200 ಕಿ.ಮೀ ಟಾಪ್ ಸ್ಪೀಡ್, 300 ಕಿ.ಮೀ ಮೈಲೇಜ್ ಹೊಂದಿರುವ ಈ ಎಲೆಕ್ಟ್ರಿಕ್ ಸ್ಕೂಟರ್ ವಿಶೇಷತೆಗಳು

 

ಚೀನೀ ಎಲೆಕ್ಟ್ರಿಕ್ ವಾಹನ ತಯಾರಕ ಹಾರ್ವಿನ್ 2022ರ EICMA ಶೋನಲ್ಲಿ ಸೆನ್ಮೆಟಿ 0 ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಅನಾವರಣಗೊಳಿಸಿದೆ. ಈ ಹೊಸ ಹಾರ್ವಿನ್ ಸೆನ್ಮೆಟಿ 0 ಎಲೆಕ್ಟ್ರಿಕ್ ಸ್ಕೂಟರ್ 300 ಕಿ.ಮೀ ರೇಂಜ್ ಅನ್ನು ನೀಡುತ್ತದೆ. ಹಾರ್ವಿನ್ ಸೆನ್ಮೆಟಿ 0 ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ 16.5kWh ಬ್ಯಾಟರಿ ಪ್ಯಾಕ್‌ ಅನ್ನು ಅಳವಡಿಸಲಾಗಿದೆ.





ಹೊಸ ಹಾರ್ವಿನ್ ಸೆನ್ಮೆಟಿ 0 ಎಲೆಕ್ಟ್ರಿಕ್ ಸ್ಕೂಟರ್ 300 ಕಿಮೀ ರೆಂಜ್ ಅನ್ನು ಒದಗಿಸುತ್ತದ. ಆದರೆ ಸರಾಸರಿ 88 ಕಿಮೀ/ಗಂ ವೇಗದಲ್ಲಿ ಸಾಗಬೇಕು ಎಂದು ಹಾರ್ವಿನ್ ಹೇಳಿಕೊಂಡಿದ್ದಾನೆ. ಹಾರ್ವಿನ್ ಸೆನ್ಮೆಟಿ 0 ಅತ್ಯಂತ ಫಾಸ್ಟ್ ಚಾರ್ಜಿಂಗ್ ವೇಗಕ್ಕಾಗಿ 400ವಿ ಎಲೆಕ್ಟ್ರಿಕ್ ಆರ್ಕಿಟೆಕ್ಚರ್ ಅನ್ನು ಹೊಂದಿದೆ. ಹೊಂದಾಣಿಕೆಯ ವೇಗದ DC ಚಾರ್ಜರ್‌ಗೆ ಪ್ಲಗ್ ಮಾಡಿದಾಗ, ಕೇವಲ 30 ನಿಮಿಷಗಳಲ್ಲಿ 0 ದಿಂದ 80 ಪ್ರತಿಶತದವರೆಗೆ ಚಾರ್ಜ್ ಮಾಡಬಹುದು ಎಂದು ಹಾರ್ವಿನ್ ಹೇಳಿಕೊಳ್ಳುತ್ತಾರೆ.


300 ಕಿ.ಮೀ ಮೈಲೇಜ್ ಹೊಂದಿರುವ ಈ ಎಲೆಕ್ಟ್ರಿಕ್ ಸ್ಕೂಟರ್ ವಿಶೇಷತೆಗಳು

ಹಾರ್ವಿನ್ ಸೆನ್ಮೆಟಿ 0 ಎಲೆಕ್ಟ್ರಿಕ್ ಸ್ಕೂಟರ್ ಬ್ಯಾಟರಿ ಪ್ಯಾಕ್ ಅನ್ನು ಎಲೆಕ್ಟ್ರಿಕ್ ಸಾಧನಗಳಿಗೆ ಪವರ್ ನೀಡಲು ಬಳಸಬಹುದು. ಹಾರ್ವಿನ್ ಸೆನ್ಮೆಟಿ 0 ಎಲೆಕ್ಟ್ರಿಕ್ ಸ್ಕೂಟರ್ ಬ್ಯಾಟರಿ ಪ್ಯಾಕ್ ಅನ್ನು ಇತರ ಎಲೆಕ್ಟ್ರಿಕ್ ವಾಹನಗಳನ್ನು ಚಾರ್ಜ್ ಮಾಡಲು ಸಹ ಬಳಸಬಹುದು. ಹಾರ್ವಿನ್ ಸೆನ್ಮೆಟಿಯು ಅತ್ಯಂತ ಉತ್ತಮ ಕಾರ್ಯಕ್ಷಮತೆಯನ್ನು ಹೊಂದಿದೆ. ಈ ಸೆನ್ಮೆಟಿ 0 ಸ್ಕೂಟರ್ 600 ಎನ್ಎಂ ವೀಲ್ ಟಾರ್ಕ್ ಅನ್ನು ನೀಡುತ್ತದೆ ಎಂದು ಹಾರ್ವಿನ್ ಹೇಳಿಕೊಂಡರೂ ಗರಿಷ್ಠ ಉತ್ಪಾದನೆಯನ್ನು ಬಹಿರಂಗಪಡಿಸಲಾಗಿಲ್ಲ.


