Crop insurance-ರಾಜ್ಯಕ್ಕೆ 42 ಕೋಟಿ ರೂಪಾಯಿ ಬೆಳೆವಿಮೆ

ಈ ಜಿಲ್ಲೆಗೆ ಸಿಂಹಪಾಲು 34.99 ಕೋಟಿ ಬಿಡುಗಡೆ



ಗದಗ ಜಿಲ್ಲೆಗೆ ಸಿಂಹಪಾಲು:-ಗದಗ: ರಾಜ್ಯದಲ್ಲಿ ಮುಂಗಾರು ಮಳೆ ಕೊರತೆಯಿಂದ ಹೆಸರು ಬೆಳೆ ನಾಶವಾಗಿದ್ದು, 42 ಕೋಟಿ ರೂ. ವಿಮೆ ನೀಡಲು ಖಾಸಗಿ ವಿಮೆ ಕಂಪನಿ ಒಪ್ಪಿಕೊಂಡಿದೆ. ಅದರಲ್ಲಿ ಗದಗ ಜಿಲ್ಲೆಗೆ ಸಿಂಹಪಾಲು 34.99 ಕೋಟಿ ರೂ. ದೊರೆತಿದೆ. ಪ್ರಸಕ್ತ ಮುಂಗಾರು ಆರಂಭದಲ್ಲಿ ಕೆಲವೆಡೆ ಹೆಸರು ಬಿತ್ತನೆ ಜರುಗಿತ್ತು. ಆದರೆ, ಸಕಾಲಕ್ಕೆ ಮಳೆಯಾಗದ ಕಾರಣ ಕೃಷಿ ಇಲಾಖೆಯ ಬಿತ್ತನೆ ಗುರಿ ಸಾಧ್ಯವಾಗಿರಲಿಲ್ಲ. ಬಿತ್ತಿದ ಬೆಳೆಯೂ ನಾಶವಾಗಿದೆ. ಹೆಸರು ಬೆಳೆ ಪರಿಹಾರಕ್ಕೆ ರೈತ ಮುಖಂಡರು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ರೈತ ಮುಖಂಡರು, ಜಿಲ್ಲಾಡಳಿತದ ಅಧಿಕಾರಿಗಳು ಮತ್ತು ವಿಮೆ ಕಂಪನಿ ಅಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆದು, ಸಂಕಷ್ಟ ಸೂತ್ರದ ಮೂಲಕ ವಿಮೆ ಪರಿಹಾರ ಕಂಡುಕೊಳ್ಳಲಾಗಿದೆ. ಪ್ರತಿ ಹೆಕ್ಟೇ‌ ಗೆ ರೈತನ ಖಾತೆಗೆ ಸರಾಸರಿ 8312.5 ರೂ. ಗಳು ಜಮೆ ಆಗಲಿದೆ. ‘ಹೆಸರು ಬೆಳೆ ವಿಮೆಗೆ ಮಂಜೂರಾತಿಯ ಆಡಳಿತಾತ್ಮಕ ಪ್ರಕ್ರಿಯೆ ಮುಗಿದಿದ್ದು, ಸದ್ಯದಲ್ಲೆ ರೈತರ ಖಾತೆಗೆ ಜಮೆ ಆಗಲಿದೆ’ ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಪ್ರತಿಕ್ರಿಯಿಸಿದ್ದಾರೆ.

ಆನ್ಲೈನ್ ಮೂಲಕ ಹಣ ಜಮೆ ಆಗಿರುವುದನ್ನು ಸ್ಟೇಟಸ್ ಚೆಕ್ ಮಾಡುವುದು ಹೇಗೆ ಈ ಕೆಳಗಿಂನಂತೆ ನೋಡಿರಿ 👇🏻

