
  • ಅರ್ಜಿದಾರರು ನೀಡುವ ಬ್ಯಾಂಕ್ ವಿವರಗಳು ಆಧಾರ್ ಸಂಖ್ಯೆಗೆ ಜೋಡಣೆಯಾಗಿರಬೇಕು.

ಯೋಜನೆಗೆ ಯಾರು ಅರ್ಹರಲ್ಲ

  • ಸ್ವಯಂ ಉದ್ಯೋಗಿ ಅಥವಾ ಯಾವುದೇ ಸಾರ್ವಜನಿಕ ಅಥವಾ ಖಾಸಗಿ ವಲಯದಲ್ಲಿ ಉದ್ಯೋಗದಲ್ಲಿರುವ ಅರ್ಜಿದಾರರು ಅರ್ಹರಲ್ಲ.
  • ಇನ್ನೂ ಉನ್ನತ ಶಿಕ್ಷಣವನ್ನು ಪಡಯುತ್ತಿರುವ/ಪಡೆಯುವ ಅರ್ಜಿದಾರರು ಯೋಜನೆಯ ಪ್ರಯೋಜನಗಳಿಗೆ ಅರ್ಹರಾಗಿರುವುದಿಲ್ಲ.
  • ಅಪ್ರಂಟಿಸ್ ಸಂಬಳ ಪಡೆಯುವವರು ಕೂಡ ಈ ಯೋಜನೆಗೆ ಅರ್ಹರಲ್ಲ.

ಯುವ ನಿಧಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ

ಅರ್ಹ ಅಭ್ಯರ್ಥಿಗಳು ಕರ್ನಾಟಕ ಸರ್ಕಾರದ ಸೇವಾಸಿಂದು ಪೋರ್ಟಲ್ ಮೂಲಕ ಯೋಜನೆಯ ಪ್ರಯೋಜನಗಳನ್ನು ಪಡೆಯಲು ಅರ್ಜಿ ಸಲ್ಲಿಸಬಹುದು.

ಅಗತ್ಯವಿರುವ ದಾಖಲೆಗಳು

  • ಆಧಾರ್ ಕಾರ್ಡ್
  • ನಿವಾಸ ಪ್ರಮಾಣಪತ್ರ
  • ಆದಾಯ ಪ್ರಮಾಣಪತ್ರ
  • ಶೈಕ್ಷಣಿಕ ಅರ್ಹತೆಯ ದಾಖಲೆಗಳು
  • ಬ್ಯಾಂಕ್ ಖಾತೆ ವಿವರಗಳು


Previous Post Next Post

Ads

Ads

نموذج الاتصال

×