ಇಂದು ಕೇಂದ್ರ ಮತ್ತು ರಾಜ್ಯ (Central and state government) ಸರಕಾರಗಳು ಹೆಚ್ಚು ಶಿಕ್ಷಣಕ್ಕೆ ಒತ್ತು ನೀಡುತ್ತದೆ ಈ ಮೂಲಕ ಉತ್ತಮ ಶಿಕ್ಷಣ ವ್ಯವಸ್ಥೆಯಿಂದ ದೇಶದ ಭವಿಷ್ಯ ಉಜ್ವಲವಾಗಿಸುವ ಮುಖ್ಯ ಉದ್ದೇಶ ಇಟ್ಟುಕೊಂಡಿದೆ. ಹಾಗಾಗಿ ಶಿಕ್ಷಣ ಇಲಾಖೆಯು ಮಕ್ಕಳ ಅಥವಾ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕೆಲ ನಿಯಮ ಅಳವಡಿಸಲು ಈ ಹಿಂದೆ ಸೂಚನೆ ನೀಡಿದ್ದು ಈಗ ಅಂತಹ ಸೂಚನೆಗಳ ಮರು ಪರಿಶೀಲನೆ ಆಗುತ್ತಿದ್ದು ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಶಿಕ್ಷಣ ವ್ಯವಸ್ಥೆ ಉತ್ತಮವಾಗಿರಬೇಕೆಂದರೆ ಎಲ್ಲರ ಸಹಕಾರ ಕೂಡ ಅಗತ್ಯ. ಶಿಕ್ಷಣ ಇಲಾಖೆಯ ಮಾರ್ಗದರ್ಶನದ ಅನ್ವಯ ಕೆಲಸ ಮಾಡುವ ಶಾಲಾ ಕಾಲೇಜುಗಳು ಮಕ್ಕಳಲ್ಲಿ ಶಿಸ್ತು ಕಾಯಲು ಅನೇಕ ನಿಯಮ ವಿಧಿಸುತ್ತಲಿದ್ದು ಶಿಕ್ಷಣ ಚಟುವಟಿಕೆ ಉತ್ತಮವಾಗಿಸುವ ಸಲುವಾಗಿ ಶಾಲಾ ಕಾಲೇಜಿನ ಹೊರ ವಾತಾವರಣ ಕೂಡ ಉತ್ತಮವಾಗಿರಲೇ ಬೇಕು ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಮಹತ್ವದ ಸೂಚನೆ ನೀಡಿದೆ.
ಯಾವುದು ಆ ಸೂಚನೆ?
ಶಾಲಾ ಕಾಲೇಜುಗಳ 100ಮೀಟರ್ ಅಂತರದಲ್ಲಿ ತಂಬಾಕು ಯುಕ್ತ ವಸ್ತುಗಳ ಮಾರಾಟ ಮಾಡದಂತೆ ನಿಷೇಧ ಹೇರಲಾಗಿದೆ. ಶಾಲಾ ಕಾಲೇಜಿನ ಆವರಣ ಸುತ್ತ ಮುತ್ತಲಿನ ಪ್ರದೇಶಗಳು ಮಕ್ಕಳ ಶೈಕ್ಷಣಿಕ ಕಾರ್ಯಕ್ರಮಕ್ಕೆ ಆಟೋಟ ಪಾಠ ಪ್ರವಚನಕ್ಕಾಗಿ ಇರುವುದು ಹಾಗಾಗಿ ಮಕ್ಕಳ ಆರೋಗ್ಯ ದೃಷ್ಟಿಯಿಂದ ಈ ನಿಯಮ ಬಂದಿದೆ.
2016ರ ಮಕ್ಕಳ ರಕ್ಷಣಾ ನೀತಿಯ ಅನ್ವಯ ಮಕ್ಕಳು ಯಾವುದೇ ವಿಧವಾದ ಶೋಷಣೆಗೆ ಒಳಗಾಗುವುದನ್ನು ತಪ್ಪಿಸಲು ಈ ಒಂದು ಕ್ರಮ ಜಾರಿಗೆ ತರಲು ಶಿಕ್ಷಣ ಇಲಾಖೆ ಮುಂದಾಗಿದೆ.
ಸಿಗರೇಟ್ ತಂಬಾಕು ಉತ್ಪನ್ನಗಳ ಮಾರಾಟ ಮತ್ತು ಜಾಹಿರಾತುಗಳು ಎಲ್ಲೆಡೆ ಪ್ರಚಾರ ಮಾಡಿ ಮಕ್ಕಳ ಬುದ್ಧಿ ಹಾಳು ಮಾಡದಂತೆ ಸರಕಾರವು ಶಿಕ್ಷಣ ಇಲಾಖೆ ಮುಖೇನ ಅನೇಕ ಜನಪರ ಕಾರ್ಯಕ್ರಮ ಜಾರಿಗೆ ತರಲು ಮುಂದಾಗಿದೆ. ಮಕ್ಕಳಿಗೆ ಈ ಬಗ್ಗೆ ಅರಿವು ಮೂಡಿಸಲು ಮತ್ತು ಪೋಷಕರಿಗೆ ಕೂಡ ಈ ಬಗ್ಗೆ ತಿಳಿಸುವ ಸಲುವಾಗಿ NSS, NCC, ಮಕ್ಕಳ ರಕ್ಷಣಾ ಸಮಿತಿ,ಶಿಕ್ಷಕ- ರಕ್ಷಕರ ಸಮಿತಿ, ಶಾಲಾ ಅಭಿವೃದ್ಧಿ ಸಮಿತಿ, SDMC ಇತರ ಸಮಿತಿ ಮೂಲಕ ದುಷ್ಪರಿಣಾಮ ಗಳ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸುವುದು ಇಲ್ಲಿನ ಮುಖ್ಯ ಉದ್ದೇಶವಾಗಿದೆ.