ಡೈರೆಕ್ಟಾಗಿ ಲಿಂಕ್ ಗಾಗಿ ಕೆಳಗಡೆ ಕ್ಲಿಕ್ ಮಾಡಿ

https://samrakshane.karnataka.gov.in/Premium/CheckStatusMain_aadhaar.aspx

ನಂತರ ನಿಮ್ಮ ಮೊಬೈಲ್ ನಂಬರನ್ನು ಅಥವಾ ಆಧಾರ್ ಸಂಖ್ಯೆಯನ್ನು ಹಾಕಿ Captha entry ಮಾಡಿ ಸೀಸನ್ ಆಯ್ಕೆ ಮಾಡಿ. Submit ಮೇಲೆ ಒತ್ತಿದರೆ. ನಿಮ್ಮ ಖಾತೆಗೆ ಎಷ್ಟು ಬೆಳೆ ವಿಮೆ ಹಣ ಜಮಾ ಆಗಿದೆ ಎಂಬ ಸ್ಟೇಟಸ್ ಅನ್ನು ನೀವು ನೋಡಬಹುದು.

ನಿಮ್ಮ ಜಿಲ್ಲೆಯ ಇನ್ಸೂರೆನ್ಸ್(insurance) ಕಂಪನಿ ಯಾವುದು ಎಂದು ನಿಮ್ಮ ಮೊಬೈಲ್ ನಲ್ಲಿ ಚೆಕ್ ಮಾಡುವುದು ಹೇಗೆ? ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಯಾವ ಜಿಲ್ಲೆಗೆ ಯಾವ ಇನ್ಶೂರೆನ್ಸ್ ಕಂಪನಿ ಇರುವ ಬಗ್ಗೆ ಮಾಹಿತಿಯನ್ನು ನೀವು ತಿಳಿದುಕೊಳ್ಳುತ್ತೀರಿ.👇🏻


ನಮ್ಮ ರಾಜ್ಯದಲ್ಲಿ ಇರುವಂತಹ ಇನ್ಸೂರೆನ್ಸ್ ಕಂಪನಿಗಳ ಪಟ್ಟಿ ಈ ಕೆಳಗಿನಂತಿವೆ👇🏻

  • Bajaj allianz GIC
  • SBI General Insurance
  • Future general India Insurance Company
  • HDFC ergo General Insurance Company Limited
  • Universal sompo GIC
  • SBI General Insurance
  • Agriculture insurance company of India
  • ICICI Lombard GIC

ಹೊಸ ಓಪನ್ ನಲ್ಲಿ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿ ಆಗ ನಿಮ್ಮ ಜಿಲ್ಲೆಯ ಇನ್ಸೂರೆನ್ಸ್ ಕಂಪನಿ ಯಾವುದು ಎಂಬುದರ ಬಗ್ಗೆ ಮಾಹಿತಿ ನಿಮಗೆ ಸಿಗುತ್ತದೆ.

ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಹೊಲದ ಸರ್ವೆ ನಂಬರನ್ನು ನಮೂದಿಸಿ ಬೆಳೆ ವಿಮೆ ಏನೇನೋ ಪರಿಸ್ಥಿತಿಯಾಗಿದೆ ಎಂಬ ಸಂಪೂರ್ಣ ಮಾಹಿತಿಯನ್ನು ಪಡೆಯಿರಿ.

ನಿಮ್ಮ ಜಿಲ್ಲೆ, ತಾಲೂಕು, ಗ್ರಾಮ, ಹೋಬಳಿ, ನಿಮ್ಮ ಹೊಲದ ಸರ್ವೆ ನಂಬರನ್ನು ಆಯ್ಕೆ ಮಾಡಿ ಹುಡುಕು ಅದರ ಮೇಲೆ ಒತ್ತಬೇಕು. ನಿಮ್ಮ ಹೊಲದ ಸರ್ವೆ ನಂಬರನ್ನು ನಮೂದಿಸಿ ಬೆಳೆ ವಿಮೆ ಏನೇನೋ ಪರಿಸ್ಥಿತಿಯಾಗಿದೆ ಎಂಬ ಸಂಪೂರ್ಣ ಮಾಹಿತಿಯನ್ನು ಪಡೆಯಿರಿ.

