VIDEO : ಕ್ಯೂಟ್ ಪ್ರತಿಭೆಯ ಕ್ಯೂಟ್ ವಿಡಿಯೊ – ಸ್ವರ ಸಂಸ್ಥಾನದ ಅದಮ್ಯ ಪ್ರತಿಭೆ ದಿಯಾ ಹೆಗ್ಡೆಗೆ ಅಭಿನಂದಿಸಲು ಬಂದ ಅಭಿಮಾನಿಗಳ ಬಳಗ

 







ಹೇಗೆ ಬೆಳ್ಳಿ ಪರದೆ ಮೇಲೆ ಬರುವ ಹೀರೋಗಳನ್ನು ಅಭಿಮಾನಿಗಳು ಪ್ರೀತಿಸುತ್ತಾರೋ ಕಟ್ ಔಟ್ ಗಳನ್ನು ನಿಲ್ಲಿಸಿ, ಹೂ ಹಾರಗಳನ್ನು ಹಾಕಿ ಅಭಿಷೇಕ ಮಾಡಿ ಸಿನಿಮಾ ರಿಲೀಸ್ ಆದ ಮೊದಲ ದಿನವೇ ಕುಟುಂಬ ಹಾಗೂ ಸ್ನೇಹಿತರ ಜೊತೆ ಹೋಗಿ ಚಿತ್ರ ನೋಡಿ ಪ್ರಚಾರ ಮಾಡುತ್ತಾರೋ ಅದೇ ರೀತಿ ಕಿರುತೆರೆಯಲ್ಲೂ ಕೂಡ ಕೆಲವು ವಿಶೇಷ ಕಾರ್ಯಗಳಿಗೆ ಅಷ್ಟೇ ಮಟ್ಟದ ಪ್ರೀತಿ ಅಭಿಮಾನ ಜನರಿಂದ ಎಲ್ಲವೂ ಸಿಗುತ್ತಿದೆ.

ಈ ಕಾರಣಕ್ಕಾಗಿ ಇಂದು ಅನೇಕ ಪ್ರತಿಭೆಗಳು ಕಿರುತೆರೆಯಿಂದ ಹೋಗಿ ಸ್ಟಾರ್ ಹೀರೋ ಹಾಗೂ ಹೀರೋಯಿನ್ ಮತ್ತು ನಿರ್ದೇಶಕರಾಗಿರುವುದು. ಕಿರುತೆರೆ ಕಾರ್ಯಕ್ರಮಗಳಲ್ಲಿ ಪುಟ್ಟ ಮಕ್ಕಳು ಹೆಚ್ಚಿನ ಗಮನ ಸೆಳೆಯುತ್ತಾರೆ. ಜೀ ಕನ್ನಡ ವಾಹಿನಿಯ ಪ್ರಸಾರವಾಗುತ್ತಿರುವ ಸರಿಗಮಪ ಕಾರ್ಯಕ್ರಮದ ಮಕ್ಕಳುಗಳುಗಳಂತೂ ವರ್ಷಗಳಾದರೂ ಕೂಡ ನೆನಪಿನಲ್ಲಿಯೇ ಉಳಿಯುತ್ತಾರೆ.

ಆ ರೀತಿ ಈ ಸೀಸನ್ನಲ್ಲಿ ಸಾಗರದ ಒಂದು ಮುದ್ದು ಬೊಂಬೆ ವಿಶೇಷ ಎಂಟರ್ಟೈನರ್ ಆಗಿ ಸರಿಗಮಪ ಕಾರ್ಯಕ್ರಮಕ್ಕೆ ಇದ್ದಾರೆ. ಸಕಲ ಕಲೆಗಳನ್ನು ಕೂಡ ಬಲ್ಲ ಚತುರೆ ದಿಯಾ ಹೆಗ್ಡೆ ಎನ್ನುವ ಹೆಸರಿನ ಈ ಪುಟ್ಟ ಪ್ರತಿಭೆ ಬಗ್ಗೆ ಎಷ್ಟು ಹೇಳಿದರು ಕೂಡ ಕಡಿಮೆಯೇ. ಕನ್ನಡಿಗರು ಮೆಚ್ಚುಗೆ ಆದವರನ್ನು ಹೊತ್ತು ನಡೆಸುವ ಹೃದಯ ಶ್ರೀಮಂತರು.

