ಹಲೋ ಸ್ನೇಹಿತರೇ, ಇಂದಿನ ನಮ್ಮ ಲೇಖನಕ್ಕೆ ನಿಮಗೆಲ್ಲರಿಗೂ ಸ್ವಾಗತ, ವಿಧಾನಸಭಾ ಚುನಾವಣೆಯಲ್ಲಿ 135 ಸ್ಥಾನಗಳನ್ನು ಗೆದ್ದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು, ಕಾಂಗ್ರೆಸ್ ಸರ್ಕಾರದ ಮೊದಲ ಸಚಿವ ಸಂಪುಟದಲ್ಲಿ ಎಲ್ಲಾ ‘ಗ್ಯಾರಂಟಿ’ಗಳನ್ನು ಜಾರಿಗೊಳಿಸಲಾಗುವುದು ಎಂದು ಪಕ್ಷದ ‘ಗ್ಯಾರೆಂಟಿ ಕಾರ್ಡ್’ನಲ್ಲಿ ಭರವಸೆ ನೀಡಿದ್ದಾರೆ. ಇಂತಹ ಸಂದರ್ಭದಲ್ಲಿ ಕರೆಂಟ್ ಬಿಲ್ ಬಂದರೆ ಆ ಬಿಲ್ ಮುಖ್ಯಮಂತ್ರಿ ಮನೆಗೆ ಕಳುಹಿಸಲು ನಿರ್ಧಾರ ಇದರ ಸಂಪೂರ್ಣ ಮಾಹಿತಿ ತಿಳಿಯಲು ನಮ್ಮ ಈ ಲೇಖನವನ್ನು ಸ್ವಲ್ಪನೂ ಮಿಸ್ ಮಾಡದೆ ಕೊನೆಯವರೆಗೂ ಓದಿ.
ಚುನಾವಣೆಯಲ್ಲಿ 135 ಸ್ಥಾನಗಳಲ್ಲಿ ಗೆದ್ದು ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತೇವೆ ಎಂಬ ವಿಶ್ವಾಸವಿದೆ, ಕಾರ್ಯಕರ್ತರು ವಿತರಿಸುತ್ತಿರುವ ಖಾತರಿ ಕಾರ್ಡ್‌ಗೆ ನಾನು ಮತ್ತು ಸಿದ್ದರಾಮಯ್ಯ ಸಹಿ ಮಾಡಿದ್ದೇವೆ. ಮೊದಲ ಕ್ಯಾಬಿನೆಟ್‌ನಲ್ಲಿಯೇ ನಾವು ಹೇಳಿದ ಯೋಜನೆಗಳನ್ನು ಜಾರಿಗೆ ತರುತ್ತೇವೆ. ಪ್ರತಿ ಮನೆಗೆ 200 ಯೂನಿಟ್‌ಗಳು ಉಚಿತ, ಕುಟುಂಬದ ಮುಖ್ಯಸ್ಥರಿಗೆ 2,000 ರೂ. ಮತ್ತು ಕುಟುಂಬಕ್ಕೆ 10 ಕೆಜಿ ಅಕ್ಕಿ ಖಾತರಿ ಕಾರ್ಡ್‌ನಲ್ಲಿ, ನಿರುದ್ಯೋಗ ಯುವಕರಿಗೆ 3000 ಹಾಗೆ ಎಲ್ಲಾ ಹೆಣ್ಣು ಮಕ್ಕಳಿಗೆ ಉಚಿತ ಬಸ್ ಪಾಸ್ ಎಂದು ಶಿವಕುಮಾರ್ ಹೇಳಿದರು.
ಪ್ರತ್ಯೇಕ ಮಂಡಳಿ ರಚಿಸುವ ಮೂಲಕ ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಪ್ರದೇಶವನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಭರವಸೆ ನೀಡಿದರು. ಈ ಪ್ರದೇಶದ ಯುವಕರು ಉದ್ಯೋಗಕ್ಕಾಗಿ ದೂರದ ಮುಂಬೈ, ಬೆಂಗಳೂರು ಅಥವಾ ವಿದೇಶಗಳಿಗೆ ಹೋಗಬೇಕಾಗಿಲ್ಲ ಎಂದು ಅವರು ಹೇಳಿದರು.
ಇಂತಹ ಸಂದರ್ಭದಲ್ಲಿ ಮೊದಲನೇ ಕ್ಯಾಬಿನೆಟ್ ಮೀಟಿಂಗ್ ನಲ್ಲಿ 2022 -23 ರಲ್ಲಿ ಪಾಸ್ ಆಗಿ ನಿರುದ್ಯೋಗಿಗಳಾದವರಿಗೆ ಮಾತ್ರ 2 ವರ್ಷದವರೆಗೆ 3000 ಕೊಡಲಾಗುವುದು ಹಾಗೆ ಅದರೊಳಗಾಗಿ ಖಾಸಗಿ ಕಂಪನಿಗಳಲ್ಲಿ ಕೆಲಸ ಸಿಕ್ಕರೆ ಅವರಿಗೆ ಹಣ ಖಡಿತವಾಗುವುದು ಎಂದು ಹೇಳಿದ್ದಾರೆ ಅದಕ್ಕಾಗಿ ಸಿ ಟಿ ರವಿ ಅವರು ಮಾದ್ಯಮದ ಮೂಲಕ ತರಾಟೆಗೆ ತೆಗೆದುಕೊಂಡಿದ್ದಾರೆ ಎಲ್ಲಾ ಮಹಿಳೆಯರಿಗೂ ಉಚಿತ ಬಸ್ ಪ್ರಯಾಣ ಕೊಡಲೇಬೇಕು, ಎಲ್ಲಾ ನಿರುದ್ಯೋಗಿ ಯುವಕರಿಗೂ ಉಚಿತ 3000 ಕೊಡಲೇಬೇಕು, ಎಲ್ಲಾ ಮಹಿಳೆಯರಿಗೂ ಉಚಿತ 2000 ಕೊಡಲೇಬೇಕು, ಎಲ್ಲಾ ರೇಷನ್ ಕಾರ್ಡ್‌ದಾರರಿಗೂ 10 ಕೆ ಜಿ ಅಕ್ಕಿ ಕೊಡಲೇಬೇಕು,ಹಾಗೆ ಎಲ್ಲಾ ಮನೆಗಳಿಗೂ 200 ಯುನಿಟ್ ವಿಧ್ಯುತ್ ಕೊಡಲೇಬೇಕು ಕರೆಂಟ್ ಬಿಲ್ ಮನೆಗೆ ಬಂದರೆ ಆ ಬಿಲ್ ಯಾರೂ ಕೂಡ ಕಟ್ಟಬೇಡಿ ಆ ಬಿಲ್ಲ್ ಅನ್ನು ಮುಂಖ್ಯಮಂತ್ರಿಗೆ ಕಳುಹಿಸಿ ಎಂದು ಕಾಂಗ್ರೆಸ್ ಸರ್ಕಾರಕ್ಕೆ ಹೊಸ ನಿಯಮವನ್ನು ಸಿ ಟಿ ರವಿ ರವರು ಮಾದ್ಯಮದ ಮೂಲಕ ತಳಿಸಿದ್ದಾರೆ.