ಇತ್ತೀಚೆಗೆ ಡಿಜಿಟಲ್ ಪೇಮೆಂಟ್ ಹೆಚ್ಚಿನ ಬಳಕೆಯಲ್ಲಿದ್ದು, ಈ ಯುಪಿಐ ಮೂಲಕ ಮನೆಯಲ್ಲಿಯೇ ಕುಳಿತು ಯಾವುದೇ ಬ್ಯಾಂಕಿನ ಹಣಕಾಸು ವ್ಯವಹಾರವನ್ನು ನಿರ್ವಹಿಸಬಹುದಾಗಿದೆ. ಸದ್ಯ ಭಾರತದಲ್ಲಿ ಯುಪಿಐ ಪಾವತಿ ಸೇವೆಯನ್ನು ಫೋನ್ ಪೇ (PhonePe), ಗೂಗಲ್ ಪೇ (Google Pay), ಪೇಟಿಎಂ (Paytm) ನಂತಹ ಆ್ಯಪ್‌ಗಳು ನೀಡುತ್ತಿವೆ.
ಹೇಳಿ ಕೇಳಿ ಡಿಜಿಟಲ್ ಯುಗ..
ಎಲ್ಲದರಲ್ಲೂ ಬದಲಾವಣೆಯಾಗಿ ಹಿಂದಿನಂತೆ ಬ್ಯಾಂಕ್ಗಳ ಮುಂದೆ ಗಂಟೆಗಟ್ಟಲೆ ನಿಲ್ಲಬೇಕಾದ ಅನಿವಾರ್ಯತೆ ಈಗಿಲ್ಲ. ಮೊಬೈಲ್ ಎಂಬ ಮಾಯಾವಿ ಅನ್ವೇಷಣೆಯ ಬಳಿಕ ಎಲ್ಲ ಕೆಲಸಗಳು ಕ್ಷಣ ಮಾತ್ರದಲ್ಲಿ ನಡೆಯುತ್ತವೆ. ಬ್ಯಾಂಕ್ ವ್ಯವಹಾರಗಳನ್ನು ಸರಳವಾಗಿ ಸುಲಭವಾಗಿ ಮಾಡಲು ಅನುವು ಮಾಡಿಕೊಟ್ಟಿದೆ. ಗೂಗಲ್ ಪೇ, ಫೋನ್ ಪೇ ಆ್ಯಪ್ಗಳಲ್ಲಿ ಯಾವುದೇ ಹಣಕಾಸು, ಬ್ಯಾಂಕಿನ ವ್ಯವಹಾರಗಳನ್ನು ಸುಲಭದಲ್ಲಿ ಮಾಡಬಹುದಾಗಿದ್ದು ಆದರೆ ಇದರಲ್ಲಿ ಒಂದು ದಿನದಲ್ಲಿ ಎಷ್ಟು ಬಾರಿ ಮತ್ತು ಎಷ್ಟು ಹಣವನ್ನು ಮತ್ತೊಬ್ಬರಿಗೆ ವರ್ಗಾವಣೆ ಮಾಡಬಹುದೆಂಬ ಬಗ್ಗೆ ಕೆಲವರಿಗೆ ಮಾಹಿತಿ ತಿಳಿದಿಲ್ಲ.
