Homesandalwood ನೋಡುವಾಗ ನಟ ರಿಷಬ್ ಶೆಟ್ಟಿಯಂತೆ ಕಂಡರೂ ಇವರು ಅವರಲ್ಲ; ಹಾಗಿದ್ರೆ ಯಾರು? byKiran Official -November 22, 2022 0 ಅದೇ ಸ್ಟೈಲ್, ಅದೇ ಲುಕ್ಕು, ಅದೇ ಹೇರ್ಸ್ಟೈಲ್. ಪಂಚೆ ಉಟ್ಟು rx100 ಬೈಕ್ ಹತ್ತಿದರೆ ಕೇಳೋದೇ ಬೇಡ ನಟ ರಿಷಬ್ ಶೆಟ್ಟಿ ಅಂತನೇ ಹೇಳುತ್ತೀರಿ. ಆದರೆ ಈ ಚಿತ್ರದಲ್ಲಿರುವವರು ನಟ ರಿಷಬ್ ಶೆಟ್ಟಿ ರೀತಿಯಲ್ಲಿ ಕಂಡರೂ ಇವರು ಅವರಲ್ಲ. ಕಾಂತರಾ ಚಿತ್ರದಲ್ಲಿ ರಿಷಬ್ ಶೆಟ್ಟಿ ನಿರ್ವಹಿಸಿರುವ ಶಿವನ ಪಾತ್ರಧಾರಿಯನ್ನೇ ಹೋಲುವ ವ್ಯಕ್ತಿ ಒಬ್ಬ ಉಡುಪಿಯಲ್ಲಿ ಪತ್ತೆಯಾಗಿದ್ದಾರೆ. ಹಾವಾ ಭಾವ ಭಂಗಿ ಪ್ರತಿಯೊಂದರಲ್ಲೂ ಥೇಟ್ ರಿಷಬ್ ಶೆಟ್ಟಿಯ ಪಾತ್ರದ್ದೇ ತದ್ರೂಪ.ಉಡುಪಿಯಲ್ಲಿ ಹವಾ ಸೃಷ್ಟಿಸುತ್ತಿರುವ ವ್ಯಕ್ತಿಯ ಹೆಸರು ಪ್ರದೀಪ್ ಆಚಾರ್ಯ. ಶಿರ್ವ ಗ್ರಾಮದಲ್ಲಿ ಮೊಬೈಲ್ ಅಂಗಡಿ ಒಂದರಲ್ಲಿ ಕೆಲಸ ಮಾಡುತ್ತಿರುವ ಇವರು ಕಾಂತರಾ ಸಿನಿಮಾ ಬಿಡುಗಡೆ ಆಗುವ ತನಕ ಯಾರು ಕೂಡ ಇವರ ಒಳಗಿದ್ದ ರಿಷಬ್ ಶೆಟ್ರನ್ನು ಗುರುತಿಸಿರಲಿಲ್ಲ. ಸಿನಿಮಾ ಬಿಡುಗಡೆಯಾಗಿದ್ದೆ ತಡ ಮೊಬೈಲ್ ಅಂಗಡಿಗೆ ಬಂದವರೆಲ್ಲ ಅವಕ್ಕಾಗುತ್ತಿದ್ದರಂತೆ. ಒಂದು ಬಾರಿ ಕಣ್ಣರಳಿಸಿ ನೋಡಿ ಮೌನವಾಗುತ್ತಿದ್ದರಂತೆ. ನೀವು ನೋಡಲು ಥೇಟ್ ಕಾಂತಾರಾ ಚಿತ್ರದ ರಿಷಬ್ ಶೆಟ್ಟಿ ಥರಾನೇ ಕಾಣುತ್ತಿದ್ದೀರಿ ಎನ್ನುತ್ತಿದ್ದಾರಂತೆ.ಅಷ್ಟು ಹೇಳಿದ್ದೆ ತಡ ಮುಖಕ್ಕೊಂದು ಗ್ಲಾಸ್ ಹಾಕಿಕೊಂಡು, ಕಾಂತರ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಗೆಟಪ್ನಲ್ಲಿ ಕಾಣಿಸಿಕೊಳ್ಳಲು ಆರಂಭಿಸಿದ್ದಾರೆ. ಕನ್ನಡಿ ಮುಂದೆ ನಿಂತಾಗ ಪ್ರದೀಪ್ಗೂ ತಾನು ಶಿವ ಪಾತ್ರವನ್ನು ಹೋಲುವುದು ಅರಿವಿಗೆ ಬಂತು. ಸ್ನೇಹಿತರ ಒತ್ತಾಯಕ್ಕೆ ಒಂದು ರಿಲ್ಸ್ ಮಾಡಿ ಸೋಶಿಯಲ್ ಮೀಡಿಯಾಗೆ ಬಿಟ್ಟದ್ದೆ ತಡ ಜನ ಇವರನ್ನು ಹುಡುಕಿಕೊಂಡು ಬರಲು ಆರಂಭಿಸಿದ್ದಾರಂತೆ.ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡುವ ಈ ಪ್ರದೀಪ್ ನೋಡಲು ಶಿವ ಕ್ಯಾರೆಕ್ಟರ್ ತರ ಕಾಣುತ್ತಾರೆ ನಿಜ, ಹಾಗಂತ ಇವರಿಗೆ ರಿಷಬ್ ಶೆಟ್ಟರನ್ನು ಮಿಮಿಕ್ ಮಾಡಲು ಸಾಧ್ಯವಿಲ್ಲ. ಸ್ನೇಹಿತರ ಒತ್ತಾಯಕ್ಕೆ ಪ್ರಯತ್ನಿಸಿದ್ದಾರೆ ಅಷ್ಟೆ. ಒಮ್ಮೆಯಾದರೂ ರಿಷಬ್ ಶೆಟ್ರನ್ನ ಭೇಟಿಯಾಗಬೇಕು ಎಂಬ ಕನಸು ಇಟ್ಟುಕೊಂಡಿದ್ದಾರೆ. ಸದ್ಯ ಪ್ರದೀಪ ಹೋದಲೆಲ್ಲ ಜನ ಅಚ್ಚರಿಯಿಂದ ಗುಂಪುಗೂಡುತ್ತಾರೆ. ಮುಂದೆ ಬಂದು ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ ಎಂದು ಸ್ವತಃ ಪ್ರದೀಪ್ ಹೇಳುತ್ತಿದ್ದಾರೆ.ಹೀಗೆ ಸೆಲ್ಫಿಗಾಗಿ ಬರುವ ಜನರೊಂದಿಗೆ ಪ್ರದೀಪ್ ಮುಜುಗರ ಪಡುತ್ತಲೇ ಪೋಸ್ ಕೊಡುತ್ತಾರೆ. ಕಾಂತರಾ ಸಿನಿಮಾ ಬಿಡುಗಡೆಯಾಗುವ ಮುಂಚೇನೆ ಇವರ ಬಳಿ ಆರ್ಎಕ್ಸ್ ಹಂಡ್ರೆಡ್ ಬೈಕ್ ಇತ್ತು. ಇಗಂತೂ ಬಿಳಿ ಪಂಚೆ ಉಟ್ಟುಕೊಂಡು ಆರ್ಎಕ್ಸ್ ಹಂಡ್ರೆಡ್ ಬೈಕ್ ಹತ್ತಿದರೆ ಜನ ಮೂಗಿನ ಮೇಲೆ ಬೆರಳಿಟ್ಟು ನೋಡುತ್ತಾರೆ.ಈಗಾಗಲೇ ಜನ ಹಲವು ಕಾರ್ಯಕ್ರಮಗಳಿಗೆ ಪ್ರದೀಪ್ಗೆ ಆಹ್ವಾನ ಕೊಡಲು ಆರಂಭಿಸಿದ್ದಾರೆ. ಶಿವ ಪಾತ್ರ ಹೊಲುವ ನನ್ನನ್ನು ಕಂಡರೆ ಜನ ಇಷ್ಟು ಇಷ್ಟಪಡುವಾಗ ಇನ್ನು ರಿಷಬ್ ಶೆಟ್ರ ಮೇಲೆ ಕನ್ನಡ ಜನತೆಗೆ ಅದೆಂಥ ಪ್ರೀತಿ ಇರಬಹುದು ಅನ್ನೋ ಸಂಗತಿ ಪ್ರದೀಪ್ಗೆ ಶಾಕ್ ಕೊಟ್ಟಿದೆ. Tags sandalwood social trending news Facebook Twitter