ಈ ಹಾರ್ವಿನ್ ಸೆನ್ಮೆಟಿ 0 ಎಲೆಕ್ಟ್ರಿಕ್ ಸ್ಕೂಟರ್ ಕೇವಲ 2.8 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಇನ್ನು ಈ ಎಲೆಕ್ಟ್ರಿಕ್ ಸ್ಕೂಟರ್ 200 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಇನ್ನು ಈ ಹೊಸ ಚೀನೀ ಎಲೆಕ್ಟ್ರಿಕ್ ಸ್ಕೂಟರ್ 3 ವಿಭಿನ್ನ ರೈಡ್ ಮೋಡ್‌ಗಳನ್ನು ಸಹ ನೀಡುತ್ತದೆ. ಇದು ಸ್ಟ್ಯಾಂಡರ್ಡ್, ರೈನ್ ಮತ್ತು ಸ್ಪೋರ್ಟ್ ಆಗಿದೆ. ಈ ಸ್ಕೂಟರ್ ನಲ್ಲಿ ಮೂರು-ಹಂತದ ಹೊಂದಾಣಿಕೆಯ ಏರ್ ಸಸ್ಪೆನ್ಷನ್ ಸೆಟಪ್ ಅನ್ನು ಹೊಂದಿದೆ.


ಇದು ಬದಲಾಯಿಸಬಹುದಾದ ರಸ್ತೆ ಪರಿಸ್ಥಿತಿಗಳನ್ನು ನಿಭಾಯಿಸಲು ಸಹಾಯ ಮಾಡುತ್ತದೆ. ಇನ್ನು ಈ ಸೆನ್ಮೆಟಿ 0 ಎಬಿಎಸ್ ಮತ್ತು ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್ ಅನ್ನು ಜಾರುವುದನ್ನು ತಡೆಯಲು ಮತ್ತು ಸ್ಥಿರತೆಯನ್ನು ಸುಧಾರಿಸಲು ನೀಡುತ್ತದೆ. ಈ ಸೆನ್ಮೆಟಿ 0 ಎಲೆಕ್ಟ್ರಿಕ್ ಸ್ಕೂಟರ್ ಹಲವಾರು ಅತ್ಯಾಧುನಿಕ ಫೀಚರ್ಸ್ ಗಳೊಂದಿಗೆ ಬರುತ್ತಿದೆ. ಈ ಸೆನ್ಮೆಟಿ 0 ಎಲೆಕ್ಟ್ರಿಕ್ ಸ್ಕೂಟರ್ ಕೀ ಲೆಸ್ ವಿಧಾನಗಳೊಂದಿಗೆ ಟಚ್‌ಲೆಸ್ ಸ್ಟರ್ಟ್ ಅನ್ನು ಹೊಂದಿದೆ. ಬ್ಲೂಟೂತ್, NFC ಮತ್ತು ಅಪ್ಲಿಕೇಶನ್ ಬಳಸಿ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಸ್ಟಾರ್ಟ್ ಮಾಡಬಹುದಾಗಿದೆ.