ಶೀಘ್ರದಲ್ಲಿಯೆ ಪ್ರಪಂಚದಾದ್ಯಂತ ಹಾರ್ಡ್ ಕ್ಯಾಶ್ನಿಂದ (Hard Cash) ಸಾಫ್ಟ್ ಕ್ಯಾಶ್ (Soft Cash) ಎಂಬ ಪದಕ್ಕೆ ಬದಲಾವಣೆಯಾಗುವ ಲಕ್ಷಣಗಳು ಗೋಚರಿಸುತ್ತಿವೆ. ಜನರ ವ್ಯಾಲೆಟ್ನಲ್ಲಿ ಹಣ ಇಡುವ ಜಾಗವನ್ನು ಡಿಜಿಟಲ್ ಕಾರ್ಡ್ ಗಳು ಆಕ್ರಮಣ ಮಾಡಿ ಬಿಟ್ಟಿವೆ. ಇತ್ತೀಚೆಗೆ ಎಲ್ಲಿ ಹೋದರೂ ಜನರು ಕೈಯಲ್ಲಿ ಹಣವನ್ನು ಹಿಡಿದುಕೊಳ್ಳುವ ಬದಲು ಡಿಜಿಟಲ್ (Digital) ನಲ್ಲಿಯೇ ವ್ಯವಹಾರ ನಡೆಸುತ್ತಾರೆ. ಇತ್ತೀಚೆಗೆ ಸಣ್ಣ ವ್ಯಾಪಾರಿಯಿಂದ ಹಿಡಿದು ದೊಡ್ಡ ಮಟ್ಟದ ವ್ಯವಹಾರವನ್ನು ನಡೆಸುವವರು ಕೂಡ ಯುಪಿಐ ಪೇಮೆಂಟ್ (UPI Payment) ವಿಧಾನವನ್ನು ಅನುಸರಿಸುತ್ತಿದ್ದಾರೆ.ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI) ಎಂಬುದು ಆರ್‌ಬಿಐ ನಿಯಂತ್ರಿತ ಘಟಕವಾದ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ಅಭಿವೃದ್ಧಿಪಡಿಸಿದ ವೇಗದ ಪಾವತಿ ವ್ಯವಸ್ಥೆಯಾಗಿದೆ.
ಈ ಗೂಗಲ್ ಪೇ
, ಫೋನ್ ಪೇ ಆ್ಯಪ್ಗಳಲ್ಲಿ ಯಾವುದೇ ಹಣಕಾಸು, ಬ್ಯಾಂಕಿನ ವ್ಯವಹಾರಗಳನ್ನು ಸುಲಭದಲ್ಲಿ ಮಾಡಬಹುದಾಗಿದ್ದು, ಆದರೆ ಇದರಲ್ಲಿ ಒಂದು ದಿನದಲ್ಲಿ ಎಷ್ಟು ಬಾರಿ ಮತ್ತು ಎಷ್ಟು ಹಣವನ್ನು ಮತ್ತೊಬ್ಬರಿಗೆ ಶೇರ್ ಮಾಡಬಹುದು ಎಂಬುದರ ಮಾಹಿತಿ ಇಲ್ಲಿದೆ.ಯುಪಿಐ ಮೂಲಕ ಯಾವುದೇ ಎರಡು ಬ್ಯಾಂಕ್ ಖಾತೆಗಳ ನಡುವೆ ಕ್ಷಣ ಮಾತ್ರದಲ್ಲಿ ವೇಗವಾಗಿ ಹಣವನ್ನು ವರ್ಗಾವಣೆ ಮಾಡಿಕೊಳ್ಳಬಹುದಾಗಿದ್ದು, ಈ ಯುಪಿಐ ವಹಿವಾಟಿನ ಮಿತಿಯನ್ನು ಕಂಪನಿ ವರ್ಷದಿಂದ ವರ್ಷಕ್ಕೆ ಬದಲಾವಣೆ ಮಾಡುತ್ತಿರುತ್ತದೆ. ಕೆಲವೊಂದು ಬ್ಯಾಂಕ್ಗಳಲ್ಲಿ ಕೆಲವೊಂದು ನಿಯಮಗಳಿವೆ.
ಸದ್ಯಕ್ಕೆ ಯುಪಿಐ ಬಳಸಿ ಒಂದು ಬ್ಯಾಂಕ್ ಖಾತೆಯಿಂದ ಇನ್ನೊಬ್ಬರಿಗೆ 1 ಲಕ್ಷ ರೂಪಾಯಿ ಮಾತ್ರ ಹಂಚಿಕೊಳ್ಳಬಹುದಾಗಿದ್ದು, ಆದರೆ ಈ ಆಯ್ಕೆ ಕೆಲವೊಂದು ಬ್ಯಾಂಕ್ಗಳಿಗೆ ಮಾತ್ರ ಸೀಮಿತವಾಗಿರುತ್ತದೆ.