ಮನೋರಂಜನೆ ನೀಡುವವರು ಯಾರಾಗಿದ್ದರು ಅವರನ್ನು ಮನೆ ಮಕ್ಕಳಂತೆ ಸ್ವೀಕರಿಸುವುದು ಈ ಮಣ್ಣಿನ ಗುಣ. ಈಗ ಈ ಸರಧಿಯಲ್ಲಿ ಮುದ್ದು ಬಾಲೆ ದಿಯಾ ಹೆಗ್ಡೆ ಕೂಡ ಇದ್ದಾರೆ. ಮಕ್ಕಳು ಈಗ ದಿಯಾ ಅನುಕರಿಸುತ್ತಾ ಅವಳಂತೆ ಹಾಡಲು ಪ್ರಯತ್ನಿಸುತ್ತಿದ್ದಾರೆ. ದೊಡ್ಡವರೆಲ್ಲಾ ಇದ್ದರೆ ಇಂತಹ ಮಗಳಿರಬೇಕು ಎಂದು ಜೊತೆಗೆ ತಮ್ಮ ಮಕ್ಕಳು ಕೂಡ ಇದೇ ರೀತಿ ಆಗಬೇಕು ಎಂದು ಕನಸು ಕಾಣುತ್ತಿದ್ದಾರೆ.

ಸದ್ಯಕ್ಕೀಗ ಸಾಗರದ ಡೈನಮಿಕ್ ದಿಯಾ ಹೆಗಡೆ ಎಂದು ಹೆಸರು ಪಡೆದಿರುವ ಇವರು ಕನ್ನಡಿಗರ ದಿಯಾ ಆಗಿದ್ದಾರೆ. ಸಾಗರದ ಹತ್ತು ವರ್ಷದ ಹುಡುಗಿಯ ಪಾದರಸದಂತಹ ಜಾಣ್ಮೆ ಜೊತೆಗೆ ನೋಡಿದವರೆಲ್ಲ ಮುದ್ದು ಮಾಡಬೇಕು ಎನಿಸುವ ಚೆಲುವು, ಅವಳ ಮೋಹಕ ಮುಗ್ದ ನಗು ಜೊತೆಗೆ ಆಕೆಯ ಸ್ವಚ್ಛ ಕನ್ನಡ ಪ್ರೇಕ್ಷಕರ ಮನಸೂರೆಗೊಂಡಿದೆ.

ಹಾಡು ಅಭಿನಯವನ್ನು ಅರೆದು ಕುಡಿದ ಈ ಚಿನಕುರಳಿ ಸರಿಗಮಪ ಲಿಟಲ್ ಚಾಂಪ್ಸ್ ವೇದಿಕೆ ವಿಶೇಷ ಎಂಟರ್ಟೈನರ್ ಆಗಿ ಕರ್ನಾಟಕದ ಪೂರ್ತಿ ಫೇಮಸ್ ಆಗಿಬಿಟ್ಟಿದ್ದಾರೆ. ಹೆಸರಿನ ಪ್ರತಿ ಅಕ್ಷರಕ್ಕೂ ಅರ್ಥ ಕೊಟ್ಟು ಹೇಳುವ ಈಕೆಯ ಕನ್ನಡ ಭಾಷಾಜ್ಞಾನ ಜೊತೆಗೆ ಮಾತೇ ಹಾಡಿನಂತಿರುವ ಸುಮಧುರವಾದ ಧ್ವನಿ, ವಿಶೇಷ ಚಟುವಟಿಕೆಯೊಂದಿಗೆ ಒಗಟುಗಳನ್ನು ಹಾಗೂ ಪ್ರಶ್ನೆಗಳನ್ನು ಕೇಳುವ ಈಕೆಯ ಜಾಣ್ಮೆ ಇದೆಲ್ಲಕ್ಕೂ ಸೇರಿ ಇಡೀ ಕರ್ನಾಟಕ ಜನತೆ ಇವರ ಅಭಿಮಾನಿಯಾಗಿದ್ದಾರೆ.

Previous Post Next Post

Ads

Ads

نموذج الاتصال

×