ಹಲೋ ಸ್ನೇಹಿತರೇ ನಮಸ್ಕಾರ, ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಸ್ವಾಗತ, ರಾಜ್ಯದ ಎಲ್ಲಾ ರೈತರಿಗೆ ಮತ್ತೊಂದು ಸಿಹಿ ಸುದ್ದಿ ಎಂದು ಹೇಳಬಹುದು. ರಾಜ್ಯದಲ್ಲಿ ಬಿತ್ತನೆ ಬೀಜಕ್ಕೆ ಕ್ಯೂ ಆರ್ ಕೋಡ್ ಕಡ್ಡಾಯವಾಗಲಿದೆ. ರೈತರಿಗೆ ವಂಚನೆ ತಡೆಯಲು ಕೃಷಿ ಇಲಾಖೆ ಈ ಕ್ರಮವನ್ನು ಕೈಗೊಂಡಿದೆ. ಸರ್ಕಾರವು ರೈತರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಲೇ ಇದೆ. ಈ ಹೊಸ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ವಿವರವಾಗಿ ತಿಳಿಸಲಾಗಿದೆ. ಎಲ್ಲರೂ ಸಂಪೂರ್ಣವಾಗಿ ನಮ್ಮ ಲೇಖನವನ್ನು ಓದಿ.
ರೈತರು ಬಿತ್ತನೆ ಬೀಜ ಪಡೆಯಲು ಕ್ಯೂ ಆರ್ ಕೋಡ್ ಕಡ್ಡಾಯವಾಗಲಿದೆ ಎಂದು ಸರ್ಕಾರ ತಿಳಿಸಿದೆ. ರೈತರಿಗೆ ವಂಚನೆ ತಡೆಯಲು ಕೃಷಿ ಇಲಾಖೆ ಈ ಕ್ರಮ ಕೈಗೊಂಡಿದ್ದು, ಪ್ರಾಮಾಣಿಕೃತ ಉತ್ತಮ ಗುಣಮಟ್ಟದ ಬಿತ್ತನೆ ಬೀಜಗಳನ್ನು ಪೂರೈಸಲು ಕ್ರಮ ಕೈಗೊಳ್ಳಲಾಗಿದೆ. ನಕಲಿ ಹಾವಳಿ ತಡೆಯಲು ಪ್ರಸ್ತುತ ಮುಂಗಾರು ಹಂಗಾಮಿನಿಂದಲೇ ಬಿತ್ತನೆ ಬೀಜಗಳ ಪ್ಯಾಕೇಟ್ ಮೇಲೆ ಕೋಡ್ ಕಡ್ಡಾಯಗೊಳಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಬಿತ್ತನೆ ಬೀಜಗಳನ್ನು ರೈತ ಸಂಪರ್ಕ ಕೇಂದ್ರಗಳಲ್ಲಿ ಕೋಡ್ ನಮೂದಿಸಿರುವುದನ್ನು ಕಡ್ಡಾಯಗೊಳಿಸಲಾಗಿದೆ.
ಈಗಾಗಲೇ ಅನೇಕ ಜಿಲ್ಲೆಗಳಲ್ಲಿ ಮುಂಗಾರು ಬಿತ್ತನೆ ಕಾರ್ಯ ಶುರುವಾಗಿದೆ ಇದಕ್ಕೆ ಅಗತ್ಯವಾದ ಬೀಜ ರಸಗೊಬ್ಬರ ಮಾರಾಟಕ್ಕೆ ರೈತರ ಸಂಪರ್ಕ ಕೇಂದ್ರಗಳು ತೆರೆದು ಸಬ್ಸಿಡಿ ದರದಲ್ಲಿ ಬೀಜಗಳನ್ನು ವಿತರಿಸಲಾಗುವುದು. ಮೇ 2 ಅಥವಾ 3 ನೇ ವಾರದಲ್ಲಿ ರೈತ ಸಂಪರ್ಕ ಕೇಂದ್ರದಲ್ಲಿ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಕ್ಯೂ ಆರ್ ಕೋಡ್ ಪರಿಶೀಲಿಸದೇ ಬಿತ್ತನೆ ಬೀಜವನ್ನು ವಿತರಿಸಲಾಗುವುದಿಲ್ಲ ಎಂದು ಹೇಳಲಾಗಿದೆ.
ದೇಶದ ರೈತಾಪಿ ವ್ಯವಸಾಯಕ್ಕೆ ಪ್ರೋತ್ಸಾಹ ನೀಡುವ ಸಲುವಾಗಿ ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿ ಮಾಡಿದೆ. ಅದರಲ್ಲಿ ಪಿ ಎಮ್ ಕಿಸಾನ್ ಯೋಜನೆ ಕೂಡ ಒಂದಾಗಿದೆ. ಇದೀಗ ಸರ್ಕಾರ ರೈತರಿಗೆ ವಾರ್ಷಿಕವಾಗಿ 6 ಸಾವಿರ ಆರ್ಥಿಕ ನೆರವು ನೀಡಿದೆ. ಈ ಮೊತ್ತವನ್ನು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿಯಲ್ಲಿ ಡಿಬಿಟಿ ಮೂಲಕ ಅವರ ಖಾತೆಗೆ ವರ್ಗಾಯಿಸಲಾಗುತ್ತಿದೆ.
ಪ್ರತಿ 4 ತಿಂಗಳಿಗೊಮ್ಮೆ 3 ಕಂತುಗಳಾಗಿ ತಲಾ 2 ಸಾವಿರ ಗಳಂತೆ ರೈತ ಬ್ಯಾಂಕ್ ಖಾತೆಗೆ ಹಣವನ್ನು ಜಮಾ ಮಾಡಲಾಗುತ್ತದೆ. ಈಗಾಗಲೇ ಈ ಯೋಜನೆಯ 13 ಕಂತುಗಳನ್ನು ಬಿಡುಗಡೆ ಮಾಡಲಾಗಿದೆ. 14 ನೇ ಕಂತಿನ ಹಣವು ಮೇ ಅಥವಾ ಜೂನ್ ತಿಂಗಳಿನಲ್ಲಿ ಜಮಾ ಮಾಡಲಾಗುತ್ತದೆ. 13 ನೇ ಕಂತಿನ 8 ಕೋಟಿಗಿಂತ ಹೆಚ್ಚಿನ ರೈತರು ಈ ಹಣವನ್ನು ಪಡೆದುಕೊಂಡಿದ್ದಾರೆ. ಸದ್ಯ ರೈತರ ಭೂ ದಾಖಲೆಯ ಪರಿಶೀಲನೆ ನಡೆಯುತ್ತಿದೆ. ಭೂ ದಾಖಲೆ ತಪ್ಪು ಕಂಡು ಬಂದಲ್ಲಿ ಫಲಾನುಭವಿಗಳ ಪಟ್ಟಿಯಿಂದ ಹಲವು ರೈತರ ಹೆಸರನ್ನು ತೆಗೆದು ಹಾಕಲಾಗುತ್ತದೆ. ಇದಲ್ಲದೇ ಇ ಕೆವೈಸಿ ಪೂರ್ಣಗೊಳಿಸದೆ ಇದ್ದರೆ ಕೃಷಿ ಇಲಾಖೆ ನಿರಾಕರಿಸುತ್ತದೆ.