ಪ್ರೇರಣಾ ಯೋಜನೆ 2023, ಮಹಿಳೆಯರಿಗೆ ರೂ.2.5 ಲಕ್ಷ ಸಹಾಯಧನ & ಸಾಲ ಸೌಲಭ್ಯ |

 ಎಲ್ಲರಿಗೂ ನಮಸ್ಕಾರ.. ಈ ಲೇಖನದಲ್ಲಿ ಕರ್ನಾಟಕ ಸರ್ಕಾರದ ಯೋಜನೆಗಳಲ್ಲಿ ಒಂದಾಗಿರುವ (Karnataka Govt Schemes) ಮೈಕ್ರೋ ಕ್ರೆಡಿಟ್ (ಪ್ರೇರಣಾ) ಯೋಜನೆ (Micro Credit Prerana Scheme) ಯ ಮಾಹಿತಿಯನ್ನು ನೀಡಲಾಗಿದೆ ಮಾಹಿತಿ ಪಡೆದು ಆರ್ಥಿಕ ಸ್ವಾವಲಂಬನೆ ಯೋಜನೆಯ ಲಾಭ ಪಡೆಯಿರಿ.



ಮಹಿಳೆಯರಲ್ಲಿ ಗುಂಪು ಚಟುವಟಿಕೆಗೆ ಉತ್ತೇಜನ ನೀಡಿ ಆದಾಯಗಳಿಸುವ ಉತ್ಪಾದನಾ ಅಥವಾ ಸೇವಾ ಘಟಕಗಳನ್ನು ಪ್ರಾರಂಭಿಸಲು ಮಹಿಳಾ ಸ್ವ- ಸಹಾಯ ಸಂಘದ ಮೂಲಕ ಮೈಕ್ರೋ ಕ್ರೆಡಿಟ್ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. “ಕನಿಷ್ಟ 10 ಮಹಿಳೆಯರು ಇರುವ ಸ್ವ ಸಹಾಯ ಗುಂಪುಗಳು ಸ್ವಯಂ ಉದ್ಯೋಗ ಕೈಗೊಂಡು ಉತ್ತಮ ಆದಾಯಗಳಿಸುವ ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿ ಆರ್ಥಿಕ ಸ್ವಾವಲಂಬನೆಯನ್ನು ಹೊಂದಲು ನೆರವನ್ನು ಕಲ್ಪಿಸಲಾಗುವುದು."

Micro Credit Prerana Scheme 2023 ಮಾಹಿತಿ:

ಯೋಜನೆಯ ಹೆಸರು: ಮೈಕ್ರೋ ಕ್ರೆಡಿಟ್ (ಪ್ರೇರಣಾ) ಯೋಜನೆ

ಸಹಾಯಧನ ಮೊತ್ತ: ಘಟಕ ವೆಚ್ಚ ರೂ.2.50 ಲಕ್ಷ, ರೂ. 1.50 ಲಕ್ಷ ಸಹಾಯಧನ ನೀಡುತ್ತಾರೆ ಹಾಗೂ ರೂ. 1 ಲಕ್ಷ ಸಾಲ ಸೌಲಭ್ಯ

ಅರ್ಜಿದಾರರ ವಯಸ್ಸು: 21 ವರ್ಷ ಮೇಲ್ಪಟ್ಟವರು

ಮೈಕ್ರೋ ಕ್ರೆಡಿಟ್ ಪ್ರೇರಣಾ ಯೋಜನೆಯ ವೈಶಿಷ್ಟ್ಯಗಳು:

ಕನಿಷ್ಟ 10 ಮಹಿಳಾ ಸದಸ್ಯರಿರುವ ಸ್ವ ಸಹಾಯ ಗುಂಪಿನ ಪ್ರತಿ ಸದಸ್ಯರಿಗೆ 25,000 ರೂ. ರಂತೆ ಒಟ್ಟು ರೂ.2.50 ಲಕ್ಷ ಹಣವನ್ನು ನಿಗಮದಿಂದ ಮಂಜೂರು ಮಾಡಲಾಗುವುದು.

