4000 ಉಚಿತ ಬೈಕ್ ವಿತರಣೆಗೆ ಅರ್ಜಿ ಸಲ್ಲಿಸಿ! ರಾಜ್ಯ ಸರ್ಕಾರದ ದೊಡ್ಡ ಘೋಷಣೆ

ಸರ್ಕಾರ ಕೆಲವು ಪ್ರಮುಖ ಉಪಕ್ರಮಗಳನ್ನು ಕೈಗೊಂಡಿದ್ದು ಈಗ ತ್ರಿಚಕ್ರ ಬೈಕ್ (three wheeler bike) ಗಳನ್ನು ಉಚಿತವಾಗಿ ವಿತರಣೆ ಮಾಡಲು ಮುಂದಾಗಿದೆ



ಸರ್ಕಾರದಿಂದ ಆಯ್ದ ವರ್ಗಗಳಿಗೆ ಉಚಿತ ಬೈಕ್ (free bike distribution) ನೀಡಲು ಹೊಸ ಯೋಜನೆ ಆರಂಭಿಸಲಾಗಿದ್ದು ಈ ಮೂಲಕ ಸಾಕಷ್ಟು ಜನರು ಉಚಿತ ಬೈಕ್ ಪಡೆದುಕೊಳ್ಳಬಹುದು. ಇದಕ್ಕೆ ಆಸಕ್ತ ಅಭ್ಯರ್ಥಿಗಳು ತಕ್ಷಣವೇ ಅರ್ಜಿ ಸಲ್ಲಿಸಬೇಕು ಎಂದು ಸರ್ಕಾರ ಅಧಿ ಸೂಚನೆ ಹೊರಡಿಸಿದೆ.

ಸರ್ಕಾರದಿಂದ 4,000 ಉಚಿತ ಬೈಕ್!

ನಮ್ಮ ದೇಶದಲ್ಲಿ ಸಾಕಷ್ಟು ಅಂಗವಿಕಲತೆ (Disability) ಹೊಂದಿರುವ ಜನರು ವಾಸಿಸುತ್ತಾರೆ, ಆದರೆ ಇಂಥವರನ್ನು ಸರ್ಕಾರ ಎಂದಿಗೂ ನಿರ್ಲಕ್ಷ ಮಾಡುವುದಿಲ್ಲ ಈಗಾಗಲೇ ಪ್ರತಿಯೊಂದು ಕ್ಷೇತ್ರದಲ್ಲಿಯೂ ಅಂಗವಿಕಲತೆ ಹೊಂದಿರುವವರು ಸಾಕಷ್ಟು ಸಾಧನೆ ಮಾಡಿರುವುದನ್ನು ನೀವು ನೋಡಿರಬಹುದು

ಇಂಥವರನ್ನು ಇನ್ನಷ್ಟು ಉತ್ತೇಜನ ಗೊಳಿಸುವ ಸಲುವಾಗಿ ಸರ್ಕಾರ ಕೆಲವು ಪ್ರಮುಖ ಉಪಕ್ರಮಗಳನ್ನು ಕೈಗೊಂಡಿದ್ದು ಈಗ ತ್ರಿಚಕ್ರ ಬೈಕ್ (three wheeler bike) ಗಳನ್ನು ಉಚಿತವಾಗಿ ವಿತರಣೆ ಮಾಡಲು ಮುಂದಾಗಿದೆ.

ಯಾರು ಪಡೆಯಬಹುದು ತ್ರಿಚಕ್ರ ವಾಹನ!

ರಾಜ್ಯದಲ್ಲಿ 2011ರ ಜನಗಣತಿಯ ಪ್ರಕಾರ ರಾಜ್ಯದಲ್ಲಿ ಒಟ್ಟು ವಾಸಿಸುವ ಅಂಗವಿಕಲರ ಸಂಖ್ಯೆ 13,24,205. ಪ್ರಸಕ್ತ ಹಣಕಾಸು ವರ್ಷದಲ್ಲಿ ನಾಲ್ಕು ಸಾವಿರ ವಿಶೇಷ ಚೇತನ ಅರ್ಹ ಅಭ್ಯರ್ಥಿಗಳಿಗೆ ಯಂತ್ರ ಚಾಲಿತ ದ್ವಿಚಕ್ರ ವಾಹನ ನೀಡಲು ಸರ್ಕಾರ ಮುಂದಾಗಿದೆ.

