Eclipse in October: ಈ ತಿಂಗಳಲ್ಲಿ ಸಂಭವಿಸಲಿದೆ 2 ಗ್ರಹಣ; ಅಕ್ಟೋಬರ್‌ ತಿಂಗಳ ಸೂರ್ಯ, ಚಂದ್ರಗ್ರಹಣದ ಸಂಪೂರ್ಣ ವಿವರ ಇಲ್ಲಿದೆ

ಅಕ್ಟೋಬರ್‌ ತಿಂಗಳಿನಲ್ಲಿ ಸೂರ್ಯ ಹಾಗೂ ಚಂದ್ರಗ್ರಹಣ ಎರಡೂ ಸಂಭವಿಸಲಿದ್ದು, ಯಾವ ದಿನದಂದು ಸೂರ್ಯಗ್ರಹಣ, ಯಾವ ದಿನದಂದು ಚಂದ್ರಗ್ರಹಣ ನಡೆಯಲಿದೆ, ಗ್ರಹಣಗಳು ಎಲ್ಲೆಲ್ಲಿ ಕಾಣಸಲಿವೆ ಎಂಬ ಕುರಿತ ಮಾಹಿತಿ ಇಲ್ಲಿದೆ.



ಅಕ್ಟೋಬರ್‌ ತಿಂಗಳು ಎಂದರೆ ವರ್ಷ ಋತು ನಿಧಾನಕ್ಕೆ ಹಿಂದೆ ಸರಿದು, ಶರತ್ಕಾಲದ ಆಗಮನದ ಮುನ್ಸೂಚನೆಯನ್ನು ನೀಡುವ ತಿಂಗಳು. ತಣ್ಣನೆ ಬೀಸುವ ಚಳಿಗಾಳಿಯೊಂದಿಗೆ ಹಿತವಾದ ಅನುಭವವನ್ನು ನೀಡುವ ಮಾಸ. ಈ ವರ್ಷ ಅಕ್ಟೋಬರ್‌ನಲ್ಲಿ ಆಗಸದಲ್ಲಿ ಕೌತುಕ ನಡೆಯಲಿದೆ. ಈ ತಿಂಗಳಿನಲ್ಲಿ ಸೂರ್ಯಗ್ರಹಣ ಹಾಗೂ ಚಂದ್ರಗ್ರಹಣ ಎರಡೂ ಕಾಣಿಸಲಿದೆ. ಗ್ರಹಣಗಳು ಶತಶತಮಾನಗಳಿಂದಲೂ ಮಾನವ ಕುಲದಲ್ಲಿ ಕೌತುಕವನ್ನು ಹುಟ್ಟಿಸಿದ್ದು ಮಾತ್ರವಲ್ಲ, ಗ್ರಹಣ ಎಂದರೇನು ಎನ್ನುವ ಪ್ರಶ್ನೆಯನ್ನೂ ಹುಟ್ಟುಹಾಕಿವೆ. ಪುರಾಣಗಳು, ದಂತಕಥೆಗಳು ಗ್ರಹಣಗಳ ಕುರಿತು ಆಳವಾದ ಅರ್ಥಗಳನ್ನು ಹೊಂದಿವೆ.

ಖಗೋಳಶಾಸ್ತ್ರಜ್ಞರು, ಉತ್ಸಾಹಿಗಳು, ಅಕ್ಟೋಬರ್‌ನಲ್ಲಿ ನಡೆಯುವ ಈ ಎರಡು ರೋಚಕ ಘಟನೆಗಳಿಗಾಗಿ ಎದುರು ನೋಡುತ್ತಿದ್ದಾರೆ. ಹಾಗಾದರೆ ಸರಿ, ಈ ಬಾರಿ ಅಕ್ಟೋಬರ್‌ನಲ್ಲಿ ಯಾವ ದಿನದಂದು ಚಂದ್ರಗ್ರಹಣ ಹಾಗೂ ಸೂರ್ಯಗ್ರಹಣಗಳು ಸಂಭವಿಸಲಿವೆ, ಎಲ್ಲೆಲ್ಲಿ ಕಾಣಿಸಲಿದೆ ಎಂಬ ಕುರಿತ ಮಾಹಿತಿ ಇಲ್ಲಿದೆ.

ಅಕ್ಟೋಬರ್‌ 2023ರಲ್ಲಿ ಸೂರ್ಯಗ್ರಹಣ ಯಾವಾಗ?

ಸೂರ್ಯನ ಮುಂದೆ ಚಂದ್ರನು ಬಂದಾಗ ಸೂರ್ಯಗ್ರಹಣ ಸಂಭವಿಸುತ್ತದೆ. ಆ ಸಮಯದಲ್ಲಿ ಭೂಮಿಯ ಮೇಲೆ ಸಂಪೂರ್ಣ ಕತ್ತಲಾಗುತ್ತದೆ ಅಥವಾ ಭಾಗಶಃ ಕತ್ತಲಾಗುತ್ತದೆ. ಚಂದ್ರನ ಸೂರ್ಯನಿಗಿಂತ ಚಿಕ್ಕದಾಗಿ ಕಾಣಿಸಿಕೊಂಡಾಗ ಸೂರ್ಯನ ಬೆಳಕನ್ನು ತಡೆಯುತ್ತದೆ ಮತ್ತು ಸೂರ್ಯನ ಸುತ್ತಲೂ ಉಂಗುರದಂತೆ ನೋಟವನ್ನು ನೀಡುತ್ತದೆ. ಇಂದು ವಾರ್ಷಿಕ ಗ್ರಹಣ ಎಂದು ಕರೆಯುತ್ತಾರೆ.


