Viral News: ಬಾಲದೊಂದಿಗೆ ಜನಿಸಿದ ಹೆಣ್ಣು ಮಗು! ಬಾಲದ ಉದ್ದ ಕಂಡು ಬೆಚ್ಚಿ ಬಿದ್ದ ವೈದ್ಯರು

Trending News: 

ವೈದ್ಯರು ನೀಡಿರುವ ಮಾಹಿತಿಯ ಪ್ರಕಾರ, ಬಾಲಿನ ಗಾತ್ರ ಸುಮಾರು 2 ಇಂಚು ಅಂದರೆ ಸುಮಾರು 5.7 ಸೆಂ.ಮೀ ಇತ್ತು ಮತ್ತು ಅದು 3 ರಿಂದ 5 ಎಂಎಂ ದಪ್ಪವಾಗಿತ್ತು ಎನ್ನಲಾಗಿದೆ.  

  • Viral Content: ಮೆಕ್ಸಿಕೋದಲ್ಲಿ ಹೆಣ್ಣು ಮಗು ಜನಿಸಿದ್ದು, ನವಜಾತ ಹೆಣ್ಣು ಮಗುವಿಗೆ ಬಾಲ ಇರುವುದನ್ನು ಕಂಡು ವೈದ್ಯರು ಮತ್ತು ಆಕೆಯ ಪೋಷಕರು ಭಾರಿ ಆಘಾತಕ್ಕೊಳಗಾಗಿದ್ದಾರೆ. ಮೆಕ್ಸಿಕೋದ ನ್ಯೂವೋ ಲಿಯಾನ್ ಆಸ್ಪತ್ರೆಯಲ್ಲಿ ಆಪರೇಷನ್ ಮೂಲಕ ಈ ಹೆಣ್ಣು ಮಗು ಜನಿಸಿತ್ತು. ಬಾಲಕಿಯ ಬಾಲದ ಗಾತ್ರ ಸುಮಾರು 2 ಇಂಚು ಅಂದರೆ 5.7 ಸೆಂ.ಮೀ ಎಂದು ವೈದ್ಯರು ತಿಳಿಸಿದ್ದಾರೆ. ಬಾಲವು ಸುಮಾರು 3 ರಿಂದ 5 ಮಿಮೀ ದಪ್ಪವಾಗಿತ್ತು. ಬಾಲವು ಮೃದುವಾಗಿತ್ತು ಮತ್ತು ಅದರ ಮೇಲೆ ಕೂದಲುಗಳಿದ್ದವು. ಹೆಣ್ಣು ಮಗುವಿನ ಇತರ ಎಲ್ಲಾ ವೈದ್ಯಕೀಯ ವರದಿಗಳು ಸರಿಯಾಗಿದ್ದು. ಹುಡುಗಿಗೆ ಯಾವುದೇ ರೀತಿಯ ಸಮಸ್ಯೆ ಇರಲಿಲ್ಲ.

    ಶಸ್ತ್ರಚಿಕಿತ್ಸೆಯ ನಂತರ ಬಾಲಕಿಯ ಈ ಬಾಲವನ್ನು ತೆಗೆಯಲಾಗಿದೆ. ಈ ಹೆಣ್ಣು ಮಗು ಜನಿಸಿದ ಎರಡು ತಿಂಗಳ ನಂತರ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಇದಕ್ಕೂ ಮುನ್ನ ಆಕೆಯ ಎಲ್ಲಾ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗಿದೆ. ಬಾಲಕಿ ಸರಿಯಾದ ತೂಕ ಮತ್ತು ಶಸ್ತ್ರಚಿಕಿತ್ಸೆಗೆ ಯೋಗ್ಯವಾದ ನಂತರವೇ ಈ ಆಪರೇಶನ್ ನಡೆಸಲಾಗಿದೆ. ಶಸ್ತ್ರಚಿಕಿತ್ಸೆಗೆ ಮುನ್ನ ವೈದ್ಯರು ಈ ಬಾಲಕಿಯ ಎಂಆರ್‌ಐ ಸ್ಕ್ಯಾನ್ ಮತ್ತು ಇತರ ಹಲವು ಪರೀಕ್ಷೆಗಳನ್ನು ನಡೆಸಿದ್ದಾರೆ ಎನ್ನಲಾಗಿದೆ. ವೈದ್ಯಕೀಯ ವರದಿಗಳ ಪ್ರಕಾರ, ಈ ಹೆಣ್ಣು ಮಗುವಿಗೆ ಯಾವುದೇ ವೈದ್ಯಕೀಯ ಸಮಸ್ಯೆ ಇರಲಿಲ್ಲ. ಅದರ ಎಲ್ಲಾ ವರದಿಗಳು ಸಾಮಾನ್ಯವಾಗಿದ್ದವು. ಗರ್ಭಾವಸ್ಥೆಯಲ್ಲಿಯೂ ಮಗುವಿನ ತಾಯಿಗೆ ಯಾವುದೇ ಸಮಸ್ಯೆ ಇರಲಿಲ್ಲ, ತಾಯಿಗೆ ಸಂಪೂರ್ಣ ಆರೋಗ್ಯವಂತವಾಗಿರುವ ಒಬ್ಬ ಮಗನೂ ಇದ್ದಾನೆ.

    ಬಾಲವಿರುವ ಮಕ್ಕಳ ಜನನವು ಕೆಲವೇ ಪ್ರಕರಣಗಳಲ್ಲಿ ಕಂಡುಬರುತ್ತದೆ. ವರದಿಗಳ ಪ್ರಕಾರ, 2017 ರವರೆಗೆ ಇಂತಹ ಕೇವಲ 195 ಪ್ರಕರಣಗಳು ವರದಿಯಾಗಿವೆ. ಇತ್ತೀಚೆಗೆ, 2021 ರ ಜನವರಿಯಲ್ಲಿ ಬ್ರೆಜಿಲ್‌ನಲ್ಲಿ ಇಂತಹ ಒಂದು ಮಗು ಜನಿಸಿತ್ತು. ಮಗುವಿನ ಬಾಲದ ಉದ್ದವು ಸುಮಾರು 12 ಸೆಂ.ಮೀ.ನಷ್ಟಿತ್ತು. ಶಸ್ತ್ರಚಿಕಿತ್ಸೆಯ ಸಹಾಯದಿಂದ ವೈದ್ಯರು ಬಾಲವನ್ನು ಬೇರ್ಪಡಿಸಿದ್ದರು.

    • 2017 ರವರೆಗೆ ಇಂತಹ ಕೇವಲ 195 ಪ್ರಕರಣಗಳು ವರದಿಯಾಗಿವೆ.
    • ಇತ್ತೀಚೆಗೆ, 2021 ರ ಜನವರಿಯಲ್ಲಿ ಬ್ರೆಜಿಲ್‌ನಲ್ಲಿ ಇಂತಹ ಒಂದು ಮಗು ಜನಿಸಿತ್ತು.
    • ಮಗುವಿನ ಬಾಲದ ಉದ್ದವು ಸುಮಾರು 12 ಸೆಂ.ಮೀ.ನಷ್ಟಿತ್ತು.
Previous Post Next Post

Ads

Ads

نموذج الاتصال

×