ಭೀಮ್ ಯುಪಿಐ
ನಲ್ಲಿ ಕೇವಲ 40 ಸಾವಿರ ರೂಪಾಯಿ ವರ್ಗಾವಣೆ ಮಿತಿ:ಇನ್ನು ಭೀಮ್ ಯುಪಿಐ ವಹಿವಾಟು ಮಿತಿ ಪ್ರತಿ ವಹಿವಾಟಿಗೆ 40 ಸಾವಿರ ರೂಪಾಯಿಯಾಗಿದ್ದು, ಈ ವಹಿವಾಟು ಮಿತಿ ಭೀಮ್ ಯುಪಿಐಗೆ ಲಿಂಕ್ ಆಗಿರುವ ಖಾತೆಗಳಿಗೆ ದೊರೆಯುತ್ತವೆ. ಅದೇ ರೀತಿ, ವ್ಯವಹಾರ ನಡೆಸುವ ವ್ಯಾಪಾರಿಗಳಿಗೆ ವಹಿವಾಟಿನ ಗರಿಷ್ಠ ಮೊತ್ತ 24 ಗಂಟೆಯಲ್ಲಿ 2 ಲಕ್ಷ ರೂ. ಆಗಿದೆ. ಏನಾದರೂ ನೀವು ಪಾವತಿ ಮಾಡಿದ ಸಂದರ್ಭದಲ್ಲಿ ಹಣ ನಿಮ್ಮ ಖಾತೆಯಿಂದ ಕಡಿತವಾಗಿ ವರ್ಗಾವಣೆ ಮಾಡಿದ ಖಾತೆಗೆ ಜಮೆ ಆಗದೆ ಇದ್ದಲ್ಲಿ, ಆ ಹಣವು ಮೂರು ದಿನಗಳ ಒಳಗೆ ರಿಫಂಡ್ ಮಾಡಲಾಗುತ್ತದೆ.
ಒಂದು ವೇಳೆ, ರಿಫಂಡ್ ಆಗದಿದ್ದರೆ ನಿಮ್ಮ ಬ್ಯಾಂಕ್ ಖಾತೆಯ ಬ್ರಾಂಚ್ ಅನ್ನು ಸಂಪರ್ಕಿಸಬಹುದಾಗಿದೆ.ಪೇಟಿಯಂನಲ್ಲೂ 1 ಲಕ್ಷ ಹಣ ವರ್ಗಾವಣೆ ಮಿತಿ ನೀಡಲಾಗಿದೆ.ಗೂಗಲ್ ಪೇ, ಫೋನ್ ಪೇಗಳಂತೆ ಪೇಟಿಎಂನಲ್ಲಿ ಕೂಡ ಪ್ರತಿ ವಹಿವಾಟಿನಲ್ಲಿ 1 ಲಕ್ಷ ಹಣ ವರ್ಗಾವಣೆ ಮಾಡುವ ಆಯ್ಕೆ ನೀಡಲಾಗಿದ್ದು, ಆದರೆ 24 ಗಂಟೆಗಳಲ್ಲಿ ನೀವು 1 ಲಕ್ಷ ರೂಪಾಯಿಗಿಂತ ಹೆಚ್ಚಿನ ಮೊತ್ತವನ್ನು ಕಳುಹಿಸಲು ಸಾಧ್ಯವಾಗದು. ಬ್ಯಾಂಕುಗಳ ಹಣ ವರ್ಗಾವಣೆ ಮಿತಿ ಬೇರೆ ಬೇರೆ ರೀತಿಯಾಗಿದ್ದು, ಅದರ ಕುರಿತಾದ ಮಾಹಿತಿ ಇಲ್ಲಿದೆ. ಎಸ್‌ಬಿಐ ಬ್ಯಾಂಕ್: ಈ ಬ್ಯಾಂಕ್ ಖಾತೆ ಮೂಲಕ ಯುಪಿಐನಲ್ಲಿ 1 ಲಕ್ಷ ರೂಪಾಯಿ ವರ್ಗಾವಣೆ ಮಾಡಬಹುದು. 