ಶಾಲಾ ಕಾಲೇಜಿನಲ್ಲಿ ಮೊಬೈಲ್ ಬಳಕೆಯನ್ನು ಅಂದರೆ ಮಕ್ಕಳು ಮೊಬೈಲ್ ಬಳಕೆ ಮಾಡುವುದನ್ನು ನಿಷೇಧ ಮಾಡಲಾಗಿದೆ. ಸರಕಾರಿ ಅಥವಾ ಸರಕಾರೇತರ ಅನುದಾನದ ಶಾಲಾ ಕಾಲೇಜೆ ಇರಲಿ ಅವರು ಪಾಠದ ಅವಧಿ ಅಥವಾ ಇತರ ಅವಧಿಯಲ್ಲಿ ಮೊಬೈಲ್ ಬಳಸದಂತೆ ಸೂಚಿಸಲಾಗಿದೆ.
ಅಪಾಯಕಾರಿ ಹಾಗೂ ಅಸುರಕ್ಷಿತ ವಾಗಿ ಜನರ ಮತ್ತು ಮಕ್ಕಳ ಪ್ರಯಾಣ ತಡೆಗಟ್ಟಲು ರಾಜ್ಯದ ಎಲ್ಲ ಶಾಲಾ ಆಡಳಿತ ಮಂಡಳಿಗೆ ಶಿಕ್ಷಣ ಇಲಾಖೆಯಿಂದ ರಾಜ್ಯದ ಎಲ್ಲ ಶಾಲಾ ಕಾಲೇಜುಗಳಿಗೆ ಸೂಚನೆ ಬಂದಿದೆ. ಇದಕ್ಕೆ ಮುಖ್ಯ ಕಾರಣ ಸರಕು ಮತ್ತು ಸಾಗಾಣಿಕೆ ವಾಹನದಲ್ಲಿ ಕೂಲಿ ಕಾರ್ಮಿಕರು ಹಾಗೂ ಮಕ್ಕಳ ಪ್ರಯಣಾಕ್ಕೆ ಬಿಡಲಾಗಿದ್ದು ಇದು ಅಪಾಯ ಎಂದು ಮನಗಂಡ ಶಿಕ್ಷಣ ಇಲಾಖೆ ಈ ಕ್ರಮಕ್ಕೆ ಮುಂದಾಗಿದೆ.
ಈ ಬಗ್ಗೆ ದೂರುಗಳಿದ್ದಲ್ಲಿ 1908 ಎಂಬ ಸಂಖ್ಯೆ ಮೂಲಕ ಕರೆಮಾಡಿ ದೂರು ಸಲ್ಲಿಸಬಹುದಾಗಿದೆ.ಅನುದಾನ ಮತ್ತು ಅನುದಾನ ರಹಿತ ಶಾಲಾ ಕಾಲೇಜಿಗೆ ಈ ಒಂದು ಶೈಕ್ಷಣಿಕ ವ್ಯವಸ್ಥೆ ಕಲ್ಪಿಸುವ ಉದ್ದೇಶ ಹೊಂದಿದೆ.
ಒಟ್ಟಾರೆಯಾಗಿ ಶೈಕ್ಷಣಿಕ ಚಟುವಟಿಕೆ ಉತ್ತಮ ಇರಬೇಕೆಂದರೆ ಶಾಲಾ ಕಾಲೇಜು , ಶಿಕ್ಷಣ ಇಲಾಖೆಯ ಜೊತೆ ಜನಸಾಮಾನ್ಯರ ಸಹಕಾರ ಇರಬೇಕಿದೆ. ಜನರಿಗೆ ಈ ಬಗ್ಗೆ ಅರಿವು ಮೂಡಿಸಲಷ್ಟೇ ಸರಕಾರಕ್ಕೆ ಹಾಗೂ ಇಲಾಖೆಗೆ ಸಾಧ್ಯವಿದ್ದು ಉಳಿದೆಲ್ಲ ವಿಚಾರ ಜನರ ಇಚ್ಛೆಗೆ ಬಿಟ್ಟದ್ದು ಹಾಗಾಗಿ ಜನರ ಸಹಕಾರ ಕೂಡ ಇಲ್ಲಿ ತುಂಬಾ ಮುಖ್ಯ.