PMFBY

(ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ) ಕೇಂದ್ರ ಸರ್ಕಾರದ ಒಂದು ಅದ್ಭುತ ಯೋಜನೆಯಾಗಿದ್ದು,ಈ ಯೋಜನೆಯಡಿ ನಾವು ಬೆಳೆಯುವಂತಹ ಬೆಳೆಗಳಿಗೆ ವಿಮೆ ಮಾಡಿಸಬಹುದಾಗಿದೆ.

ನಾವು ನಮ್ಮ ಜೀವನದಲ್ಲಿ ನಮ್ಮ ವಾಹನಗಳಿಗೆ, ಮೊಬೈಲ್ ಗಳಿಗೆ ಹೇಗೆ ಹಲವಾರು ವಸ್ತುಗಳಿಗೆ ವಿಮೆಯನ್ನು ಮಾಡಿಸುತ್ತೇವೆ, ಆಗ ಅವುಗಳಿಗೆ ಏನಾದರೂ ಡ್ಯಾಮೇಜದಲ್ಲಿ ಇನ್ಸೂರೆನ್ಸ್ ಕಂಪನಿಯಿಂದ ನಮಗೆ ವಿಮೆ ಕ್ಲೇಮ್ ಆಗುತ್ತದೆ.

ಅದೇ ರೀತಿ ಹಲವಾರು ವರ್ಷಗಳಿಂದ ರೈತರ ಬೆಳೆಗಳು ಹಾನಿಯಾಗುತ್ತಿದ್ದು ರೈತರಿಗೆ ನೆರವಾಗಲು ಸರ್ಕಾರವು ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯನ್ನು ಜಾರಿಗೆ ತಂದಿದ್ದು, ಈ ಮೂಲಕ ರೈತರು ತಮ್ಮ ಹೊಲದಲ್ಲಿ ತಾವು ಬೆಳೆಯುವಂತಹ ಬೆಳೆಗಳಿಗೆ ಬೆಳೆ ವಿಮೆಯನ್ನು ಮಾಡಿಸಬೇಕು, ಹಾಗೂ ಮುಂದೆ ಬೆಳಗಳು ಹಾನಿಯಾದಲ್ಲಿ ರೈತರಿಗೆ ಇನ್ಶೂರೆನ್ಸ್ ಕಂಪನಿಗಳ ವತಿಯಿಂದ ಬೆಳೆವಿಮೆ ಕ್ಲೇಮ್ ಆಗುತ್ತದೆ.

ಕೃಷಿ ಆಧಾರಿತ ಹೆಚ್ಚಿನ ಮಾಹಿತಿಗಾಗಿ ಹಾಗೂ ಸರ್ಕಾರಿ ಯೋಜನೆಗಳಿಗೆ ಎಲ್ಲ ಮಾಹಿತಿಯನ್ನು ಪಡೆಯಲು ಕೃಷಿ ವಾಹಿನಿ ಜಾಲತಾಣದ ಸಂಪರ್ಕದಲ್ಲಿರಿ. ನಾವು ಯಾವುದೇ ಸುಳ್ಳು ಸುದ್ದಿಯನ್ನು ಪ್ರಕಟಿಸುವುದಿಲ್ಲ ನಾವು ಬರೆದಿರುವ ಲೇಖನವು ಅರ್ಥಪೂರ್ಣವಾಗಿದ್ದು ಎಲ್ಲರಿಗೂ ಉಪಯೋಗವಾಗುವಂತಿದ್ದರೆ ತಪ್ಪದೆ ಎಲ್ಲರಿಗೂ ಈ ಲೇಖನವನ್ನು ಶೇರ್ ಮಾಡಿ. ಇನ್ನೂ ಹೆಚ್ಚಿನ ಕೃಷಿ ಆಧಾರಿತ ಅಪ್ಡೇಟ್ ಪಡೆಯಲು ಕೃಷಿವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ



1 Comments

Previous Post Next Post

Ads

Ads

نموذج الاتصال

×