24 ಗಂಟೆಗಳಲ್ಲಿ ಗರಿಷ್ಠ 10 ಬಾರಿ ವಹಿವಾಟು ಮಾಡಬಹುದಾಗಿದೆ. ಎಚ್‌ಡಿಎಫ್‌ಸಿ ಬ್ಯಾಂಕ್: ಪ್ರತಿ ವಹಿವಾಟಿಗೆ 1 ಲಕ್ಷ ರೂಪಾಯಿ ವರ್ಗಾವಣೆ ಮಾಡಬಹುದಾಗಿದೆ. ಐಸಿಐಸಿಐ ಬ್ಯಾಂಕ್ ಖಾತೆಯ ಮುಖೇನ ಯುಪಿಐನಲ್ಲಿ 1 ಲಕ್ಷ ರೂಪಾಯಿ ವರ್ಗಾವಣೆ ಮಾಡಬಹುದ್ದಾಗಿದ್ದು,ಐಸಿಐಸಿಐ ಬ್ಯಾಂಕಿನ ಖಾತೆದಾರರು 24 ಗಂಟೆಗಳಲ್ಲಿ 20 ಬಾರಿ ಹಣ ವರ್ಗಾವಣೆ ಮಾಡಬಹುದಾಗಿದೆ. ಸೆಂಟ್ರಲ್ ಬ್ಯಾಂಕ್:
ಪ್ರತಿ ವಹಿವಾಟಿಗೆ 25 ಸಾವಿರ ರೂಪಾಯಿ ವರ್ಗಾವಣೆ ಮಾಡಬಹುದಾಗಿದೆ. ಅದೇ ರೀತಿ, ಬ್ಯಾಂಕ್ ಆಫ್ ಇಂಡಿಯಾದ ಮೂಲಕ , ಪ್ರತಿ ವಹಿವಾಟಿಗೆ 10 ಸಾವಿರ ರೂಪಾಯಿ ವರ್ಗಾವಣೆ ಮಾಡಬಹುದಾಗಿದೆ.ಕೆನರಾ ಬ್ಯಾಂಕ್ 1 ಲಕ್ಷ ರೂಪಾಯಿ ವರ್ಗಾವಣೆ ಮಾಡಬಹುದಾಗಿದೆ.ಬ್ಯಾಂಕ್ ಆಫ್ ಮಹಾರಾಷ್ಟ್ರ 1 ಲಕ್ಷ ರೂಪಾಯಿ ವರ್ಗಾವಣೆ ಮಾಡಬಹುದಾಗಿದೆ. ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಮೂಲಕ ಪ್ರತಿ ವಹಿವಾಟಿಗೆ 25 ಸಾವಿರ ರೂಪಾಯಿ ವರ್ಗಾವಣೆ ಮಾಡಬಹುದಾಗಿದೆ. ಕೊಟಕ್ ಮಹೀಂದ್ರಾ ಬ್ಯಾಂಕ್ ಮೂಲಕ ಪ್ರತಿ ವಹಿವಾಟಿಗೆ 25 ಸಾವಿರ ರೂಪಾಯಿ ವರ್ಗಾವಣೆ ಮಾಡಬಹುದಾಗಿದೆ. ದಿನಕ್ಕೆ 2 ಬಾರಿ ಮಾತ್ರ ವರ್ಗಾವಣೆ ಮಾಡಬಹುದಾಗಿದೆ. ಆಕ್ಸಿಸ್ ಬ್ಯಾಂಕ್ 1 ಲಕ್ಷ ರೂಪಾಯಿ ವರ್ಗಾವಣೆ ಮಾಡಬಹುದಾಗಿದೆ.
ಕಾರ್ಪೊರೇಶನ್ ಬ್ಯಾಂಕ್ 50 ಸಾವಿರ ರೂಪಾಯಿ ವರ್ಗಾವಣೆ ಮಾಡಬಹುದಾಗಿದೆ. ಆಂಧ್ರ ಬ್ಯಾಂಕ್ 1 ಲಕ್ಷ ರೂಪಾಯಿ ವರ್ಗಾವಣೆ ಮಾಡಬಹುದಾಗಿದ್ದು, ಸಿಟಿ ಬ್ಯಾಂಕ್ 1 ಲಕ್ಷ ರೂಪಾಯಿ ವರ್ಗಾವಣೆ ಮಾಡಬಹುದಾಗಿದೆ. ಅದೇ ರೀತಿ,ಬ್ಯಾಂಕ್ ಆಫ್ ಬರೋಡಾದ ಮೂಲಕ 25 ಸಾವಿರ ರೂಪಾಯಿ ವರ್ಗಾವಣೆ ಮಾಡಬಹುದಾಗಿದೆ. ಸಿಟಿ ಯೂನಿಯನ್ ಬ್ಯಾಂಕ್ 1 ಲಕ್ಷ ರೂಪಾಯಿ ವರ್ಗಾವಣೆ ಮಾಡಬಹುದಾಗಿದೆ.