ವಾರ್ಷಿಕ ಸೂರ್ಯಗ್ರಹಣ ಕಾಣಿಸಿಕೊಂಡಾಗ ಭಾಗಶಃ ಸೂರ್ಯ ಗ್ರಹಣದಂತೆ ಸಾವಿರಾರು ಕಿಲೋಮೀಟರ್‌ ಅಥವಾ ಮೈಲುಗಳಷ್ಟು ಅಗಲವಿರುವ ಭೂಮಿಯು ಕತ್ತಲಾಗುತ್ತದೆ. ಈ ಬಾರಿ ಅಕ್ಟೋಬರ್‌ 14 ರಂದು ಸೂರ್ಯಗ್ರಹಣ ಸಂಭವಿಸಲಿದೆ. ಈ ದಿನ ಚಂದ್ರನ ಸುತ್ತ ಸೂರ್ಯನು ಬೆಂಕಿ ಉಂಗುರವನ್ನು ಸೃಷ್ಟಿಸಲಿದ್ದಾನೆ.


ಸೂರ್ಯ ಗ್ರಹಣದ ದಿನಾಂಕ: ಅಕ್ಟೋಬರ್‌ 14, 2023

ಸೂರ್ಯಗ್ರಹಣ ಆರಂಭ (ನವದೆಹಲಿ): ಅಕ್ಟೋಬರ್‌ 14ರ ರಾತ್ರಿ 11.29

ಸೂರ್ಯಗ್ರಹಣ ಅಂತ್ಯ (ನವದೆಹಲಿ): ಅಕ್ಟೋಬರ್‌ 14ರ ರಾತ್ರಿ 11.34

2023 ಅಕ್ಟೋಬರ್‌ನಲ್ಲಿ ಚಂದ್ರಗ್ರಹಣ ಯಾವಾಗ?

ಭೂಮಿಯು ಸೂರ್ಯ ಮತ್ತು ಚಂದ್ರನ ನಡುವೆ ಬಂದಾಗ ಅದು ಚಂದ್ರನ ಮೇಲ್ಮೈ ಮೇಲೆ ನೆರಳು ಬೀಳುವ ಮೂಲಕ ಚಂದ್ರಗ್ರಹಣ ಉಂಟಾಗುತ್ತದೆ. ಚಂದ್ರಗ್ರಹಣ ನೋಡಲು ಆಸಕ್ತಿದಾಯಕವಾಗಿರುತ್ತದೆ. ಇದು ಹುಣ್ಣಿಮೆ ಸಮಯದಲ್ಲಿ ಮಾತ್ರ ಸಂಭವಿಸುತ್ತದೆ. ಚಂದ್ರನು ಭಾರತೀಯ ಕಾಲಮಾನ 1.06 ಮತ್ತು 2.23ರ ನಡುವೆ ಭೂಮಿಯ ನೆರಳಿನ ಮೂಲಕ ಹಾದುಹೋದಾಗ ಭಾಗಶಃ ಚಂದ್ರಗ್ರಹಣ ಸಂಭವಿಸುತ್ತದೆ. ಏಷ್ಯಾ, ರಷ್ಯಾ, ಆಫ್ರಿಕಾ, ಅಮೆರಿಕ, ಯರೋಪ್‌, ಅಂಟಾರ್ಟಿಕಾ ಮತ್ತು ಓಷಿಯಾನಿಯಾ ಸೇರಿದಂತೆ ಭೂಮಿಯ ಮೇಲೆ ಬಹುತೇಕ ಕಡೆ ಚಂದ್ರಗ್ರಹಣ ಗೋಚರಿಸುತ್ತದೆ. ಇದು ನವದೆಹಲಿಯಿಂದ ನೈಋತ್ಯ ಭಾಗದಲ್ಲಿ ಗೋಚರಿಸುತ್ತದೆ. ಈ ಬಾರಿ ಅಕ್ಟೋಬರ್‌ 28 ರಂದು ಚಂದ್ರಗ್ರಹಣ ಕಾಣಿಸಲಿದೆ.


ಚಂದ್ರಗ್ರಹಣದ ದಿನಾಂಕ: ಅಕ್ಟೋಬರ್‌ 28, 2023

ಚಂದ್ರಗ್ರಹಣ ಆರಂಭ (ನವದೆಹಲಿ): ಅಕ್ಟೋಬರ್‌ 28ರ ರಾತ್ರಿ 11.31

ಚಂದ್ರಗ್ರಹಣ ಅಂತ್ಯ (ನವದೆಹಲಿ): ಅಕ್ಟೋಬರ್‌ 28ರ ಬೆಳಗಿನ ಜಾವ 3.36 ನಿಮಿಷ.



Previous Post Next Post

Ads

Ads

نموذج الاتصال

×