ಈ ಸೆನ್ಮೆಟಿ 0 ಹಿಲ್ ಡಿಸೆಂಟ್ ಕಂಟ್ರೋಲ್, ಹಿಲ್-ಸ್ಟಾರ್ಟ್ ಅಸಿಸ್ಟ್, ಆಟೋ ಹೋಲ್ಡ್, ಸೀನ್ ರೆಕಗ್ನಿಷನ್ ಮತ್ತು ಸೆಂಟ್ರಿ ಮೋಡ್ ಜೊತೆಗೆ ಬ್ಲೈಂಡ್ ಸ್ಪಾಟ್ ಡಿಟೆಕ್ಷನ್ ಮತ್ತು ಕೊಲಿಷನ್ ವಾರ್ನಿಂಗ್ ಸಿಸ್ಟಮ್ ಅನ್ನು ಸಹ ನೀಡುತ್ತದೆ. ಹಾರ್ವಿನ್ ಸೆನ್ಮೆಟಿ 0 ಎಲೆಕ್ಟ್ರಿಕ್ ಸ್ಕೂಟರ್ ದಿಗ್ಭ್ರಮೆಗೊಳಿಸುವ ರೇಂಜ್ ಅನ್ನು ಹೊಂದಿದೆ. ಇನ್ನು ಈ ಎಲೆಕ್ಟ್ರಿಕ್ ಸ್ಕೂಟರ್ ದೊಡ್ಡ ಬ್ಯಾಟರಿ ಪ್ಯಾಕ್ ಮತ್ತು ಬದಲಿಗೆ ಶಕ್ತಿಯುತವಾ ಎಲೆಕ್ಟ್ರಿಕ್ ಆರ್ಕಿಟೆಕ್ಚರ್‌ ಅನ್ನು ಹೊಂದಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಭಾರತದಲ್ಲಿ ಬಿಡುಗಡೆಯಾಗುವುದರ ಬಗ್ಗೆ ಯಾವುದೇ ಮಾಹಿತಿಗಳು ಬಹಿರಂಗವಾಗಿಲ್ಲ.


ಇನ್ನು ಜಾಗತಿಕವಾಗಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಇತ್ತೀಚೆಗೆ ಹೆಚ್ಚಿನ ಜನರು ನಿಧಾನವಾಗಿ ಎಲೆಕ್ಟ್ರಿಕ್ ವಾಹನಗಳ ಕಡೆ ಮುಖ ಮಾಡುತ್ತಿದ್ದಾರೆ. ಇದರಿಂದ ಹಲವಾರು ಜನಪ್ರಿಯ ವಾಹನ ತಯಾರಕ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳನ್ನು ಅಭಿವೃದ್ದಿ ಪಡಿಸುತ್ತಿದೆ. ಇದರ ನಡುವೆ ಹೋಂಡಾ ಕಂಪನಿಯು ಎಲೆಕ್ಟ್ರಿಕ್ ವಾಹನಗಳ ಕಡೆ ಗಮನಹರಿಸುತ್ತಿದೆ. ಇನ್ನು ಭಾರತೀಯ ಮಾರುಕಟ್ಟೆಗೆ ಬಂದರೆ ಎಲೆಕ್ಟ್ರಿಕ್ ವಾಹನಗಳಿಗೆ ಭಾರೀ ಬೇಡಿಕೆಯನ್ನು ಪಡೆದುಕೊಳುತ್ತಿದೆ. ಇಂಧನ ಬೆಲೆ ದುಬಾರಿಯಾಗಿರುವುದರಿಂದ ಹೆಚ್ಚಿನ ಜನರು ಎಲೆಕ್ಟ್ರಿಕ್ ವಾಹನಗಳ ಕಡೆ ಮುಖ ಮಾಡುತ್ತಿದ್ದಾರೆ.


ಈ ಹಿನ್ನಲೆಯಲ್ಲಿ, ಹಲವು ಜನಪ್ರಿಯ ವಾಹನ ತಯಾರಕ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಿದೆ. ಬಹುತೇಕ ಜನಪ್ರಿಯ ವಾಹನ ತಯಾರಕ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳ ಅಭಿವೃದ್ದಿಪಡಿಸುವಲ್ಲಿ ನಿರತರಾಗಿದ್ದಾರೆ. ಇದರ ನಡುವೆ ಹಲವಾರು ಹೊಸ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಭಾರತೀಯ ಇವಿ ಮಾರುಕಟ್ಟೆಯು ಮೌಲ್ಯದಿಂದ 77% ನಷ್ಟು CAGR ನಲ್ಲಿ ವಿಸ್ತರಿಸುವ ಸಾಧ್ಯತೆಯಿದೆ ಎಂದು ಉದ್ಯಮ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

Previous Post Next Post

Ads

Ads

نموذج الاتصال

×