ಮೈಕ್ರೋ ಕ್ರೆಡಿಟ್ ಯೋಜನೆಯಡಿ ಘಟಕ ವೆಚ್ಚದ ಪೈಕಿ ಪ್ರತಿ ಫಲಾನುಭವಿಗೆ ರೂ. 15 ಸಾವಿರ ಸಹಾಯಧನ ಮತ್ತು ರೂ. 10 ಸಾವಿರ ಸಾಲದ ಮೊತ್ತವಾಗಿರುತ್ತದೆ.

ಸಾಲದ ಮೊತ್ತವನ್ನು ಶೇ.4 ರ ಬಡ್ಡಿ ದರದಲ್ಲಿ 30 ಸಮಾನ್ಯ ಕಂತುಗಳಲ್ಲಿ ನಿಗಮಕ್ಕೆ ಮರು ಪಾವತಿಸಬೇಕಾಗುತ್ತದೆ.

Micro Credit Scheme 2023 Karnataka ಬೇಕಾಗುವ ದಾಖಲೆಗಳು:

  • ಭಾವಚಿತ್ರ
  • ಜಾತಿ ಪ್ರಮಾಣಪತ್ರ (Caste Certificate)
  • ಆದಾಯ ಪ್ರಮಾಣಪತ್ರ (Income Certificate)
  • ಆಧಾರ್ ಕಾರ್ಡ್ ಪ್ರತಿ (ನಿವಾಸದ ಪುರಾವೆ) ಬ್ಯಾಂಕ್ ಪಾಸ್ ಬುಕ್
  • ಸ್ವ-ಸಹಾಯ ಸಂಘ ನೋಂದಣಿ ಪ್ರಮಾಣ ಪತ್ರ

ಯಾರು ಅರ್ಜಿ ಸಲ್ಲಿಸಬಹುದು?

ಮೈಕ್ರೋ ಕ್ರೆಡಿಟ್ (ಪ್ರೇರಣಾ) ಯೋಜನೆಗೆ ಈ ಕೆಳಗಿನ ನಿಗಮಗಳ ವ್ಯಾಪ್ತಿಯಲ್ಲಿ ಬರುವ ಸಮುದಾಯದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

  • ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ,
  • ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ, 
  • ಕರ್ನಾಟಕ ತಾಂಡ ಅಭಿವೃದ್ಧಿ ನಿಗಮ,
  • ಕರ್ನಾಟಕ ಆದಿಜಾಂಬವ ಅಭಿವೃದ್ಧಿನಿಗಮ,
  • ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗದು,
  • ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮ.

Micro Credit Prerana Scheme 2023 ಸಲ್ಲಿಸುವುದು ಹೇಗೆ?

ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಸೇವಾ ಸಿಂಧು ಪೊರ್ಟಲ್ ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಕೆ ಲಿಂಕ್‌ನ್ನು ಕೇಳಗೆ ನೀಡಲಾಗಿದೆ.

2023-2024ನೇ ಸಾಲಿನಲ್ಲಿ ಪರಿಶಿಷ್ಟ ಜಾತಿಗಳ ಮತ್ತು ಪರಿಶಿಷ್ಟ ಪಂಗಡಗಳ ಆರ್ಥಿಕ ಅಭಿವೃದ್ಧಿಗಾಗಿ ಮೈಕ್ರೋ ಕ್ರೆಡಿಟ್ (ಪ್ರೇರಣಾ) ಯೋಜನೆಯ ಅರ್ಜಿ ಆಹ್ವಾನಿಸಲಾಗುತ್ತಿದೆ. ಶೀಘ್ರದಲ್ಲೇ ಆನ್‌ಲೈನ್ ಅರ್ಜಿ ಲಭ್ಯವಾಗಲಿದೆ.

ಪ್ರಮುಖ ದಿನಾಂಕಗಳು:

ಮೈಕ್ರೋ ಕ್ರೆಡಿಟ್ (ಪ್ರೇರಣಾ) ಯೋಜನೆಗೆ ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 29-11-2023

 

Micro Credit Prerana Scheme 2023

Karnataka Application Link:

ಆನ್‌ಲೈನ್ ಅರ್ಜಿ ಲಿಂಕ್: ಇಲ್ಲಿ ಕ್ಲಿಕ್ ಮಾಡಿ ಅಧಿಕೃತ ವೆಬ್‌ಸೈಟ್: sevasindhu.karnataka.gov.in

Previous Post Next Post

Ads

Ads

نموذج الاتصال

×