ಅರ್ಜಿ ಸಲ್ಲಿಸುವುದು ಹೇಗೆ? (How to apply)

free bike distribution

ಜಿಲ್ಲಾವಾರು ಉಚಿತ ದ್ವಿಚಕ್ರ ವಾಹನ ನೀಡಲು ತೀರ್ಮಾನಿಸಲಾಗಿದ್ದು ಆಯಾ ಜಿಲ್ಲೆಗಳಲ್ಲಿ ಎಷ್ಟು ವಿಕಲಚೇತನರು ಇದ್ದಾರೆ ಎಂಬುದನ್ನು ಪರಿಗಣಿಸಿ ಆ ಆಧಾರದ ಮೇಲೆ ಯಂತ್ರ ಚಾಲಿತ ತ್ರಿಚಕ್ರ ವಾಹನ ವಿತರಣೆ ಮಾಡಲಾಗುವುದು.

ವಿಶೇಷ ಚೇತನರ ಸೊಂಟದ ಮೇಲ್ಭಾಗ ಕಾರ್ಯ ನಿರ್ವಹಿತವಾಗಿದ್ದರೆ ಅಂತವರಿಗೆ ಈ ತ್ರಿಚಕ್ರ ವಾಹನ ನೀಡುವುದರ ಮೂಲಕ ಆರ್ಥಿಕವಾಗಿ ಅವರು ಕೂಡ ಸ್ವಾವಲಂಬನೆಯ ಜೀವನ (Independent life) ನಡೆಸಲು ಅನುಕೂಲ ಮಾಡಿಕೊಡಲಾಗುತ್ತಿದೆ.

ವಿಕಲಚೇತನರು ತಮ್ಮದೇ ಆಗಿರುವ ಉದ್ಯೋಗವನ್ನು ಮಾಡುತ್ತಿದ್ದಾರೆ ಸಣ್ಣಪುಟ್ಟ ಅಂಗಡಿ ಇಟ್ಟುಕೊಳ್ಳುವುದು, ಫೋನ್ ಬೂತ್ ಮೊದಲಾದ ಕೆಲಸಗಳನ್ನು ನಿರ್ವಹಿಸುತ್ತಾರೆ ಹೀಗಾಗಿ ಸ್ಥಳದಿಂದ ಸ್ಥಳಕ್ಕೆ ತೆರಳಲು ಅನುಕೂಲವಾಗುವಂತೆ ತ್ರಿಚಕ್ರ ಯಂತ್ರ ಚಾಲಿತ ಬೈಕ್ ವಿತರಣೆ ಮಾಡಲಾಗುತ್ತಿದೆ.

ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ತಮ್ಮ ವಾಹನ ಕಲಿಕಾ ಪರವಾನಿಗೆ (LLR) ಪ್ರಮಾಣ ಪತ್ರವನ್ನು ಒದಗಿಸಬೇಕು. ಇದರ ಜೊತೆಗೆ ವಿಶೇಷ ಚೇತನರ ದೃಢೀಕರಣ ಪತ್ರ, ಆಧಾರ್ ಕಾರ್ಡ್, ಆದಾಯ ಪ್ರಮಾಣ ಪತ್ರ ಮೊದಲಾದ ದಾಖಲೆಗಳನ್ನು ನಿಮ್ಮ ಜಿಲ್ಲೆಯ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಕಚೇರಿಗೆ ಹೋಗಿ ಅರ್ಜಿ ಸಲ್ಲಿಸಬಹುದಾಗಿದೆ.

ಆಯ್ಕೆ ಮಾಡುವುದು ಹೇಗೆ? (Selection process)

ಮೊದಲಿಗೆ ಅಭ್ಯರ್ಥಿಗಳ ಅರ್ಜಿ ಹಾಗೂ ದಾಖಲೆಗಳನ್ನು ಪರಿಶೀಲನೆ ಮಾಡಲಾಗುತ್ತದೆ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇತೃತ್ವದಲ್ಲಿ ಆಯ್ಕೆ ಸಮಿತಿಯನ್ನು ರಚಿಸಿರಲಾಗುತ್ತದೆ.

ಈ ಸಮಿತಿ ಫಲಾನುಭವಿಗಳನ್ನು ಆಯ್ಕೆ ಮಾಡಿ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ತ್ರಿಚಕ್ರ ಬೈಕ್ ತಯಾರಿಕೆ ಮತ್ತು ವಿತರಣೆಗೆ ರಾಜ್ಯಮಟ್ಟದ ಟೆಂಡರ್ ಕೂಡ ಕರೆಯಲಾಗುತ್ತದೆ, ಇದರಲ್ಲಿ ಆಯ್ಕೆಗೊಂಡರೆ ಅಂತವರು ತ್ರಿಚಕ್ರ ಬೈಕ್ ವಿತರಣೆ ಮಾಡುವ ಜವಾಬ್ದಾರಿ ಹೊರಬೇಕು. ಹೆಚ್ಚಿನ ಮಾಹಿತಿಗಾಗಿ https://dwdsc.karnataka.gov.in/ website ಗೆ ಭೇಟಿ ನೀಡಿ.

Previous Post Next Post

Ads

Ads

نموذج الاتصال

×